ಔರಾದ್: ತಾಲೂಕಿನ ಸಂತಪೂರ್ ಗ್ರಾಮದ ಹೋಲಿ ಕ್ರಾಸ್ ಚರ್ಚಿನಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ರಾಜ್ಯ ಉಪಾಧ್ಯಕ್ಷರಾದ ಸಂಜಯ್ ಜಾಗೀರ್ದಾರ್ ಅವರ ನೇತೃತ್ವದಲ್ಲಿ ತಾಲೂಕಿನ ಕ್ರಿಶ್ಚಿಯನ್ ಮುಖಂಡರ ಮಹತ್ವದ ಸಭೆ ಜರುಗಿತು.
ಸಮುದಾಯದ ಜನರ ಕುಂದುಕೊರತೆಗಳು ಹಾಗೂ ಚರ್ಚುಗಳ ಅಭಿವೃದ್ಧಿ ಕುರಿತು ಸಂಜಯ್ ಜಾಗೀರ್ದಾರ್ ಅವರು ಸಮಾಲೋಚನೆ ನಡೆಸಿದರು. “ಸರ್ಕಾರವು ನಿಗಮದ ಮೂಲಕ ಕ್ರಿಶ್ಚಿಯನ್ ಸಮುದಾಯದ ಏಳಿಗೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಸಮುದಾಯದ ಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಬಲರಾಗಲು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಅವರು ಕರೆ ನೀಡಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಅರ್ಜುನ್ ಕನಕ, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಸುಧಾಕರ್ ಕೊಳ್ಳುರ, ಫಾದರ್ ಸ್ಟೀವನ್, ಜಗನ್ನಾಥ ಕೌಠಾ, ಜೇಮ್ಸ್ ರಕ್ಷಳ, ಜಾನ್ಸನ್, ದಾವಿದ, ಅನಿಲ, ಅಶೋಕ ಪಾಸ್ಟರ್, ಪ್ರಭುದಾಸ, ಜೀವನ ಜಾಗಿರದಾರ, ಸುಭಾಷ್, ಸತೀಶ್, ಬಿಚ್ಚಪ್ಪ, ದಯಾನಂದ ಸೇರಿದಂತೆ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


