nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗಣೇಶ ಚತುರ್ಥಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ

    September 14, 2026

    ಗೌರಿ — ಗಣೇಶ ಹಬ್ಬ: ಸಂಭ್ರಮ, ಸಡಗರ ಹಾಗೂ ಪರಿಸರ ಕಾಳಜಿಯ ಹಬ್ಬ

    September 14, 2026

    ಕೋಳಾಲ ಗ್ರಾಮದಲ್ಲಿ ಪ್ರಜಾಸೇವಾ ಅಭಿಯಾನ: ಜನಸಭೆಯಲ್ಲಿ 150 ಅರ್ಜಿ ಸ್ವೀಕಾರ

    September 13, 2026
    Facebook Twitter Instagram
    ಟ್ರೆಂಡಿಂಗ್
    • ಗಣೇಶ ಚತುರ್ಥಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ
    • ಗೌರಿ — ಗಣೇಶ ಹಬ್ಬ: ಸಂಭ್ರಮ, ಸಡಗರ ಹಾಗೂ ಪರಿಸರ ಕಾಳಜಿಯ ಹಬ್ಬ
    • ಕೋಳಾಲ ಗ್ರಾಮದಲ್ಲಿ ಪ್ರಜಾಸೇವಾ ಅಭಿಯಾನ: ಜನಸಭೆಯಲ್ಲಿ 150 ಅರ್ಜಿ ಸ್ವೀಕಾರ
    • ಬೆಂಗಳೂರಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ ಯಶಸ್ವಿ
    • ಪತ್ನಿ ಜತೆಗಿನ ಕಲಹ: ಬಳ್ಳಾರಿಯಲ್ಲಿ ಪೊಲೀಸ್ ಠಾಣೆ ಎದುರು ವಿದ್ಯುತ್ ಟ್ರಾನ್ಸ್‌ ಫಾರ್ಮರ್ ಏರಿದ ವ್ಯಕ್ತಿ!
    • ಪೊಲೀಸ್ ಠಾಣೆಗೆ ನುಗ್ಗಿದ್ರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳಿಸ್ತೀವಿ; ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್
    • ತಂಗಿ ಜೊತೆ ಅನೈತಿಕ ಸಂಬಂಧ ಶಂಕೆ; ಊಟ ಮಾಡುತ್ತಿದ್ದಾಗಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ ಹತ್ಯೆ
    • ಸಚಿವ ಸತೀಶ್ ಜಾರಕಿಹೊಳಿ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹ: ಆರ್. ಅಶೋಕ್ ತೀವ್ರ ವಾಗ್ದಾಳಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗಣೇಶ ಚತುರ್ಥಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ
    ಲೇಖನ September 14, 2026

    ಗಣೇಶ ಚತುರ್ಥಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ

    By Ganesh TumkuruSeptember 14, 2026No Comments2 Mins Read
    ganesha
    • ಎಂ.ಬಾಲಕೃಷ್ಣ ನಾಯಕ್, ಮೂಡಬಿದಿರೆ

    ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶ ಚತುರ್ಥಿ ಹಬ್ಬ ಬರುತ್ತದೆ. ಈ ಹಬ್ಬವನ್ನು ಗೌರಿ ಗಣೇಶ ಹಬ್ಬ ಎಂದೂ ಕೂಡ ಕರೆಯುತ್ತಾರೆ. ಈ ದಿನ ಗಣೇಶನನ್ನು ವಿಧಿವಿಧಾನವಾಗಿ ಆರಾಧಿಸಿ ಪೂಜಿಸಿದರೆ ಇಷ್ಟಾರ್ಥ ಫಲಗಳು ಪ್ರಾಪ್ತಿಯಾಗಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ವಿಘ್ನಗಳು ದೂರವಾಗಿ ಜಯವನ್ನು ಲಭಿಸುತ್ತದೆ. ಗಣೇಶ ಮೂರ್ತಿಯನ್ನು ಮನೆಗೆ ತರುವುದಕ್ಕಿಂತ ಮುಂಚೆ ಮನೆ ಹಾಗೂ ಮನೆಯ ಸುತ್ತಮುತ್ತ ಶುಚಿ ಗೊಳಿಸಬೇಕು.

    ಈ ವರ್ಷ 14-09-2026 ಗೌರಿ ಗಣೇಶ ಹಬ್ಬವನ್ನು ಒಂದೇ ದಿನ ಆಚರಿಸಲಾಗುತ್ತದೆ. ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಸುಖ ಶಾಂತಿ, ಸಮೃದ್ಧಿ ದೊರೆಯುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿಯೊಂದು ಶುಭಕಾರ್ಯಕ್ಕೂ ಮುಂಚೆ ವಿಘ್ನನಿವಾರಕನಾದ ಗಣೇಶನನ್ನು ನೆನೆಸಿಕೊಳ್ಳುತ್ತಾರೆ. ಯಾವುದೇ ಪೂಜೆಗೂ ಮೊದಲು ಗಣಪತಿಯನ್ನು ಪೂಜಿಸುವುದು ವಾಡಿಕೆ. ಗಣೇಶನನ್ನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರು ಎಂದು ಪೂಜಿಸಲಾಗುತ್ತದೆ. ಈ ವರ್ಷ ಚತುರ್ಥಿ ತಿಥಿಯು ಸೆಪ್ಟೆಂಬರ್ 14ರ ಬೆಳಿಗ್ಗೆ 7:06ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 15ರ ಬೆಳಿಗ್ಗೆ 7:44ಕ್ಕೆ ಮುಕ್ತಾಯವಾಗುತ್ತದೆ. ಗಣೇಶ ಹಬ್ಬವು ಭಾದ್ರಪದ ಮಾಸದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿ ತಿಥಿಯವರೆಗೆ ಮುಂದುವರಿಯುತ್ತದೆ.

    ಭಾರತದಲ್ಲಿ ವೈಭವದಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯನ್ನು ಗಣೇಶೋತ್ಸವ ಎಂದೂ ಕರೆಯಲಾಗುತ್ತದೆ. ಗಣೇಶನನ್ನು ಗಣೇಶ, ವಿನಾಯಕ, ಮೂಷಿಕವಾಹನ ಮತ್ತು ವಿನಾಯಕ ಹಾಗೂ ಇನ್ನಿತರ ಹೆಸರುಗಳಿವೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜಿಸಿ, ವ್ರತವನ್ನು ಆಚರಿಸಲಾಗುತ್ತದೆ.

    ಹಬ್ಬದ ದಿನ ಮಡಿ ಯಲ್ಲಿ ಮೋದಕ, ಕಡುಬು, ನಾನಾ ಬಗೆಯ ಪಂಚಭಕ್ಷ್ಯಗಳು, ಪಾಯಸ, ಸಿಹಿತಿಂಡಿ, ಊಟದ ಜೊತೆಗೆ ಮೂಡೆ, ಪತ್ರೊಡೆ ರೊಟ್ಟಿ

    ನಾನಾ ರೀತಿಯ ಭಕ್ಷ್ಯಗಳನ್ನಿಟ್ಟು ಪೂಜೆ ಮಾಡುತ್ತಾರೆ. ಆದಿನ ಪ್ರತಿಷ್ಠಾಪಿಸಲ್ಪಟ್ಟ 21 ಗಣಪತಿಗಳನ್ನು ನೋಡಿದರೆ (ಪ್ರತ್ಯಕ್ಷ/ಪರೋಕ್ಷ) ಇಷ್ಟಾರ್ಥಗಳು ನೆರವೇರಿ ಕಷ್ಟ ಪರಿಹಾರವಾಗುತ್ತದೆ ಎಂಬ ಪ್ರತೀತಿ ಕೂಡ ಇದೆ, ಹಾಗಾಗಿ ಜನಸಾಮಾನ್ಯರು 21 ಮನೆಗಳಿಗೆ ಹೋಗಿ ದೇವರಿಗೆ ಅಕ್ಷತೆ ಹಾಕಿ ಆಶೀರ್ವಾದ ಪಡೆಯುತ್ತಾರೆ.

    ವಿವಿಧ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಕೂಡ 3, 5, 9, 11 ಅಥವಾ 21 ದಿನಗಳ ಕಾಲ ಆಚರಿಸಿ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಗಣೇಶನನ್ನು ಪೂಜಿಸುವ ಗಣೇಶನ ಸೊಂಡಿಲು ಎಡಭಾಗಕ್ಕೆ ತಿರುಗಿ ಇರಬೇಕು. ಗಣಪತಿಯನ್ನು ಆರಾಧಿಸುವಾಗ ಸೊಂಡಿಲು ಎಡಭಾಗಕ್ಕೆ ಇರುವಂತೆ ನೋಡಿಕೊಂಡು ಪೂಜಿಸಬೇಕು, ಮನೆಗೆ ತರಲು ಐಶ್ವರ್ಯ ತರಲು ಎಡಕ್ಕೆ ಇರುವ ಸೊಂಡಿಲ ಗಣೇಶನೇ ಅತ್ಯಂತ ಶ್ರೇಷ್ಠ, ಎಡಮುರಿ ಗಣಪತಿಯನ್ನು ವಾಮಮುಖಿ ಗಣಪತಿ ಎಂದು ಕರೆಯಲಾಗುತ್ತದೆ, ಎಡಮುರಿ ಗಣಪತಿಯನ್ನು ಪೂಜಿಸುವುದು ಸುಲಭ ಹಾಗೂ ಶಾಂತ ಸ್ವರೂಪದ ಪೂಜೆಗೆ ಸೂಕ್ತ. ಅಲ್ಲದೇ ಬಲಗಡೆ ಸೊಂಡಿಲಿರುವ ಗಣಪತಿಯನ್ನು “ಸಿದ್ಧಿ ವಿನಾಯಕ” ಎಂದು ಕರೆಯಲಾಗುತ್ತದೆ, ಬಲಮುರಿ ಗಣಪತಿಯ ಪೂಜಾ-ಪುನಸ್ಕಾರ, ನಿತ್ಯನಿಯಮ ಹಾಗೂ ಆಚಾರ-ವಿಚಾರಗಳು ಬಹಳ ಕಟ್ಟುನಿಟ್ಟಾಗಿರಬೇಕು.

    ನಿಂತಿರುವ ಅಥವಾ ನೃತ್ಯ ಮಾಡುತ್ತಿರುವ ಗಣಪತಿ ವಿಗ್ರಹವನ್ನು ತಂದು ಪೂಜಿಸುವ ಬದಲು ಸ್ಥಿರವಾಗಿ ಕುಳಿತಿರುವ ಗಣಪತಿ ವಿಗ್ರಹವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಪೂರ್ವ, ಉತ್ತರ, ಈಶಾನ್ಯ ದಿಕ್ಕಿನಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ನಾವು ಮಾಡುವ ಪೂಜೆಗಳಿಗೆ ಖಂಡಿತ ಶ್ರೇಷ್ಠಫಲ ಲಭಿಸುತ್ತದೆ.

    ಅಲ್ಲದೆ ಮನೆಯ ಮುಖ್ಯ ಬಾಗಿಲಿಗೆ ಮಾವಿನ ತೋರಣ ಕಟ್ಟಬೇಕು, ಸುವಾಸನೆಭರಿತ ಧೂಪದಿಂದ ಬಾಗಿಲನ್ನು ಅಲಂಕರಿಸುವುದು ಒಳ್ಳೆಯದು. ಇದರಿಂದ ಗಣಪತಿಯ ಅನುಗ್ರಹದ ಜೊತೆಗೆ ಆ ಮನೆಗೆ ಲಕ್ಷ್ಮಿದೇವಿಯ ಹೆಚ್ಚಿ ಇಡುತ್ತಾಳೆ, ನಿನ್ನ ಆ ಮನೆ ಸಂಪತ್ತಿನಿಂದ ಕೂಡಿರುತ್ತದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಗೌರಿ — ಗಣೇಶ ಹಬ್ಬ: ಸಂಭ್ರಮ, ಸಡಗರ ಹಾಗೂ ಪರಿಸರ ಕಾಳಜಿಯ ಹಬ್ಬ

    September 14, 2026

    ಹೀಗೂ ಉಂಟೆ …! | ಸಂಟ್ಯಾರು ಕಡೆಯುವ ಕಲ್ಲು…!

    September 2, 2026

    ಈ ದಿನದ ಕಥೆಯ ಶೀರ್ಷಿಕೆ:   “ಆಗುವುದೆಲ್ಲಾ ಒಳ್ಳೆಯದಕ್ಕೇ !?”

    August 19, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಗಣೇಶ ಚತುರ್ಥಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ

    September 14, 2026

    ಎಂ.ಬಾಲಕೃಷ್ಣ ನಾಯಕ್, ಮೂಡಬಿದಿರೆ ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶ ಚತುರ್ಥಿ ಹಬ್ಬ ಬರುತ್ತದೆ. ಈ ಹಬ್ಬವನ್ನು ಗೌರಿ ಗಣೇಶ ಹಬ್ಬ…

    ಗೌರಿ — ಗಣೇಶ ಹಬ್ಬ: ಸಂಭ್ರಮ, ಸಡಗರ ಹಾಗೂ ಪರಿಸರ ಕಾಳಜಿಯ ಹಬ್ಬ

    September 14, 2026

    ಕೋಳಾಲ ಗ್ರಾಮದಲ್ಲಿ ಪ್ರಜಾಸೇವಾ ಅಭಿಯಾನ: ಜನಸಭೆಯಲ್ಲಿ 150 ಅರ್ಜಿ ಸ್ವೀಕಾರ

    September 13, 2026

    ಬೆಂಗಳೂರಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ ಯಶಸ್ವಿ

    September 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.