Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಬೆಳಗಾವಿ: ಭಾರತ ಚುನಾವಣಾ ಆಯೋಗದಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ದಿನಾಂಕ ನಿಗದಿಪಡಿಸಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಅಧಿಸೂಚನೆಯನ್ವಯ ಚುನಾವಣೆಯ ಮಾದರಿ ನೀತಿ ಸಂಹಿತೆಯು ಮಾರ್ಚ್ 16, 2024 ರಿಂದ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದೂರು ನಿರ್ವಹಣಾ ಕೇಂದ್ರ, ಮಾದರಿ ನೀತಿ ಸಂಹಿತೆ ನಿಯಂತ್ರಣ ಕೊಠಡಿ ಹಾಗೂ C–Vigil ಕೊಠಡಿಯನ್ನು ಸ್ಥಾಪಿಸಲಾಗಿತ್ತು. ಪ್ರಸ್ತುತ ಸದರಿ ನಿಯಂತ್ರಣ ಕೊಠಡಿಗಳನ್ನು ಬೆಳಗಾವಿ ವಿಶ್ವೇಶ್ವರಯ್ಯಾ ನಗರದ ಸ್ಮಾರ್ಟ ಸಿಟಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ದೂರು ನಿರ್ವಹಣಾ ಕೇಂದ್ರ ದೂರವಾಣಿ ಸಂಖ್ಯೆ 0831-2007015, ಮಾದರಿ ನೀತಿ ಸಂಹಿತೆ ಕೊಠಡಿ ಸಂಖ್ಯೆ 0831-2007018, ಸಿವಿಜಿಲ್(C–Vigil) ದೂರವಾಣಿ ಸಂಖ್ಯೆ 0831-2007017 ಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ 8 ತಿಂಗಳಿನ ಪುಟ್ಟ ಕಂದಮ್ಮ, 4 ರಿಂದ 5 ನಿಮಿಷಗಳ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದೆ ಅಂದ್ರೆ ನೀವು ನಂಬ್ತೀರಾ? ಹೌದು,ಪುಟ್ಟ ಕಂದಮ್ಮನ ತಿಂಗಳ ಸಂಪಾದನೆಯನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಅಮೇರಿಕಾದಲ್ಲಿನ ಎಂಜೆ ಎಂಬ 8 ತಿಂಗಳಿನ ಮಗು ಮಾಡೆಲಿಂಗ್ ನಿಂದ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದೆ ಎಂದು ವರದಿ ತಿಳಿಸಿದೆ. ಐದೂವರೆ ತಿಂಗಳ ಮಗುವಿದ್ದಾಗಲೇ ಇದು ವಿವಿಧ ಬ್ರಾಂಡ್ ಗಳಿಗೆ ಬೇಬಿ ಮಾಡೆಲ್ ಅಗಿ ಕಾರ್ಯ ನಿರ್ವಹಿಸಲು ಆರಂಭಿಸಿದೆ. ಇದೀಗ ಈ ಮಗು ತನ್ನ ಸಂಪಾದನೆಯ ಮೂಲಕ ಪೋಷಕರಿಗೆ ಆರ್ಥಿಕವಾಗಿ ಬೆಂಬಲವಾಗಿ ನಿಂತಿದೆ. ಕಳೆದ ಎರಡುವರೆ ತಿಂಗಳಲ್ಲಿ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡಿದೆ. ಪ್ರಸ್ತುತ ಎಂಟು ತಿಂಗಳ ಮಗುವಾಗಿರುವ ಎಂಜೆ ಜುಲೈ 5, 2023 ರಲ್ಲಿ ಜನನವಾಗಿತ್ತು. ಎಂಜೆ ತಾಯಿ ಸಾರಾ ಲುಟ್ಜ್ಕರ್ ಸಣ್ಣ ವಯಸ್ಸಿನಲ್ಲಿಯೇ ತನ್ನ ಮಗು ವಿವಿಧ ಬ್ರಾಂಡ್ ಗಳಿಗೆ ಮಾಡೆಲ್ ಆಗಿ…
ಯುವಕನೋರ್ವ ಅತೀ ವೇಗವಾಗಿ ಚಲಿಸುವುದರ ಮೂಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ. ಯುವಕನೊಬ್ಬ ಬೈಕ್ ನಲ್ಲಿ ವೇಗವಾಗಿ ಬರುವಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದ. ಈ ವೇಳೆ ಹಿಂದಿನಿಂದ ಬಂದ ಮೂರ್ನಾಲ್ಕು ವಾಹನಗಳು ಯುವಕನ ಮೇಲೆ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬೈಪಾಸ್ ನಲ್ಲಿ ನಡೆದಿದೆ. ರಾಕೇಶ್ ವಿ.ಆರ್. (27) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಹಾಸನ ನಗರದ ಗೌರಿಕೊಪ್ಪಲಿನ ನಿವಾಸಿಯಾದ ರಾಕೇಶ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಬೈಕ್ ನಲ್ಲಿ ವೇಗವಾಗಿ ಬರುವಾಗ ನಿಯಂತ್ರಣಕ್ಕೆ ಸಿಗದೆ ಕೆಳಗೆ ಬಿದ್ದಿದ್ದ. ಈ ವೇಳೆ ಇತರೆ ವಾಹನಗಳು ರಾಕೇಶ್ ಮೇಲೆ ಹರಿದಿತ್ತು. ವಾಹನಗಳು ಹರಿದ ರಭಸಕ್ಕೆ ರಾಕೇಶ್ ದೇಹವೇ ಛಿದ್ರ ಛಿದ್ರವಾಗಿತ್ತು. ಇನ್ನು ಅಪಘಾತದಲ್ಲಿ ಸವಾರರು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾರೆ. ಮತ್ತೊಂದು ಕಡೆ ರಾಕೇಶ್ ಮೇಲೆ ವಾಹನ ಹತ್ತಿಸುವುದನ್ನು ನಿಯಂತ್ರಿಸಲು ಹೋಗಿ ಕಾರೊಂದು ಡಿವೈಡರ್‌ಗೆ ಗುದ್ದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಪಾಯದಿಂದ…
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಖರೀದಿಸೋದು ಟ್ರೆಂಡ್ ಆಗಿ ಬಿಟ್ಟಿದೆ. ಬಯಸುತ್ತಾರೆ. ಆಹಾರದಿಂದ ಹಿಡಿದು ಪೀಠೋಪಕರಣಗಳವರೆಗೆ ಎಲ್ಲವೂ ಕಡಿಮೆ ಬೆಲೆಗೆ ಆನ್ ಲೈನ್ ನಲ್ಲಿ ಲಭ್ಯವಿದೆ. ಒಂದು ಐಟಂ ಅನ್ನು ಆರ್ಡರ್ ಮಾಡಿದರೆ, ಇನ್ನೊಂದು ಐಟಂ ಮನೆಗೆ ಪಾರ್ಸೆಲ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಅಂತಹ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಯುವಕನೊಬ್ಬ ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ. ಮನೆಗೆ ಬಂದಿರುವ ಪಾರ್ಸೆಲ್ ನೋಡಿದಾಗ ಆತನಿಗೆ ಶಾಕ್ ಆಗಿದೆ. ಅಮಾಲಿಕ್ ತುಯ್ಯಬ್ ಎಂಬ ಯುವಕ ಆನ್‌ಲೈನ್ ಇ–ಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್‌ನಲ್ಲಿ ನಥಿಂಗ್ ಫೋನ್ (2ಎ) ಅನ್ನು ಆರ್ಡರ್ ಮಾಡಿದ್ದಾನೆ. ಎರಡು ದಿನಗಳ ನಂತರ ಬಂದ ಪಾರ್ಸೆಲ್ ತೆರೆದು ನೋಡಿ ಶಾಕ್ ಆಗಿದ್ದಾನೆ. ಓಪನ್ ಮಾಡಿ ನೋಡಿದಾಗ ಫೋನ್ ಬದಲಿಗೆ ನಕಲಿ ಬ್ರ್ಯಾಂಡೆಡ್ (iKall) ಫೋನ್ ಇರುವುದನ್ನು ನೋಡಿ ಆಶ್ಚರ್ಯಕ್ಕೊಳಗಾಗಿದ್ದಾನೆ. ಹೋಗ್ಲಿ ಇನ್ನೇನು ಮಾಡೋಣ ,ವಾಪಾಸ್ ಮಾಡೋಣ ಅಂತ ಫ್ಲಿಪ್‌ಕಾರ್ಟ್ ಸೇವಾ ಕೇಂದ್ರವನ್ನು ಸಂಪರ್ಕಿಸಿದ್ರೆ, ಯಾವುದೇ ಉತ್ತರ ಬಂದಿಲ್ಲ ಎಂದು…
ಚಂಡೀಗಢ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದರೆ, ಅಲ್ಲಿಂದಲೇ ಸರ್ಕಾರ ನಡೆಸಲು ಜೈಲಿನಲ್ಲಿ ಕಚೇರಿ ಸ್ಥಾಪಿಸಲು ಅನುಮತಿ ಕೋರಿ ನ್ಯಾಯಾಲಯವನ್ನು ಸಂಪರ್ಕಿಸುತ್ತೇವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹೇಳಿದ್ದಾರೆ. ಶನಿವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಪಂಜಾಬ್ ಸಿಎಂ ಪ್ರತಿಪಾದಿಸಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿರುವ ಬಗ್ಗೆ ಮತ್ತು ಅವರು ಹೇಗೆ ಸರ್ಕಾರ ನಡೆಸುತ್ತಾರೆ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾನ್, ಸರ್ಕಾರವನ್ನು ಜೈಲಿನಿಂದ ನಡೆಸಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಬರೆಯಲಾಗಿಲ್ಲ ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೀದರ್: ಜಿಲ್ಲೆಯ ವಿವಿಧೆಡೆಗಳಲ್ಲಿ ದಾಳಿ ನಡೆಸಿರುವ ಪೊಲೀಸರು, ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ಅಕ್ರಮ ಪಾನ್ ಮಸಾಲ ಹಾಗೂ ತಂಬಾಕು ಪದಾರ್ಥಗಳ ತಯಾರಿಕಾ ಘಟಕಕ್ಕೆ ದಾಳಿ ನಡೆಸಿ, ತಂಬಾಕು ಪದಾರ್ಥ ಹಾಗೂ ಇನ್ನಿತರ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಬೀದರ ಜಿಲ್ಲೆಯ ಗಾಂಧಿಗಂಜ ಪೊಲೀಸ್ ಠಾಣೆಯ ರೌಡಿ ನಿಗೃಹ ದಳದ ಅಧಿಕಾರಿ ಹನುಮರಡ್ಡೆಪ್ಪ ಪಿ.ಐ ಅವರ ನೇತೃತ್ವದಲ್ಲಿ ರಾಜಕಿರಣ, ರಾಜಕುಮಾರ, ದೀಪಕ ತಂಡದ ಇವರ ತಂಡ, ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಮಹೇಶ ಪಾಟೀಲ್ ಇವರ ಸಮಕ್ಷಮದಲ್ಲಿ ಲಾಡಗೇರಿಯಲ್ಲಿ ಗೋದಾಮಿನ ಮೇಲೆ ದಾಳಿ ನಡೆಸಿ, ನಕಲಿ ಪಾನ್ ಮಸಾಲಾ ಮಾಡುವ ಸಾಮಗ್ರಿಗಳು ಮತ್ತು ಕಚ್ಚಾ ಪದಾರ್ಥಗಳು ಹೀಗೆ ಒಟ್ಟು 34,83,147 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಲಸೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಂಬೇವಾಡಿ ಚೆಕ್ ಪೊಸ್ಟ್ ಮುಖಾಂತರ ಅಕ್ರಮವಾಗಿ ಪಾನ್ ಮಸಾಲ ಸಾಗಿಸುತ್ತಿದ್ದವರ ಮೇಲೆ ನಾಗೇಂದ್ರ, ಪಿ.ಎಸ್.ಐ ಹುಲಸೂರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ…
ನನಗೆ ಟಿಕೆಟ್ ನೀಡಿದ್ದಾರೆ, ಆದರೆ ರಾಜಕೀಯ ಪ್ರವೇಶ ಮಾಡಬೇಕೋ, ಬೇಡವೋ ಅನ್ನೋ ಗೊಂದಲವಿದೆ. ನಿಮ್ಮ ಅಭಿಪ್ರಾಯವೇನು..?” ಎಂದು ನಟಿ ಊರ್ವಶಿ ರೌಟೇಲಾ ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ಕೆಲ ಸಿನಿಮಾ ತಾರೆಯರಿಗೆ ಟಿಕೆಟ್ ನೀಡಲಾಗಿದೆ. ಇದರ ನಡುವೆ ಸದ್ದಿಲ್ಲದೆ ಊರ್ವಶಿ ರೌಟೇಲಾ ಚುನಾವಣಾ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡಲಾಗಿದೆ. ಈ ಮಾಹಿತಿಯನ್ನು ಖುದ್ದು ಊರ್ವಶಿ ಬಹಿರಂಗಪಡಿಸಿದ್ದು, ಲೋಕಸಭಾ ಚುನಾವಣಾ ಕಾವು ಏರುತ್ತಿದ್ದಂತೆ ಮಾಧ್ಯಮಗಳಿಗೆ ಸಿಕ್ಕ ಊರ್ವಶಿಗೆ ಚುನಾವಣೆ ಆಸಕ್ತಿ ಕುರಿತು ಪ್ರಶ್ನಿಸಲಾಗಿದೆ. ಈ ವೇಳೆ ರೌಟೇಲಾ, ನನಗೆ ಈಗಾಗಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ ಎಂದಿದ್ದಾರೆ. ಟಿಕೆಟ್ ಸಿಕ್ಕಿದೆ. ಆದರೆ ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೋ, ಬೇಡವೇ? ಅನ್ನೋದು ನಿರ್ಧರಿಸಿಲ್ಲ. ಈ ಕುರಿತು ನನಗೆ ಕೆಲ ಗೊಂದಲಗಳಿವೆ ಎಂದು ರೌಟೇಲಾ ಹೇಳಿದ್ದಾರೆ. ಊರ್ವಶಿಗೆ ಟಿಕೆಟ್ ನೀಡಿದ ಪಕ್ಷ ಯಾವುದು? ಯಾವ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಅನ್ನೋ…
ತುಮಕೂರು: ರಾಜ್ಯದಲ್ಲಿ ಇವತ್ತು ನಮ್ಮ ಸರ್ಕಾರ ಇದೆ. ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಅಂದ್ರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ. ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಪರ ಪ್ರಚಾರದ ಭಾಷಣದ ವೇಳೆ ಮಾತನಾಡಿದ ಅವರು, ಬಡವರ ಪರ ಕೆಲಸ ಮಾಡುವ ಸಿದ್ದರಾಮಯ್ಯನನ್ನು ಉಳಿಸುವ ಕೆಲಸ ನಾವೆಲ್ಲ ಮಾಡಬೇಕು. ಎಲ್ಲಾ ಕಾರ್ಯಕರ್ತರು ಸಿದ್ದರಾಮಯ್ಯ ನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗದ ಮಾಸ್ ಲೀಡರ್. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಗ್ಯಾರಂಟಿಗಳ ಯಶಸ್ವಿಯಾಗಿ ಜಾರಿ ಮಾಡಿದ್ದಾರೆ. ಒಂದು ವೇಳೆ ಸರ್ಕಾರದ ಪರವಾಗಿ ಜನಮತ ಬರಲಿಲ್ಲ ಎಂದರೆ ಸಿಎಂ ಬದಲಾವಣೆ ಆಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ ಸಿಎಂ ಬದಲಾವಣೆಯ ಆತಂಕ ಸೃಷ್ಟಿಸಿ ಅಹಿಂದ…
ಕೊರಟಗೆರೆ: ಇಂದಿರಾಗಾಂಧಿಯ ಸ್ವಂತ ಜಿಲ್ಲೆ ಶಿವಮೊಗ್ಗನಾ. ಸೋನಿಯಾ ಗಾಂಧಿಯ ತವರೂರು ಬಳ್ಳಾರಿನಾ.ರಾಹುಲ್ ಗಾಂಧಿಯ ಊರು ಯಾವುದು ಹೇಳಿ. ಸಿಎಂ ಸ್ಟೀಪನ್ ಗುಲ್ಬರ್ಗಾದವ್ರಾ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲಿಂದ ಸ್ಪರ್ಧೆ ಮಾಡಿ ಗೆದ್ದಿದ್ದಾರೇ ಅನ್ನೋದು ಎಲ್ಲರಿಗೂ ತಿಳಿಸಿದೆ ಅಲ್ವಾ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಟಾಂಗ್ ನೀಡಿದರು. ಕೊರಟಗೆರೆ ಪಟ್ಟಣದ ಪಂಚಾಜನ್ಯ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ನಾನು 50ವರ್ಷದಿಂದ ತುಮಕೂರು ಜಿಲ್ಲೆಯಲ್ಲೇ ಇದ್ದವನು. ಯಾರೋ ಏನೋ ಆರೋಪ ಮಾಡ್ತಾರೇ ಅಂತಾ ನಾನು ಸ್ಪಷ್ಟನೇ ನೀಡೋದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಲ್ಲಿ ಯಾವುದೇ ಬಿನ್ನಾಭಿಪ್ರಾಯ ಇಲ್ಲ ಅದು ಕೇವಲ ವಿರೋಧ ಪಕ್ಷದವರ ಆರೋಪವಷ್ಟೆ. ಕರ್ನಾಟಕದ 28ಕ್ಷೇತ್ರದಲ್ಲಿಯು ಬಿಜೆಪಿ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ. ದೆಹಲಿ ಸಿಎಂ ಆದ್ರು ಅಷ್ಟೆ ಸಾಮಾನ್ಯ ಮನುಷ್ಯ ಆದ್ರು ಅಷ್ಟೇ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು. ಬಿಜೆಪಿ ಪಕ್ಷದ…
ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಠೇವಣಿ ಇಡಲು ಉದ್ದೇಶಿಸಿದ್ದ, ದೇಶೀಯ ನಿರ್ಮಿತ ಪಿಸ್ತೂಲು ತಪಾಸಣೆ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಪೊಲೀಸ್ ಠಾಣೆಯ ಸಿಬ್ಬಂದಿಯಿಂದ ಗುಂಡು ಹಾರಿದ್ದು, ಗುಂಡು ಠಾಣಾ ಬರಹಗಾರನ ಕಾಲಿಗೆ ಹೊಕ್ಕಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಮುಕುಂದ ರೆಡ್ಡಿ ಬಂದೂಕು ಹಸ್ತಾಂತರಿಸಲು ಆಗಮಿಸಿದ್ದರು. ಕಾನ್ಸ್ಟೇಬಲ್ ವೆಂಕಣ್ಣ ಅವರು ತಪಾಸಣೆಯನ್ನು ಪ್ರಾರಂಭಿಸಿದ್ದು, ದುರದೃಷ್ಟವಶಾತ್, ಪರೀಕ್ಷೆಯ ಸಮಯದಲ್ಲಿ, ಪಿಸ್ತೂಲ್ ನಿಂದು ಅನಿರೀಕ್ಷಿತವಾಗಿ ಗುಂಡು ಹೊರಬಂದಿದ್ದು ವೆಂಕಣ್ಣನ ಎದುರು ಕುಳಿತಿದ್ದ ಸ್ಟೇಷನ್ ಬರಹಗಾರ ಅಂಬುದಾಸ್ನ ಎಡ ಕಾಲಿಗೆ ಬಡಿಯಿತು. ಗುಂಡೇಟಿನಿಂದ ಅಂಬುದಾಸ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಅಪೊಲೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಂದೂಕಿನ ಸಂಪೂರ್ಣ ಪರೀಕ್ಷೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದುರದೃಷ್ಟಕರ ಘಟನೆಗೆ ಕಾರಣರಾದ ಕಾನ್ಸ್ಟೆಬಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…