ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಯೋಗಕ್ಕೆ ಜೈನ ಸಮಾಜದ ಪ್ರತಿನಿಧಿಗಳು ಇಂದು ಭೇಟಿ ನೀಡಿ ಬಜೆಟ್ ನಲ್ಲಿ ಜೈನರ ಬೇಡಿಕೆಗಳನ್ನು ಈಡೇರಿಸಲು ಚರ್ಚೆ ನಡೆಸಲಾಯಿತು.
ಬಸದಿಗಳ ಜೀರ್ಣೋದ್ಧಾರ , ಗುರುಕುಲಗಳು, ಪಾಠಶಾಲೆಗಳಿಗೆ ಹೆಚ್ಚಿನ ಅನುದಾನ, ಬೇರೆ ಬೇರೆ ಶೈಕ್ಷಣಿಕ, ಉದ್ಯೋಗಕ್ಕೆ ಹೆಚ್ಚಿನ ಅನುದಾನ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಬೇಡಿಕೆಗಳ ಈಡೇರಿಕೆ ಸರ್ಕಾರದಿಂದ ಹೆಚ್ಚು ಅನುದಾನ ಕೊಡಿಸುವುದಾಗಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.
ನಿಯೋಗದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಮಾಳ ಹರ್ಷೇಂದ್ರ ಜೈನ್, ಕರ್ನಾಟಕ ಸಾಹಿತ್ಯ ಪರಿಷತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ಸಾಮಾಜಿಕ ಹೋರಾಟಗಾರ ಮಹೇಶ್ ಜೈನ್, ಶಾಂತಿಪ್ರಸಾದ್ ಇನ್ನಿತರ ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4