nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ

    November 29, 2026

    ರಾಜ್ಯದಾದ್ಯಂತ ಮಳೆಗೆ ಬ್ರೇಕ್: ಮುಂದಿನ ಮೂರು ದಿನ ಒಣಹವೆ ಮುಂದುವರಿಕೆ

    November 29, 2026

    ಗ್ರಾಹಕರಿಗೆ ಕೊಂಚ ರಿಲೀಫ್: ನವೆಂಬರ್ 29ರಿಂದ ನಂದಿನಿ ಮೊಸರು ದರ ಇಳಿಕೆ

    November 29, 2026
    Facebook Twitter Instagram
    ಟ್ರೆಂಡಿಂಗ್
    • ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ
    • ರಾಜ್ಯದಾದ್ಯಂತ ಮಳೆಗೆ ಬ್ರೇಕ್: ಮುಂದಿನ ಮೂರು ದಿನ ಒಣಹವೆ ಮುಂದುವರಿಕೆ
    • ಗ್ರಾಹಕರಿಗೆ ಕೊಂಚ ರಿಲೀಫ್: ನವೆಂಬರ್ 29ರಿಂದ ನಂದಿನಿ ಮೊಸರು ದರ ಇಳಿಕೆ
    • ಬೆಂಗಳೂರಿನಲ್ಲಿ ನ. 30ರಂದು ಬೃಹತ್ ರೈತ ಪ್ರತಿಭಟನಾ ಸಭೆ: ಪುತ್ತೂರಿನಿಂದ ವಿಶೇಷ ಬಸ್ ವ್ಯವಸ್ಥೆ
    • ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನ: ಆಶಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ
    • ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!
    • ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ
    • ಕನಕದಾಸರ ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ರಾಘವೇಂದ್ರ ಡಿ.ಎಂ.
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ
    ಕೊರಟಗೆರೆ November 29, 2026

    ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ

    By Ganesh TumkuruNovember 29, 2026No Comments2 Mins Read
    siddharabetta

    ಕೊರಟಗೆರೆ : ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಕಾರ್ತಿಕ ಮಾಸ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡಿ, ಕೆಟ್ಟ ಆಲೋಚನೆಗಳನ್ನು ತ್ಯಜಿಸಿ ಸನ್ಮಾರ್ಗದಲ್ಲಿ ನಡೆಯುವ ಸಂಕೇತವಾಗಿದೆ. ದೀಪ ಬೆಳಗಿಸುವುದರ ನಿಜವಾದ ಅರ್ಥ ನಮ್ಮೊಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದಾಗಿದೆ ಎಂದು ಸಿದ್ದರಬೆಟ್ಟ ಶ್ರೀಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದರಬೆಟ್ಟ ಶ್ರೀಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 241ನೇ ಬೆಳದಿಂಗಳ ಕೂಟ, ಕಾರ್ತಿಕ ದೀಪೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಎಲೆರಾಂಪುರ ಶ್ರೀಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ಸಿದ್ದರಬೆಟ್ಟದ ಶ್ರೀಗಳು ಮತ್ತು ತಾವು ಬರಿಗೈಯಲ್ಲಿ ಬಂದು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಇಂದು ಸಿದ್ದರಬೆಟ್ಟ ಶ್ರೀಕ್ಷೇತ್ರ ದೇಶ-ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆಯುತ್ತಿದೆ. ಶ್ರೀಮಠವು ಕಟ್ಟಡ ನಿರ್ಮಾಣದ ಜೊತೆಗೆ ಭಕ್ತರ ಮನಸ್ಸುಗಳನ್ನು ಕಟ್ಟುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

    ನಿವೃತ್ತ ಐಎಎಸ್ ಅಧಿಕಾರಿ ದಯಾನಂದ್ ಮಾತನಾಡಿ, ಆಕಾಶದತ್ತ ಸಂಶೋಧನೆ ನಡೆಸಿ ಸೌರವ್ಯೂಹದತ್ತ ಮಾನವನ ಪಯಣ ಮುಂದುವರಿದಿದೆ. ಆದರೆ ನಾಗರಿಕತೆ ಮತ್ತು ಸಂಸ್ಕೃತಿಯಿಲ್ಲದ ಮನುಷ್ಯನ ಬದುಕು ಅಪೂರ್ಣ. ಮಕ್ಕಳಿಗೆ ಪ್ರಥಮವಾಗಿ ಪೋಷಕರೇ ಸಂಸ್ಕಾರ ನೀಡಬೇಕು. ಮಾನವ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರೀಮಠಗಳು ಮಹತ್ವದ ಪಾತ್ರ ವಹಿಸುತ್ತಿವೆ. ಈ ಕಾರ್ಯದಲ್ಲಿ ಶ್ರೀಗಳೊಂದಿಗೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಾಗವಂದ ಮಠದ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬಿಎಂಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ರವಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ದಯಾನಂದ್ ಹಾಗೂ ಅವರ ಪತ್ನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಭಕ್ತರಿಂದ ದೀಪಗಳ ಶೃಂಗಾರ

    ಕಾರ್ತಿಕ ದೀಪೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಭಕ್ತರು ನೂರಾರು ದೀಪಗಳನ್ನು ಬೆಳಗಿಸಿ ದೀಪಾಲಂಕಾರ ಮಾಡಿದರು. ತುಂತುರು ಮಳೆಯ ನಡುವೆಯೂ ಭಕ್ತರ ಉತ್ಸಾಹಕ್ಕೆ ಯಾವುದೇ ಕುಂದುಂಟಾಗದೆ ದೀಪೋತ್ಸವ ಸಂಭ್ರಮದಿಂದ ನೆರವೇರಿತು. ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಶ್ರೀಮಠದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

    ಇದೇ ಸಂದರ್ಭದಲ್ಲಿ ಬಿಎಂಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ರವಿಕುಮಾರ್ ಹಾಗೂ ಅವರ ಪತ್ನಿಯನ್ನು ಶ್ರೀಮಠದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ನೂರಾರು ಭಕ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಕನಕದಾಸರ ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ರಾಘವೇಂದ್ರ ಡಿ.ಎಂ.

    November 28, 2026

    ಸಾಮಾಜಿಕ ಅಸಮಾನತೆ ವಿರುದ್ಧ ಕನಕದಾಸರ ಹೋರಾಟ ಅನುಕರಣೀಯ: ಡಾ.ಹನುಮಂತನಾಥ ಸ್ವಾಮೀಜಿ

    November 28, 2026

    ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವೈದ್ಯರಿಂದ ವೈಭವದ ಕನ್ನಡ ರಾಜ್ಯೋತ್ಸವ ಆಚರಣೆ

    November 25, 2026

    Leave A Reply Cancel Reply

    Our Picks

    LPG ಗ್ರಾಹಕರೇ ಗಮನಿಸಿ! ಡಿಸೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಂದ್ ಆಗುತ್ತಾ? ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ

    November 27, 2026

    ಚಲಿಸುವ ಎಸಿ ರೈಲಿನಲ್ಲೇ ದೀಪ ಹಚ್ಚಿ ಶಂಖನಾದ, ಪೂಜೆ! ರೈಲ್ವೆ ಕಾಯ್ದೆ ಏನು ಹೇಳುತ್ತದೆ ಗೊತ್ತಾ?

    November 27, 2026

    ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?

    November 25, 2026

    ಎಸ್‌ ಬಿಐನಲ್ಲಿ ₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು? ಬಡ್ಡಿದರದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!

    November 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ

    November 29, 2026

    ಕೊರಟಗೆರೆ : ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಕಾರ್ತಿಕ ಮಾಸ ಕೇವಲ ಧಾರ್ಮಿಕ…

    ರಾಜ್ಯದಾದ್ಯಂತ ಮಳೆಗೆ ಬ್ರೇಕ್: ಮುಂದಿನ ಮೂರು ದಿನ ಒಣಹವೆ ಮುಂದುವರಿಕೆ

    November 29, 2026

    ಗ್ರಾಹಕರಿಗೆ ಕೊಂಚ ರಿಲೀಫ್: ನವೆಂಬರ್ 29ರಿಂದ ನಂದಿನಿ ಮೊಸರು ದರ ಇಳಿಕೆ

    November 29, 2026

    ಬೆಂಗಳೂರಿನಲ್ಲಿ ನ. 30ರಂದು ಬೃಹತ್ ರೈತ ಪ್ರತಿಭಟನಾ ಸಭೆ: ಪುತ್ತೂರಿನಿಂದ ವಿಶೇಷ ಬಸ್ ವ್ಯವಸ್ಥೆ

    November 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.