Author: admin

ಇಂದಿನ ಬಿಡುವಿಲ್ಲದ ಮತ್ತು ಬಿಡುವಿಲ್ಲದ ಜೀವನದಲ್ಲಿ.. ಜನರು ಯಾವಾಗ ಕಿರಿಕಿರಿಗೊಳ್ಳುತ್ತಾರೆ. ಅವರು ಯಾವಾಗ ಶಾಂತವಾಗಿರುತ್ತಾರೆ ಮತ್ತು ಅವರು ತಮ್ಮ ಕೋಪವನ್ನು ಏಕೆ ವ್ಯಕ್ತಪಡಿಸುತ್ತಾರೆ ಎಂದು ತಿಳಿಯುವುದು ಕಷ್ಟ. ಆದರೆ ಹೆಚ್ಚಿನ ಜನರು ಬಹಳ ಬೇಗ ಕೋಪಗೊಳ್ಳುತ್ತಾರೆ. ಸಣ್ಣ ಮಾತು.. ಹಾಸ್ಯಗಳನ್ನೂ ಸಹಿಸಲಾರದ ಕೆಲವರಿದ್ದಾರೆ. ಇದರಿಂದ ರಕ್ತದೊತ್ತಡ ಅಂದರೆ ಬಿಪಿಯಂತಹ ಸಮಸ್ಯೆಗಳು ಉಂಟಾಗುತ್ತವೆ. ಈಗ ಈ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಜ್ಯೋತಿಷಿಗಳು ನೀಡುವ ಕೆಲವು ಸಲಹೆಗಳನ್ನು ನೋಡೋಣ. ವ್ಯಕ್ತಿಯ ಜಾತಕದಲ್ಲಿ ಸೂರ್ಯ, ಚಂದ್ರ ಮತ್ತು ಮಂಗಳ ಸಂಯೋಗದಲ್ಲಿದ್ದರೆ, ವ್ಯಕ್ತಿಯು ಕೋಪಗೊಳ್ಳುತ್ತಾನೆ. ಕೋಪವು ಬೆಂಕಿಯ ಅಂಶದ ಸೂಚಕವಾಗಿದೆ. ಇದು ಇತರ ಚಿಹ್ನೆಗಳು ಅಥವಾ ಗ್ರಹಗಳೊಂದಿಗೆ ಸಂಯೋಜಿಸಿದಾಗ, ಅದೂ ಅಲ್ಲದೆ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿ ಇರುವವರು ತುಂಬಾ ಕೋಪಗೊಳ್ಳುತ್ತಾರೆ. ಅದರ ಹೊರತಾಗಿ ಚಂದ್ರನು ದುರ್ಬಲನಾಗಿದ್ದರೆ ಅಥವಾ ಚಂದ್ರನು ವ್ಯಕ್ತಿಯ ನಕಾರಾತ್ಮಕ ಸ್ಥಾನದಲ್ಲಿದ್ದರೆ. ಕಿರಿಕಿರಿ ಮತ್ತು ಕೋಪವು ಬೇಗನೆ ಬರುತ್ತದೆ. ಅಂತಹ ವ್ಯಕ್ತಿಗಳು ಕೋಪವನ್ನು ನಿಯಂತ್ರಿಸಲು ಬೆಳ್ಳಿಯ ಉಂಗುರ ಅಥವಾ ಪೆಂಡೆಂಟ್ ನಲ್ಲಿ ಮುತ್ತುಗಳನ್ನು ಧರಿಸಬೇಕು.…

Read More

ಲೋಕಸಭೆ ಚುನಾವಣೆಗೆ ಪಕ್ಷದ 2ನೇ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಇಂದು(ಮಾ.೧೦) ಬಿಡುಗಡೆಯಾಗಲಿದೆ ಎಂದು ಮಾಜಿ ಸಿಎಂ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ನಾನು ಇಂದು ಹೊಸದಿಲ್ಲಿಗೆ ಪ್ರಯಾಣ ಬೆಳೆಸಲಿದ್ದೇನೆ. ಸಂಜೆ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಎರಡನೇ ಪಟ್ಟಿಯ ಅಂತಿಮಗೊಳಿಸುವಿಕೆಯು ಇಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಜೆಡಿಎಸ್‌ ಗೆ ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಜೊತೆ ಸೀಟು ಹಂಚಿಕೆ ವಿಚಾರ ಇನ್ನೂ ಚರ್ಚೆಯಲ್ಲಿದೆ. ಇಂದು ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು. ಹಲವು ಹಾಲಿ ಸಂಸದರಿಗೆ ಟಿಕೆಟ್ ಸಿಗದಿರುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು. ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್‌ಕುಮಾರ್‌ ಪತ್ನಿ…

Read More

ನಟಿ ರಶ್ಮಿಕಾ ಮಂದಣ್ಣ ಏನಾದರೊಂದು ಕಿರಿಕ್ ಮಾಡುತ್ತಲೇ ಇರುತ್ತಾರೆ. ಈ ಹಿಂದೆಯೇ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿಂದೆ ಕನ್ನಡ ಚಿತ್ರೋದ್ಯಮದ ಜೊತೆ ಕಿರಿಕ್​ ಮಾಡಿಕೊಂಡಿದ್ದ ರಶ್ಮಿಕಾಗೆ ಇದಾಗಲೇ ಕನ್ನಡ ಚಲನಚಿತ್ರೋದ್ಯಮವು ನಿಷೇಧಿಸಿದೆ. ಈಗ  ಟಾಲಿವುಡ್ ಕೂಡ ಇದೇ ರೀತಿ ಮಾಡಬೇಕು. ಈಕೆ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ದಕ್ಷಿಣವೇ ಈಕೆಯ ಬೇರು. ಆದರೆ  ತನ್ನ ಸಕ್ಸಸ್​ ಅಡಿಪಾಯವನ್ನು ಈಕೆ ಗೌರವಿಸುತ್ತಿಲ್ಲ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕೂಗು ಕೇಳಿ ಬಂದಿದೆ. ಅಷ್ಟಕ್ಕೂ ರಶ್ಮಿಕಾ ಸೌತ್​ ನವರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಕ್ಕೆ ಕಾರಣವೂ ಇದೆ. ಬಾಲಿವುಡ್​ ಗೆ ಕಾಲಿಡುತ್ತಿದ್ದಂತೆಯೇ ಮತ್ತೆ  ದಕ್ಷಿಣ ಭಾರತದ ಚಲನಚಿತ್ರಗಳ ಬಗ್ಗೆ ಕಿರಿಕ್​ ಮಾಡಿಕೊಂಡಿದ್ದಾರೆ ನಟಿ. ಇದು ನೆಟ್ಟಿಗರನ್ನು ಹಾಗೂ ಸೌತ್​ ಇಂಡಸ್ಟ್ರಿಯನ್ನು ಕೆರಳಿಸಿದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಸಿನಿಮಾದ ಕುರಿತು ಮಾತನಾಡುತ್ತಿದ್ದ ವೇಳೆ ಅವರು ಆಡಿರುವ ಮಾತುಗಳಿಗೆ ಜನರು ಕಿಡಿಕಿಡಿಯಾಗುತ್ತಿದ್ದಾರೆ. ಅಷ್ಟಕ್ಕೂ ನಟಿ…

Read More

ಮುಂಬರುವ ಲೋಕಸಭಾ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕಸರತ್ತು ನಡೆಯುತ್ತಿದ್ದು, ಕೊಡಗು ಮೈಸೂರು ಕ್ಷೇತ್ರದಲ್ಲಿ ಭಾರಿ ಮಹತ್ವದ ಬೆಳವಣಿಗೆಗಳಾಗುತ್ತಿವೆ ಅನ್ನೋದರ ಬಗ್ಗೆ ಚರ್ಚೆಗಳು ನಡಿಯುತ್ತಿವೆ. ಅದಕ್ಕೆ ಕಾರಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನೀಡಿರುವ ಆ ಒಂದು ಹೇಳಿಕೆ. ಹಾಗಾದರೆ ಅದೇನು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ… ಹೌದು, ಈ ಬಾರಿ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಲಿದೆಯಾ ಎನ್ನುವ ಪ್ರಶ್ನೆ ಎದ್ದಿದೆ. ವಿಜಯೇಂದ್ರ ನಾಲ್ಕು ಗೋಡೆ ಮಧ್ಯೆ ಅನೇಕ ವಿಚಾರ ಚರ್ಚೆ ಆಗಿದ್ದು, ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಪರೋಕ್ಷವಾಗಿ ಪ್ರತಾಪ್ ಸಿಂಹ ಗೆ ಟಿಕೆಟ್ ಮಿಸ್ ಆಗುವ ಸುಳಿವು ನೀಡಿದರಾ? ಎಂಬ ಅನುಮಾನ ಮೂಡಿದೆ. ಮೈಸೂರಿಗೆ ಯದುವೀರ್ ಒಡೆಯರ್ ಸ್ಪರ್ಧೆ ವಿಚಾರವಾಗಿ ವಿಜಯೇಂದ್ರ ಹೇಳಿಕೆ ನೀಡಿದ್ದು, ನಾನು ಊಹಾಪೋಹಾಗಳಿಗೆ ಉತ್ತರ ಕೊಡಲ್ಲ. ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆ ಬಹಿರಂಗಪಡಿಸಲ್ಲ. ಉತ್ತಮ, ಗೆಲ್ಲುವ…

Read More

ಕಾಟನ್ ಕ್ಯಾಂಡಿ  ಹಾಗೂ ಗೋಬಿ ಮಂಚೂರಿಯನ್ನು  ಬ್ಯಾನ್ ಮಾಡಬೇಕೆಂದು ಈ ಹಿಂದೆಯೇ ಚರ್ಚೆಯ ವಿಷಯವಾಗಿತ್ತು. ಬಳಿಕ ಕೆಲವೊಂದು ರಾಜ್ಯದಲ್ಲಿ ಇದನ್ನು ಬ್ಯಾನ್ ಮಾಡಲಾಗಿತ್ತು. ಇದೀಗ ಕರ್ನಾಟಕದಲ್ಲಿಯೂ ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹೌದು, ಕೆಲವೊಂದು ಹಾನಿಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಗೋವಾ, ತಮಿಳುನಾಡು ಈ ಆಹಾರಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ಕಲರ್ ಜೆಲ್ಲಿಗಳನ್ನು ಸ್ಯಾಂಪಲ್ ಟೆಸ್ಟ್‌ ಗೆ ಒಳಪಡಿಸಿಲಾಗಿತ್ತು. ಇದೀಗ ಕಾಟನ್ ಕ್ಯಾಂಡಿ ಜೆಲ್ಲಿ ಹಾಗೂ ಗೋಬಿ ಮಂಚೂರಿಯ ಟೇಸ್ಟಿಂಗ್ ರಿಪೋರ್ಟ್ ಆರೋಗ್ಯ ಇಲಾಖೆ ಕೈ ಸೇರಿದೆ. ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ರಿಪೋರ್ಟ್ ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದು, ಸೋಮವಾರ (ಮಾ.11) ಆರೋಗ್ಯ ಸಚಿವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸ್ಯಾಂಪಲ್‌ನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದ್ದು, ಗೋಬಿ ಮಂಚೂರಿಯಲ್ಲಿ Sunset Yellow ಮತ್ತು Tartrazine ಅಂಶ ಇರುವುದು ಪತ್ತೆಯಾಗಿದೆ. ರಾಸಾಯನಿಕ ಕಲಬೆರಕೆ ಇರುವುದರಿಂದ…

Read More

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ. ಅದರಲ್ಲೂ ಕೆಲವೊಂದು ಕಾಯಿಲೆಗಳು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸುತ್ತಿವೆ. ಇದೀಗ 19 ವರ್ಷ ವಯಸ್ಸಿನ ಯುವತಿಯ ಹೊಟ್ಟೆಯಲ್ಲಿ ಬರೋಬ್ಬರಿ 7.5 ಕೆಜಿ ಗಡ್ಡೆಯಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರದ ಯುವತಿಯ ಹೊಟ್ಟೆಯ ಸುತ್ತ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಹೆಚ್ಚಳ ಕಂಡು ಬಂದಿತ್ತು. ಇದರಿಂದಾಗಿ ಯುವತಿಯ ಪೋಷಕರು ಆತಂಕಕ್ಕೆ ಒಳಗಾಗಿ ವಿದ್ಯಾರಣ್ಯಪುರ ಸಮೀಪವಿರುವ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದಿದ್ದರು. ಬಳಿಕ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಚೈತ್ರಾ ಎಸ್. ನಿರಂತರ  ಅವರು ತಪಾಸಣೆ ನಡೆಸಿ ಪರೀಕ್ಷೆಗೊಳಪಡಿಸಿದಾಗ ಗರ್ಭಕೋಶದಲ್ಲಿ 7.5 ಕೆಜಿಯಷ್ಟು ಗಡ್ಡೆ ಇರುವುದು ಪತ್ತೆಯಾಗಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆಯುವಲ್ಲಿ ಡಾ. ಚೈತ್ರಾ ಎಸ್. ನಿರಂತರ, ಡಾ ನಂದ ಕುಮಾರ್ ಮತ್ತು ತಂಡ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಯುವತಿ ಆರೋಗ್ಯವಾಗಿದ್ದು ಪೋಷಕರ ಆತಂಕ…

Read More

ತುಮಕೂರು: ಪಾಕಿಸ್ತಾನವನ್ನು ಯಾರಾದರೂ ಬೆಂಬಲಿಸಿದರೆ,  ಗುಂಡಿಕ್ಕಿ ಕೊಲ್ಲಲಿ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ್​​ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವನ್ನು ಯಾರಾದರೂ ಬೆಂಬಲಿಸಿದರೆ, ಪಾಕ್ ಪರ ಘೋಷಣೆ ಕೂಗಿದರೆ ಅಂತವರನ್ನು ಗುಂಡಿಕ್ಕಿ ಕೊಲ್ಲಲಿ ಎಂದರು. ಉತ್ತರ ಪ್ರದೇಶ ಮಾದರಿಯಲ್ಲಿ ನಮ್ಮಲ್ಲೂ ಕಠಿಣ ಕಾನೂನು ತರಲಿ. ಸಮಾಜಘಾತುಕರ ಮನೆಗಳನ್ನು ಕೆಡವುತ್ತಾರೆ. ಶಾಂತಿ ನೆಮ್ಮದಿಗಾಗಿ ಇಂತಹ ಕ್ರಮ ಅಗತ್ಯ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಚಿಕ್ಕಬಳ್ಳಾಪುರ: ಪತಿಯೋರ್ವ ಪತ್ನಿಯನ್ನು ಚಾಕುವಿನಿಂದ ಇರಿದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ನಡೆದಿದೆ. ನರಸಮ್ಮ(48) ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ಪತಿ ಗಂಗುಲಪ್ಪ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿ ನರಸಮ್ಮಳನ್ನು ಜಾನುವಾರುಗಳಿಗೆ ಹುಲ್ಲು ತರುವ ನೆಪದಲ್ಲಿ ಕರೆದೊಯ್ದು ಹುಲ್ಲಿನ ಬಣವೆ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಗಂಗುಲಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ  ಪಾತಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ಮುಂದಿನ 7 ವರ್ಷಗಳಲ್ಲಿ ರಾಜ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹಮ್ಮಿಕೊಂಡಿದ್ದೇವೆ. ಈ ದಿಕ್ಕಿನಲ್ಲಿ ನಮ್ಮ ಸಿದ್ಧತೆಗಳು ಆಗಲೇ ಆರಂಭಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. GKVK ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಸೌರಶಕ್ತಿ ಮೇಳ ಉದ್ಘಾಟಿಸಿದರು. ಬಳಿಕ ಕುಸುಮ್ “ಬಿ” ಮತ್ತು “ಸಿ” ಯೋಜನೆಗಳ ಚಾಲನೆ ನೀಡಿ ವಿದ್ಯುತ್ ಉಪಕೇಂದ್ರಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ದೇಶದಲ್ಲೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ಹೀಗಾಗಿ ಒಣಭೂಮಿಯ ಕೃಷಿಗೆ ಆಧ್ಯತೆ ನೀಡಿ ಸಂಶೋಧನೆಗಳು ನಡೆಯಬೇಕು. ಜನಸಂಖ್ಯೆ ಹೆಚ್ಚಾಗಿ ರೈತರ ಬೆಳೆಗಳ ಇಳುವರಿ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ಸಮಗ್ರ ಕೃಷಿಗೆ ಹೆಚ್ವಿನ ಬೆಂಬಲ ನೀಡುವ ಸಲುವಾಗಿ ಕೃಷಿಯ ಉಪಕಸುಬುಗಳ ಬೆಳವಣಿಗೆಗೆ ಸರ್ಕಾರ ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತಿದೆ ಎಂದು ನುಡಿದರು.‌ ಪ್ರಸ್ತುತ ರಾಜ್ಯದಲ್ಲಿ 32 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮುಂದಿನ 7 ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ…

Read More

ಪಾವಗಡ: ಶಿವರಾತ್ರಿ ಹಬ್ಬದ ಪ್ರಯುಕ್ತ ಪಾವಗಡ ಪಟ್ಟಣದ ಎಸ್‌ ಎಸ್‌ ಕೆ ಬಯಲು ರಂಗಮಂದಿರದಲ್ಲಿ ಶುಕ್ರವಾರ ರಾತ್ರಿ ಪಾವಗಡದ ರೋಟರಿ ಕ್ಲಬ್ ಮತ್ತು ಹೆಲ್ಪ್ ಸೊಸೈಟಿ ಸಹಯೋಗದಲ್ಲಿ ಪಾವಗಡ ತಾಲೂಕಿನ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪಾವಗಡ ಪುರಸಭೆಯ ಮಾಜಿ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ ಅವರು ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಧಾರ್ಮಿಕ ಹಿತಾಸಕ್ತಿ ಕಮ್ಮಿಯಾಗುತ್ತಿದ್ದು, ಅದರ ಜೊತೆಗೆ ಕಲೆಯ ಮೇಲಿನ ಗೌರವ ಕ್ಷೀಣಿಸುತ್ತಿದೆ ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಉತ್ತಮ ಫಲಿತಾಂಶವನ್ನು ಸಾಂಸ್ಕೃತಿಕವಾಗಿ ಮಕ್ಕಳು ಪಡೆಯಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪಾವಗಡ ತಾಲೂಕಿನ 25ಕ್ಕೂ ಅಧಿಕ ಶಾಲೆಗಳ ನೂರಾರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಸತ್ಯ ಲೋಕೇಶ್, ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಪುರಸಭಾ ಸದಸ್ಯರಾದ ಗೂರ್ತಿ ನಾಗರಾಜು, ಮಹಮದ್ ಇಮ್ರಾನ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಪ್ರಭಾಕರ್, ಕಮಲ್ ಬಾಬು,…

Read More