ತುಮಕೂರು: ತೋಟಗಾರಿಕೆ ಇಲಾಖೆಯು ಜನವರಿ 26 ರಿಂದ 28ರವರೆಗೆ 3 ದಿನಗಳ ಕಾಲ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಸಾರ್ವಜನಿಕ ತೋಟ, ಸಂಸ್ಥೆಯ ತೋಟ, ಆಸ್ಪತ್ರೆ ತೋಟ, ಶಿಕ್ಷಣ ಸಂಸ್ಥೆಯ ತೋಟ, ಆಡಳಿತ ಕಚೇರಿ ತೋಟ, ಹೋಟೆಲ್ ತೋಟ, ಸಿನಿಮಾ ಥಿಯೇಟರ್ಗಳ ತೋಟ, ನರ್ಸಿಂಗ್ ಹೋಮ್ ತೋಟ, ಗುಲಾಬಿ ತೋಟ, ಔದ್ಯೋಗಿಕ ತೋಟ, ಅಥಿತಿ ಗೃಹಗಳ ತೋಟ, ಕ್ವಾಟ್ರಸ್ ತೋಟ, ಸಾರ್ವಜನಿಕ ಉದ್ಯಾನವನ, ಖಾಸಗಿ ತೋಟ, ಖಾಸಗಿ-ಸರ್ಕಾರಿ ಸಂಸ್ಥೆಗಳ/ ಮನೆಗಳ ಮುಂಭಾಗದ ಕೈತೋಟ, ಅಲಂಕಾರಿಕ ಉದ್ಯಾನವನಗಳ ತೋಟ, ಛಾವಣಿ ತೋಟ, ಮನೆಗಳ ಒಳಾಂಗಣ ಅಲಂಕಾರ ತೋಟ, ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ತರಕಾರಿಗಳು, ಹಣ್ಣುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಖಾಸಗಿ ಸಂಸ್ಥೆಗಳಿಗೆ 50 ರೂ.ಗಳ ಅರ್ಜಿ ಶುಲ್ಕವನ್ನು ನಿಗಧಿಪಡಿಸಲಾಗಿದೆ. ಸರ್ಕಾರಿ ಸಂಸ್ಥೆಯವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಜನವರಿ 22ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9741928966ನ್ನು ಸಂಪರ್ಕಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx