Subscribe to Updates
Get the latest creative news from FooBar about art, design and business.
- ಬೆಳಕುಣಿ ಚೌದ್ರಿ ಗ್ರಾ.ಪಂ. ಎದುರು ಮಾಹಿತಿ ಕೋರಿ ಧರಣಿ: ಸುಡು ಬಿಸಿಲಿನ ತಾಪಕ್ಕೆ ಅಸ್ವಸ್ಥರಾದ ಪ್ರತಿಭಟನಾಕಾರ
- ಅ.1 ವಿಶ್ವ ಹಿರಿಯ ನಾಗರಿಕರ ದಿನಾಚರಣೆ
- ಸಾಲ ಸೌಲಭ್ಯ : ಪರಿಶಿಷ್ಟ ಪಂಗಡದವರಿಂದ ಅರ್ಜಿ ಆಹ್ವಾನ
- ದಲಿತ ಗೃಹಮಂತ್ರಿ, ಡಿಸಿಎಂ, ಉಸ್ತುವಾರಿ ಸಚಿವರಿದ್ದರೂ ಮಧುಗಿರಿಯಲ್ಲಿ ದಲಿತರ ಕಗ್ಗೊಲೆ!: ಸಿಂಹಾದ್ರಿ ಹತ್ಯೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ
- ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆ ಇತ್ಯರ್ಥ ಪ್ರಯತ್ನ: ರೈಲು ಪ್ರಯಾಣಿಕರ ವೇದಿಕೆ ಮಹಾಸಭೆ
- ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್ ನೇಮಕ: ಗಣ್ಯರಿಂದ ಅಭಿನಂದನೆ
- ಖೇಣಿ ‘ಚಿನ್ನದ ಕರಡಿಗೆ’ ಹೇಳಿಕೆ ಸುಳ್ಳು: ಸಿದ್ಧಗಂಗಾ ಮಠ ಸ್ಪಷ್ಟನೆ
- ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್
Author: admin
ದಾವಣಗೆರೆ: ಕಾರು ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್‌ನ ಈಜುಕೊಳದ ಬಳಿಯಲ್ಲಿ ಗುರುವಾರ ನಡೆದಿದ್ದು, ಘಟನೆ ಸಂಬಂಧ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್ ನ ಉಂಬೆರ್ ಗಾವ್ ನಿವಾಸಿ ವಾಸುದೇವಾ ಮೊದಾನಿ ಅವರ ಪುತ್ರಿ 25 ವರ್ಷ ವಯಸ್ಸಿನ ಪ್ರಿಯಾಂಕ ಮೊದಾನಿ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪ್ರಿಯಾಂಕ ಗುರುವಾರ ಬೆಳಿಗ್ಗೆ ಎಂದಿನಿಂತೆ ವಸತಿನಿಲಯದಿಂದ ಕಾಲೇಜಿಗೆ ಹೊರಟಿದ್ದರು. ಪಿ.ಜಿ. ವಿದ್ಯಾರ್ಥಿ ವಿಷ್ಣು ಎಂಬುವರು ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದಿದೆ ಎಂದ ತಿಳಿದು ಬಂದಿದೆ. ಪ್ರಿಯಾಂಕ ಹೆಲ್ಮೆಟ್ ಧರಿಸಿದ್ದರು. ಆದರೆ ಅದರ ಬೆಲ್ಟ್ ಅನ್ನು ಸಿಕ್ಕಿಸಿರಲಿಲ್ಲ. ಹಾಗಾಗಿ ಕಾರು ಡಿಕ್ಕಿಯಾದ ರಭಸಕ್ಕೆ ತಲೆಯಿಂದ ಹೆಲ್ಮೆಟ್ ಹಾರಿ ಹೋಗಿದೆ. ಹೀಗಾಗಿ ಅವರ ಪ್ರಾಣವೇ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿದಾಗ, ಈ ರಸ್ತೆಯಲ್ಲಿ ಯುವಕರು ವೇಗವಾಗಿ ಬೈಕ್, ಕಾರು ಚಲಾಯಿಸಿಕೊಂಡು ಬರುತ್ತಿದ್ದು, ಇಲ್ಲಿ…
ಅಡಿಲೇಡ್’ನಾ ಓವಲ್ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಆಶಸ್ ಸರಣಿಯ ಎರಡನೇ ಪಂದ್ಯದ ಮೊದಲನೇ ದಿನದ ಮೊದಲ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 221 ರನ್ಗಳ ಸಾಧಾರಣ ಮೊತ್ತ ಗಳಿಸಿ ಸುಸ್ಥಿತಿಯಲ್ಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಯಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್’ರವರ ನಿರ್ಧಾರವನ್ನು ತಪ್ಪು ಎಂದೆನಿಸುವಂತೆ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿತು. ಆಸ್ಟ್ರೇಲಿಯಾ ತಂಡದ ಮೊತ್ತ 4 ಆಗಿದ್ದಾಗ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕಸ್ ಹ್ಯಾರಿಸ್ 3 (28) ರವರು ಸ್ಟುವರ್ಟ್ ಬ್ರಾಡ್’ರವರ ಬೌಲಿಂಗ್’ನಲ್ಲಿ ಜೋಸ್ ಬಟ್ಲರ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರ. ನಂತರ ಒಂದಾದ ವಾರ್ನರ್ 95(167) ಮತ್ತು ಲ್ಯಾಬಶೇನ್ 102(299)* ಜೋಡಿ ಆಸಿಸ್’ನಾ ಆರಂಭಿಕ ಆಘಾತದಿಂದ ಪಾರು ಮಾಡಿ ತಂಡದ ಮೊತ್ತ ಸುಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು. ಈ ಜೋಡಿ ಬರೋಬ್ಬರಿ 172 ರನ್’ಗಳ ಜೊತೆಯಾಟವಾಡಿತು. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ 240 ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿಯಲ್ಲಿದೆ. ಕ್ರೀಸ್ನಲ್ಲಿರುವ ಲ್ಯಾಬಶೇನ್ ಶತಕ 102(299)* ಪೂರೈಸಿದ್ದಾರೆ.ಇವರಿಗೆ ಜೊತೆಯಾಗಿ ನಾಯಕ…
ಕಲಬುರ್ಗಿ: ಶಾಲೆಗೆ ಹೊರಟಿದ್ದ ಇಬ್ಬರು ಶಿಕ್ಷಕರು ಅಪಘಾತಕ್ಕೀಡಾಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಲ್ಲಿ ನಡೆದಿದೆ. ಸಿದ್ದರಾಮಪ್ಪ(60), ನಾನಾಗೌಡ ಪಾಟೀಲ್ (55) ಮೃತಪಟ್ಟವರು ಎಂದು ವರದಿಯಾಗಿದೆ. ಶಿಕ್ಷಕರಿಬ್ಬರು ಶಾಲೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸಿಮೆಂಟ್ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇಬ್ಬರು ಶಿಕ್ಷಕರು ಕೂಡ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದು, ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ಹೇಮಾವತಿ ನಾಲಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿ ಗೇಟ್ ಸಮೀಪ ನಡೆದಿದೆ. ಎಂಜಿನಿಯರ್ 55 ವರ್ಷ ವಯಸ್ಸಿನ ರಮೇಶ್ ಹಾಗೂ ಅವರ ಪತ್ನಿ 45 ವರ್ಷ ವಯಸ್ಸಿನ ಮಮತಾ ಮತ್ತು 25 ವರ್ಷ ವಯಸ್ಸಿನ ಪುತ್ರಿ ಶುಭಾ ಆತ್ಮಹತ್ಯೆಗೆ ಶರಣಾದವರು ಎಂದು ಹೇಳಲಾಗಿದ್ದು, ಮಮತಾ ಹಾಗೂ ಶುಭಾ ಅವರ ಮೃತದೇಹ ಪತ್ತೆಯಾಗಿದೆ. ರಮೇಶ್ ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ. ಸದ್ಯದ ಮಾಹಿತಿಗಳ ಪ್ರಕಾರ ಶುಭಾಗೆ ಕಳೆದ ತಿಂಗಳಷ್ಟೇ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೊಲೀಸರ ತನಿಖೆಯ ಬಳಿಕವೇ ಹೆಚ್ಚಿನ ಮಾಹಿತಿ ದೊರಕಬೇಕಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೆಂಗಳೂರು: ಅಸ್ಪೃಷ್ಯತೆಯ ನಿವಾರಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರಿ ಟಿ.ವಿ.ಚಾನೆಲ್ ಚಂದನವಾಹಿನಿಯಲ್ಲಿ ಡಿಸೆಂಬರ್ 19ರಂದು ‘ಸಮಾನತೆಯ ಕಡೆಗೆ’ ಎಂಬ ಚಲನ ಚಿತ್ರ ಪ್ರಸಾರವಾಗಲಿದೆ. ಅಸ್ಪೃಶ್ಯತೆ ಎನ್ನುವುದು ಒಂದು ಸಾಮಾಜಿಕ ಪಿಡುಗಾಗಿದ್ದು, ಮಾನವರ ಮೆದುಳಿನಲ್ಲಿ ಕುಳಿತಿರುವ ಕೊಳೆಯಾಗಿದೆ. ಇದನ್ನು ತೆಗೆದು ಹಾಕಬೇಕಾದರೆ, ಜಾಗೃತಿಯೊಂದೇ ಮದ್ದಾಗಿದೆ. ಮುಂದಿನ ಪೀಳಿಗೆ ಅಸ್ಪೃಶ್ಯತೆಯ ಆಚರಣೆಯಿಂದ ಮುಕ್ತವಾಗಿ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಅನಿಷ್ಠ ಆಚರಣೆಗಳ ವಿರುದ್ಧ ಜನರು ಜಾಗೃತಿ ಹೊಂದಬೇಕಾಗಿದೆ. ನಮ್ಮ ದೇಹದ ಭಾಗಗಳಿಂದಲೇ ಬೇಧ ಭಾವಗಳು ಆರಂಭಗೊಂಡಿದೆ. ಎಡ ಭಾಗ ಅಶುಭ, ಬಲ ಭಾಗ ಶುಭ ಎಂದು ಆರಂಭವಾಗುವ ಈ ಬೇಧ ಭಾವಗಳು ಮುಂದುವರಿದು, ಜಾತಿ, ಧರ್ಮ, ಕೋಮು, ಬಣ್ಣ, ಬಡವ, ಶ್ರೀಮಂತ ಹೀಗೆ ಪ್ರತಿಯೊಂದರಲ್ಲಿಯೂ ಶ್ರೇಷ್ಠ ಕನಿಷ್ಠವಾಗಿ ಮಾರ್ಪಟ್ಟಿದೆ. ಇತರ ದೇಶಗಳು ಇಂದು ಸಾಮಾಜಿಕ ಸಮಾನತೆಯಿಂದ ಸರ್ವತೋಮುಖ ಬೆಳವಣಿಗೆ ಹೊಂದುತ್ತಿದ್ದರೆ, ಭಾರತದಲ್ಲಿ ಅಸ್ಪೃಶ್ಯತೆ, ಧರ್ಮಗಳ ನಡುವಿನ ಸಂಘರ್ಷಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ದೇಶ ಅಭಿವೃದ್ಧಿಯಾಗಬೇಕಾದರೆ, ಎಲ್ಲರೂ ಸಮಾನರು ಎನ್ನುವ ಭಾವನೆ ಬರಬೇಕು. ಹೀಗಾಗಿ ಮೊದಲು…
ತುರುವೇಕೆರೆ: ಪಟ್ಟಣದ ಅಭಿವೃದ್ಧಿಗಾಗಿ ಮತ್ತು ರಸ್ತೆ ಅಭಿವೃದ್ಧಿಗಾಗಿ ಕಳೆದ ವರ್ಷ ದಬ್ಬೇಘಟ್ಟ ರಸ್ತೆಯಲ್ಲಿನ ಮಳಿಗೆಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯ್ತಿ ಆದೇಶ ನೀಡಿತ್ತು. ಅದರಂತೆ ಕೆಲ ಮಳಿಗೆಗಳು ತೆರವುಗೊಂಡಿದ್ದು, ಬಿಟ್ಟರೆ ಇನ್ನುಳಿದ ಹಲವು ಹಾಗೇ ಉಳಿದಿರುವುದರಿಂದ ರಸ್ತೆ ಅಗಲೀಕರಣ ಮತ್ತು ಪಟ್ಟಣದ ಅಭಿವೃದ್ಧಿಗೆ ಅಡ್ಡಗಾಲಾಗಿವೆ. ತೆರವುಗೊಳಿಸದೇ ಇರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ , ತಾಲ್ಲೂಕು ಆಡಳಿತ ಮತ್ತು ಪಟ್ಟಣ ಪಂಚಾಯ್ತಿಯ ಕಾರ್ಯವೈಖರಿಯ ವಿರುದ್ಧ ” ತುರುವೇಕೆರೆ ತಾಲ್ಲೂಕು ಅಭಿವೃದ್ಧಿ ವೇದಿಕೆ” ಪ್ರತಿಭಟನೆ ಮತ್ತು ಅಹೋರಾತ್ರಿ ಮುಷ್ಕರವನ್ನು ಪ್ರಾರಂಭಿಸಿದ್ದಾರೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಇಲ್ಲಿನ ಜನತೆ ಪ್ರತಿಭಟನೆಯನ್ನು ನಡೆಸಿತು. ಕೆಲಹೊತ್ತು ದಬ್ಬೇಘಟ್ಟ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದ ಪ್ರತಿಭಟನಾಕಾರರು, ತಮ್ಮ ಗುರಿ ಈಡೇರುವವರೆಗೂ ಅಹೋರಾತ್ರಿ ಮುಷ್ಕರ ನಡೆಸುವುದಾಗಿ ಮಾಧ್ಯಮದ ಮೂಲಕ ಪಂಚಾಯ್ತಿಗೆ ಎಚ್ಚರಿಕೆ ರವಾನಿಸಿದರು. ಈ ಪ್ರತಿಭಟನೆಗೆ ತಾಲ್ಲೂಕು ರೈತ ಸಂಘ, ಜಯ ಕರ್ನಾಟಕ ವೇದಿಕೆ, ಸಿ.ಐ.ಟಿ.ಯು, ಕನ್ನಡ ರಕ್ಷಣ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ತಾಲ್ಲೂಕು ವಕೀಲರ ಸಂಘ , ದಬ್ಬೇಘಟ್ಟ…
ಉಯಿಲು ಬರವಣಿಗೆಯಲ್ಲಿಯೇ ಇರತಕ್ಕದ್ದು: ಸಾಧ್ಯವಾದರೆ ಉಯಿಲು ಕರ್ತನು ಅದನ್ನು ತನ್ನ ಕೈಬರಹದಲ್ಲಿಯೇ ಬರೆಯುವುದು ಸೂಕ್ತ. ಉಯಿಲನ್ನು ಯಾವುದೇ ಭಾಷೆಯಲ್ಲಿ ಯಾವುದೇ ಶೈಲಿಯಲ್ಲಿ ಬರೆಯಬಹುದು. ಉಯಿಲನ್ನು ಛಾಪಾ ಕಾಗದದ ಮೇಲೆಯೇ ಬರೆಯಬೇಕೆಂದೇನಿಲ್ಲ. ಉತ್ತಮ ದರ್ಜೆಯ ಯಾವುದೇ ಕಾಗದದಲ್ಲಿಯೂ ಬರೆಯಬಹುದು. ಉಯಿಲಿನ ಪ್ರತಿಪುಟದ ಮೇಲೆ ಉಯಿಲು ಕರ್ತನು ತನ್ನ ಸಹಿಯನ್ನು ಮಾಡಬೇಕು ಅಥವಾ ಹೆಬ್ಬೆರಳಿನ ಗುರುತನ್ನು ಹಾಕಬೇಕು. ಉಯಿಲು ದಸ್ತಾವೇಜಿಗೆ ಕನಿಷ್ಠ ಇಬ್ಬರು ವ್ಯಕ್ತಿಗಳು ‘ಸಾಕ್ಷಿಗಳೆಂದು’ (Witness) ಉಯಿಲು ಕರ್ತನು ಅದಕ್ಕೆ ಸಹಿ ಮಾಡಿದ್ದನ್ನು ಪ್ರತ್ಯಕ್ಷ ಕಂಡು ಸಹಿ ಮಾಡಬೇಕು. ಬಿಕ್ಕಲಂ (Document Writer) ಬರಹಗಾರ ‘ಸಾಕ್ಷಿ’ ಆಗುವುದಿಲ್ಲ.(ಉಯಿಲು ದಾಖಲೆ ಪತ್ರ ಬರೆದ ವ್ಯಕ್ತಿ Deed writer) ಉಯಿಲಿನ ಮೂಲಕ ಯಾವುದೇ ವಿಧದ ಪ್ರಯೋಜನವನ್ನು ಪಡೆಯುವ ವ್ಯಕ್ತಿ ( Beneficiary Of the will ) ಉಯಿಲಿಗೆ ಸಾಕ್ಷಿ ಹಾಕಬಾರದು. ಹಾಗೊಂದು ವೇಳೆ ಸಾಕ್ಷಿ ಹಾಕಿದಲ್ಲಿ, ಸಾಕ್ಷಿ ಹಾಕಿದ್ದು ಅನೂರ್ಜಿತವಾಗುವುದಿಲ್ಲ. ಆದರೆ ಸಾಕ್ಷಿ ಹಾಕಿದ ವ್ಯಕ್ತಿ ಅಥವಾ ಆತನ/ಆಕೆಯ ಹೆಂಡತಿ ಅಥವಾ ಗಂಡ ಉಯಿಲು…
ತುಮಕೂರು: ಜಿಲ್ಲೆಯ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿಗೆ ಕೊವಿಡ್ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ತಕ್ಷಣದಲ್ಲಿ ಕ್ರಮಕೈಗೊಂಡು 7 ದಿನಗಳ ಕಾಲ ಶಾಲೆಗೆ ರಜೆ ನೀಡಿ ಮುನ್ನೆಚ್ಚರಿಕೆ ಕೈಗೊಂಡಿದೆ. 9ನೇ ತರಗತಿಯ ವಿದ್ಯಾರ್ಥಿಗೆ ಕೊವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪೋಷಕರು ಶಾಲೆಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸೋಮವಾರವೇ ಶಾಲಾಗೆ ಆಡಳಿತ ಮಂಡಳಿ ರಜೆ ನೀಡಿದ್ದು, 9ನೇ ತರಗತಿಯಲ್ಲಿದ್ದ 34 ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ನಡೆಸಲಾಗಿದೆ. ಜೊತೆಗೆ ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 6 ಮಕ್ಕಳಿಗೂ ಕೊವಿಡ್ ಟೆಸ್ಟ್ ನಡೆಸಲಾಗಿದ್ದು, ಈ ವಿದ್ಯಾರ್ಥಿಗಳಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ. 1ರಿಂದ 10ನೇ ತರಗತಿಯವರೆಗೆ ಈ ಶಾಲೆಯಲ್ಲಿ ತರಗತಿ ನಡೆಯುತ್ತಿದೆ. ಶಾಲೆಯಲ್ಲಿ ಒಟ್ಟು 700 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗೆ ಕೊವಿಡ್ ಪಾಸಿಟಿವ್ ಬಂದ ತಕ್ಷಣವೇ ಶಾಲೆಯ ಆಡಳಿತ ಮಂಡಳಿ ತಕ್ಷಣದಲ್ಲಿಯೇ ಕ್ರಮಕೈಗೊಂಡಿದ್ದು, ಶಾಲೆಗೆ ರಜೆ ನೀಡಿ, ಪ್ರತಿ ದಿನ ಶಾಲೆಯಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೂ ರಜೆ ನೀಡಲಾಗಿದೆ.…
ಆಟೋ ಡ್ರೈವರ್ ಆದ ನಾನು ಇತ್ತೀಚಿನ ಚುನಾವಣಾ ಸಮಯದಲ್ಲಿ ನನ್ನ 10 ವರ್ಷದ ಮಗನೊಂದಿಗೆ ತರಕಾರಿ ತರಲು ಮಾರ್ಕೆಟ್ ಗೆ ಕಾಲು ನಡಿಗೆಯಲ್ಲಿ ಹೋಗಿದ್ದೆ………. ಹಿಂದಿರುಗಿ ಬರುವಾಗ ಒಂದು ಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಯುತ್ತಿತ್ತು. ಜನರ ಗುಂಪು ನೋಡಿ ನನ್ನ ಮಗ ಅದನ್ನು ತೋರಿಸು ಎಂದು ಹಠ ಹಿಡಿದ. ನಾನು ಗುಂಪಿನಲ್ಲಿ ಹೋಗಿ ಕುಳಿತೆ. ಆ ಕ್ಷೇತ್ರದ ಅಭ್ಯರ್ಥಿ ಭಾಷಣ ಮಾಡುತ್ತಿದ್ದ. ” ಅಕ್ಕ ತಂಗಿಯರೇ, ಅಣ್ಣ ತಮ್ಮಂದಿರೇ, ನಾನು ನಿಮ್ಮ ಮನೆ ಮಗ, ಇಲ್ಲೇ ಹುಟ್ಟಿ ಬೆಳೆದ ಬಡ ರೈತನ ಮಗ, ನನಗೆ ಗೊತ್ತು ಬಡತನ ಎಷ್ಟು ಕಷ್ಟ ಅಂತ. ಒಳ್ಳೆಯ ರಸ್ತೆ ಇಲ್ಲ, ಬೀದಿ ದೀಪ ಇಲ್ಲ, ಕುಡಿಯುವ ನೀರಿಲ್ಲ, ಎಲ್ಲೆಲ್ಲೂ ಗಲೀಜು,ಬೀದಿ ನಾಯಿ ಕಾಟ, ಕಾಮುಕರು, ರೌಡಿಗಳ ತೊಂದರೆ, ಲಂಚ ಅತಿಯಾಗಿದೆ. ಹಬ್ಬ ಉತ್ಸವಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತೇನೆ. ದೇವ ಮಂದಿರಗಳನ್ನು ಕಟ್ಟಿಸುತ್ತೇನೆ. ನೀವು ನನ್ನನ್ನು ಗೆಲ್ಲಿಸಿದರೆ 24 ಗಂಟೆಯು ನಾನು ನಿಮಗೆ ಸೇವೆ ಸಲ್ಲಿಸುತ್ತೇನೆ.…
ಸರಗೂರು: ಮಳೆ ಹಾನಿಯ ಫಲಾನುಭವಿಗಳಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಕೊತ್ತೇಗಾಲದಲ್ಲಿ ಗ್ರಾಮಸ್ಥರ ನಡುವೆಯೇ ಗೊಂದಲ ಸೃಷ್ಟಿಯಾಗಿದ್ದು, ಒಂದೆಡೆ ಕೊತ್ತೆಗಾಲದ ಕೆಲವು ಗ್ರಾಮಸ್ಥರು ಪರಿಹಾರ ನೀಡಲು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರೆ, ಇನ್ನೊಂದು ಗ್ರಾಮಸ್ಥರ ತಂಡ, ಇದು ಸುಳ್ಳು, ಅಧಿಕಾರಿಗಳು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ. ಗ್ರಾಮಸ್ಥರ ಒಂದು ತಂಡ, “ಮಳೆಯಿಂದ ಹಾನಿಯಾದ ಮನೆಗಳ ಪರಿಹಾರದ ಫಲಾನುಭವಿಗಳ ಪಟ್ಟಿಗೆ ಸೇರಿಸಲು ಪರಿಶೀಲನೆಗೆ ಬರುವ ಗ್ರಾಮ ಲೆಕ್ಕಿಗರು 60-80 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡಿದವರ ಹೆಸರನ್ನು ಮಾತ್ರ ಫಲಾನುಭವಿಗಳ ಪಟ್ಟಿಗೆ ಸೇರಿಸಿ ಉಳಿದ ಹಣ ನೀಡದ 20 ಬಡಕುಟುಂಬದ ಮನೆಗಳನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ” ಎಂದು ಆರೋಪಿಸಿ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ತಹಸೀಲ್ದಾರ್ ರವರಿಗೆ ಮನವಿಪತ್ರ ಸಲ್ಲಿಸಿದರು. ಆದರೆ, ಇದೀಗ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮತ್ತೊಂದು ಗ್ರಾಮಸ್ಥರ ಗುಂಪು, ತಾಲ್ಲೂಕು ಕಛೇರಿಗೆ ಭೇಟಿ ನೀಡಿ…