nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಂಪಾದಕೀಯ: ಇಪಿಎಫ್‌ ಒ ಸಮಯೋಚಿತ ಸುತ್ತೋಲೆ ಮತ್ತು ಉದ್ಯಮ ರಂಗದ ವಾಸ್ತವ

    October 13, 2026

    ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

    October 13, 2026

     ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ?  ಹವಾಮಾನ ವರದಿ ಏನು ಹೇಳುತ್ತದೆ; ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಾ?

    October 13, 2026
    Facebook Twitter Instagram
    ಟ್ರೆಂಡಿಂಗ್
    • ಸಂಪಾದಕೀಯ: ಇಪಿಎಫ್‌ ಒ ಸಮಯೋಚಿತ ಸುತ್ತೋಲೆ ಮತ್ತು ಉದ್ಯಮ ರಂಗದ ವಾಸ್ತವ
    • ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.
    •  ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ?  ಹವಾಮಾನ ವರದಿ ಏನು ಹೇಳುತ್ತದೆ; ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಾ?
    • iPhone ಹೆಸರಿನಲ್ಲಿರುವ ‘i’ ಅಂದ್ರೆ ಏನು ?ಸ್ಟೀವ್ ಜಾಬ್ಸ್ ನೀಡಿದ್ದ 5 ಅರ್ಥಗಳೇನು?
    • 2027ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹3 ಲಕ್ಷ ಮುಟ್ಟುತ್ತಾ? ಬಾಬಾ ವಂಗಾ ಭವಿಷ್ಯವಾಣಿಯ ಅಸಲಿಯತ್ತೇನು?
    • PF ಹಣ ಇನ್ನೂ ಬಂದಿಲ್ಲವೇ? ವಿಳಂಬವಾದರೆ ಹೀಗೆ ಮಾಡಿ!
    • ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ
    • ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಿಮ್ಮೆಲ್ಲರ ಪ್ರತಿನಿಧಿಯಾಗಿ ದೆಹಲಿಗೆ ಹೋಗಲು, ನಮ್ಮ ತಂದೆಗೊಂದು ಅವಕಾಶ ಮಾಡಿಕೊಡಿ: ಯೊಗಾಂಶು ಬಾಲರಾಜು
    ಜಿಲ್ಲಾ ಸುದ್ದಿ April 24, 2024

    ನಿಮ್ಮೆಲ್ಲರ ಪ್ರತಿನಿಧಿಯಾಗಿ ದೆಹಲಿಗೆ ಹೋಗಲು, ನಮ್ಮ ತಂದೆಗೊಂದು ಅವಕಾಶ ಮಾಡಿಕೊಡಿ: ಯೊಗಾಂಶು ಬಾಲರಾಜು

    By adminApril 24, 2024No Comments2 Mins Read
    saragooru 6

    ಸರಗೂರು: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು, ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು, ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ನಿಮ್ಮೆಲ್ಲರ ಪ್ರತಿನಿಧಿಯಾಗಿ ದೆಹಲಿಗೆ ಹೋಗಲು, ನಮ್ಮ ತಂದೆಗೊಂದು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜುರವರ ಮಗನಾದ ಯೊಗಾಂಶು ಬಾಲರಾಜು ಮನವಿ ಮಾಡಿದರು.

    ತಾಲೂಕಿನ ಮುಳ್ಳೂರು ಮತ್ತು ಹಂಚೀಪುರ ಶಕ್ತಿ ಕೇಂದ್ರಗಳಲ್ಲಿ ಮಂಗಳವಾರದಂದು, ಭಾರತೀಯ ಜನತಾ ಹಾಗೂ ಜನತಾದಳ ಪಕ್ಷದ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.

    ಇವೆಲ್ಲವನ್ನು ಪ್ರಬುದ್ದ ಮತದಾರರು ಅರ್ಥೈಸಿಕೊಂಡಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಮ್ಮ ತಂದೆ ಕೊಳ್ಳೇಗಾಲ ತಾಲ್ಲೂಕಿನ ಆಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ತಾತನ ಕಾಲದಿಂದಲೂ ಜನರು ಸೇವೆ ಮಾಡಿಕೊಂಡು ಇವಾಗಲೂ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು.

    ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಸೇವೆ ಮಾಡಲು ಸಿದ್ಧರಿದ್ದಾರೆ. ಸದಾ ನಿಮ್ಮೊಂದಿಗೆ ಬೆರೆತು ಕ್ಷೇತ್ರದ ಅಭಿವೃದ್ದಿಗೆ ದುಡಿಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಗೂ ತಲುಪಿಸಲು ಈ ಬಾರಿ ಬಿಜೆಪಿಗೆ ಅವಕಾಶ ನೀಡಿ. ನನ್ನನ್ನು ಅರ್ಶೀವದಿಸಬೇಕು ಎಂದು ಹೇಳಿದರು.

    ಜೆಡಿಎಸ್ ಮುಖಂಡ ಜಯಪ್ರಕಾಶ್ ಮಾತನಾಡಿ ಸಂವಿಧಾನ ಬದಲಾವಣೆ ಮಾಡುತ್ತವೆ ಹೇಳುತ್ತಿರುವ ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಸಾಧ್ಯವಿಲ್ಲ ಎಂದರು.

    ಕಾಂಗ್ರೆಸ್ ಪಕ್ಷದವರಿಗೆ ಸೋಲಿನ ಹತಾಶೆಯಿಂದ ನಿವೃತ್ತಿ ಘೊಷಣೆ ಮಾಡಿರುವ ವಿ. ಶ್ರೀನಿವಾಸಪ್ರಸಾದ್ ಅವರ ಮನೆಗೆ ಹೋಗುತ್ತಿದ್ದಾರೆ. ಈಗಾಗಲೇ ಒಂದಲ್ಲ ನಾಲ್ಕು ಬಾರಿ ನನ್ನ ಬೆಂಬಲ ಪ್ರಧಾನಿ ಮೋದಿಗೆ. ನನ್ನ ಮತ ಬಿಜೆಪಿಗೆ ಎಂದು ಹೇಳಿದ್ದಾರೆ. ಜನರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.

    ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಬಿಜೆಪಿ ಪಕ್ಷದ ಜಿಲ್ಲಾ ವಕ್ತಾರರು ಸಿ ಕೆ ಗಿರೀಶ ಮಾತನಾಡಿ, ಬಿಜೆಪಿ ಗೆಲ್ಲಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ಕ್ಷೇತ್ರದ ಅಭಿವೃದ್ದಿ ಶೂನ್ಯವಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮಲ್ಲೆ ಆಶೋತ್ತರಗಳನ್ನು ಈಡೇರಿಸಲು ಎಂಪಿ ಅಗತ್ಯವಾಗಿದೆ.ಈ ಸ್ಥಾನವನ್ನು ಬಾಲರಾಜು ಸಮರ್ಥವಾಗಿ ತುಂಬಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ಮೋದಿ ಅವರು ಕೈ ಬಲಪಡಿಸಲು ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಬಾಲರಾಜು ಅವರಿಗೆ ಮತ ನೀಡಿ, ಪ್ರತಿ ಮನೆ ಮನೆಗೆ ಭೇಟಿ ನೀಡಿ, ಬಿಜೆಪಿ ಸಾಧನೆ ತಿಳಿಸಿ. ನಿಮ್ಮ ಬೂತ್ ‍ನಲ್ಲಿ ಗೆದ್ದರೆ ಇಂಡಿಯಾ ಗೆದ್ದಂತೆ ಎಂದರು.

    ಈ ಸಂದರ್ಭದಲ್ಲಿ ಚಾಮರಾಜನಗರ ಚುನಾವಣೆ ಉಸ್ತುವಾರಿ ರಮೇಶ್ ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷರು ಮಂಜೇಗೌಡ, ಗುರುಸ್ವಾಮಿ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರು ರಾಜೇಂದ್ರ, ಗೋಪಾಲಸ್ವಾಮಿ, ಮೊತ್ತ ಬಸವರಾಜಪ್ಪ, ಮನುಗನಹಳ್ಳಿ ಮಂಜುನಾಥ್, ನರಸಿಂಹ ಗೌಡ, ವಾಲ್ಮೀಕಿ ಸಿದ್ದರಾಜು, ಮಾಜಿ ಜಿಪಂ ಸದಸ್ಯ ಎಚ್.ಸಿ. ಶಿವಣ್ಣ, ರವಿಕುಮಾರ್, ಗಣಪತಿ, ಮಾಜಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಗುರುಸ್ವಾಮಿ, ಲಂಕೆ ರಮೇಶ್, ದೊಡ್ಡಯ್ಯ, ಮಹೇಂದ್ರ, ಮಹದೇವಸ್ವಾಮಿ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

    October 13, 2026

    ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ತುಂಬಿ ನಾಲೆಗೆ ಎಸೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್– ಆರೋಪಿ ಬಂಧನ

    October 12, 2026

    ಅಪ್ರಾಪ್ತರ ಕೈಗೆ ವಾಹನ ನೀಡಿದರೆ ಪೋಷಕರಿಗೆ ₹25 ಸಾವಿರ ದಂಡ: ಭಾಲ್ಕಿ ಡಿವೈಎಸ್ಪಿ ಎಚ್ಚರಿಕೆ

    October 12, 2026

    Comments are closed.

    Our Picks

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಸಂಪಾದಕೀಯ: ಇಪಿಎಫ್‌ ಒ ಸಮಯೋಚಿತ ಸುತ್ತೋಲೆ ಮತ್ತು ಉದ್ಯಮ ರಂಗದ ವಾಸ್ತವ

    October 13, 2026

    ಕೇಂದ್ರ ಸರ್ಕಾರದ ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) 2026ರ ಅಕ್ಟೋಬರ್ 13ರಂದು ಮಹತ್ವದ ಅಧಿಕೃತ ಸುತ್ತೋಲೆಯನ್ನು (ಸಂಖ್ಯೆ: Compliance/AnnAcPlan/2022-23/RationalizationofECR-Part(1)/e-704368)…

    ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

    October 13, 2026

     ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ?  ಹವಾಮಾನ ವರದಿ ಏನು ಹೇಳುತ್ತದೆ; ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಾ?

    October 13, 2026

    iPhone ಹೆಸರಿನಲ್ಲಿರುವ ‘i’ ಅಂದ್ರೆ ಏನು ?ಸ್ಟೀವ್ ಜಾಬ್ಸ್ ನೀಡಿದ್ದ 5 ಅರ್ಥಗಳೇನು?

    October 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.