ತುಮಕೂರು: ಪತ್ನಿಯನ್ನು ಮಾಡಿದ ಗಂಡನಿಗೆ ನಗರದ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಸಿರಾ ಪಟ್ಟಣದ ಪೇಸ್ಟಾ ಮೊಹಲ್ಲಾ ವಾಸಿಯಾದ ಸೈಯದ್ ಆರಿಫ್ ಅವರ ಮಗಳಾದ ಜೈನಬಿ ಎಂಬುವರನ್ನು ಸಿರಾ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಜಬಿವುಲ್ಲಾ ಎಂಬುವನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಈತ ಮದುವೆಯಾಗಿ ಹೊನ್ನೇನಹಳ್ಳಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮುಂಗೋಪಿಯಾಗಿದ್ದ. ಮದುವೆಯಾಗಿ ಒಂದು ವರ್ಷದ ನಂತರ ತನ್ನ ಹೆಂಡತಿಯಾದ ಜೈನಬಿ ಅವರಿಗೆ ಸಣ್ಣಪುಟ್ಟ ವಿಚಾರಗಳಿಗಿಲ್ಲಾ ಗಲಾಟಿ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟು ಬೈಯ್ಯುವುದು, ಹೊಡೆಯುವುದು ಮಾಡುತ್ತಿದ್ದ. ಈ ವಿಚಾರವಾಗಿ ಮೃತಳ ತಂದೆ ತಾಯಿ ಆರೋಪಿಗೆ ಅನೇಕ ಬಾರಿ ಬುದ್ಧಿ ಹೇಳಿದರೂ ಈತ ಕೇಳುತ್ತಿರಲಿಲ್ಲ.
ಜೈನಬಿ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದು, 16.8.2022 ರಂದು ರಾತ್ರಿ 10.30ರ ಸಮಯದಲ್ಲಿ ಹೊನ್ನೇನಹಳ್ಳಿ ಗ್ರಾಮದಲ್ಲಿ ಮೃತ ಜೈನಬಿ ಊಟ ಮಾಡಿ ಹಾಸಿಗೆ ಹಾಕಿಕೊಂಡು ಮಲಗಲು ಹೋದಾಗ ಆರೋಪಿತನಾದ ಆಕೆಯ ಗಂಡ ಆಕೆಯೊಂದಿಗೆ ಜಗಳ ತೆಗೆದು ಕೈಯಿಂದ ಕೆನ್ನೆಗೆ ಹೊಡೆಯಾಗ ಮೃತ ಜೈನಬಿ ಅವರು ಜೋರಾಗಿ ಕೂಗಿಕೊಂಡರು. ಆಕೆಯ ಗಂಡ ಕೋಪಗೊಂಡು ಈಕೆಯನ್ನು ಸಾಯಿಸಿಯೇ ಬಿಡೋಣ ಎಂಬ ನಿರ್ಧಾರಕ್ಕೆ ಬಂದು ರಾತ್ರಿ 12 ಸಮಯದಲ್ಲಿ బలಗೈನಿಂದ ತನ್ನ ಹೆಂಡತಿ ಜೈನಬಿಯ ಕುತ್ತಿಗೆಯನ್ನು ಹಿಡಿದು ಹಿಸುಕಿ ಕೊಲೆ ಮಾಡಿರುತ್ತಾನೆ ಎಂದು ಸಿರಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯು ತುಮಕೂರಿನ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿತ್ತು. ನ್ಯಾಯಾಧೀಶರಾದ ಮೊಹಮ್ಮದ್ ಅವರು ಆರೋಪ ರುಜುವಾತು ಆದ ಹಿನ್ನೆಲೆಯಲ್ಲಿ 1 ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು 5000 ರೂ.ದಂಡ ಹಾಗು ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹಣಮಂತರಾಯ ತಳಕೇರಿ ಅವರು ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
