nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರಿನಲ್ಲಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಜಂಟಿ ದಾಳಿ: ಕಳಪೆ ಆಹಾರ ಪದಾರ್ಥಗಳು ವಶ

    September 12, 2026

    100 ದಿನಗಳ ಆಡಳಿತದಲ್ಲಿ ಯಾವುದೇ ಸಾಧನೆಯಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್ ಥರ ಕಾಣ್ತಾರೆ: ಆರ್.ಅಶೋಕ್ ವಾಗ್ದಾಳಿ

    September 12, 2026

    ಇ.ಡಿ.ಗೆ ದೂರು ನೀಡಿದವರು ಯಾರೆಂದು ನನಗೆ ತಿಳಿದಿದೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    September 12, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರಿನಲ್ಲಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಜಂಟಿ ದಾಳಿ: ಕಳಪೆ ಆಹಾರ ಪದಾರ್ಥಗಳು ವಶ
    • 100 ದಿನಗಳ ಆಡಳಿತದಲ್ಲಿ ಯಾವುದೇ ಸಾಧನೆಯಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್ ಥರ ಕಾಣ್ತಾರೆ: ಆರ್.ಅಶೋಕ್ ವಾಗ್ದಾಳಿ
    • ಇ.ಡಿ.ಗೆ ದೂರು ನೀಡಿದವರು ಯಾರೆಂದು ನನಗೆ ತಿಳಿದಿದೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
    • ಪಂಚ ಗ್ಯಾರಂಟಿ ಯೋಜನೆಗಳು ನನ್ನ ಅಧ್ಯಕ್ಷತೆಯಲ್ಲೇ ರೂಪುಗೊಂಡವು: ಡಿ.ಕೆ. ಶಿವಕುಮಾರ್
    • 80ರ ದಶಕದ AI ಫೋಟೋ ಟ್ರೆಂಡ್‌: ಸಾರ್ವಜನಿಕರಿಗೆ ಸೈಬರ್ ತಜ್ಞರು, ಪೊಲೀಸರ ಎಚ್ಚರಿಕೆ!
    • ಹಾಸನದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪರಿಶೀಲನೆ
    • ಪಾವಗಡದಲ್ಲಿ ಮರುಕಳಿಸಿದ ನಕ್ಸಲ್ ಭೀತಿ: ದೇವಣ್ಣ ದಳಂ ಹೆಸರಿನಲ್ಲಿ ರೈತನಿಗೆ 5 ಲಕ್ಷ ರೂ. ಬೇಡಿಕೆ!
    • ತುಮಕೂರು ಸ್ಕ್ವೇರ್‌, ಕಾರಂಜಿಗೆ ಡಿಸಿಎಂ ಶಿಲಾನ್ಯಾಸ:  ಎಸ್‌ ಎಸ್‌ ವೃತ್ತದ 4 ದಿಕ್ಕಿನಲ್ಲೂ ಬೃಹತ್‌ ಎಲ್‌ ಇಡಿ ಅಳವಡಿಕೆಗೆ ಚಾಲನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿಡದಿ ಟೌನ್‌ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
    ಜಿಲ್ಲಾ ಸುದ್ದಿ July 16, 2026

    ಬಿಡದಿ ಟೌನ್‌ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

    By adminJuly 16, 2026No Comments2 Mins Read

    ಬಾಗಲಕೋಟೆ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿಯವರು ಬರೆದಿಟ್ಟ ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರದೇಶಗಳ ಪ್ರವಾಸದಲ್ಲಿದ್ದ ಅವರು, ಬಾದಾಮಿ ತಾಲೂಕಿನ ಕೆಂದೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

    “ಬಿಡದಿ ಟೌನ್‌ ಶಿಪ್ ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದು ಕಡೆ ಯೋಜನೆ ಕುರಿತು ಪರಿಶೀಲನಾ ಸಮಿತಿ ರಚಿಸುತ್ತೇನೆ ಎಂದು ಹೇಳುತ್ತಾರೆ, ಮತ್ತೊಂದೆಡೆ ಮೂರು ಗ್ರಾಮಗಳಿಗೆ ಭೂಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಅವರ ಮನಸ್ಸಿನಲ್ಲಿ ಬೇರೆ ಲೆಕ್ಕಾಚಾರವೇ ಇದೆ. ಆದರೆ ಹೊರಗಡೆ ಮಾತ್ರ ನಾಟಕ ಕಂಪನಿ ನಡೆಸುತ್ತಿದ್ದಾರೆ” ಎಂದು ನಿಖಿಲ್ ಕಿಡಿಕಾರಿದರು.

    ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರಲಿಲ್ಲ, ಕೇವಲ ಯೋಜನೆಗೆ ಸಂಬಂಧಿಸಿದ ಅಧಿಸೂಚನೆ ಮಾತ್ರ ಹೊರಡಿಸಿದ್ದರು ಎಂದು ಸ್ಪಷ್ಟಪಡಿಸಿದ ಅವರು, “ಕುಮಾರಸ್ವಾಮಿ ಅವರು ಈ ಪ್ರದೇಶವನ್ನು ‘ರೆಡ್‌ ಝೋನ್’ ಎಂದು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಸಿಎಂ ಆರೋಪಿಸುತ್ತಿದ್ದಾರೆ. ಒಂದು ವೇಳೆ ಅದು ನಿಜವೇ ಆಗಿದ್ದರೆ, ರಾಜ್ಯ ಸರ್ಕಾರಕ್ಕೆ ಅದನ್ನು ಕಾನೂನುಬದ್ಧವಾಗಿ ತಿದ್ದುಪಡಿ ಮಾಡುವ ಸಂಪೂರ್ಣ ಅಧಿಕಾರ ಇರಲಿಲ್ಲವೇ?” ಎಂದು ಪ್ರಶ್ನಿಸಿದರು. ಅಲ್ಲದೆ, “ಇದು ಕುಮಾರಸ್ವಾಮಿ ಅವರ ಕನಸಿನ ಯೋಜನೆ ಎಂದು ಹೇಳುತ್ತಲೇ, ಈಗ ಆ ‘ಮಗುವನ್ನು’ ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಏಕೆ?” ಎಂದು ತಿರುಗೇಟು ನೀಡಿದರು.

    ಡಿ.ಕೆ. ಶಿವಕುಮಾರ್ ಅವರನ್ನು ಮತ್ತೆ ಜೈಲಿಗೆ ಕಳುಹಿಸುವ ಸಂಚು ನಡೆಯುತ್ತಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಶಿವಕುಮಾರ್ ಅವರು ಈ ಹಿಂದೆ ಜೈಲಿನಲ್ಲಿದ್ದಾಗ ಅವರನ್ನು ಭೇಟಿ ಮಾಡಿ, ಅವರ ತಾಯಿಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದೇ ಕುಮಾರಸ್ವಾಮಿಯವರು. ಆ ಹಳೇ ವಿಚಾರವನ್ನು ನೆನಪಿನಲ್ಲಿಟ್ಟುಕೊಂಡು ಇಂದು ಇಂತಹ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ. ಅವರು ನಿಷ್ಕಳಂಕರಾಗಿದ್ದರೆ, ಮತ್ತೆ ಜೈಲಿಗೆ ಹೋಗುವ ಭಯ ಏಕೆ?” ಎಂದು ಪ್ರಶ್ನಿಸಿದರು.

    ಇದೇ ವೇಳೆ, ಮತ್ತೊಬ್ಬ ಒಕ್ಕಲಿಗ ನಾಯಕ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಅಸೂಯೆ ದೇವೇಗೌಡರ ಕುಟುಂಬಕ್ಕಿದೆ ಎಂಬ ಆರೋಪವನ್ನು ನಿರಾಕರಿಸಿದ ನಿಖಿಲ್, ಡಿ.ಕೆ. ಶಿವಕುಮಾರ್ ಸಿಎಂ ಆದಾಗ ಮೊದಲು ಅಭಿನಂದಿಸಿದ್ದೇ ನಮ್ಮ ಕುಟುಂಬ. ಈಗ ಬಡ ರೈತರ ಪರವಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಅವರೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಬರ ಹಾಗೂ ನೆರೆ ಪೀಡಿತ ಗ್ರಾಮಗಳ ಪರಿಸ್ಥಿತಿಯನ್ನು ಪರಿಶೀಲಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹಾಸನದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪರಿಶೀಲನೆ

    September 12, 2026

    ಗ್ರಾಮೀಣ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಶೇ.7.5ರ ವಿಶೇಷ ಮೀಸಲಾತಿ ವಿಸ್ತರಿಸಲು ಆಗ್ರಹ

    September 11, 2026

    ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು

    September 11, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರಿನಲ್ಲಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಜಂಟಿ ದಾಳಿ: ಕಳಪೆ ಆಹಾರ ಪದಾರ್ಥಗಳು ವಶ

    September 12, 2026

    ತಿಪಟೂರು: ನಗರದ ವಿವಿಧ ಹೋಟೆಲ್‌ ಗಳು, ಡಾಬಾಗಳು ಮತ್ತು ಬೇಕರಿಗಳ ಮೇಲೆ ನಗರಸಭೆ ಅಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಜಂಟಿ…

    100 ದಿನಗಳ ಆಡಳಿತದಲ್ಲಿ ಯಾವುದೇ ಸಾಧನೆಯಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್ ಥರ ಕಾಣ್ತಾರೆ: ಆರ್.ಅಶೋಕ್ ವಾಗ್ದಾಳಿ

    September 12, 2026

    ಇ.ಡಿ.ಗೆ ದೂರು ನೀಡಿದವರು ಯಾರೆಂದು ನನಗೆ ತಿಳಿದಿದೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    September 12, 2026

    ಪಂಚ ಗ್ಯಾರಂಟಿ ಯೋಜನೆಗಳು ನನ್ನ ಅಧ್ಯಕ್ಷತೆಯಲ್ಲೇ ರೂಪುಗೊಂಡವು: ಡಿ.ಕೆ. ಶಿವಕುಮಾರ್

    September 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.