Subscribe to Updates
Get the latest creative news from FooBar about art, design and business.
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
- ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ 5 ಲಕ್ಷ ದೇಣಿಗೆ
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
Author: admin
ರಾಜ್ಯ ಸರಕಾರವು 60 ಲಕ್ಷ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ನಿರ್ಧರಿಸಿದೆ. ಫೆ.22 ಆದ ಇಂದು ಬೆಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ. ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆಗೆ 100 ಹೊಸ ಕೆಎಸ್ಸಾರ್ಟಿಸಿ ಬಸ್ ಕೇಳಿದ್ದೆ. ಸದ್ಯಕ್ಕೆ 10 ಬಸ್ ಬಂದಿದೆ. ಫೆ.24 ರಂದು ನಡೆಯುವ ಗ್ಯಾರಂಟಿ ಸಮಾವೇಶದಲ್ಲಿ ಬಸ್ ಉದ್ಘಾಟಿಸಲಾಗುವುದು ಎಂದು ಹೇಳಿದ್ದಾರೆ. ಹೀಗೆ ಶಿಕ್ಷಣ ಸಚಿವರ ಹಲವು ಬೇಡಿಕೆಗಳು ಫೆ.22 ರಂದು ಅಧಿಕೃತವಾಗಿ ಚಾಲನೆಗೊಂಡು ಯೋಜನೆಗಳಾಗಲಿವೆ ಎಂದು ವರದಿ ತಿಳಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರು: ಪೇಟೆಗೆ ಅಥವಾ ದೇಗುಲಕ್ಕೆ ಹೋದಾಗ ಚಪ್ಪಲಿ- ಶೂ ಗಳ ಬಗ್ಗೆ ಕದಿಯುವ ಭಯವಿರುವುದು ನಿಜ. ಆದರೆ, ಸ್ವತಃ ಮನೆ ಮುಂದೆ ಬಿಟ್ಟ ಶೂ ಗಳಿಗೂ ಇನ್ನು ಗ್ಯಾರಂಟಿ ಇಲ್ಲ ಎನ್ನವುದು ಅಚ್ಚರಿಯ ವಿಷಯ. ಮನೆಯ ಆಚೆ ದುಬಾರಿ ಶೂಗಳನ್ನು ಬಿಡುವ ಮುಂಚೆ ಎಚ್ಚರ. ಏಕೆಂದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೂ ಕಳ್ಳರು ಆ್ಯಕ್ಟಿವ್ ಆಗಿದ್ದಾರೆ. ಇಲ್ಲೋರ್ವ ಮಹಿಳೆಯರಂತೆ ನೈಟಿ ಹಾಕಿಕೊಂಡು ಬಂದು ಅಪಾರ್ಟ್ಮೆಂಟ್ ಗೆ ನುಗ್ಗಿ ದುಬಾರಿ ಶೂ ಗಳನ್ನು ಕದಿಯುತ್ತಾನೆ. ಸದ್ಯ ಖತರ್ನಾಕ್ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅನಿಲ್ ಎಂಬುವವರು ಎಕ್ಸ್ ನಲ್ಲಿ ಸಿಸಿಟಿವಿ ದೃಶ್ಯ ಸಮೇತ ಪೋಸ್ಟ್ ಮಾಡಿ ವಿಚಿತ್ರ ಕಳ್ಳರಿದ್ದಾರೆ ಎಚ್ಚರವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ತನ್ನ ಗುರುತು ಸಿಗಬಾರದು ಎಂದು ಮಹಿಳೆಯರಂತೆ ನೈಟಿ ಧರಿಸಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್ ಕಳ್ಳ, ಬೆಂಗಳೂರಿನ ಅಪಾರ್ಟ್ ಮೆಂಟ್ ಗೆ ನುಗ್ಗಿ ಶೂ ಕದಿಯುತ್ತಾನೆ. ಬೆಳೆಬಾಳುವ ಶೂಗಳನ್ನು ಕದ್ದು ಕಾಂಪೌಂಡ್ ಹಾರಿ ಕಳ್ಳ ಪರಾರಿಯಾಗುವ…
ಆಸ್ಪತ್ರೆಯ ಸಹಾಯಕಿ ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್ ನಲ್ಲಿ ಕೂರಿಸಿ ಸುಟ್ಟ ಗಾಯ ಮಾಡಿದ್ದ ತಪ್ಪನ್ನು ಮರೆಮಾಚಲು, ಮಗುವಿಗೆ ಎಪಿಡರ್ಮೊಲಿಸಿಸ್ ಬುಲ್ಲೋಸಾ ಚರ್ಮ ರೋಗ ಇರಬಹುದು ಎಂದು ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ, ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಜಿಲ್ಲಾ ಗ್ರಾಹಕರ ಆಯೋಗವು ₹10 ಲಕ್ಷ ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ. ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ.ಹಿರೇಮಠ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ ಶೇ 75 ಭಾಗ ಹಾಗೂ ಬಾಕಿ ಶೇ 25 ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗಾಗಿ ₹10 ಲಕ್ಷ ಪರಿಹಾರವನ್ನು ನೀಡಬೇಕು. ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ 8 ಬಡ್ಡಿ ಲೆಕ್ಕಹಾಕಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ…
ಬೆಂಗಳೂರು: ನನಗೆ ರಾಜಕಾರಣ ಗೊತ್ತಿಲ್ಲ, ಸದ್ಯಕ್ಕೆ ನಾನು ಈ ಕ್ಷೇತ್ರಕ್ಕೆ ಬರಲ್ಲ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಮೂಲಕ ಡಾಲಿ ರಾಜಕೀಯ ಪ್ರವೇಶಿಸುತ್ತಾರೆ ಎನ್ನುವ ವದಂತಿ ಬಗ್ಗೆ ಉತ್ತರಿಸಿದ ಅವರು, ಸಿನಿಮಾ ರಂಗದಲ್ಲಿ ಸಾಕಷ್ಟು ಕನಸು ಇದೆ ಅಲ್ಲೇ ಕೆಲಸ ಮಾಡ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಲಿಡ್ಕರ್ ಗೆ ಬ್ರಾಂಡ್ ರಾಯಭಾರಿ ಆಗಿರುವುದು, ಅದನ್ನು ನಂಬಿ ಸಾವಿರಾರು ಬಡ ಕುಟುಂಬಗಳು ಇವೆ. ಅದಕ್ಕೆ ನಾನು ಒಪ್ಪಿಕೊಂಡೆ. ಕಲಾವಿದರಾಗಿ ನಾವು ಎಮೊಷನಲ್ ಆಗಿರ್ತಿವಿ. ಪಾಲಿಟಿಕ್ಸ್ ಗೆ ಬೇಕಿರುವುದು ಬೇರೆ ಮೈಂಡ್ ಸೆಟ್. ರಾಜಕಾರಣ ಬೇರೆ ನಾಯಕನಾಗಿರುವುದು ಬೇರೆ ಅದರದೆ ಕ್ವಾಲಿಟಿಸ್ ಇರುತ್ತೆ. ರಾಜಕೀಯ ನಿಭಾಯಿಸುವ ಶಕ್ತಿ ಇರಬೇಕು ಎಂದು ಅವರು ಹೇಳಿದರು.
ಬೆಂಗಳೂರು: ಮಾನವೀಯತೆಯ ಆಧಾರದ ಮೇಲೆ ಪರಿಹಾರ ಘೋಷಣೆ ಮಾಡಿದ್ರೆ, ಬಿಜೆಪಿಯವರು ತಕರಾರು ಮಾಡ್ತಾರೆ ಅಂದರೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಆನೆ ಕೇರಳದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಸಂಬಂಧ ಕರ್ನಾಟಕದಿಂದ ಪರಿಹಾರ ಘೋಷಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಟೀಕೆಗಳಿಗೆ ಉತ್ತರಿಸಿದ ಅವರು, ದಯವೇ ಧರ್ಮದ ಮೂಲವಯ್ಯ ಅಂತ ವಿಶ್ವಗುರು ಬಸವಣ್ಣ ಹೇಳಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಮಾನವೀಯತೆಯ ಆಧಾರವಾಗಿ ಪರಿಹಾರ ಘೋಷಣೆ ಮಾಡಿದ್ರೆ, ಅದಕ್ಕೆ ಬಿಜೆಪಿಯವರು ತಕರಾರು ಮಾಡ್ತಾರೆ ಎಂದರು. ಅದು ನಮ್ಮ ಆನೆ, ನ.30ರಂದು ಹಾಸನದ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಈ ಆನೆಯನ್ನ ಸೆರೆ ಹಿಡಿಯಲಾಯ್ತು. ಆ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ಆನೆಗೆ ಸ್ಥಳೀಯರು ಬೇಡ ಅಂದಿದ್ದಕ್ಕೆ ಬಂಡಿಪುರ ಅರಣ್ಯ ಪ್ರದೇಶಕ್ಕೆ ಬಿಡಲಾಯ್ತು. ಬಂಡಿಪುರದಿಂದ ಈ ಆನೆ ಕ್ರಾಸ್ ಆಗಿ ಕೇರಳ ಕಡೆಗೆ ಹೋಗಿದೆ. ಆಗ ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಆ ವ್ಯಕ್ತಿಯ ಪರಿವಾರದ…
ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾನೂ ಕೂಡ ಪ್ರಭಲ ಆಕಾಂಕ್ಷಿಯಾಗಿದ್ದು, ಚುನಾವಣೆ ಎದುರಿಸಲು ನನಗೂ ಸಾಮರ್ಥ್ಯವಿದೆ ಎಂಬುದು ತುಮಕೂರು ಲೋಕಸಭಾ ಕ್ಷೇತ್ರದ ಜನತೆಗೇ ಗೊತ್ತಿರುವ ವಿಚಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು. ಇಲ್ಲಿಯ ಜಯನಗರದ ತಮ್ಮ ಸ್ವಗೃಹದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಬೂತ್ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಿಲ್ಲೆಯಾದ್ಯಂತ ಪ್ರತಿಯೊಂದು ವಿಭಾಗದಲ್ಲೂ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿದ್ದು, ಅದರಲ್ಲಿ ರೈತರೊಂದಿಗೆ ನಾವು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದೇನೆ. ಜೊತೆಗೆ ಯುವಕರೊಂದಿಗೆ ಬೆರೆತು ಯುವಸಬಲೀಕರಣ ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಹಾಗೆಯೇ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನೂ ಸಹ ಮಾಡಿಕೊಂಡು ಬಂದಿದ್ದು, ಜನಸಾಮಾನ್ಯರೊಂದಿಗೆ ಬೆರೆತು ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೇಳಿದರು. ಇತ್ತೀಚೆಗೆ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ನಮ್ಮ ಪಕ್ಷಕ್ಕೆ ಬಂದಿರುವುದು ನಮಗೆ ಆನೆ ಬಲ ಬಂದಂತಾಗಿದೆ. ತುಮಕೂರು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಡಿ.ಸಿ. ಗೌರಿಶಂಕರ್…
ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರಕಾರ ಹೈನುಗಾರಿಕೆಗೆ ಪ್ರಮುಖ ಆಧ್ಯತೆ ನೀಡಿದರೇ ರೈತರ ಆರ್ಥಿಕವಾಗಿ ಅನುಕೂಲ ಆಗಲಿದೆ. ರೈತರಿಗೆ ನೀಡುವ ಹಾಲಿನ ಧರ ಮತ್ತು ಪ್ರೋತ್ಸಾಹ ಧನವನ್ನು ಇನ್ನಷ್ಟು ಹೆಚ್ಚಿಸಿ ಸರಕಾರ ರೈತರ ಪರವಾಗಿ ನಿಲ್ಲಬೇಕಿದೆ ಎಂದು ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ವಿಜಯಶಂಕರ್ ಆಗ್ರಹ ಮಾಡಿದರು. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಂಗಳವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಆಯ್ಕೆಯ ನಂತರ ಮಾತನಾಡಿದರು. ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಕಟ್ಟಡದ ಅವಶ್ಯಕತೆ ಇದೆ. ಹಾಲು ಉತ್ಪಾದಕ ರೈತರಿಗೆ ಡೈರಿಯಿಂದ ಮತ್ತು ಸರಕಾರದಿಂದ ಬರುವ ಸೌಲಭ್ಯವನ್ನು ನೇರವಾಗಿ ತಲುಪಿಸುವ ಗುರಿ ಇದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಹಕಾರದಿಂದ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ತುಂಬು ಹೃದಯಧ ಧನ್ಯವಾದ ಅರ್ಪಿಸುತ್ತೇನೆ…
ತಿಪಟೂರು: ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಫೆಬ್ರವರಿ 24ರ ಬೆಳಿಗ್ಗೆ 11 ಗಂಟೆಗೆ ವೀರಶೈವ ಲಿಂಗಾಯಿತರ ಸಂಘಟನೆಯ ಪ್ರಾರಂಭೋತ್ಸವ ಮತ್ತು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರೇಣುಕಾ ರಾಧೃ ತಿಳಿಸಿದರು ತಿಪಟೂರು ತಾಲೂಕಿನಲ್ಲಿ ವೀರಶೈವರು ಬಹು ಸಂಖ್ಯಾತರಿದ್ದು ಆರ್ಥಿಕವಾಗಿ ಹಿಂದುಳಿದಿದ್ದಾರೆ. ವೀರಶೈವಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಕೆ. ಷಡಕ್ಷರಿ ಸಮಾವೇಶ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವೀರಶೈವ ಮಹಿಳಾಘಟಕದ ರಾಜ್ಯಾಧ್ಯಕ್ಷೆ ಎಸ್.ವೈ.ಅರುಣದೇವಿ, ನಟರಾದ ದೊಡ್ಡಣ್ಣ, ಕಾಂಗ್ರೆಸ್ ಮುಖಂಡ ಲೋಕೇಶ್ವರ್, ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ಚಟ್ಟನಳ್ಳಿ ಮಹೇಶ್ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು. ಈ ಗೋಷ್ಠಿಯಲ್ಲಿ ನಾಕ್ಕೇನಹಳ್ಳಿ ಸುರೇಶ್, ನವಿಲೆಪರಮೇಶ್ ಮುಂತಾದವರು ಭಾಗವಹಿಸಿದ್ದರು ವರದಿ: ಆನಂದ್ ತಿಪಟೂರು
ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರೇಣುಕಪ್ಪ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಬಹಳ ಅದ್ದೂರಿಯಾಗಿ ಬರಮಾಡಿಕೊಂಡರು. ದಬ್ಬೆಘಟ್ಟ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಗ್ರಾಮಸ್ಥರ ಹಾಗೂ ಡಿ ಎಸ್ ಎಸ್, ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳದ ಹೊಸಹಳ್ಳಿ ಗೇಟ್ ನಿಂದ ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಸಂಭ್ರಮದಿಂದ, ಆತ್ಮೀಯವಾಗಿ ರಥವನ್ನು ಸ್ವಾಗತಿಸಲಾಯಿತು. ನಾಸಿಕ್ ಡೋಲ್ ವಾದ್ಯ ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಬಳಿಕ ವೇದಿಕೆಯ ಕಾರ್ಯಕ್ರಮ ನೆರವೇರಿತು. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರೇಣುಕಪ್ಪ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ಸು ಕಂಡಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಛಾಯಾಮಣಿ ಈಶ್ವರ್, ಮಾಜಿ ಅಧ್ಯಕ್ಷೆ ಮೋಹನ್ ಕುಮಾರಿ ಮಹೇಶ್, ಆರ್. ಪಿ ಚಿರಂಜೀವಿ, ಮುಖ್ಯಶಿಕ್ಷಕ ಪ್ರಭು, ದಲಿತ ಸಂಘರ್ಷ ಸಮಿತಿಯ ಸಂಘಟನಾ…
ತುರುವೇಕೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ನನ್ನದೇ ಪುಟ್ಟಣ್ಣನವರ ಗೆಲುವಿನಿಂದ ಶಿಕ್ಷಕರೆಲ್ಲ ಸರ್ಕಾರದ ಪರವಾಗಿದ್ದಾರೆ ಸಾಬೀತಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೊಷ್ಟಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸಹಕಾರ ಕೊಟ್ಟಂತಹ ತಾಲ್ಲೂಕು ತುರುವೇಕೆರೆ ಆದ್ದರಿಂದ ಈ ತಾಲ್ಲೂಕಿನಮೇಲೆ ನನಗೆ ವಿಶೇಷ ಪ್ರೀತಿ ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ನನ್ನದೇ ಪುಟ್ಟಣ್ಣನವರ ಗೆಲುವಿನಿಂದ ನಮಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದರು. ಕಳೆದ ಬಾರಿ 18 ಸಾವಿರ ಮತಗಳನ್ನು ಗಳಿಸಿ ಎರಡನೆಯ ಸ್ಥಾನಪಡೆದಿದ್ದೆ ನಾನು ಶಿಕ್ಷಕ ಸ್ನೇಹಿಯಾಗಿ ಕೆಲಸಮಾಡಿದ್ದೇನೆ. ಶಿಕ್ಷಕರಲ್ಲಿ ಅವರದೇಆದ ಸಮಸ್ಯೆಗಳಿವೆ. ಅದರಲ್ಲಿ ಆರೋಗ್ಯ, ಶಿಕ್ಷಣ, ಕನಿಷ್ಟ ವೇತನ 2015ರಿಂದ ಶಿಕ್ಷಕರು ಅತಂತ್ರವಾಗಿದ್ದಾರೆ .ಜ್ಯೋತಿ ಸಂಜೀವಿನಿ 1,29ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಯಿಂದ ಸಹಾಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದ್ದರಿಂದ ಬರುವಂತಹ ಸಂಸತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ನಮ್ಮ ಪಕ್ಷ ಗಳಿಸಲಿದೆ…