ತುಮಕೂರು: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026ರ (Special Intensive Revision) ಭಾಗವಾಗಿ, ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ (Logical Discrepancy), ‘ನೋ ಮ್ಯಾಪಿಂಗ್’ (No Mapping) ಮತ್ತು ಇತರೆ ಕಾರಣಗಳಿಂದ ನೋಟೀಸ್ ಪಡೆದಿರುವ ಮತದಾರರಿಗೆ ಮಹತ್ವದ ಮಾಹಿತಿಯೊಂದಿದೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (ಕ್ಷೇತ್ರ ಸಂಖ್ಯೆ: 132) ನೋಟೀಸ್ ಪಡೆದ ಮತದಾರರ ವಿಚಾರಣಾ ಪ್ರಕ್ರಿಯೆಯು ಸೆಪ್ಟೆಂಬರ್ 5ರಿಂದಯೆ ಆಯಾ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ.
ಪ್ರಮುಖ ವಿವರಗಳು:
- ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR 2026).
- ವಿಚಾರಣೆ ಆರಂಭ: ಸೆಪ್ಟೆಂಬರ್ 5 ರಿಂದ.
- ವ್ಯಾಪ್ತಿ: 132-ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆ ಕೇಂದ್ರಗಳು.
ಚುನಾವಣಾ ಆಯೋಗವು ಸೂಚಿಸಿರುವ ಅಗತ್ಯ ಹಾಗೂ ಸೂಕ್ತ ದಾಖಲೆಗಳೊಂದಿಗೆ ನಿಗದಿತ ವಿಚಾರಣಾ ಕೇಂದ್ರಗಳಿಗೆ ಖುದ್ದಾಗಿ ಹಾಜರಾಗಿ, ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗಪಡಿಸಿಕೊಳ್ಳಬೇಕೆಂದು ಪಾಲಿಕೆ ಆಯುಕ್ತೆ ಹಾಗೂ ನಗರ ಮತದಾರರ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
