nammatumakuru

    Subscribe to Updates

    Get the latest creative news from FooBar about art, design and business.

    What's Hot

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026
    Facebook Twitter Instagram
    ಟ್ರೆಂಡಿಂಗ್
    • 2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
    • ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ
    • ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ
    • ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ
    • ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹೊಸದಾಗಿ ಪ್ರಜಾ ಸೇವಾ ಇಲಾಖೆ ಸೃಜನೆ: ಡಿಸಿಎಂ ಡಾ.ಜಿ. ಪರಮೇಶ್ವರ
    • ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026: ತುಮಕೂರು ನಗರದಲ್ಲಿ ಎಸ್ ಐಆರ್ ನೋಟೀಸ್ ವಿಚಾರಣೆ ಆರಂಭ
    • ಸೋಮಾರಿ ಅಧಿಕಾರಿಗಳನ್ನು ಬದಲಿಸದಿದ್ದರೆ ಸರ್ಕಾರದ ಯಾವ ಅಭಿಯಾನ ಬಂದು ಏನು ಪ್ರಯೋಜನ?
    • ಶೀಘ್ರದಲ್ಲೇ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ: ಡಿಸಿಎಂ ಡಾ.ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ
    ತುಮಕೂರು September 6, 2026

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    By Ganesh TumkuruSeptember 6, 2026No Comments2 Mins Read
    eshwar khandre

    ತುಮಕೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸಿದರೆಷ್ಟೇ ಸಾಲದು, ಅವರನ್ನು ಬುದ್ಧಿವಂತರನ್ನಾಗಿ ಮಾಡುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಪಾದಿಸಿದ್ದಾರೆ.

    ತುಮಕೂರು ಸಿದ್ಧಗಂಗಾಮರದ ಸನಿವಾಸ ವಿದ್ಯಾಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಸೇರಿಸುವ ಜವಾಬ್ದಾರಿ ತಂದೆ–ತಾಯಿಯದಾದರೆ, ಶಾಲೆಗೆ ಸೇರಿದ ಮಕ್ಕಳಿಗೆ ವಿದ್ಯೆಯ ಜೊತೆಗೆ, ಚಾರಿತ್ರ್ಯಕ್ಕೆ ಆದ್ಯತೆ ನೀಡಿ, ನೈತಿಕತೆ ಮೌಲ್ಯ ತಿಳಿಸಿ, ಪ್ರಾಯೋಗಿಕ ಶಿಕ್ಷಣದೊಂದಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲುವಂತೆ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡಬೇಕಾದ ಶಿಕ್ಷಕರ ಕರ್ತವ್ಯ ಎಂದರು.

    ಮಠದಿಂದ ಸ್ವಾಮಿಯಲ್ಲಿ, ಸ್ವಾಮಿಯಲ್ಲೇ ಮಾತ ಎಂದು ಈ ಜಗತ್ತಿಗೆ ತೋರಿಸಿಕೊಟ್ಟವರು ಡಾ. ಶಿವಕುಮಾರಸ್ವಾಮಿಗಳು ಎಂದ ಈಶ್ವರ ಖಂಡ್ರೆ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಭದ್ರಬುನಾದಿ ಹಾಕಿದ ಮಹಾಪುರುಷರು ಎಂದರು.

    ಕೆಲವರು ತಮ್ಮ ತಮ್ಮ ಜೀವಿತ ಕಾಲದಲ್ಲಿ ಕೇವಲ ಬದುಕುತ್ತಾರೆ. ಆದರೆ ಮತ್ತೆ ಕೆಲವರು ತಾವು ಬದುಕಿದ್ದ ಕಾಲವರ್ಣವೇ ಬದಲಾಯಿಸುತ್ತಾರೆ. ಅಂತಹ ಮಹಾಪುರುಷರಲ್ಲಿ ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿ ಅವರೂ ಒಬ್ಬರಾಗಿದ್ದಾರೆ. ತಮ್ಮ ಸೇವಾಕೇಂಕಿಯ್, ಚಿಂತನೆ, ಸಂಸ್ಥೆ ಮತ್ತು ಸೇವಾ ಪರಂಪರೆಗೆ ಬುನಾದಿ ಹಾಕಿದ ಅವರು, ಹುತ್ತಿಸಿದ ಒಲೆ ಆರದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ಮತ್ತು ಅರಿವು ನೀಡು ಮೂಲಕ ಅಮರರಾಗಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

    ರಾಧಾಕೃಷ್ಣನ್ ಅವರು ರಾಷ್ಟ್ರಪತಿಗಳಾಗಿದ್ದರೂ ತಾವೊಬ್ಬ ಶಿಕ್ಷಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಬೇಕೆಂದು ಬಯಸಿದ್ದರು. ಅದೇ ರೀತಿ ಭಾರತದ ಖ್ಯಾತ ವಿಜ್ಞಾನಿ, ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಹಾಗೂ ರಾಷ್ಟ್ರಪತಿಗಳಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೂ ಸಹ ತಮನ್ನು ಜನ ಶಿಕ್ಷಕ ಎಂದು ಗುರುತಿಸಬೇಕು ಎನ್ನುತ್ತಿದ್ದರು. ಗುರುವಿನ ಹೃದಯದ ಹಿರಿಮೆ ಎಲ್ಲ ಹುದ್ದೆಗಿಂತ ಮಿಗಿಲಾದು ಎಂದರು.

    ಇಂದು ದೇಶ ಕವಲು ದಾರಿಯಲ್ಲಿದೆ. ದೇಶದಲ್ಲಿ ಜಾತಿ, ಧರ್ಮದ ವಿಷಜ್ವಾಲೆ ವ್ಯಾಪಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳಲ್ಲಿ ಸೌಹಾರ್ದ, ಸದ್ಗುಣ, ಸಹಿಷ್ಣುತೆಯನ್ನು ತುಂಬಿ, ಎಲ್ಲರೂ ಸೋದರತ್ವದೊಂದಿಗೆ ಬಾಳುವ ಮೌಲ್ಯಯುತ ಶಿಕ್ಷಣವನ್ನು ನೀಡುವ ಗುರುತರ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದರು.

    ಎಲ್ಲ ಮಕ್ಕಳಿಗೂ ಸರ್ಕಾರವೇ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ವೀರಶೈವ, ಲಿಂಗಾಯತ ಮಠ ಮನ್ಹಗಳ ಕೊಡುಗೆ ಅಪಾರವಾದು. ಸಿದ್ಧಗಂಗಾಮಠದಲ್ಲಿ ಯಾವುದೇ ಜಾತಿ, ಮತ, ಪಂಥ, ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಲಾಗಿದೆ. ಈ ಮಠದ ಶಾಲೆಗಳಲ್ಲಿ ಓದಿದ ಯಾವುದೇ ವಿದ್ಯಾರ್ಥಿ ತನ್ನ ಬದುಕಿನಲ್ಲಿ ವಿಫಲನಾಗಿಲ್ಲ. ಯಶಸ್ಸಿ ನ ಒಂದೊಂದೇ ಮಟ್ಟೇಲೇರಿ ಮಹಾನ್ ಸಾಧಕರಾಗಿದ್ದಾರೆ ಎಂದರು.

    ಗುರುಶಿಷ್ಯರ ಬಾಂಧವ್ಯಕ್ಕೆ ರಾಧಾಕೃಷ್ಣನ್ ಮಾದರಿ:

    ಸರ್ವಪಲ್ಲಿ ರಾಧಾಕೃಷ್ಣನ್ ಅವರು 1918 ರಿಂದ 1921ರವರೆಗೆ ಮೂರು ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜ್ ನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಮೈಸೂರು ವಿಶ್ವವಿದ್ಯಾಲಯ ಬಿಟ್ಟು, 1921ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಹೋಗು ವಾಗ ಅವರ ವಿದ್ಯಾರ್ಥಿಗಳು ಅವರು ಪ್ರಯಾಣಿಸುತ್ತಿದ್ದ ರೈಲು ಬೋಗಿಗೆ ಹೂವಿನಿಂದ ಅಲಂಕಾರ ಮಾಡಿ, ಕುದುರೆಗಾಡಿಗೂ ಅಲಂಕಾರ ಮಾಡಿ, ತಮ್ಮ ಗುರುಗಳನ್ನು ಕುದುರೆಗಾಡಿಯಲ್ಲಿ ಕೂರಿಸಿ, ಕುದುರೆ ಬದಲಿಗೆ ತಾವೇ ಗಾಡಿಯನ್ನು ಎಳೆದುಕೊಂಡು ರೈಲು ನಿಲ್ದಾಣದವರೆಗೆ ತಡೆ ಜಯಘೋಷ ಮಾಡಿ ಬೀಳ್ಕೊಟ್ಟಿದ್ದರು ಎಂದು ಕೇಳಿದ್ದೇನೆ. ಇದು ಗುರು–ಶಿಷ್ಯ ಪರಂಪರೆ ಹಿಡಿದ ಕನ್ನಡಿಗಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹೊಸದಾಗಿ ಪ್ರಜಾ ಸೇವಾ ಇಲಾಖೆ ಸೃಜನೆ: ಡಿಸಿಎಂ ಡಾ.ಜಿ. ಪರಮೇಶ್ವರ

    September 6, 2026

    ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026: ತುಮಕೂರು ನಗರದಲ್ಲಿ ಎಸ್ ಐಆರ್ ನೋಟೀಸ್ ವಿಚಾರಣೆ ಆರಂಭ

    September 6, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ತುಮಕೂರು: ಪತ್ನಿಯನ್ನು ಮಾಡಿದ ಗಂಡನಿಗೆ ನಗರದ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು…

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026

    ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ

    September 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.