nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026
    Facebook Twitter Instagram
    ಟ್ರೆಂಡಿಂಗ್
    • ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!
    • ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ
    • ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
    • ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ
    • ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ
    • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ
    • ನಂದಿಧ್ವಜ ಕಂಬ ಮುರಿತದಿಂದ ಮಾವುತನ ಪತ್ನಿ ಸಾವು ತನಕ! ಈ ಬಾರಿಯ ಮೈಸೂರು ದಸರಾದಲ್ಲಿ ನಡೆದಿದ್ದೇನು?
    • ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!
    ತುಮಕೂರು October 24, 2026

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    By Ganesh TumkuruOctober 24, 2026No Comments2 Mins Read
    tumakuru road
    •  ನಟರಾಜು ಜಿ. ಎಲ್., ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ

    ಹಬ್ಬಗಳು ಬರುತ್ತವೆ, ಸಂಭ್ರಮ-ಸಡಗರವನ್ನು ಹೊತ್ತು ತರುತ್ತವೆ. ಜನ ಪರಸ್ಪರ ಶುಭ ಕೋರುತ್ತಾರೆ, ಮನೆ–ಮನ ಬೆಳಗುತ್ತದೆ. ಆದರೆ ಹಬ್ಬ ಮುಗಿದ ಮರುದಿನವೇ ನಮ್ಮ ನಗರದ ರಸ್ತೆಗಳು ಎದುರಿಸುವ ದುಸ್ಥಿತಿ ನೋಡಿದರೆ, ನಮ್ಮ ಆಚರಣೆಗಳಲ್ಲಿ ‘ನಾಗರಿಕ ಪ್ರಜ್ಞೆ’ ಎಂಬುದು ಎಲ್ಲಿಯಾದರೂ ಜೀವಂತವಾಗಿದೆಯೇ ಎಂಬ ನೋವಿನ ಪ್ರಶ್ನೆ ಕಾಡದೇ ಇರದು. ಇದಕ್ಕೆ ತಾಜಾ ಮತ್ತು ಕಣ್ಣಿಗೆ ರಾಚುವ ಉದಾಹರಣೆ ನಮ್ಮ ತುಮಕೂರಿನ ಶಿರಾಗೇಟ್ ಮುಖ್ಯರಸ್ತೆ.

    ಆಯುಧ ಪೂಜೆ ಮತ್ತು ವಿಜಯದಶಮಿಯ ಸಡಗರ ಮುಗಿದು ದಿನಗಳೇ ಕಳೆದಿವೆ. ಆದರೆ ಶಿರಾಗೇಟ್ ರಸ್ತೆಯ ಬದಿಯಲ್ಲಿ ಮಾತ್ರ ನೂರಾರು ಬೂದುಗುಂಬಳಕಾಯಿಗಳು ಕೊಳೆತು, ಗಬ್ಬು ನಾರುತ್ತಾ ಬಿದ್ದಿವೆ. ಹಬ್ಬದ ದಿನಗಳಲ್ಲಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ನೂರಾರು ಕ್ವಿಂಟಾಲ್ ಕುಂಬಳಕಾಯಿಗಳನ್ನು ರಸ್ತೆ ಬದಿಗೆ ತಂದು ಸುರಿದಿದ್ದ ವ್ಯಾಪಾರಿಗಳು, ವ್ಯಾಪಾರ ಮುಗಿದ ಮೇಲೆ ಮಾರಾಟವಾಗದೆ ಉಳಿದ ಸರಕನ್ನು ಅಲ್ಲೇ ಅನಾಥವಾಗಿ ಬಿಟ್ಟು ಜಾಗ ಖಾಲಿ ಮಾಡಿದ್ದಾರೆ.

    ದುರ್ನಾತ, ಅಪಘಾತದ ಆಪತ್ತು:

    ಬಿಸಿಲಿನ ಬೇಗೆಗೆ ಈ ಕುಂಬಳಕಾಯಿಗಳು ಸಂಪೂರ್ಣವಾಗಿ ಕೊಳೆತು ನಾರುತ್ತಿವೆ. ಅವುಗಳಿಂದ ಹರಿಯುತ್ತಿರುವ ಕಪ್ಪು ಬಣ್ಣದ, ಜಿಡ್ಡಿನಿಂದ ಕೂಡಿದ ದ್ರವ ರಸ್ತೆಯುದ್ದಕ್ಕೂ ಹರಡಿಕೊಂಡಿದೆ. ಅತ್ತ ಕಡೆಯಿಂದ ಬೀಸುವ ಗಾಳಿಯಲ್ಲಿ ಹೊಲಸು ವಾಸನೆ ತುಂಬಿದ್ದು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಿಂತ ದೊಡ್ಡ ಅಪಾಯವೆಂದರೆ, ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳು ಈ ಕೊಳೆತ ತಿರುಳಿನ ಮೇಲೆ ಹರಿದು ರಸ್ತೆ ಜಾರುವಂತಾಗಿದೆ. ಪರಿಣಾಮವಾಗಿ, ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಕೈ-ಕಾಲು ಮುರಿದುಕೊಳ್ಳುತ್ತಿದ್ದಾರೆ. ಸಣ್ಣ ಅಪಘಾತಗಳಂತೂ ನಿತ್ಯದ ಕಥೆಯಾಗಿವೆ. ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಇದು ಅಕ್ಷರಶಃ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.

    ಸಾರ್ವಜನಿಕರ ಜಾಗವನ್ನು, ಪಾದಚಾರಿ ರಸ್ತೆಗಳನ್ನು ವ್ಯಾಪಾರಕ್ಕೆ ಬಳಸಿಕೊಳ್ಳುವ ವ್ಯಾಪಾರಿಗಳಿಗೆ ಸಮಾಜದ ಬಗ್ಗೆ ಕನಿಷ್ಠ ಕಾಳಜಿ ಇರಬೇಕಲ್ಲವೇ? ಹಬ್ಬದ ಸಮಯದಲ್ಲಿ ದುಡ್ಡು ಮಾಡಿಕೊಂಡು ಹೋದವರು, ಮಾರಾಟವಾಗದ ಕುಂಬಳಕಾಯಿಗಳನ್ನು ಸೂಕ್ತ ಕಸದ ತೊಟ್ಟಿಗೆ ಅಥವಾ ಗೊಬ್ಬರ ತಯಾರಿಕಾ ಘಟಕಕ್ಕೆ ಸಾಗಿಸುವ ಬದಲು, ರಸ್ತೆಯಲ್ಲೇ ಬಿಟ್ಟು ಹೋಗಿರುವುದು ಎಷ್ಟು ಸಮಂಜಸ? ತಾವು ಮಾಡಿದ ಕಸವನ್ನು ಬೇರೆಯವರು ಸ್ವಚ್ಛ ಮಾಡಬೇಕು ಎಂಬ ಈ ಮನಸ್ಥಿತಿಯೇ ಇಡೀ ನಗರದ ಅಂದಗೆಡಿಸುತ್ತಿದೆ.

    ಜಿಲ್ಲಾಡಳಿತ-ಮಹಾನಗರ ಪಾಲಿಕೆ ನಿರ್ಲಕ್ಷ್ಯ!

    ವ್ಯಾಪಾರಿಗಳ ಹೊಣೆಗೇಡಿತನ ಒಂದೆಡೆಯಾದರೆ, ನಗರದ ಸ್ವಚ್ಛತೆ ಮತ್ತು ಜನರ ಸುರಕ್ಷತೆಯ ಹೊಣೆ ಹೊತ್ತಿರುವ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ನಡೆ ಅದಕ್ಕಿಂತಲೂ ಆಘಾತಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಿರಾಗೇಟ್ ರಸ್ತೆಯ ಈ ದುರವಸ್ಥೆಯ ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಿದ್ದರೂ, ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿದ್ದಾರೆ.

    ಹಬ್ಬ ಮುಗಿದ ತಕ್ಷಣವೇ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಾಗಿದ್ದ ಪೌರಕಾರ್ಮಿಕರ ಪಡೆಯನ್ನು ಇಲ್ಲಿ ಇನ್ನೂ ನಿಯೋಜಿಸಿಲ್ಲ. ಇಷ್ಟೆಲ್ಲಾ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಮೇಲೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ ಎಂದರೆ ಇವರ ಕರ್ತವ್ಯ ಪ್ರಜ್ಞೆ ಎಲ್ಲಿಗೆ ತಲುಪಿದೆ?

    ತುಮಕೂರು ಮಹಾನಗರ ಪಾಲಿಕೆ ಇನ್ನಾದರೂ ಕುಂಭಕರ್ಣ ನಿದ್ದೆಯಿಂದ ಎದ್ದು, ತಕ್ಷಣವೇ ಶಿರಾಗೇಟ್ ರಸ್ತೆಯ ಕಸವನ್ನು ಯುದ್ಧೋಪಾದಿಯಲ್ಲಿ ತೆರವುಗೊಳಿಸಬೇಕು. ರೋಗಾಣುಗಳು ಹರಡದಂತೆ ಮತ್ತು ದುರ್ನಾತ ತಡೆಯಲು ಬ್ಲೀಚಿಂಗ್ ಪೌಡರ್ ಹಾಗೂ ಸೋಂಕುನಿವಾರಕಗಳನ್ನು ಸಿಂಪಡಿಸಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಹಬ್ಬದ ಹೆಸರಿನಲ್ಲಿ ರಸ್ತೆಗಳನ್ನು ಗಬ್ಬೆಬ್ಬಿಸಿ ಹೋಗುವ ವ್ಯಾಪಾರಿಗಳ ವಿರುದ್ಧ ದಂಡ ವಿಧಿಸುವ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು.

    ನಗರದ ಸ್ವಚ್ಛತೆ ಕೇವಲ ಅಧಿಕಾರಿಗಳ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಹಾಗೂ ವ್ಯಾಪಾರಿಯ ಕರ್ತವ್ಯವೂ ಹೌದು. ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ಜೊತೆ ಚೆಲ್ಲಾಟವಾಡುವುದನ್ನು ಇನ್ನಾದರೂ ನಿಲ್ಲಿಸಬೇಕಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    October 22, 2026

    ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

    October 22, 2026

    ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

    October 22, 2026

    Leave A Reply Cancel Reply

    Our Picks

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026

    ವಾಟ್ಸಾಪ್ ಬಳಕೆದಾರರೇ ಎಚ್ಚರ! 2027ರಿಂದ ಹೊಸ ನಿಯಮ, ಫೋನ್‌ ನಲ್ಲಿ ಸಿಮ್ ಇಲ್ಲದಿದ್ದರೆ ಆ್ಯಪ್ ಬಳಕೆಗೆ ತೊಂದರೆ

    October 24, 2026

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

     ನಟರಾಜು ಜಿ. ಎಲ್., ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ ಹಬ್ಬಗಳು ಬರುತ್ತವೆ, ಸಂಭ್ರಮ-ಸಡಗರವನ್ನು ಹೊತ್ತು ತರುತ್ತವೆ. ಜನ ಪರಸ್ಪರ…

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.