Subscribe to Updates
Get the latest creative news from FooBar about art, design and business.
- ಹಿಂದೂಗಳ ಮೇಲಿನ ದೌರ್ಜನ್ಯ ಸಹಿಸಲ್ಲ: ಬಾಂಗ್ಲಾ ವಿರುದ್ಧ ಗುಡುಗಿದ ದೊಡ್ಡಹಳ್ಳಿ ಅಶೋಕ್
- ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ: ಪದಾಧಿಕಾರಿಗಳ ಆಯ್ಕೆ
- ತುಮಕೂರು | ಅದ್ದೂರಿ ಕನ್ನಡ ರಾಜ್ಯೋತ್ಸವ, ಉಚಿತ ಆರೋಗ್ಯ ತಪಾಸಣಾ ಶಿಬಿರ
- ಡಿ.29ರಿಂದ ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ: ಏನೇನು ಕಾರ್ಯಕ್ರಮಗಳು ಇರಲಿವೆ?
- ತುರುವೇಕೆರೆ: ಡಿ.30: ಸಂಪಿಗೆಯಲ್ಲಿ ವೈಕುಂಠ ಏಕಾದಶಿ ಮಹೋತ್ಸವ
- ಕುಣಿಗಲ್: ಡಿ.29ರಿಂದ ವೆಂಕಟರಮಣ ಸ್ವಾಮಿ ಪೂಜೋತ್ಸವ
- ತುರುವೇಕೆರೆ: ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ತೀರ್ಮಾನ
- ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ: ತಪ್ಪಿದ ಭಾರೀ ಅನಾಹುತ
Author: admin
ಲಕ್ನೋ: ಹಿಂದೂ ಎಂದು ನಂಬಿಸಿ ಅನೇಕ ಹಿಂದೂ ಯುವತಿಯರನ್ನು ವಿವಾಹವಾಗಿದ್ದ ಶರಾಫ್ ರಿಜ್ವಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಸಾರನಾಥ ಪೊಲೀಸರು ಫರೂಕಾಬಾದ್ ನಿಂದ ಬಂಧಿಸಿದ್ದಾರೆ. ಸಾರಾನಾಥದ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ರಿಜ್ವಿ ಸಿಕ್ಕಿಬಿದ್ದಿದ್ದಾನೆ. ಈತ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ. ರೂ.5 ಲಕ್ಷ ಸುಲಿಗೆ ಮಾಡಿದ್ದು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳಲ್ಲಿ ನಕಲಿ ಗುರುತಿನ ಮೂಲಕ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಕನಿಷ್ಠ 12 ಯುವತಿಯರನ್ನು ವಿವಾಹವಾಗಿರುವುದಾಗಿ ರಿಜ್ವಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಸಾರನಾಥ ಪೊಲೀಸರು ತಿಳಿಸಿದ್ದಾರೆ. ಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ರಿಜ್ವಿ, ಹಣ ಮತ್ತು ಉಡುಗೊರೆಗಳನ್ನು ಸುಲಿಗೆ ಮಾಡುತ್ತಿದ್ದ. ದೈಹಿಕ ಸಂಬಂಧ ಹೊಂದಿದ್ದ ನಂತರ ತನ್ನ ನೈಜ ಗುರುತನ್ನು ಬಹಿರಂಗಪಡಿಸುತ್ತಿದ್ದ. ಆಗಾಗ್ಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಬೀದರ್: 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪರಿಸರ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಅವರು ಧ್ವಜಾರೋಹಣ ನೆರವೇರಿಸಿದರು. ಮೈದಾನದಲ್ಲಿ ತೆರದ ಜೀಪಿನಲ್ಲಿ ಸಂಚರಿಸಿದ ಸಚಿವರು, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು ಜಿಲ್ಲಾ ಸಶಸ್ತ್ರ ಮೀಸಲು ಪೋಲಿಸ್ ಪಡೆ ಸೇರಿ ವಿವಿಧ ಶಾಲಾ ಹಾಗೂ ಕಾಲೇಜಿನ ತುಕಡಿಗಳು ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ಬಳಿಕ ಶಾಲಾ — ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿಸಿಎಫ್ ಆಶೀಷ ರೆಡ್ಡಿ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮತ್ತಿತರರು ಹಾಜರಿದ್ದರು. ವರದಿ: ಅರವಿಂದ ಮಲ್ಲಿಗೆ,…
ಔರಾದ: ತಾಲೂಕಿನ ಲಾಧಾ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರಿಯಲ್ಲಿ ನಿವೃತ್ತರಾದವರನ್ನೂ ಗೌರವಿಸಲಾಯಿತು. ಕಾರ್ಯಕ್ರಮ ಧ್ವಜಾರೋಹಣ ಅಧ್ಯಕ್ಷರಾದ ನಾಗಪ್ಪ ಮುಸ್ತಾಪುರ್ ನೆರವೇರಿಸಿದರು. ಉದ್ಘಾಟಕರಾಗಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮೀಠಾರೆ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಕಾಶ ಮಿಠಾರೆ, ಉಪಾಧ್ಯಕ್ಷರಾದ ಅಂಬಿಕ ರಾಜಕುಮಾರ್ ಗಾದಗೆ, ಪ್ರದೀಪ್ ಕುಮಾರ್ ಮಿಠಾರೆ, ಈರಮ್ಮ ಶಂಕರ್, ಸಂಗೀತ ಬೀರಪ್ಪ, ಝರುಬಾಯಿ ಪ್ರಭುಶೆಟ್ಟಿ, ದೇವಿದಾಸ್ ಪವಾರ್, ಸುನಿಲ್ ರಾಥೋಡ್, ಶಿವಕಾಂತ್ ಮುಚಳಬೆ, ಎವನ್ ಕುಮಾರ್ ಲಾಧಕರ್, ಧನರಾಜ್ ಮುಸ್ತಾಪುರ್, ಸಂಜು ಕುಮಾರ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಬೀದರ್: ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡಲೆಂದೇ ಹುಟ್ಟಿ, ಭಾರತ ದೇಶವೇ ತಮ್ಮ ಕುಟುಂಬವೆಂದು ಭಾವಿಸಿ, ತಮ್ಮ ಕುಟುಂಬವನ್ನು ತೊರೆದು ಸ್ವಾತಂತ್ರ್ಯವನ್ನು ದೊರಕಿಸಿ, ತಮ್ಮ ಪ್ರಾಣವನ್ನೆ ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಸ್ಮರಿಸೋಣ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದರು. ಬೀದರ್ ಜಿಲ್ಲಾ ಪೊಲೀಸ್ ವತಿಯಿಂದ ಆಚರಿಸಲಾದ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಸಮಸ್ತ ಸ್ವಾತಂತ್ರ ಹೋರಾಟಗಾರರಿಗೆ ಈ ಸಂದರ್ಭದಲ್ಲಿ ನೆನೆಯುತ್ತಾ, ಅವರ ಈ ಬಲಿದಾನವನ್ನು ನಮಿಸೋಣ ಎಂದರು. ಧ್ವಜಾರೋಹಣ ಮಾಡಿ ನೆರವೇರಿಸಿದ ಬಳಿಕ ಬೀದರ ಜಿಲ್ಲೆಯ ನಾಗರಿಕರಿಗೆ, ಪೊಲೀಸ್ ಅಧಿಕಾರಿ,ಸಿಬ್ಬಂದಿ, ಲಿಪಿಕ ಅಧಿಕಾರಿ ಸಿಬ್ಬಂದಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌಧರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 79ನೇ ಸ್ವಾತಂತ್ರ್ಯವ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ 2024– 25ನೇ ಸಾಲಿನ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಬೆಳಕುಣಿ (ಚೌದ್ರಿ) ಗ್ರಾಮದ ಹೆಮ್ಮೆಯ ವಿದ್ಯಾರ್ಥಿಗೆ ಎಮ್.ಬಿ.ಬಿ.ಎಸ್.ಪ್ರವೇಶ ಪಡೆದುದ್ದಕ್ಕಾಗಿ ಸರಕಾರಿ ಪ್ರೌಢಶಾಲೆ. ಎಸ್ ಡಿ. ಎಂ ಸಿ. ಅಧ್ಯಕ್ಷ ಎಂ ಡಿ. ನಯುಮ್ ಅವರು ವಿದ್ಯಾರ್ಥಿಗಳಿಗೆ ಶಾಲು ಮತ್ತು ಹೂವು ಗುಚ್ಛವನ್ನು ಕೊಟ್ಟು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲೆ ಮುಖ್ಯ ಗುರುಗಳು ಉಮಾಕಾಂತ್ ಚೋಪಡೆ, ಶಾಲೆಯ ಶಿಕ್ಷಕರು ಹಾಗೂ ಗ್ರಾಮದ ಪ್ರಮುಖ ಮುಖಂಡರು ಭೀಮಣ್ಣ ಗಂದಿಗೆ, ಸತ್ಯನಾರಾಯಣ ಠಾಕೂರ್, ಪರಮೇಶ್ವರ ಮೇತ್ರೆ, ಗ್ರಾಪಂ ಸದಸ್ಯ ಕರಬಸಪ್ಪಾ ಸೊರಾಳೆ, ಮಹೇಶ್ ಚಾಬೋಳೆ, ಗ್ರಾಪಂ ಸದಸ್ಯ ದೆವಿದಾಸ ಮಾಳಗೆ, ಮಾಜಿ ಸೈನಿಕ ಬಸವರಾಜ ಶಿಪೂಜೆ, ಮಾಜಿ ಗ್ರಾಪಂ ಅಧ್ಯಕ್ಷ ದೇವಿದಾಸ ಧೂಳೆ, ಜೀವನ ಮಾಳೆಗೆ, ರಾಜಕುಮಾರ್ ಹಚಕಮಟೆ, ಪ್ರಭಾಕರ್ ಇಂಗಳೇ,…
ಸರಗೂರು: ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ. ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜ ಅನಾವರಣಗೊಳಿಸಿ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ. ಸ್ವಾತಂತ್ರ್ಯವು ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನವನ್ನು ತನಗೆ ಇಷ್ಟವಾದ ರೀತಿಯಲ್ಲಿ ನಡೆಸಲು, ತನ್ನ ಆಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ತನ್ನ ಆಯ್ಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಇದು ವ್ಯಕ್ತಿಯ ಆತ್ಮಗೌರವ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಎಂದರು. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ ಮಾತನಾಡಿ, 200 ವರ್ಷಗಳ ಬ್ರಿಟಿಷ್ ಆಳ್ವಿಕೆಯ ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ನಾಯಕರು…
ಸರಗೂರು: ಕೇವಲ ಭಾರತದ ಮಾತ್ರ ಆಗಸ್ಟ್ 15 ರಂದು ‘ಸ್ವಾತಂತ್ರ್ಯ ದಿನಾಚರಣೆ’ ಆಚರಿಸುತ್ತಿಲ್ಲ ಬದಲಾಗಿ ಪ್ರಪಂಚದ ಈ ಕೆಲವು ದೇಶಗಳು ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತವೆ ಎಂದು ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಎಂದರು. ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತವು ಈ ಆಗಸ್ಟ್ 15 ರಂದು 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತದೆ. ಈ ರಾಷ್ಟ್ರೀಯ ಹಬ್ಬವನ್ನು ದೇಶದ ಮೂಲೆ ಮೂಲೆಯಲ್ಲಿ ಆಚರಿಸುವುದಲ್ಲದೆ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು, ಧೀಮಂತ ನಾಯಕರನ್ನು ಮತ್ತು ಸೈನಿಕರನ್ನು ಈ ದಿನದಂದು ಸ್ಮರಿಸಲಾಗುತ್ತದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆದು ನಮ್ಮ ದೇಶದ ಮಹಿಳೆಯರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿರವರು ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆದ ಸಂಘರ್ಷವನ್ನು ‘ಆಪರೇಷನ್ ಸಿಂಧೂರ’ ಎಂದು ಹೆಸರು ಇಟ್ಟು ಪಾಕಿಸ್ತಾನದ ಉಗ್ರಗಾಮಿಗಳನ್ನು ಬಳಿ ಪಡೆದು ನಮ್ಮ…
ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅದ್ದೂರಿಯಾಗಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೊಲೀಸ್ ಗೃಹರಕ್ಷಣದಳ, ಎನ್.ಸಿ.ಸಿ. ಸೇರಿದಂತೆ ವಿವಿಧ ಶಾಲಾ ತುಕ್ಕಡಿಗಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾರತ ದೇಶವು ಬ್ರಿಟೀಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯಗೊಂಡು ಇಂದಿಗೆ 78 ವರ್ಷಗಳು ಮುಗಿದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಮ್ಮ ಮಾತೃ ಭೂಮಿಯಾಗಿರುವ ಭಾರತ ದೇಶ ಪುರಾತನವಾದ ಧರ್ಮ ನಾಗರಿಕತೆ, ಸಂಸ್ಕೃತಿ ಮೌಲ್ಯಗಳಿಂದ ಶ್ರೀಮಂತವಾಗಿದೆ. ಋಷಿ ಮುನಿಗಳ, ರಾಜ ಮಹಾರಾಜರ, ಸಾಹಿತಿ — ಕವಿಗಳು, ಶಿಕ್ಷಣ ತಜ್ಞರ, ರೈತರ — ಯುವಕರ ಸ್ವಾತಂತ್ರ್ಯ ಹೋರಾಟಗಾರರಿಂದ ತುಂಬಿ ಸಮೃದ್ಧವಾಗಿದ್ದ ದೇಶವಿದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ, ಹಲವಾರು ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ದೊರೆತ ಭವ್ಯಭಾರತದ ಸ್ವಾತಂತ್ರ್ಯವನ್ನ ಕಾಪಾಡ ಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಆಘಾತಕಾರಿ ಬೆಳವಣಿಗೆಗಳನ್ನಕಾಣುತ್ತಿದ್ದೇವೆ, ಜವಾಹರಲಾಲ್ ನೆಹರು…
ಬೆಂಗಳೂರು: ನಟ ದರ್ಶನ್ ಜೈಲು ಪಾಲಾಗಿರುವ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯೆ ನೀಡಿದ್ದು, ನಟ ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಸಿನಿಮಾ ಶೂಟಿಂಗ್ ವೇಳೆ ತಾವು ನಡೆದುಕೊಂಡು ಬಂದ ಹಾದಿ ಬಗ್ಗೆ ನನ್ನ ಬಳಿ ಹಂಚಿಕೊಂಡಿದ್ದರು. ನನಗೆ ಹೆಮ್ಮೆ ಅನಿಸಿತ್ತು. ಲೈಟ್ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಇತ್ತೀಚಿಗೆ ಅವರ ನಡವಳಿಕೆಯಿಂದ ತುಂಬಾ ಬೇಜಾರಾಗಿತ್ತು ಎಂದಿದ್ದಾರೆ. ಅವರು ತಮ್ಮ ಜೀವನ ಹಾಳು ಮಾಡಿಕೊಂಡರು. ಈ ಮಟ್ಟಕ್ಕೆ ಬೆಳೆದ ಮೇಲೆ ಜವಾಬ್ದಾರಿ ಇರುತ್ತದೆ. ಅವರ ಅಕ್ಕಪಕ್ಕ ಯಾರು ಒಳ್ಳೆಯವರಿಲ್ಲ ಅನಿಸುತ್ತೆ ಗೊತ್ತಿಲ್ಲ. ತಮ್ಮ ಸುತ್ತಮುತ್ತ ಒಳ್ಳೆಯವರನ್ನು ಇಟ್ಟುಕೊಂಡು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಮೊದಲು ಅಕ್ಕಪಕ್ಕದವರ ಸಹವಾಸ ಬಿಡಬೇಕು ಎಂದು ರಮ್ಯಾ ಹೇಳಿದ್ದಾರೆ. ಜಡ್ಜ್ಮೆಂಟ್ ಕೇಳಿದಾಗ ರಿಲೀಫ್ ಅಂತಾ ಅನಿಸಿದೆ. ಈಗ ನಾವು ಹೋಗುತ್ತಿರುವ ಸಮಾಜ ಕೆಟ್ಟ ದಾರಿಯಲ್ಲಿದೆ. ಹೆಣ್ಣುಮಕ್ಕಳ ರಕ್ಷಣೆ, ಗೌರವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆರ್ಡರ್ ಬಂದಾಗ ನಾನು ಮಾಡಿದ…
ನವದೆಹಲಿ: ದೇಶದ ನಾಗರಿಕರಿಗೆ ದೀಪಾವಳಿ ಉಡುಗೊರೆಯಾಗಿ ಜಿಎಸ್ ಟಿಯಲ್ಲಿ ಸುಧಾರಣೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿದರು. ಈ ದೀಪಾವಳಿಗೆ, ನಾನು ನಿಮಗಾಗಿ ಡಬಲ್ ಧಮಾಕ ನೀಡಲಿದ್ದೇನೆ. ಈ ದೀಪಾವಳಿಯಲ್ಲಿ ನಾಗರಿಕರು ದೊಡ್ಡ ಉಡುಗೊರೆಯನ್ನು ಪಡೆಯಲಿದ್ದಾರೆ. ನಾವು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ದೀಪಾವಳಿ ಉಡುಗೊರೆಯಾಗಲಿದೆ ಎಂದು ಹೇಳಿದ್ದಾರೆ. ಎಂಟು ವರ್ಷಗಳ ಹಿಂದೆ ಸರ್ಕಾರವು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ. ಸರ್ಕಾರವು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಭರವಸೆ ನೀಡಿದ್ದಾರೆ. ವಿಕಸಿತ ಭಾರತ ರೋಜ್ ಗಾರ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಖಾಸಗಿ ವಲಯದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಯುವಕರಿಗೆ 15,000 ರೂ. ನೆರವನ್ನು ಮೋದಿ ಘೋಷಿಸಿದ್ದಾರೆ. ಈ ಯೋಜನೆಯಿಂದ 3.5 ಕೋಟಿಗೂ ಹೆಚ್ಚು ಯುವಜನರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…