ಬೀದರ್: ತಾಲೂಕಿನ ಕೋಟೆ ಊರು ಎಂಬ ಖ್ಯಾತಿ ಪಡೆದ ವಡಗಾಂವ(ದೇ) ಗ್ರಾಮದಲ್ಲಿ ಶನಿವಾರ ರಣಗಂಬ ಉತ್ಸವ ಅದ್ದೂರಿಯಾಗಿ ಜರುಗಿತ್ತು.
ಈ ರಣಗಂಬ ಉತ್ಸವ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪಾಳೇಗಾರಿಕೆ ವಿರುದ್ಧ ವಿಜಯದ ಸಂಕೇತ ಈ ರಣಗಂಬ ಆಚರಿಸಲಾಗುತ್ತಿದೆ. ಪ್ರತಿವರ್ಷ ಹೋಳಿ ಹಬ್ಬದ ಮರುದಿನ ನಡೆಯುವ ಈ ಉತ್ಸವದಲ್ಲಿ ಗಡಿಭಾಗದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡು ರಣಗಂಬಕ್ಕೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಪೂರೈಸಿದರು.
ಈ ಉತ್ಸವ ಜನ ಜಾತ್ರೆ ರೂಪದಲ್ಲಿ ಆಚರಿಸುತ್ತಾರೆ. ಭಕ್ತಿ ಭಾವದಿಂದ ಉತ್ಸವದಲ್ಲಿ ಪಾಲ್ಗೊಂಡು ಹರಕೆ ತೀರಿಸುತ್ತಾರೆ.
ದೇಶಮುಖ ಮನೆತನದ ಬಸವರಾಜ ದೇಶಮುಖ, ಶರಣಬಸಪ್ಪ ದೇಶಮುಖ, ಡಾ.ಉಮಾ ದೇಶಮುಖ, ಸುರೇಖಾ ಬಾಯಿ ದೇಶಮುಖ, ಅಲ್ಲಮ ಪ್ರಭು ದೇಶಮುಖ, ಮಲ್ಲಿಕಾರ್ಜುನ ದೇಶಮುಖ, ಕುಮಾರ ದೇಶಮುಖ ಪೂಜೆಸಲ್ಲಿಸಿ ಚಾಲನೆ ನೀಡಿದರು.
ಗ್ರಾಮದ ಮುಖಂಡರಾದ ವೀರಪ್ಪ ಖಾನಾಪುರೆ, ಜಗನ್ನಾಥ್ ಪಟ್ನೆ, ಶಂಕ್ರಪ್ಪ ಧರ್ಮಜೆ, ಮಲ್ಲಪ್ಪ ನೇಳಗೆ, ಸಿದ್ದಯ್ಯ ಸ್ವಾಮಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4