Normal
0
false
false
false
EN-IN
X-NONE
X-NONE
/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-parent:””;
mso-padding-alt:0cm 5.4pt 0cm 5.4pt;
mso-para-margin-top:0cm;
mso-para-margin-right:0cm;
mso-para-margin-bottom:10.0pt;
mso-para-margin-left:0cm;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-hansi-font-family:Calibri;
mso-hansi-theme-font:minor-latin;
mso-bidi-font-family:”Times New Roman”;
mso-bidi-theme-font:minor-bidi;
mso-fareast-language:EN-US;}
ತಿಪಟೂರು: ತಾಲೂಕಿನ ಸಿದ್ದಾಪುರ ಕೆರೆಯ ಪುನಶ್ಚೇತನ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ₹11.50 ಲಕ್ಷ ಅನುದಾನ ಮಂಜೂರು ಮಾಡಿದ್ದು, ಕಾಮಗಾರಿಗೆ ಇಂದು ವಿಧ್ಯುಕ್ತವಾಗಿ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಗುದ್ದಲಿ ಪೂಜೆ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾಪುರ ಕೆರೆ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, “ಕರ್ನಾಟಕವನ್ನು ಕರಾವಳಿ, ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಎಂದು ವಿಂಗಡಿಸಲಾಗಿದೆ. ಹಿಂದೆ ಬಯಲುಸೀಮೆಯಲ್ಲಿ ಮಾತ್ರ ಮಳೆಯ ಅಭಾವ ಕಂಡುಬರುತ್ತಿತ್ತು. ಆದರೆ ಪರಿಸರ ನಾಶದ ಫಲವಾಗಿ ಇಂದು ಕರಾವಳಿಯಲ್ಲೂ ಮಳೆಯ ಕೊರತೆ ಎದುರಾಗಿದೆ. ಮುಂದೊಮ್ಮೆ ಇಂತಹ ದುಸ್ಥಿತಿ ಬರಬಹುದೆಂದು ಅರಿತಿದ್ದ ನಮ್ಮ ಪೂರ್ವಜರು ಪ್ರತಿ ಹಳ್ಳಿಯಲ್ಲೂ ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದರು. ಆದರೆ, ನಾವು ಅವುಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ” ಎಂದು ವಿಷಾದ ವ್ಯಕ್ತಪಡಿಸಿದರು.
“ನಮ್ಮ ನಿರ್ಲಕ್ಷ್ಯವೇ ಇಂದು ಅನಾವೃಷ್ಟಿಯ ರೂಪದಲ್ಲಿ ಶಾಪವಾಗಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥಸ್ವಾಮಿಯ ಪ್ರಸಾದ ರೂಪದಲ್ಲಿ ರಾಜ್ಯದ ಕೆರೆಗಳನ್ನು ಪುನಶ್ಚೇತನಗೊಳಿಸಿ ರೈತರ ಜೀವನಾಡಿಯಾದ ಜಲಮೂಲಗಳನ್ನು ಸಂರಕ್ಷಿಸುತ್ತಿರುವುದು ನಮ್ಮ ಸೌಭಾಗ್ಯ. ಗ್ರಾಮಸ್ಥರು ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಮಕೂರು-1 ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, “ಧರ್ಮಸ್ಥಳ ಯೋಜನೆಯು ಕೇವಲ ಸಾಲ ನೀಡುವ ಸಂಸ್ಥೆಯಲ್ಲ, ಬದಲಾಗಿ ಬಡಜನರ ಸೇವೆಗಾಗಿ ಹುಟ್ಟಿದ ಸಂಸ್ಥೆಯಾಗಿದೆ. ಸೂರ್ಯ-ಚಂದ್ರರಿರುವವರೆಗೂ ಶ್ರೀ ಕ್ಷೇತ್ರದ ಸೇವೆ ನಿರಂತರವಾಗಿರಲಿದೆ” ಎಂದರು.
ಯೋಜನೆಯ 48 ಸಮಗ್ರ ಸೇವೆಗಳ ಕುರಿತು ಮಾಹಿತಿ ನೀಡಿದ ಅವರು, “ರಾಜ್ಯದಲ್ಲೇ ಅತಿ ಹೆಚ್ಚು ಸೇವೆಗಳು ತಿಪಟೂರು ತಾಲೂಕಿಗೆ ಲಭ್ಯವಾಗುತ್ತಿದ್ದು, ಇಂದು ತಾಲೂಕಿನ 21ನೇ ಕೆರೆ ಪುನಶ್ಚೇತನಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇನ್ನು ಒಂದು ತಿಂಗಳೊಳಗೆ ಕೆರೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ತದನಂತರ ಕೆರೆಯನ್ನು ಶಾಶ್ವತವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಕೆರೆ ಸಮಿತಿ, ರೈತರು ಹಾಗೂ ಗ್ರಾಮಸ್ಥರ ಮೇಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಉದಯ್ ಕೆ., ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಗವಿಯಣ್ಣ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಲ್ಲಿಗಪ್ಪಾಚಾರ್, ಕೆರೆ ಸಮಿತಿ ಉಪಾಧ್ಯಕ್ಷ ಪ್ರವೀಣ್, ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ವಲಯ ಮೇಲ್ವಿಚಾರಕ ಮನೀಶ್, ಗ್ರಾಮದ ಹಿರಿಯ ಮುಖಂಡರಾದ ರಾಜಣ್ಣ, ಕೇಶವ, ನಿವೃತ್ತ ಉಪನ್ಯಾಸಕ ದೇವಾನಂದ್, ಎಸ್.ಆರ್. ಸ್ವಾಮಿ, ಕೃಷ್ಣಪ್ಪ, ಸೇವಾಪ್ರತಿನಿಧಿ ಮೀನಾಕ್ಷಿ ಸೇರಿದಂತೆ ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
