ತುಮಕೂರು: ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ, ರಾಷ್ಟ್ರೀಯ ರಕ್ಷಣೆಗಾಗಿ, ದೇಶ ಹಾಗೂ ಸೈನಿಕರ ಬೆಂಬಲಿಸಿ ಬೃಹತ್ ತಿರಂಗ ಯಾತ್ರೆ ತುಮಕೂರು ನಗರದಲ್ಲಿ ಮೆ 18 ಭಾನುವಾರ ನಡೆಯಲಿದೆ.
ತುಮಕೂರು ನಗರೀಕರು ಹಾಗೂ ವಿವಿಧ ಸಂಘಟನೆಗಳಿಂದ ಸಹಯೋಗದಲ್ಲಿ ತಿರಂಗ ಯಾತ್ರೆ ಆಯೋಜನೆಯಾಗಲಿದೆ. ರಾಷ್ಟ್ರೀಯತೆ ಹಾಗೂ ರಾಷ್ಟ್ರದ ಸಾರ್ವಭೌಮತ್ವ, ಸೈನಿಕರ ಪರಾಕ್ರಮವನ್ನ ಮೇಳೈಸುವ ತಿರಂಗ ಯಾತ್ರೆಯು, ತುಮಕೂರು ನಗರದ ಎಸ್ ಐಟಿ ಮುಂಭಾಗದಿಂದ ಪ್ರಾರಂಭ ಆಗಲಿದೆ.
ಎಸ್ ಐಟಿ, ಗಂಗೋತ್ರಿ ರಸ್ತೆ, ಎಸ್ ಎಸ್ ಪುರಂ, ಸೋಮೇಶ್ವರ, ಹೈಸ್ಕೂಲ್ ಮೈದಾನಲ್ಲಿ ತಿರಂಗ ಯಾತ್ರೆ ಸಾಗಲಿದೆ ಎಂದು ತಿರಂಗ ಯಾತ್ರೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW