ತುಮಕೂರು: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯು ಬ್ಯಾಟರಿ ಚಾಲಿತ ವೀಲ್ ಛೇರ್, ಶುಲ್ಕ ಮರುಪಾವತಿ, ಪ್ರೋತ್ಸಾಹಧನ ಸೇರಿ ವಿವಿಧ ಸೌಲಭ್ಯ ನೀಡಲು ದೈಹಿಕ ವಿಕಲಚೇತನರಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಆಯಾ ತಾಲ್ಲೂಕು ಪಂಚಾಯಿತಿಗಳಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 30ರೊಳಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖಾ ಕಚೇರಿಗೆ ಸಲ್ಲಿಸಬೇಕು.
ಬ್ಯಾಟರಿ ಚಾಲಿತ ವೀಲ್ ಛೇರ್ ಸೌಲಭ್ಯಕ್ಕಾಗಿ ಶೇ.75 ಮತ್ತು ಅದಕ್ಕಿಂತ ಹೆಚ್ಚಿಗೆ ವಿಕಲತೆ (ಈಗಾಗಲೇ ಇಲಾಖೆ ಮತ್ತು ಇತರೆ ಸಂಘ ಸಂಸ್ಥೆಗಳಿಂದ ಯಂತ್ರಚಾಲಿತ ವಾಹನ ಅಥವಾ ಬ್ಯಾಟರಿ ಚಾಲಿತ ವೀಲ್ ಛೇರ್ ಪಡೆಯದಿರುವವರು ಅರ್ಹತೆ ಹೊಂದಿರುತ್ತಾರೆ) ಹೊಂದಿರಬೇಕು.
ಅಲ್ಲದೆ, ಎಸ್.ಎಸ್.ಎಲ್.ಸಿ. ಮತ್ತು ನಂತರದ ವ್ಯಾಸಂಗ ಮಾಡುವ ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ; Cerebral Palsy, Muscular Dystrophy, Parkinsons & Multiple Sclerosis ಅಂಗವಿಕಲತೆ ಹೊಂದಿರುವ ವಿಕಲಚೇತನ ವ್ಯಕ್ತಿಗಳ ಪೋಷಕರು / ಆರೈಕೆದಾರರಿಗೆ ಪ್ರತಿ ಮಾಹೆ 1000 ರೂ.ಗಳ ಪ್ರೋತ್ಸಾಹಧನ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 0816–2005053/ 2270029ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪ ಎಂ.ದೊಡ್ಡಮನಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q