Subscribe to Updates
Get the latest creative news from FooBar about art, design and business.
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
- ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ 5 ಲಕ್ಷ ದೇಣಿಗೆ
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
Author: admin
ಪುಟ್ಟ ಮಗುವನ್ನು ಕಂಡಾಗ ಹಲವರಿಗೆ ಮುತ್ತು ಕೊಡುವ ಅಭ್ಯಾಸ ಜೋರಾಗಿರುತ್ತೆ. ಸ್ವಾಭಾವಿಕವಾಗಿ ಮಗುವಿನ ಮುದ್ದು ಮುಖ ನೋಡುತ್ತಿದ್ದಂತೆ ಮುತ್ತು ಕೊಡುವ ಆಸೆ ಒಳಗಿನಿಂದ ಒತ್ತರಿಸಿ ಬರುತ್ತದೆ. ಆದರೆ ನವಜಾತ ಶಿಶುವಿಗೆ ಇದು ಉತ್ತಮವಲ್ಲ ಎಂದು ನಿಮಗೆ ತಿಳಿದಿದೆಯಾ? ಹೌದು, ಇದನ್ನು ನಂಬೋದಕ್ಕೆ ಅಸಾಧ್ಯವಾದರೂ ಕೂಡ ನೈಜವಾದ ವಿಚಾರವೆಂದು ಒಪ್ಪಿಕೊಳ್ಳಲೇಬೇಕಾಗಿದೆ. ನಿಮ್ಮ ಪ್ರೀತಿಯ ಚುಂಬನ ಅವುಗಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಶಿಶುಗಳು ಈ ಜಗತ್ತಿಗೆ ಬಂದಾಗ, ಅವರಿಗೆ ಕಡಿಮೆ ರೋಗನಿರೋಧಕ ಶಕ್ತಿ ಇರುತ್ತದೆ. ಆದ್ದರಿಂದ, ಅವರು ಈ ಜಗತ್ತಿನಲ್ಲಿ ಪ್ರವೇಶಿಸಿದ ತಕ್ಷಣ ಅವರನ್ನು ಚುಂಬಿಸುವುದು ಸರಿಯಾದ ಕೆಲಸವಲ್ಲ. ಮಕ್ಕಳನ್ನು ಚುಂಬಿಸುವುದರಿಂದ ಶಿಶುಗಳಿಗೆ ಹೇಗೆ ಹಾನಿಯಾಗುತ್ತದೆ ಎಂದು ತಿಳಿಯೋಣ. ಆರೋಗ್ಯದ ಗಂಭೀರ ಪರಿಣಾಮಗಳನ್ನು ತಡೆಗಟ್ಟಲು, ತಾಯಂದಿರು ಸೇರಿದಂತೆ ಪ್ರತಿಯೊಬ್ಬರೂ ಆರಂಭಿಕ ಹಂತದಲ್ಲಿ ಶಿಶುಗಳನ್ನು ಚುಂಬಿಸುವುದನ್ನು ತಪ್ಪಿಸಬೇಕು. ಆರ್ ಎಸ್ ವಿ (ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್) ಮತ್ತು ಇತರ ಕಾಯಿಲೆಗಳ ಹೆಚ್ಚಳವನ್ನು ಗಮನಿಸಿದರೆ, ನವಜಾತ ಶಿಶುಗಳನ್ನು ಚುಂಬಿಸುವ ಅಪಾಯಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಮಗುವನ್ನು ಚುಂಬಿಸುವುದರಿಂದ ಯಾವಾಗಲೂ…
ಕಳೆದ ಒಂದು ತಿಂಗಳ ಹಿಂದೆ ನಡೆದ ತಾಯಿಯೇ ಮಗುವನ್ನು ಕೊಂದ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಸಿಕ್ಕಿದ ಶಾಕಿಂಗ್ ವರದಿ ನೋಡಿ ಬೆಚ್ಚಿ ಬಿದ್ದಿದ್ದಾರೆ.ಮಾನಸಿಕ ಖಿನ್ನತೆಯಿಂದ ಆಕೆ ಈ ರೀತಿ ನಡೆದು ಕೊಂಡಿರಬಹುದು. ಮಗುವಿನ ಮೇಲೆ ಯಾವುದೇ ಕೋಪ ಇರಲಿಲ್ಲ ಅಂತ ಸುಚನಾ ತಂದೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.ಆದರೆ ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. 4 ವರ್ಷದ ಮಗನನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ತುಂಬಿದ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯ ಉದ್ಯಮಿ ಕೇಸ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಇನ್‌ಸ್ಟಿಟ್ಯೂಟ್ ಅಫ್ ಸೈಕಾಲಜಿ ಮತ್ತು ಹ್ಯೂಮನ್ ಬಿಹೇವಿಯರ್ ಸಂಸ್ಥೆಯಲ್ಲಿ ಫೆ.2 ರಂದು ಸೂಚನಾಳ ಮಾನಸಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾ ವರದಿಯನ್ನು ಪೊಲೀಸರು ಕೋರ್ಟ್ ಎದುರು ಹಾಜರು ಪಡಿಸಿದ್ದು, ವರದಿಯ ಪ್ರಕಾರ ಸುಚನಾಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲವೆಂದು ಸಾಬೀತಾಗಿದೆ. ಗಂಡನ ಮೇಲಿನ ಅತಿಯಾದ ಕೋಪದಿಂದಾಗಿ ಹೀಗೆ…
ನವದೆಹಲಿ: ಕನಿಷ್ಠ ಬೆಂಬಲ ಬೆಲ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ತಮಿಳುನಾಡು ರೈತರು ಕೂಡ ಬೆಂಬಲ ಘೋಷಣೆ ಮಾಡಿದ್ದಾರೆ. ಮಂಗಳವಾರ ಉಭಯ ರಾಜ್ಯಗಳ ನಡುವಿನ ಎರಡು ಗಡಿಗಳಲ್ಲಿ ಪ್ರತಿಭಟನಾಕಾರರು ಹರಿಯಾಣ ಪೊಲೀಸರೊಂದಿಗೆ ಮುಖಾಮುಖಿಯಾಗಿದ್ದರು. ಕೆಲವು ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಮುರಿದು ದೆಹಲಿ ಪ್ರವೇಶಕ್ಕೆ ಯತ್ನಿಸಿದರು. ಈ ವೇಳೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು. ಇನ್ನು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಈ ಬಗ್ಗೆ ಮಾತನಾಡಿದ್ದು, ಭದ್ರತಾ ಪಡೆಗಳ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಕೇಂದ್ರ ನಮ್ಮ ಬೇಡಿಕೆಗಳನ್ನು ಒಪ್ಪುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು.
ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಚಾರಕ್ಕಾಗಿ ಜನರು ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಟೌಟ್ ಗಳನ್ನು ಹಾಕಿದರೆ ಮಹಿಳೆಯೊಬ್ಬಳು ಮೋದಿ ಕಟೌಟ್ ಮುಂದೆ ಸೆಲ್ಫಿ ತೆಗೆಸಿಕೊಳ್ಳುವ ಬದಲು “ಆಜಾ ಸಜನ್ ಆಜಾ” ಎಂದು ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ್ದಾಳೆ. ಇತ್ತೀಚಿನ ದಿನಗಳಲ್ಲಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಇದು ಉತ್ತಮ ನಿದರ್ಶನ. ಹಾಡು ಪ್ಲೇ ಆಗುತ್ತಿದ್ದಂತೆ ಮಹಿಳೆ ಪ್ರಧಾನಿ ಮೋದಿಯವರ ಕಟೌಟ್ ನತ್ತ ಓಡಿ ಮೋದಿಯ ಕಟೌಟ್ ತಬ್ಬಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭಿಸಿ, ನಂತರ ತನ್ನ ಅರೆಬರೆ ಮೈಯನ್ನು ಪ್ರದರ್ಶಿಸುತ್ತಾ ನೃತ್ಯ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದೇಶದ ಪ್ರಧಾನಿಯನ್ನು ಅಪ್ಪಿಕೊಂಡು ಅಸಭ್ಯವಾಗಿ ನೃತ್ಯ ಮಾಡಿರುವುದು ಇದೀಗಾ ಭಾರೀ ಟೀಕೆಗೆ ಕಾರಣವಾಗಿದೆ. ಜನರು ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ ಯಾಗಿದೆ.
ಲಂಚ ಸ್ವೀಕರಿಸುತ್ತಿದ್ದ ವೇಳೆ ಫುಡ್ ಇನ್ ಸ್ಪೆಕ್ಟರ್ ಹಾಗೂ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸೊಸೈಟಿ ಸೆಕ್ರೆಟರಿಯನ್ನು ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ. ಫುಡ್ ಇನ್ ಸ್ಪೆಕ್ಟರ್ ಶ್ರೀಧರ್ ಹಾಗೂ TAPCMS ಸೆಕ್ರೆಟರಿ ಹಾಗೂ ಮ್ಯಾನೇಜರ್ ಉಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶ್ರೀಧರ್, ಉತ್ತರಹಳ್ಳಿ ಮತ್ತು ಕೆಂಗೇರಿ ವಿಭಾಗದ ಫುಡ್ ಇನ್ ಸ್ಪೆಕ್ಟರ್ ಆಗಿದ್ದಾರೆ. ನ್ಯಾಯಬೆಲೆ ಅಂಗಡಿ ಲೈಸೆ ನ್ಸ್‌ಗೆ ಇವರರಿಬ್ಬರೂ ಲಂಚದ ಬೇಡಿಕೆ ಇಟ್ಟಿದ್ದರು. ರಫೀಕ್ ಎಂಬವರ ಬಳಿ 2.5 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ರಫೀಕ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 1.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅದಕ್ಕೂ ಮೊದಲೇ ಫುಡ್ ಇನ್ ಸ್ಪೆಕ್ಟರ್ 1 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ. ಸದ್ಯ ಇಬ್ಬರನ್ನೂ ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ ಡಿಫರೆಂಟ್ ಕೇಸ್ ಎಂಬಂತೆ ಎದೆನೋವು ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟೇಗಾರಪಾಳ್ಯ ನಿವಾಸಿ ರಾಜೇಶ್ವರಿ(36) ಎಂಬವರು ನೀಡಿದ ದೂರಿನ ಮೇರೆಗೆ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯ ಶುಶ್ರೂಕಿಯರಾದ ಅಕ್ಷತಾ, ಅದೀನಾ, ಹೌಸ್ ಕೀಪಿಂಗ್ ಕೆಲಸ ಮಾಡುವ ಪ್ರೇಮಮ್ಮಾ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆ.8ರಂದು ಮಧ್ಯಾಹ್ನ ದೂರುದಾರರಾದ ರಾಜೇಶ್ವರಿಗೆ ಎದೆನೋವು ಕಾಣಿಸಿಕೊಂಡಿದೆ.ರಾತ್ರಿ ನೋವು ಹೆಚ್ಚಾದ ಕೂಡಲೇ ಪತಿ ಗಾಬರಿಗೊಂಡಿದ್ದಾರೆ. ವೆಂಕಟೇಶಮೂರ್ತಿ ಅವರು ತಕ್ಷಣ ಪತ್ನಿ ರಾಜೇಶ್ವರಿಯನ್ನು ತಡರಾತ್ರಿ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆ ವೈದ್ಯರು ಆರೋಗ್ಯ ತಪಾಸಣೆ ಮಾಡಿದ್ದಾರೆ. ಇಸಿಜಿ ಮಾಡಿಸಲು ಸೂಚಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ ನರ್ಸ್ ಅಕ್ಷತಾ ಇಸಿಜಿ ಮಾಡಬೇಕೆಂದು, ಮಾಂಗಲ್ಯ ಸರ ತೆಗೆಯಲು ಹೇಳಿದ್ದಾರೆ. ಆಗ ಸುಮಾರು 2.50 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಸರ…
ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಡೆತನದ ರಾಕ್ಲೈನ್ ಮಾಲ್ ಗೆ ಬಿಬಿಎಂಪಿ ಬೀಗಮುದ್ರೆ ಹಾಕಿದೆ. ಟಿ. ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್ ಲೈನ್ ಮಾಲ್ 2011 ರಿಂದ 2023ರವರೆಗೆ 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಟಿ ನೋಟಿಸ್ ನೀಡಿತ್ತು. ನೋಟಿಸ್ ನೀಡಿದರೂ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಾಸರಹಳ್ಳಿಯ ಬಿಬಿಎಂಪಿ ಕಂದಾಯ ಅಧಿಕಾರಿಗಳು ಮಾಲ್ಗೆ ಬೀಗಮುದ್ರೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 2023ರ ನವೆಂಬರ್ ಮತ್ತು 2024ರ ಫೆಬ್ರವರಿ ನಡುವೆ 46,318 ಆಸ್ತಿಗಳಿಗೆ ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಬಿಬಿಎಂಪಿ ಕಂದಾಯ ಅಧಿಕಾರಿಗಳು ನಿವೇಶನಗಳನ್ನು ಸೀಲ್ ಮಾಡಿದರೂ ತೆರಿಗೆ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದ 7,203 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
ತಮಿಳು ನಿರ್ದೇಶಕ ಎಂ. ಮಣಿಕಂದನ್ ಅವರ ನಿವಾಸದಿಂದ ಕದ್ದಿದ್ದ ರಾಷ್ಟ್ರ ಪ್ರಶಸ್ತಿಯನ್ನು ಕಳ್ಳರು ವಾಪಸ್ ನೀಡಿದ್ದಾರೆ. ನಿರ್ದೇಶಕರ ಚಾಲಕನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾಗ ಘಟನೆ ತಿರುವು ಪಡೆದುಕೊಂಡಿದೆ. ಲೂಟಿ ಮಾಡಿದ ವಸ್ತುಗಳಲ್ಲಿದ್ದ ರಾಷ್ಟ್ರ ಪ್ರಶಸ್ತಿಯನ್ನಷ್ಟೇ ಕಳ್ಳರು ವಾಪಸ್ ಮಾಡಿದ್ದಾರೆ. ಕಳೆದ ದಿನ ಉಸಲಂಪಟ್ಟಿಯಲ್ಲಿರುವ ಕಾಕ ಮುತ್ತೈ ಚಿತ್ರದ ನಿರ್ದೇಶಕ ಮಣಿಕಂದನ್ ಅವರ ನಿವಾಸದಿಂದ ಒಂದು ಲಕ್ಷ ರೂಪಾಯಿ, ಐದು ಚಿನ್ನಾಭರಣಗಳು ಹಾಗೂ ಎರಡು ರಾಷ್ಟ್ರ ಪ್ರಶಸ್ತಿಯ ಪದಕಗಳನ್ನು ಕಳವು ಮಾಡಲಾಗಿತ್ತು. ನಿನ್ನೆ ರಾತ್ರಿ ಕಳ್ಳರು ರಾಷ್ಟ್ರ ಪ್ರಶಸ್ತಿಯ ಪದಕಗಳನ್ನು ಹಿಂದಿರುಗಿಸಿದ್ದಾರೆ. ಅದನ್ನು ಕವರ್ ನಲ್ಲಿ ಹಾಕಿ ಮನೆಯ ಗೇಟಿನ ಮೇಲೆ ಹಾಕಿದರು. ಅದರೊಂದಿಗೆ ಪತ್ರವೂ ಇತ್ತು. ಅವರನ್ನು ಮನ್ನಿಸಬೇಕು ಮತ್ತು ಶ್ರಮದ ಫಲ ನಿಮಗೆ ಸೇರಬೇಕು ಎಂಬುದು ಪತ್ರದ ವಿಷಯ. ಇದೇ ವೇಳೆ ಕಳ್ಳರು ದೇಶ ತೊರೆದಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಹೆಸರನ್ನು ಬದಲಾಯಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಖ್ಯಾತ ಚಿತ್ರನಟಿ ನರ್ಗೀಸ್ ದತ್ ಅವರ ಹೆಸರನ್ನು ಕೈಬಿಡಲಾಗಿದೆ. ಇನ್ನು ಚೊಚ್ಚಲ ನಿರ್ದೇಶಕಿ ಪ್ರಶಸ್ತಿಯಲ್ಲಿ ಇಂದಿರಾಗಾಂಧಿ ಹೆಸರು ಕಾಣಿಸುವುದಿಲ್ಲ. ನರ್ಗಿಸ್ ದತ್ ಅವರಿಗೆ ರಾಷ್ಟ್ರೀಯ ಏಕೀಕರಣ ಚಿತ್ರಕ್ಕಾಗಿ ಪ್ರಶಸ್ತಿ ನೀಡಲಾಯಿತು. ನಿರ್ದೇಶಕ ಪ್ರಿಯದರ್ಶನ್ ಅವರನ್ನೊಳಗೊಂಡ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ ಈ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸಕಾಲಿಕ ಸುಧಾರಣೆಗಳನ್ನು ತರಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೀರಜಾ ಶೇಖರ್ ಅವರ ಅಧ್ಯಕ್ಷತೆಯಲ್ಲಿ ಪ್ರಿಯದರ್ಶನ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಅಧಿಸೂಚನೆಯನ್ನು ಬಿಡುಗಡೆ ಮಾಡಿದಾಗ ಬದಲಾವಣೆಗಳನ್ನು ಘೋಷಿಸಲಾಯಿತು. ಇದೇ ವೇಳೆ ದಾದಾಸಾಹಿಬ್ ಫಾಲ್ಕೆ ಪ್ರಶಸ್ತಿಯ ನಗದು ಬಹುಮಾನದಲ್ಲೂ ಬದಲಾವಣೆ ಮಾಡಲಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಪ್ರತಿ ವರ್ಷ ಭಾರತೀಯ ಚಿತ್ರರಂಗದ ಪ್ರತಿಭೆಗಳಿಗೆ ನೀಡುವ…
೧.ಕರ್ನಾಟಕ ಸರಕಾರ ವಿಶ್ವ ಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ನಾವಿದನ್ನು ಸಂಭ್ರಮದಿಂದ ಆಚರಿಸಬೇಕಾಗಿದೆ. ೨. ಸರಕಾರ ಆಯ್ಕೆ ಮಾಡಿದ ಭಾವಚಿತ್ರ ಅತ್ಯಂತ ಸೂಕ್ತವಾದುದು. ವಚನಗಳ ರಚನೆಯ ಮೂಲಕವೆ ಬಸವಣ್ಣನವರು ಅಭೂತಪೂರ್ವ ಕ್ರಾಂತಿ ಮಾಡಿದವರು. ೩. ಇಷ್ಟು ದಿನ ಬಸವಣ್ಣ ಬಹುತೇಕ ಮಠಗಳಿಗೆ ಬಂಡವಾಳವಾಗಿದ್ದರು. ಇದೀಗ ಬಸವಣ್ಣ ಸಾರ್ವಜನಿಕರ ಸ್ವತ್ತು. ೪. ಜಾತಿ ಮತ ಪಂಥಗಳನ್ನು ಮೀರಿ ಸಕಲ ಜೀವಾತ್ಮರಿಗೆ ಲೇಸ ಬಯಸಿದವರು ಶರಣರು. ೫. ಪ್ರಜಾಪ್ರಭುತ್ವದ ಎಲ್ಲಾ ಮೌಲ್ಯಗಳು ವಚನಗಳಲ್ಲಿ ಅಡಕವಾಗಿವೆ. ಸಂವಿಧಾನಕ್ಕಿಂತಲೂ ಹೆಚ್ಚು ಸ್ಪಂದನಾರ್ಹ ಗುಣ ವಚನಗಳಲ್ಲಿವೆ. ೬. ನೈತಿಕ, ಮಾನಸಿಕ, ಬದಲಾವಣೆಗೆ ; ವೈಚಾರಿಕ, ವೈಜ್ಞಾನಿಕ ಚಿಂತನೆಗೆ ವಚನಗಳು ಪ್ರೇರಕ ಶಕ್ತಿಯಾಗಿವೆ. ೭. ಬಸವಣ್ಣನವರೆಂದು ಇನ್ನೇನು ಅಲ್ಲ. ಅದೊಂದು ನೀಲಿ ಆಗಸ. ಅಲ್ಲಿ ಏನೂ ಇಲ್ಲ. ಅಲ್ಲಿ ಎಲ್ಲವೂ ಇವೆ. ಇರುವ- ಇಲ್ಲದರ ನಡುವೆಯೆ ನಮ್ಮ ಜೀವನವಿದೆ. ೮. ದಿ. ೧೭ ರಂದು ಸರಕಾರದ ಜೊತೆಗೆ ನಾವೂ ನಮ್ಮ ಮನೆ ಮನೆಗಳಲ್ಲಿ ಬಸವಣ್ಣನವರ ಭಾವ…