nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯ ಕಾಂಗ್ರೆಸ್ ಜಿಲ್ಲಾ ಸಮಿತಿಗಳ 35 ನೂತನ ಅಧ್ಯಕ್ಷರ ಅಧಿಕೃತ ಪಟ್ಟಿ ಪ್ರಕಟ

    September 10, 2026

    ಕೊರಟಗೆರೆಯಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ ಅರ್ಧಂಬರ್ಧ ಕಾಮಗಾರಿ:  9.99 ಕೋಟಿಯಲ್ಲಿ 1900 ಮೀಟರ್ ಕಾಮಗಾರಿ!

    September 10, 2026

    ಕೆಎಸ್‌ ಆರ್‌ ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ: ಬಸ್ ಚಾಲಕ ದುರ್ಮರಣ

    September 10, 2026
    Facebook Twitter Instagram
    ಟ್ರೆಂಡಿಂಗ್
    • ರಾಜ್ಯ ಕಾಂಗ್ರೆಸ್ ಜಿಲ್ಲಾ ಸಮಿತಿಗಳ 35 ನೂತನ ಅಧ್ಯಕ್ಷರ ಅಧಿಕೃತ ಪಟ್ಟಿ ಪ್ರಕಟ
    • ಕೊರಟಗೆರೆಯಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ ಅರ್ಧಂಬರ್ಧ ಕಾಮಗಾರಿ:  9.99 ಕೋಟಿಯಲ್ಲಿ 1900 ಮೀಟರ್ ಕಾಮಗಾರಿ!
    • ಕೆಎಸ್‌ ಆರ್‌ ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ: ಬಸ್ ಚಾಲಕ ದುರ್ಮರಣ
    • ಸಾಲ ಸೌಲಭ್ಯಕ್ಕಾಗಿ ವೀರಶೈವ ಲಿಂಗಾಯತರಿಂದ ಅರ್ಜಿ
    • ಸವಿತಾ ಸಮಾಜ ಅಭಿವೃದ್ಧಿ ನಿಗಮ: ಸಾಲಕ್ಕೆ ಅರ್ಜಿ ಆಹ್ವಾನ
    • ಹಸು–ಎಮ್ಮೆ ಸಾಕಾಣಿಕೆ : ಸಹಾಯಧನಕ್ಕೆ ಅರ್ಜಿ ಸಲ್ಲಿಸಿ
    • ಪಟ್ಟದೇವರಕೆರೆ ಹೇಮಾವತಿ ನಾಲಾ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್‌ ಬಾಬು
    • ಸೆಪ್ಟೆಂಬರ್ 12 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಪದಗ್ರಹಣ ಸಮಾರಂಭ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆಯಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ ಅರ್ಧಂಬರ್ಧ ಕಾಮಗಾರಿ:  9.99 ಕೋಟಿಯಲ್ಲಿ 1900 ಮೀಟರ್ ಕಾಮಗಾರಿ!
    ಕೊರಟಗೆರೆ September 10, 2026

    ಕೊರಟಗೆರೆಯಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ ಅರ್ಧಂಬರ್ಧ ಕಾಮಗಾರಿ:  9.99 ಕೋಟಿಯಲ್ಲಿ 1900 ಮೀಟರ್ ಕಾಮಗಾರಿ!

    By Ganesh TumkuruSeptember 10, 2026No Comments2 Mins Read
    korategere

    ವರದಿ : ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ : ಇದು ಅಭಿವೃದ್ಧಿಯೋ ಅಥವಾ ಅವ್ಯವಸ್ಥೆಯ ಪರಮಾವಧಿಯೋ ? ಕೊರಟಗೆರೆ ಜನರಿಗೆ ವೈಟ್ ಟಾಪಿಂಗ್ ರಸ್ತೆ ಕನಸು ತೋರಿಸಿದ ಲೋಕೋಪಯೋಗಿ ಇಲಾಖೆ, ಕೊನೆಗೆ ಫುಟ್‌ಪಾತ್ ಇಲ್ಲದೆ ಅರ್ಧಂಬರ್ಧ ರಸ್ತೆ ಮಾಡಿ ಕೈ ತೊಳೆದುಕೊಂಡಿದೆ.

    ಕಾಮಗಾರಿ ಆರಂಭ–ಮುಕ್ತಾಯದಲ್ಲಿ ಬೇಜವಾಬ್ದಾರಿ : ಜನವರಿ 27–2021 ರಲ್ಲಿ ಶುರುವಾದ ಕಾಮಗಾರಿಗೆ 11 ತಿಂಗಳು ಡೆಡ್‌ ಲೈನ್ ಇತ್ತು. ಕೋವಿಡ್ ನೆಪದಲ್ಲಿ 6 ತಿಂಗಳು ಎಕ್ಸ್‌ ಟೆನ್ಶನ್ ತೆಗೆದುಕೊಂಡರೂ ಕೆಲಸ ಮಾತ್ರ ಮುಗಿಯಲಿಲ್ಲ. 2022ಕ್ಕೆ ಮುಗಿಯಬೇಕಿದ್ದ ರಸ್ತೆ 2026ಕ್ಕೂ ಅರ್ಧಕ್ಕೆ ನಿಂತಿದೆ.

    ಹಣ ಇದೆ, ಕೆಲಸ ಇಲ್ಲ: ಒಟ್ಟು 9.99 ಕೋಟಿ ಅನುದಾನದಲ್ಲಿ ಕೇವಲ 5.34 ಕೋಟಿ ಮಾತ್ರ ಖರ್ಚು ಮಾಡಿ, 3.56 ಕೋಟಿ ಹಣವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹಣ ಇದ್ದರೂ ಕೆಲಸ ಮಾಡದಿರುವುದು ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ.

    1900 ಮೀಟರ್‌ ಗೆ ಸೀಮಿತವಾದ ‘ಅಭಿವೃದ್ಧಿ’: ಬೆಸ್ಕಾಂ ಕಚೇರಿಯಿಂದ ತಾಲ್ಲೂಕು ಕಚೇರಿವರೆಗೆ ಕೇವಲ 1900 ಮೀಟರ್ ರಸ್ತೆ ಮಾತ್ರ ವೈಟ್ ಟಾಪಿಂಗ್ ಆಗಿದೆ. ಫುಟ್‌ ಪಾತ್ ಮತ್ತು ಚರಂಡಿ ಇಲ್ಲದೆ ಮಾಡಿರುವುದರಿಂದ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ನಡೆಯುವಂತಾಗಿದೆ. ಒಂದು ಮಳೆ ಬಂದರೆ ರಸ್ತೆಯೇ ಕೆರೆಯಾಗಿ ನೀರು ನೇರವಾಗಿ ಅಂಗಡಿಗಳಿಗೆ ನುಗ್ಗುತ್ತಿದೆ.

    ಗುತ್ತಿಗೆದಾರನ ಮೇಲೆ ಆರೋಪ ಹೊರಿಸಿ ಎಸ್ಕೇಪ್: ಕಾಮಗಾರಿ ಮುಗಿಯದಿದ್ದಾಗ ತಪ್ಪು ಒಪ್ಪಿಕೊಳ್ಳುವ ಬದಲು ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಮಧುಗಿರಿ ಇ ಇ ಕಚೇರಿ ಅಕ್ಟೋಬರ್ 17–2022 ರಲ್ಲೇ ಕೈ ತೊಳೆದು ಕೊಂಡಿದೆ. ಎರಡು ವರ್ಷವಾದರೂ ಆ ಪತ್ರದ ಮೇಲೆ ಯಾವ ಕ್ರಮವೂ ಇಲ್ಲ. ಇಲಾಖೆ ಮತ್ತು ಗುತ್ತಿಗೆದಾರನ ನಡುವೆ ಹೊಂದಾಣಿಕೆ ಇದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

    ಜನರ ತೆರಿಗೆ ಹಣದಲ್ಲಿ ಮಾಡುವ ಕಾಮಗಾರಿಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ಸಲ್ಲದು. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಬಾಕಿ ಫುಟ್‌ಪಾತ್ ಕಾಮಗಾರಿ ಕೂಡಲೇ ಪೂರ್ಣಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

     “ಬೆಸ್ಕಾಂ ಕಚೇರಿಯಿಂದ ತಾಲ್ಲೂಕು ಕಚೇರಿ ವರೆಗೆ 1900 ಮೀಟರ್ ವೈಟ್ ಟಾಪಿಂಗ್ ಪೂರ್ಣಗೊಂಡಿದೆ, ಫುಟ್‌ ಪಾತ್ ಬಾಕಿ ಇರುವುದು ನಿಜ. ಗುತ್ತಿಗೆದಾರ ಅರ್ಧಕ್ಕೆ ನಿಲ್ಲಿಸಿದ್ದರಿಂದ ಮಧುಗಿರಿ ಇ ಇ ಕಚೇರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಬಂದ ತಕ್ಷಣ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು”.

    — ದೀಪಕ್ ಯಾದವ್, ಎನ್, ಲೋಕೋಪಯೋಗಿ ಇಲಾಖೆ, ಕೊರಟಗೆರೆ


    “ಈ ವೈಟ್ ಟಾಪಿಂಗ್ ಕಾಮಗಾರಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದಿದೆ, ಪುರಸಭೆ ವತಿಯಿಂದ ಅಲ್ಲ. ಆದರೂ ಫುಟ್‌ ಪಾತ್ ಮತ್ತು ಚರಂಡಿ ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ನಿಜ. ಈ ಬಗ್ಗೆ ನಾವು ಈಗಾಗಲೇ PWD ಇಲಾಖೆಗೆ ಪತ್ರ ಬರೆದಿದ್ದೇವೆ. ಪುರಸಭೆ ವತಿಯಿಂದ ಬಾಕಿ ಚರಂಡಿ ಸ್ವಚ್ಛತೆ ಮತ್ತು ತಾತ್ಕಾಲಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ”

    — ಉಮೇಶ್ ಕೆ.ಎಸ್, ಮುಖ್ಯಾಧಿಕಾರಿ, ಪುರಸಭೆ, ಕೊರಟಗೆರೆ.


     “ನಾನು ಪ.ಪಂ. ಸದಸ್ಯನಿದ್ದಾಗಲೇ ಈ ವೈಟ್ ಟಾಪಿಂಗ್ ಪ್ರಸ್ತಾವನೆ ಆಗಿತ್ತು. ಫುಟ್‌ ಪಾತ್ ಜೊತೆ ಮಾಡಬೇಕು ಅಂತ ಹೇಳಿದ್ದೆವು. ಈಗ 9.99 ಕೋಟಿಯಲ್ಲಿ ಅರ್ಧ ಕೆಲಸ ಮಾಡಿ ಬಿಟ್ಟಿದ್ದಾರೆ. ಇದು ಪಟ್ಟಣದ ಜನರಿಗೆ ಮಾಡಿದ ಮೋಸ. ಬಾಕಿ 3.56 ಕೋಟಿ ಹಣದಲ್ಲಿ ಕೂಡಲೇ ಫುಟ್‌ ಪಾತ್ ಮತ್ತು ಚರಂಡಿ ಮಾಡಬೇಕು”

    — ಪ್ರದೀಪ್ ಕುಮಾರ್, ಮಾಜಿ ಪ.ಪಂ ಸದಸ್ಯರು ಕೊರಟಗೆರೆ.

     

     “ಕೊರಟಗೆರೆಯ ಹೃದಯ ಭಾಗದ ವೈಟ್ ಟಾಪಿಂಗ್ ರಸ್ತೆಯಲ್ಲಿ ಫುಟ್‌ಪಾತ್ ಇಲ್ಲದಿರುವುದು ಪಾದಚಾರಿಗಳ ಜೀವದ ಜೊತೆ ಚೆಲ್ಲಾಟವಾಡಿದಂತೆ. ವಿದ್ಯಾರ್ಥಿಗಳು, ಮಹಿಳೆಯರು ರಸ್ತೆಯಲ್ಲೇ ನಡೆಯುವಂತಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಬೇಕು.”

    — ನರಸಿಂಹರಾಜು, ತಾ. ಅಧ್ಯಕ್ಷ, ಕರವೇ (ಪ್ರವೀಣ್ ಶೆಟ್ಟಿ ಬಣ) ಕೊರಟಗೆರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಆಧ್ಯಾತ್ಮಿಕ ಸಾಧನೆಯಿಂದ ಬದುಕಿಗೆ ಆನಂದ: ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ

    September 9, 2026

    ಹೊಳವನಹಳ್ಳಿಗೆ ಬಸ್ ಬಾರದೆ ವಿದ್ಯಾರ್ಥಿಗಳ ಪರದಾಟ : ಸರ್ಕಾರಿ ಬಸ್ ಗಾಗಿ ವಿದ್ಯಾರ್ಥಿಗಳ ಆಗ್ರಹ

    September 9, 2026

    ಮೂಢನಂಬಿಕೆ ತೊರೆದು ವೈಚಾರಿಕತೆಯೊಂದಿಗೆ ಬಾಳಿ: ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ

    September 8, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯ ಕಾಂಗ್ರೆಸ್ ಜಿಲ್ಲಾ ಸಮಿತಿಗಳ 35 ನೂತನ ಅಧ್ಯಕ್ಷರ ಅಧಿಕೃತ ಪಟ್ಟಿ ಪ್ರಕಟ

    September 10, 2026

    ಬೆಂಗಳೂರು: ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಎಐಸಿಸಿ (AICC) ಮಹತ್ವದ ಹೆಜ್ಜೆ ಇರಿಸಿದೆ. ‘ಸಂಘಟನಾ ಸೃಜನ ಅಭಿಯಾನ’ದ…

    ಕೊರಟಗೆರೆಯಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ ಅರ್ಧಂಬರ್ಧ ಕಾಮಗಾರಿ:  9.99 ಕೋಟಿಯಲ್ಲಿ 1900 ಮೀಟರ್ ಕಾಮಗಾರಿ!

    September 10, 2026

    ಕೆಎಸ್‌ ಆರ್‌ ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ: ಬಸ್ ಚಾಲಕ ದುರ್ಮರಣ

    September 10, 2026

    ಸಾಲ ಸೌಲಭ್ಯಕ್ಕಾಗಿ ವೀರಶೈವ ಲಿಂಗಾಯತರಿಂದ ಅರ್ಜಿ

    September 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.