nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ ಉತ್ಸವ: ಅಕ್ಟೋಬರ್ 17ರಂದು ದಸರಾ ಕವಿಗೋಷ್ಠಿ – ಸ್ವರಚಿತ ಕವನಗಳ ಆಹ್ವಾನ

    September 20, 2026

    ಸಾಧಕರಿಗೆ ರಾಜ್ಯ ಮಟ್ಟದ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’: ಅರ್ಜಿ ಆಹ್ವಾನ

    September 20, 2026

    ಬುಕ್ಕಾಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ: ತಹಶೀಲ್ದಾರ್ ಆನಂದ್ ಕುಮಾರ್ ವಿರುದ್ಧ ಎಂಎಲ್ಸಿ ಬೆಂಬಲಿಗರ ತೀವ್ರ ಆಕ್ರೋಶ

    September 20, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ ಉತ್ಸವ: ಅಕ್ಟೋಬರ್ 17ರಂದು ದಸರಾ ಕವಿಗೋಷ್ಠಿ – ಸ್ವರಚಿತ ಕವನಗಳ ಆಹ್ವಾನ
    • ಸಾಧಕರಿಗೆ ರಾಜ್ಯ ಮಟ್ಟದ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’: ಅರ್ಜಿ ಆಹ್ವಾನ
    • ಬುಕ್ಕಾಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ: ತಹಶೀಲ್ದಾರ್ ಆನಂದ್ ಕುಮಾರ್ ವಿರುದ್ಧ ಎಂಎಲ್ಸಿ ಬೆಂಬಲಿಗರ ತೀವ್ರ ಆಕ್ರೋಶ
    • ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಬಡ್ಡಿ ಮನ್ನಾ ಹಾಗೂ ಒಟಿಎಸ್ ಅವಕಾಶಕ್ಕೆ ಸೂರ್ಯಕಾಂತ್ ನಾಗಮಾರಪಳ್ಳಿ ಆಗ್ರಹ
    • ಬೀದರ್ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ: ಮುಖ್ಯಮಂತ್ರಿಗೆ ರೈತ ಸಂಘದ ಆಗ್ರಹ
    • ಔರಾದ್‌ ತಾಲೂಕು ‘ಬರ’ ಘೋಷಣೆಗೆ ಆಗ್ರಹಿಸಿ ಬೀದಿಗಿಳಿದ ರೈತರು: ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದ ಶಾಸಕ ಪ್ರಭು ಚವ್ಹಾಣ್
    • ಬೋಧಕ ವರ್ಗ ಹಾಗೂ ಗ್ರಂಥಾಲಯದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಿ: ಡಾ. ಶಶಿಕುಮಾರ್ ಎಚ್.ಸಿ.
    • ಕೊರಟಗೆರೆ: ಬರಗಾಲದ ಹಿನ್ನೆಲೆ ‘ಹೊಲ ಹೂಳುವ ಗಣಪತಿ’ ಪ್ರತಿಷ್ಠಾಪನೆ; ಅದ್ದೂರಿಯಾಗಿ ಜರುಗಿದ ಶ್ರೀ ವಿದ್ಯಾ ಗಣಪತಿ ವಿಸರ್ಜನೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ : ಅಹೋರಾತ್ರಿ ಧರಣಿ ಆರಂಭ!
    ಚಿಕ್ಕನಾಯಕನಹಳ್ಳಿ July 31, 2026

    ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ : ಅಹೋರಾತ್ರಿ ಧರಣಿ ಆರಂಭ!

    By Ganesh TumkuruJuly 31, 2026No Comments2 Mins Read
    hemavati protest

    ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಹೇಮಾವತಿ ನಾಲೆ ಕಾಮಗಾರಿಯ ವಿಳಂಬ ಧೋರಣೆ ಹಾಗೂ ಅಧಿಕಾರಿಗಳ ನೆಪಮಾತ್ರದ ಭರವಸೆಗಳ ವಿರುದ್ಧ ಆಕ್ರೋಶಗೊಂಡ ರೈತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ, ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

    ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ನೂರಾರು ರೈತರು, ಹೇಮಾವತಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನೆಹರು ಸರ್ಕಲ್‌ನಿಂದ ಆರಂಭಗೊಂಡ ಬೃಹತ್ ರ್‍ಯಾಲಿಗೆ ದನ-ಕರುಗಳು, ಎತ್ತಿನಗಾಡಿಗಳು ಹಾಗೂ ಟ್ರ್ಯಾಕ್ಟರ್‌ಗಳೊಂದಿಗೆ ಸಾಲು ಸಾಲಾಗಿ ಹೆಜ್ಜೆ ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳ ಉದ್ದಕ್ಕೂ ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಧರಣಿ ಕುಳಿತರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೇಮಾವತಿ ಇಲಾಖೆಯ ಇಂಜಿನಿಯರ್ ಪ್ರಭಾಕರ್, ಇನ್ನೂ 5 ದಿನಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಡಲಾಗುವುದು ಎಂದು ಮನವಿ ಮಾಡಲು ಯತ್ನಿಸಿದರು. ಆದರೆ ಇಷ್ಟು ದಿನಗಳ ಕಾಲ ಪದೇ ಪದೇ ಸುಳ್ಳು ಆಶ್ವಾಸನೆ ನೀಡಿ ವಂಚಿಸಿರುವ ಇಂಜಿನಿಯರ್ ಮಾತನ್ನು ತಿರಸ್ಕರಿಸಿದ ರೈತ ಮುಖಂಡರು, ನಿಮ್ಮ ಸುಳ್ಳು ಭರವಸೆಗಳನ್ನು ಕೇಳಿ ಸಾಕಾಗಿದೆ. ಪ್ರತ್ಯಕ್ಷವಾಗಿ ನಾಳೆ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೂ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿರುವ ಅಹೋ ರಾತ್ರಿ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದರು.

    ತಾಲೂಕಿನ 24 ಕೆರೆಗಳಿಗೆ ಇನ್ನೂ ನೀರು ಹರಿಯದಿರುವುದು ಅತ್ಯಂತ ವಿಷಾದನೀಯ. ಮೂಲಭೂತ ಅವಶ್ಯಕತೆಯಾದ ನೀರಿಲ್ಲದೆ ಬದುಕು ಸಾಗಿಸುವುದು ಅಸಾಧ್ಯವಾಗಿದೆ. ರೈತರು ಹಮ್ಮಿಕೊಂಡಿರುವ ಈ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ತಾಲೂಕಿನ ಎಲ್ಲಾ ಮಠಾಧೀಶರ ಸಂಪೂರ್ಣ ಬೆಂಬಲವಿದೆ. ತಮ್ಮೆಲ್ಲರ ಈ ನ್ಯಾಯಯುತ ಹೋರಾಟವು ಸಂಪೂರ್ಣವಾಗಿ ಶಾಂತಿಯುತ ಮಾರ್ಗದಲ್ಲಿಯೇ ನಡೆಯಲಿ.

    — ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ತಮ್ಮಡಿಹಳ್ಳಿ ಮಠ

    ಗೋಡೆಕೆರೆ ಮಠದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಗುತ್ತಿಗೆದಾರರು ಕೇವಲ ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯಡಿ ಬರುವ ಕಾಮಗಾರಿಗಳಲ್ಲಷ್ಟೇ ಆಸಕ್ತಿ ತೋರುತ್ತಿದ್ದು, ಹೇಮಾವತಿ ನಾಲಾ ಕಾಮಗಾರಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಒಗ್ಗೂಡಿ ಸತ್ಯಾಗ್ರಹ ನಡೆಸದಿದ್ದರೆ, ಇನ್ನು ಹತ್ತು ವರ್ಷಗಳಾದರೂ ತಾಲೂಕಿಗೆ ನೀರು ಬರುವುದು ಅಸಾಧ್ಯ ಎಂದರು.

    ಕಾಮಗಾರಿ ನಡೆಯುವಾಗ ಎದುರಾಗುವ ಸಣ್ಣಪುಟ್ಟ ಅಡೆತಡೆಗಳನ್ನು ಹೋರಾಟಗಾರರೇ ಮುಂದೆ ನಿಂತು ಸರಿಪಡಿಸಿ ಕಾಮಗಾರಿ ಸುಗಮವಾಗಿ ನಡೆಯಲು ಸಹಕರಿಸಿದ್ದಾರೆ. ಆದರೂ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ. ತಾಲೂಕು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ. ರೈತರು ಕೊಳವೆ ಬಾವಿಗಳನ್ನು ಕೊರೆಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಹನಿ ನೀರು ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ತಾಲೂಕು ಕೇವಲ ಒಂಟೆಗಳು ವಾಸಿಸುವ ಮರುಭೂಮಿಯಾಗಿ ಮಾರ್ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

    ಕುಪ್ಪೂರು ಮಠದ ಆಡಳಿತಾಧಿಕಾರಿ ವಾಗೀಶ್ ಮಾತನಾಡಿ, ತಾಲೂಕಿನ ನೀರಿನ ಹಕ್ಕಿಗಾಗಿ ನಮ್ಮ ತಾಲೂಕಿನ ಮೂರು ಮಠಗಳ ಸ್ವಾಮೀಜಿಗಳು ಈ ಹಿಂದೆ ಪಾದಯಾತ್ರೆ ನಡೆಸಿದ್ದರು. ಆದರೆ, ಎಂಟು ವರ್ಷಗಳು ಕಳೆದರೂ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ. ಅಂದಿನಿಂದ ಇಂದಿನವರೆಗೂ ನಮ್ಮ ಭಾಗದ ರೈತರು ಯೋಜನೆ ಪೂರ್ಣಗೊಳ್ಳಲಿದೆ ಎಂಬ ಕೇವಲ ಭರವಸೆಯಲ್ಲೇ ಬದುಕುವಂತಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

    ಕೆ.ಆರ್.ಎಸ್ ಪಕ್ಷದ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ಶಾಂತಿ ಸ್ವಭಾವದ ಜನರೆಂದರೆ ಅದು ನಮ್ಮ ತಾಲೂಕಿನವರು. ಇದೇ ಕಾರಣಕ್ಕಾಗಿ ಸಂಬಂಧ ಪಟ್ಟವರು ಕೇವಲ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಲ್ಲಿ ಮಾತ್ರ ತಾಲೂಕಿಗೆ ಹೇಮಾವತಿ ನೀರನ್ನು ಹರಿಸುತ್ತಿದ್ದಾರೆ. ನಾವು ಎಂದೆಂದಿಗೂ ಶಾಂತಿಯುತ ಮಾರ್ಗದಲ್ಲಿಯೇ ಹೋರಾಟವನ್ನು ನಡೆಸುತ್ತೇವೆ ಎಂದರು.

    ಈ ಬೃಹತ್ ಹೋರಾಟದ ಮುಂಚೂಣಿಯನ್ನು ಹೇಮಾವತಿ ಹೋರಾಟ ಸಮಿತಿಯ ಮುಖಂಡರಾದ ಶಾವಿಗೆಹಳ್ಳಿ ಮಧು, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ರೈತ ಸಂಘದ ಯದುಕುಮಾರ್, ಶರತ್ ಕುಮಾರ್ ಅಜ್ಜೇನಹಳ್ಳಿ, ಆಣೆಕಟ್ಟೆ ರಾಕೇಶ್, ಮರುಳುಸಿದ್ದಯ್ಯ, ಯೋಗೀಶ್ ಸೇರಿದಂತೆ ನೂರಾರು ರೈತ ನಾಯಕರು ಇದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    Ganesh Tumkuru
    • Website

    Related Posts

    ರಂಗನಾಥಪುರ ಮಾರ್ಗವಾಗಿ ದುರ್ಗದಕೆರೆ, ನಾಗತೀಕೆರೆಗೆ ಎತ್ತಿನಹೊಳೆ ನೀರು: ಶಾಸಕ ಸಿ.ಬಿ.ಸುರೇಶ್‌ ಬಾಬು

    September 19, 2026

    ಓದು ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ದಿವ್ಯ ಬೆಳಕು: ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಕಿವಿಮಾತು

    September 18, 2026

    ಪಟ್ಟದೇವರಕೆರೆ ಹೇಮಾವತಿ ನಾಲಾ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್‌ ಬಾಬು

    September 9, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ದಸರಾ ಉತ್ಸವ: ಅಕ್ಟೋಬರ್ 17ರಂದು ದಸರಾ ಕವಿಗೋಷ್ಠಿ – ಸ್ವರಚಿತ ಕವನಗಳ ಆಹ್ವಾನ

    September 20, 2026

    ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುವ ತುಮಕೂರು ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 17ರಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು…

    ಸಾಧಕರಿಗೆ ರಾಜ್ಯ ಮಟ್ಟದ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’: ಅರ್ಜಿ ಆಹ್ವಾನ

    September 20, 2026

    ಬುಕ್ಕಾಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ: ತಹಶೀಲ್ದಾರ್ ಆನಂದ್ ಕುಮಾರ್ ವಿರುದ್ಧ ಎಂಎಲ್ಸಿ ಬೆಂಬಲಿಗರ ತೀವ್ರ ಆಕ್ರೋಶ

    September 20, 2026

    ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಬಡ್ಡಿ ಮನ್ನಾ ಹಾಗೂ ಒಟಿಎಸ್ ಅವಕಾಶಕ್ಕೆ ಸೂರ್ಯಕಾಂತ್ ನಾಗಮಾರಪಳ್ಳಿ ಆಗ್ರಹ

    September 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.