nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿಕ್ಷಕರ ಸೇವೆಗೆ ಕೃತಜ್ಞತೆಯ ನಮನ; ಕುರುಬರಹಳ್ಳಿಯಲ್ಲಿ ಅದ್ಧೂರಿ ಗುರುವಂದನಾ ಸಂಭ್ರಮ, ಗುರುಗಳಿಗೆ ಗೌರವ ಸಮರ್ಪಣೆ

    November 17, 2026

    ಗ್ರಂಥಾಲಯಗಳು ಜ್ಞಾನಾರ್ಜನೆಗೆ ಪೂರಕ: ಕುಮಾರಸ್ವಾಮಿ  | ತಿಪಟೂರು ಗ್ರಂಥಾಲಯ ಸಪ್ತಾಹ ಆಚರಣೆ

    November 17, 2026

    ಮಧುಗಿರಿ ಏಕಶಿಲಾ ಬೆಟ್ಟದಲ್ಲಿ 4 ಸಾವಿರಕ್ಕೂ ಹೆಚ್ಚು ಚಾರಣಿಗರ ಸಾಹಸ; ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ,  25 ಸಾವಿರ ಪೆನ್ಸಿಲ್ ಗಳಿಂದ ಕಲಾಕೃತಿ

    November 17, 2026
    Facebook Twitter Instagram
    ಟ್ರೆಂಡಿಂಗ್
    • ಶಿಕ್ಷಕರ ಸೇವೆಗೆ ಕೃತಜ್ಞತೆಯ ನಮನ; ಕುರುಬರಹಳ್ಳಿಯಲ್ಲಿ ಅದ್ಧೂರಿ ಗುರುವಂದನಾ ಸಂಭ್ರಮ, ಗುರುಗಳಿಗೆ ಗೌರವ ಸಮರ್ಪಣೆ
    • ಗ್ರಂಥಾಲಯಗಳು ಜ್ಞಾನಾರ್ಜನೆಗೆ ಪೂರಕ: ಕುಮಾರಸ್ವಾಮಿ  | ತಿಪಟೂರು ಗ್ರಂಥಾಲಯ ಸಪ್ತಾಹ ಆಚರಣೆ
    • ಮಧುಗಿರಿ ಏಕಶಿಲಾ ಬೆಟ್ಟದಲ್ಲಿ 4 ಸಾವಿರಕ್ಕೂ ಹೆಚ್ಚು ಚಾರಣಿಗರ ಸಾಹಸ; ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ,  25 ಸಾವಿರ ಪೆನ್ಸಿಲ್ ಗಳಿಂದ ಕಲಾಕೃತಿ
    • ಶ್ರಮಜೀವಿಗಳ ಸೇವೆಗೆ ಗೌರವ ಸಲ್ಲಿಸುವುದು ಸಮಾಜದ ಕರ್ತವ್ಯ: ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದಲ್ಲಿ ಮುರಳೀಧರ ಹಾಲಪ್ಪ
    • ಕೊರಟಗೆರೆ: ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ  ಗಿರೀಶ್ ಜಿ.ಎಲ್. ನೇಮಕ
    • ನೊಂದವರ ಪರ ಸೇವೆಗೆ ಸದಾ ಸಿದ್ಧ: ಉಡಸಲಮ್ಮ ದೇವಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಎಸ್.ಪಿ. ಚಿದಾನಂದ
    • ತಂದೆಯಿಂದಲೇ 16 ವರ್ಷದ ಮಗನ ಕೊಲೆ ಪ್ರಕರಣ: ತಂದೆಯ ವಿರುದ್ಧ ಸಾಕ್ಷಿ ಹೇಳಿದ್ದ ಮಗ, ತಾಯಿಯ ಎದುರಲ್ಲೇ ಮಗನ ಕೊಲೆ
    • ಔರಾದ್‌ ಬಂದ್‌ ಗೆ ವ್ಯಾಪಕ ಬೆಂಬಲ: ಅಂಗಡಿ–ಮುಂಗಟ್ಟು ಸ್ತಬ್ಧ, ಬಸ್ ಸಂಚಾರದಲ್ಲಿ ವ್ಯತ್ಯಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ: ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ  ಗಿರೀಶ್ ಜಿ.ಎಲ್. ನೇಮಕ
    ಕೊರಟಗೆರೆ November 17, 2026

    ಕೊರಟಗೆರೆ: ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ  ಗಿರೀಶ್ ಜಿ.ಎಲ್. ನೇಮಕ

    By Ganesh TumkuruNovember 17, 2026No Comments2 Mins Read
    manava hakku

    ಕೊರಟಗೆರೆ : ತಾಲ್ಲೂಕಿನಾದ್ಯಂತ ಮಾನವ ಹಕ್ಕುಗಳ ರಕ್ಷಣೆಯ ಜಾಗೃತಿ ಮೂಡಿಸುವುದರ ಜತೆಗೆ ಸಂಘಟನೆಯನ್ನು ಗ್ರಾಮೀಣ ಮಟ್ಟದವರೆಗೆ ಬಲಪಡಿಸಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ನಿರ್ಧರಿಸಿದೆ.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ (ರಿ.) ಕೊರಟಗೆರೆ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

    ಸಮಿತಿಯ ರಾಜ್ಯಾಧ್ಯಕ್ಷ ಸತ್ಯಪ್ಪ ಮಧುಗಿರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ. ಕೃಷ್ಣಪ್ಪ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೇಮಕಾತಿ ಆದೇಶ ಹೊರಡಿಸಲಾಯಿತು.

    ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಸತ್ಯಪ್ಪ ಮಧುಗಿರಿ, ಸಮಾಜದ ಅಸಂಘಟಿತ ರೈತರು, ಕಾರ್ಮಿಕರು, ಭೂರಹಿತರು, ಕೃಷಿ ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡಲು ಸಮಿತಿಯ ಪದಾಧಿಕಾರಿಗಳು ನಿರಂತರವಾಗಿ ಶ್ರಮಿಸಬೇಕು. ಶಿಕ್ಷಣ ಮತ್ತು ಸಂಘಟನೆಯ ಮೂಲಕ ಸಾಮಾಜಿಕ ನ್ಯಾಯ ಹಾಗೂ ಸಾಮರಸ್ಯವನ್ನು ಕಾಪಾಡುವುದರ ಜತೆಗೆ ಸಂವಿಧಾನಬದ್ಧವಾಗಿ ಪ್ರತಿಯೊಬ್ಬರ ಮಾನವ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ವೈ. ಕೃಷ್ಣಪ್ಪ ಮಾತನಾಡಿ, ರಾಜ್ಯ, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿ, ಸಮಿತಿಯ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪದಾಧಿಕಾರಿಯೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

    ನೂತನ ಪದಾಧಿಕಾರಿಗಳು:

    ತಾಲ್ಲೂಕು ಅಧ್ಯಕ್ಷರು : ಗಿರೀಶ್ ಜಿ.ಎಲ್.

    ಪ್ರಧಾನ ಕಾರ್ಯದರ್ಶಿ : ಎ. ಗಂಗಾಧರ್

    ಕಾರ್ಯಾಧ್ಯಕ್ಷರು : ಆನಂದಪ್ಪ

    ಸಂಚಾಲಕರು : ಡಿ. ಶಂಕರ್

    ಸಂಘಟನಾ ಕಾರ್ಯದರ್ಶಿಗಳು : ಬಿ. ವೀರಭದ್ರಯ್ಯ ಹಾಗೂ ರಾಜಣ್ಣ (ತೋವಿನಕೆರೆ)

    ಜಂಟಿ ಕಾರ್ಯದರ್ಶಿ : ಎಂ.ಕೆ. ರಾಜಣ್ಣ.

    ನೂತನ ತಾಲ್ಲೂಕು ಅಧ್ಯಕ್ಷ ಗಿರೀಶ್ ಜಿ.ಎಲ್. ಮಾತನಾಡಿ, ರಾಜ್ಯಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಸಮಿತಿಯ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಾಗುವುದು. ತಾಲ್ಲೂಕಿನ ಪ್ರತಿಯೊಂದು ಗ್ರಾಮಕ್ಕೂ ಸಂಘಟನೆಯನ್ನು ವಿಸ್ತರಿಸಿ, ಬಡವರು, ಶೋಷಿತರು, ಮಹಿಳೆಯರು ಹಾಗೂ ರೈತರ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿ ಶ್ರಮಿಸಲಾಗುವುದು. ಯಾರೇ ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾದರೂ ಅವರ ಪರವಾಗಿ ಧ್ವನಿ ಎತ್ತಿ, ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಲ್ಲ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಮುನ್ನಡೆಸಲಾಗುವುದು ಎಂದು ಹೇಳಿದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಎಂ.ಎನ್.ಜೆ. ಮಂಜುನಾಥ್ ಜೆಡಿಎಸ್‌ ಗೆ ಸೇರ್ಪಡೆ: ಹೊಳವನಹಳ್ಳಿ ಜಿಪಂ ಟಿಕೆಟ್‌ ಆಕಾಂಕ್ಷಿ

    November 13, 2026

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    ಅರಸಪುರದಲ್ಲಿ ಪ್ರಜಾಸೇವಾ ಅಭಿಯಾನ: 101 ಅರ್ಜಿ ಸಲ್ಲಿಕೆ | 20 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ; ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ತಾಲೂಕು ಆಡಳಿತ

    November 8, 2026

    Leave A Reply Cancel Reply

    Our Picks

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಶಿಕ್ಷಕರ ಸೇವೆಗೆ ಕೃತಜ್ಞತೆಯ ನಮನ; ಕುರುಬರಹಳ್ಳಿಯಲ್ಲಿ ಅದ್ಧೂರಿ ಗುರುವಂದನಾ ಸಂಭ್ರಮ, ಗುರುಗಳಿಗೆ ಗೌರವ ಸಮರ್ಪಣೆ

    November 17, 2026

    ಪಾವಗಡ : ಶಿಕ್ಷಕರು ನೀಡಿದ ಶಿಕ್ಷಣ, ಸಂಸ್ಕಾರ ಹಾಗೂ ಮಾರ್ಗದರ್ಶನವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ…

    ಗ್ರಂಥಾಲಯಗಳು ಜ್ಞಾನಾರ್ಜನೆಗೆ ಪೂರಕ: ಕುಮಾರಸ್ವಾಮಿ  | ತಿಪಟೂರು ಗ್ರಂಥಾಲಯ ಸಪ್ತಾಹ ಆಚರಣೆ

    November 17, 2026

    ಮಧುಗಿರಿ ಏಕಶಿಲಾ ಬೆಟ್ಟದಲ್ಲಿ 4 ಸಾವಿರಕ್ಕೂ ಹೆಚ್ಚು ಚಾರಣಿಗರ ಸಾಹಸ; ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ,  25 ಸಾವಿರ ಪೆನ್ಸಿಲ್ ಗಳಿಂದ ಕಲಾಕೃತಿ

    November 17, 2026

    ಶ್ರಮಜೀವಿಗಳ ಸೇವೆಗೆ ಗೌರವ ಸಲ್ಲಿಸುವುದು ಸಮಾಜದ ಕರ್ತವ್ಯ: ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದಲ್ಲಿ ಮುರಳೀಧರ ಹಾಲಪ್ಪ

    November 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.