ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ಸಾಯಿ ಪಲ್ಲವಿ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಐದನೇ ದಿನ ಅಂದರೆ ಸೋಮವಾರದಂದು (ನವೆಂಬರ್ 9) ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದೆ.
ಸೋಮವಾರದಂದು ದಾಖಲೆಯ 107.50 ಕೋಟಿ ರೂ. ಕಲೆಕ್ಷನ್!
ಸೋಮವಾರ (ನ.9) ಒಂದೇ ದಿನ ದೇಶಾದ್ಯಂತ ಒಟ್ಟು 23,911 ಪ್ರದರ್ಶನಗಳನ್ನು ಕಂಡ ‘ರಾಮಾಯಣ’ ಸಿನಿಮಾ, ಭಾರತದಲ್ಲಿ ಬರೋಬ್ಬರಿ 107.50 ಕೋಟಿ ರೂಪಾಯಿ ನೆಟ್ ಸಂಗ್ರಹ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾದ ಹೆಸರಲ್ಲಿದ್ದ ಮೊದಲ ಸೋಮವಾರದ ಗರಿಷ್ಠ ಗಳಿಕೆಯ (60 ಕೋಟಿ ರೂ.) ದಾಖಲೆಯನ್ನು ಈ ಚಿತ್ರವು ಅತ್ಯಂತ ಸುಲಭವಾಗಿ ಮುರಿದು ಮುನ್ನಡೆದಿದೆ.
5 ದಿನಗಳ ಒಟ್ಟು ಗಳಿಕೆ ವಿವರ:
- ಭಾರತದಲ್ಲಿ ನೆಟ್ ಕಲೆಕ್ಷನ್: 346.35 ಕೋಟಿ ರೂ.
- ಭಾರತದಲ್ಲಿ ಗ್ರಾಸ್ ಕಲೆಕ್ಷನ್: 413.90 ಕೋಟಿ ರೂ.
- ಸೋಮವಾರ ಒಂದೇ ದಿನ 25 ಕೋಟಿ ರೂ. ಸೇರಿದಂತೆ ಒಟ್ಟು ವಿದೇಶಿ ಗಳಿಕೆ 250 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
- ಬರೋಬ್ಬರಿ 663.90 ಕೋಟಿ ರೂಪಾಯಿ ತಲುಪಿದೆ.
ಸೋಮವಾರದಂದು ಹಿಂದಿ ಆವೃತ್ತಿಯು ದೇಶಾದ್ಯಂತ ಶೇಕಡಾ 73.6ರಷ್ಟು ಭರ್ಜರಿ ಆಕ್ಯುಪೆನ್ಸಿ ದಾಖಲಿಸಿದೆ. ಪ್ರಮುಖ ನಗರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಎಂಬ ವಿವರ ಇಲ್ಲಿದೆ:
- ಚೆನ್ನೈ: 83 ಪ್ರದರ್ಶನಗಳೊಂದಿಗೆ ಶೇಕಡಾ 94ರಷ್ಟು ಆಸನಗಳು ಭರ್ತಿ.
- ಬೆಂಗಳೂರು: 262 ಪ್ರದರ್ಶನಗಳಲ್ಲಿ ಶೇಕಡಾ 90.8ರಷ್ಟು ಭರ್ತಿ.
- ಹೈದರಾಬಾದ್: ಶೇಕಡಾ 77.5ರಷ್ಟು ಆಕ್ಯುಪೆನ್ಸಿ.
- ದೆಹಲಿ-ಎನ್ ಸಿಆರ್: ಶೇಕಡಾ 72.5ರಷ್ಟು ಆಕ್ಯುಪೆನ್ಸಿ.
- ಮುಂಬೈ: ಶೇಕಡಾ 69.3ರಷ್ಟು ಆಕ್ಯುಪೆನ್ಸಿ.
- 2026ರ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ
ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ನಿರ್ಮಾಣ ವೆಚ್ಚದ ಈ ಬಿಗ್ ಬಜೆಟ್ ಸಿನಿಮಾ, ಈಗಾಗಲೇ 2026ರ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. 1,852 ಕೋಟಿ ರೂಪಾಯಿ ಗಳಿಸಿರುವ ‘ಧುರಂಧರ್: ದಿ ರಿವೇಂಜ್’ ಮತ್ತು 821 ಕೋಟಿ ರೂಪಾಯಿ ಗಳಿಸಿರುವ ‘ಜೈಲರ್ 2’ ಚಿತ್ರಗಳ ನಂತರದ ಸ್ಥಾನದಲ್ಲಿ ‘ರಾಮಾಯಣ’ ದಾಖಲೆ ನಿರ್ಮಿಸಿದೆ. ಸಿನಿಮಾದ ವಿಕೆಂಡ್ ಹಾಗೂ ಮುಂಬರುವ ದಿನಗಳಲ್ಲಿ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
