ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳ ಮಾಂಸ ನೀಡಲು ಬೇಟೆಯಾಡುತ್ತಿದ್ದ ಶಾರ್ಪ್ ಶೂಟರ್ ಸೇರಿದಂತೆ ಮೂವರನ್ನು ಸಂಚಾರಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ನಗರದ ತೋಟದಗುಡ್ಡದಹಳ್ಳಿ ನಿವಾಸಿ ಶಾರ್ಪ್ ಶೂಟರ್ ಶ್ರೀನಿವಾಸ್(46), ನೆಲಮಂಗಲದ ಹನುಮಂತರಾಜು(44) ಮತ್ತು ರಾಮನಗರದ ಮುನಿರಾಜು(38) ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ 2 ತಿಂಗಳುಗಳಿಂದ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಥಾರ್ ಜೀಪ್ ನಲ್ಲಿ ಪರಾರಿಯಾಗುತ್ತಿದ್ದ ಮಾಹಿತಿಯಂತೆ ಸಿನಿಮೀಯ ಶೈಯಲ್ಲಿ ಸುಮಾರು 6 ಕಿ.ಮೀ. ಅಟ್ಟಾಡಿಸಿ ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಜೀಪ್ನ್ನು ತಡೆದು ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 2 ಜಿಂಕೆ, 2 ಕಾಡು ಹಂದಿ, 1 ಗನ್, 1 ಏರ್ ಗನ್, 11 ಜೀವಂತ ಗುಂಡು, 2 ಚಾಕು, 1ಕೊಡಲಿ, 1 ಮಚ್ಚು, 3 ಮೊಬೈಲ್, ಥಾರ್ ಜೀಪ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಹೈ ಫ್ಲ್ಯಾಶ್ ಲೈಟ್ಗಳನ್ನ ಬಳಸಿ ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx