nammatumakuru

    Subscribe to Updates

    Get the latest creative news from FooBar about art, design and business.

    What's Hot

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    November 13, 2026

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026
    Facebook Twitter Instagram
    ಟ್ರೆಂಡಿಂಗ್
    • 7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ
    • e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು
    • ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?
    • ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು!
    • ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ
    • ಬಿಜೆಪಿಗೆ ಮತ ಹಾಕಿದರೆ ಐದೂ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಬಂದ್: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
    • ಕಾಲು ಮುರಿದರೂ ನಿಲ್ಲದ ಕಾಯಕ: ತರಗತಿಯಲ್ಲೇ ಹಾಸಿಗೆ ಹಾಕಿ ಪಾಠ ಮಾಡುತ್ತಿರುವ ಶಾಸಕ ಪ್ರದೀಪ್ ಈಶ್ವರ್!
    • ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ
    ರಾಜ್ಯ ಸುದ್ದಿ November 13, 2026

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    By Ganesh TumkuruNovember 13, 2026No Comments2 Mins Read
    indushekhar

    ಬೆಂಗಳೂರು: ರಾಜಾಜಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಒಂದೇ ಕುಟುಂಬದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪತ್ನಿ ಸುನೀತಾ ಹಾಗೂ ಆಕೆಯ ತವರು ಮನೆಯವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಹತ್ಯೆ ಮಾಡಿರುವುದಾಗಿ ಆರೋಪಿ ಇಂದುಶೇಖರ್ ಈ ಹಿಂದೆ ಹೇಳಿಕೆ ನೀಡಿದ್ದನು. ಆದರೆ, ಹೆಚ್ಚಿನ ವಿಚಾರಣೆಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಾಗಿ ಈ ಕೊಲೆಗಳನ್ನು ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನ್ಯಾಮಗೌಡ ಅವರ ನೇತೃತ್ವದಲ್ಲಿ ಪೊಲೀಸರು ಈ ಆಯಾಮದಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ.

    ಶ್ರೀರಾಮಪುರದಲ್ಲಿ ಆರೋಪಿಯ ಅತ್ತೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯಿದ್ದು, ಅದು ಕುಟುಂಬದ ಸದಸ್ಯರೆಲ್ಲರಿಗೂ ಪಾಲಾಗಬೇಕಿತ್ತು. ಪತ್ನಿಯ ಮನೆಯವರ ಕಿರುಕುಳದ ಜೊತೆಗೆ, ಕುಟುಂಬದ ಎಲ್ಲರನ್ನೂ ಹತ್ಯೆ ಮಾಡಿದರೆ ಆಸ್ತಿ ಯಾರಿಗೂ ಪಾಲಾಗದೆ ಸಂಪೂರ್ಣವಾಗಿ ತನಗೇ ಲಭಿಸಲಿದೆ ಎಂದು ಇಂದುಶೇಖರ್ ಸಂಚು ರೂಪಿಸಿದ್ದ ಎನ್ನಲಾಗಿದೆ. ಇದರಂತೆ ಸಂಬಂಧಿಕರನ್ನು ಪ್ರತ್ಯೇಕವಾಗಿ ಮನೆಗೆ ಕರೆಯಿಸಿಕೊಂಡು, ಊಟದಲ್ಲಿ ಮತ್ತುಬರುವ ಔಷಧ ಬೆರೆಸಿ ಪ್ರಜ್ಞಾಹೀನರನ್ನಾಗಿ ಮಾಡಿ, ಬಳಿಕ ರುಬ್ಬುಗುಂಡಿನಿಂದ ತಲೆಗೆ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ತಂದೆಗೆ ಸಾಥ್ ನೀಡಿದ ಮಗಳು!

    ಈ ಸರಣಿ ಹತ್ಯೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್ ನೊಂದಿಗೆ ಆತನ ಅಪ್ರಾಪ್ತ ಮಗಳು ಕೂಡ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿಯನ್ನು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿ 10 ದಿನಗಳ ಕಾಲ ವಶಕ್ಕೆ ಪಡೆದಿರುವ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ತಯಾರಿ, ಸಂಚು ಮತ್ತು ಅದನ್ನು ಕಾರ್ಯಗತಗೊಳಿಸಿದ ರೀತಿ, ಮುಖ್ಯವಾಗಿ ಮಗಳಿಗೆ ತಂದೆ ಯಾವ ರೀತಿ ‘ಬ್ರೈನ್ ವಾಶ್’ ಮಾಡಿದ್ದ ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ. ಕೃತ್ಯ ನಡೆದಾಗ ಬಾಲಕಿಗೆ 17 ವರ್ಷ ವಯಸ್ಸಾಗಿದ್ದು, ನವೆಂಬರ್ 8ರಂದು 18 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮದ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಒಣಮೆಣಸಿನಕಾಯಿ ತಂತ್ರ!

    ಆರೋಪಿ ಇಂದುಶೇಖರ್ ತನ್ನ ಭಾವ ಶಂಕರ್ ಹಾಗೂ ನಾದಿನಿ ನಳಿನಿ ದಂಪತಿಯನ್ನು ಹತ್ಯೆ ಮಾಡಿದ ಬಳಿಕ, ಮೃತದೇಹಗಳನ್ನು ಚೀಲಗಳಲ್ಲಿ ತುಂಬುವಾಗ ಒಣಮೆಣಸಿನಕಾಯಿ ತುರುಕಿದ್ದನು. ಕಾಡು ಪ್ರಾಣಿ ಹಾಗೂ ಪಕ್ಷಿಗಳು ಮೃತದೇಹಗಳನ್ನು ಕಿತ್ತು ತಿನ್ನಬಾರದು ಎಂಬುದು ಇದರ ಒಂದು ಉದ್ದೇಶವಾಗಿದ್ದರೆ, ಖಾರದ ಪುಡಿ ಅಥವಾ ಒಣಮೆಣಸಿನಕಾಯಿ ಹಾಕುವುದರಿಂದ ಪೊಲೀಸ್ ಶ್ವಾನಗಳು ಮೃತದೇಹದ ವಾಸನೆ ಹಿಡಿಯಲು ಸಾಧ್ಯವಾಗುವುದಿಲ್ಲ ಮತ್ತು ತಾನು ಸಿಕ್ಕಿಬೀಳುವುದಿಲ್ಲ ಎಂಬ ಲೆಕ್ಕಾಚಾರವನ್ನು ಆರೋಪಿ ಹಾಕಿದ್ದನು. ಈ ಇಬ್ಬರ ಮೃತದೇಹಗಳು ನವೆಂಬರ್ 9ರಂದು ಶಿರಾಡಿಘಾಟ್ ನ ಮಾರನಹಳ್ಳಿ ಸಮೀಪದ 100 ಅಡಿ ಆಳದ ಕಂದಕದಲ್ಲಿ ಪತ್ತೆಯಾಗಿದ್ದವು.

    ‘ಲುಮಿನಾಲ್ ಟೆಸ್ಟ್’!

    ಪ್ರಕರಣದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ಎಫ್ ಎಸ್ ಎಲ್ (FSL) ಮತ್ತು ಸೋಕೋ (SOCO) ತಂಡಗಳು ಹಂತಕನ ಮನೆಯಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿವೆ. ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸಲು ಆರೋಪಿಯು ಮನೆಯ ಹಾಲ್, ಬಾತ್ರೂಮ್ ಹಾಗೂ ಕೃತ್ಯಕ್ಕೆ ಬಳಸಿದ ರುಬ್ಬುಗುಂಡಿನ ಮೇಲಿದ್ದ ರಕ್ತದ ಕಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದನು. ಹೀಗಾಗಿ ಕಣ್ಣಿಗೆ ಕಾಣದ ರಕ್ತದ ಮಾದರಿಗಳನ್ನು ಪತ್ತೆಹಚ್ಚಲು ತಜ್ಞರ ಮೂಲಕ ಮನೆಯಲ್ಲಿ ‘ಲುಮಿನಾಲ್ ಟೆಸ್ಟ್’ (Luminol Test) ನಡೆಸಲಾಗಿದೆ.

    ಏನಿದು ಲುಮಿನಾಲ್ ಟೆಸ್ಟ್?:

    ರಕ್ತದ ಕಲೆಗಳಿರುವ ನೆಲ ಅಥವಾ ವಸ್ತುಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರೂ, ಅದರಲ್ಲಿ ರಕ್ತದ ಹೀಮೋಗ್ಲೋಬಿನ್ ಅಂಶ ಸೂಕ್ಷ್ಮವಾಗಿ ಉಳಿದಿರುತ್ತದೆ. ಈ ಜಾಗದಲ್ಲಿ ಲುಮಿನಾಲ್ ರಾಸಾಯನಿಕವನ್ನು ಸಿಂಪಡಿಸಿದಾಗ, ಅದು ಹೀಮೋಗ್ಲೋಬಿನ್ನೊಂದಿಗೆ ರಾಸಾಯನಿಕ ಕ್ರಿಯೆ ನಡೆಸಿ ನೀಲಿ ಅಥವಾ ಹಸಿರು ಬಣ್ಣದ ಬೆಳಕನ್ನು (ದ್ರಾವಣ) ಉಂಟುಮಾಡುತ್ತದೆ. ಇದರಿಂದ ಅಳಿಸಿಹಾಕಿದ ರಕ್ತದ ಕಲೆಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಸದ್ಯ ಈ ಪರೀಕ್ಷೆಯ ಮೂಲಕ ಸಂಗ್ರಹಿಸಲಾದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026

    ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು!

    November 13, 2026

    ಬಿಜೆಪಿಗೆ ಮತ ಹಾಕಿದರೆ ಐದೂ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಬಂದ್: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ

    November 13, 2026

    Leave A Reply Cancel Reply

    Our Picks

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026

    ಡಬ್ಬಿಂಗ್ ಲೋಕದಲ್ಲಿ ಹೊಸ ಕ್ರಾಂತಿ; ‘ರಾಮಾಯಣ’ ಚಿತ್ರದಲ್ಲಿ ಬ್ರಹ್ಮ ಎಐ ಮ್ಯಾಜಿಕ್! ಏನಿದರ ವಿಶೇಷತೆ ?

    November 13, 2026

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    November 13, 2026

    ಬೆಂಗಳೂರು: ರಾಜಾಜಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಒಂದೇ ಕುಟುಂಬದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು…

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು!

    November 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.