ಚಿಕ್ಕನಾಯಕನಹಳ್ಳಿ: ರೈತರು ಸಹಕಾರ ನೀಡಿದರೆ ಸಾದ್ಯವಾದಷ್ಟು ಬೇಗ ಕಾಮಗಾರಿಯನ್ನು ಮುಗಿಸಲಾಗುವುದು ಭೂಸ್ವಾಧೀನ ಪಡಿಸಿಕೊಂಡಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ನಿಮ್ಮ ಪರಿಹಾರದ ಹಣವನ್ನು ಪಡೆಯಬಹುದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಸಾಸಲು ಗ್ರಾಮದ ಬಳಿಯಲ್ಲಿ ಪಟ್ಟದೇವರಕೆರೆ ಭಾಗದ ನಾಲಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾಗದ ರೈತರ ಸಹಕಾರದಿಂದ ಇಂದು ಪಟ್ಟದೇವರ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ, ಈ ಕಾಮಗಾರಿಯಲ್ಲಿ ಭೂಮಿಯನ್ನು ಕಳೆದು ಕೊಂಡಿರುವಂತಹ ರೈತರು ತಮ್ಮ ದಾಖಲೆಗಳನ್ನು ಸರಿಯಾಗಿ ನೀಡಿದರೆ ಅವರಿಗೆ ಪರಿಹಾರದ ಹಣ ಕೊಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ರೈತರು ಅತಂಕ ಪಡುವ ಅಗತ್ಯವಿಲ್ಲ ಸಾಧ್ಯವಾದಷ್ಟು ಈ ಕಾಮಗಾರಿಯು ಆದರೆ ಈ ಭಾಗದಿಂದ ಹಾಲ್ಕುರಿಕೆ ಕೆರೆ, ಕುಪ್ಪೂರುಚಿಕ್ಕೆರೆ, ಮಂಚಸಂದ್ರ ಕೆರೆ, ತಮ್ಮಡಿಹಳ್ಳಿಕೆರೆ, ದಾಸಿಹಳ್ಳಿ ಕೆರೆ, ಕುಪ್ಪೂರು ಕೆರೆಗಳಿಗೆ ಹರಿಯಲಿದೆ ಆದ್ದರಿಂದ ರೈತರ ಸಹಕಾರ ಮುಖ್ಯವಾಗಿದೆ ಎಲ್ಲರೂ ಸಹಕಾರ ನೀಡಿದರೆ ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಎಇಇ ಸೌಜನ್ಯ ಮಾತನಾಡಿ, ಹಾಲ್ಕುರಿಕೆ ಬ್ರಾಂಚ್ ಒಂದರಿoದ ಒಟ್ಟು 13.5ಕಿ.ಮೀ ಉದ್ದ ಇರುವ ಚಾನಲ್ ಕಾಮಗಾರಿಯಲ್ಲಿ ಈಗಾಗೇ 9.8 ಕಿ.ಮೀ ಆಗಿದ್ದು ಇದರಲ್ಲಿ 1.2 ಕಿ.ಮೀ ಅರಣ್ಯ ಪ್ರದೇಶವಿದೆ ಈಗಾಗಲೇ ಅಲ್ಲಲ್ಲಿ ಚಾನಲ್ ಕೆಲಸಗಳು ಅಲ್ಪಸ್ವಲ್ಪ ಆಗಿದ್ದು ಇನ್ನು ಅವಾರ್ಡ್ ಆಗಿರದಂತಹ ರೈತರಿಗೆ ಇನ್ನು ಹತ್ತು ದಿನದಲ್ಲಿ ಅವಾರ್ಡ್ ನೀಡಲಾಗುವುದು ರೈತರು ಸಹಕಾರ ನೀಡಿದರೆ ಕಾಮಗಾರಿಯು ಪೂರ್ಣವಾಗಲಿದೆ ಎಂದರು.
ಸ್ಥಳೀಯ ಯಶೋಧಮ್ಮ ತಮ್ಮ 20 ಗುಂಟೆ ಜಮೀನು ಕಾಮಗಾರಿಗೆ ಭೂಸ್ವಾಧೀನಗೊಳ್ಳಲಿದ್ದು ಇದಕ್ಕೆ ಸರಿಯಾಗಿ ಪರಿಹಾರ ನೀಡಬೇಕು ಇಲ್ಲದಿದ್ದರೆ ನಾನು ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ವಿರೋಧಿಸಿದರು.
ಈ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿ ನಿಮ್ಮ ಪರಿಹಾರದ ಹಣಕ್ಕೆ ನಾನು ಜವಾಬ್ದಾರಿ ಕಾಮಗಾರಿಗೆ ಅವಕಾಶ ಮಾಡಿಕೊಡಿ ಇದರಿಂದ ರೈತರಿಗೆ ಅನುಕೂಲವಾಗಲಿದ್ದು ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಲಿದೆ ನಿಮ್ಮ ಸಮಸ್ಯೆಗಳಿಗೆ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಭರವಸೆ ನೀಡಿದ ನಂತರ ಅವರು ಕಾಮಗಾರಿಗೆ ಅವಕಾಶ ಮಾಡಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್, ನೀರಾವರಿ ಹೋರಾಟಗಾರ ಅಜ್ಜೇನಹಳ್ಳಿ ಶರತ್, ಸಾಸಲು ಶಶಿಧರ್, ತರಬೇನಹಳ್ಳಿ ಷಡಾಕ್ಷರಿ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
