Subscribe to Updates
Get the latest creative news from FooBar about art, design and business.
- ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ
- ಕೋಡಿಗೇನಹಳ್ಳಿ: ಗ್ರಾಮೀಣ ಭಾಗದಲ್ಲೂ ಔಷಧ ಅಂಗಡಿಗಳು ಬಂದ್: ಬೇಡಿಕೆಗಳೇನು?
- ಸರ್ಕಾರಿ ಗೋಮಾಳ ತೆರವಿಗೆ ಗ್ರಾಮಸ್ಥರ ಆಗ್ರಹ: 4.28 ಎಕರೆ ಬದಲು 18.27 ಎಕರೆ ಗೋಮಾಳ ಅಕ್ರಮ ಖಾತೆ ಆರೋಪ
- ಕೊರಟಗೆರೆ: ದ್ವಿಚಕ್ರ ವಾಹನದ ಮೇಲೆ ಬಿದ್ದ ಗೂಡ್ಸ್ ವಾಹನ: ಸವಾರ ಸಾವು
- ತುಮಕೂರು ಜಿಲ್ಲೆಯ ಅಸ್ತಿತ್ವ ಕಳೆಯಬೇಡಿ: ಬೆಂಗಳೂರು ಉತ್ತರ ಜಿಲ್ಲೆ ಪ್ರಸ್ತಾಪಕ್ಕೆ ಬಿಜೆಪಿ ವಿರೋಧ
- ತುಮಕೂರು: ಅಕ್ರಮ ಶೆಡ್ ನಿರ್ಮಿಸಲು ಹೊರಟಿರುವವರನ್ನು ತೆರವುಗೊಳಿಸಲು ಮನವಿ
- ಕುಣಿಗಲ್: ಗ್ರಾಪಂ ಸ್ವತ್ತಿನಲ್ಲಿ ಅಕ್ರಮ ಮಳಿಗೆ: ಒತ್ತುವರಿ ಜಾಗದಲ್ಲಿ ಗ್ರಂಥಾಲಯಕ್ಕೆ ದಲಿತ ಸಂಘಟನೆ ಆಗ್ರಹ
- ತುಮಕೂರು: ಕಂಪ್ಯೂಟರ್ ಡಿಟಿಪಿ ತರಬೇತಿಗೆ ಅರ್ಜಿ ಆಹ್ವಾನ
Author: admin
ತಿಪಟೂರು: ವಿನಾಯಕ ನಗರದ ರಾಘವೇಂದ್ರ ಬಡಾವಣೆಯ ಅಯೋಧ್ಯ ಶ್ರೀ ರಾಮ ವಿದ್ಯಾರ್ಥಿ ಮತ್ತು ನಾಗರೀಕರ ಬಳಗದ ವತಿಯಿಂದ ಅಯೋಧ್ಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆ, ವಿಶೇಷ ಪೂಜೆ, ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಬಡಾವಣೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ನಗರಸಭಾ ಸದಸ್ಯ ಸಂಗಮೇಶ್ (ಕೇಬಲ್), ಸಾಹಿತಿ ದಿಬ್ಬದಹಳ್ಳಿ ಶ್ಯಾಮ ಸುಂದರ್ ಹಾಗೂ ಚಿತ್ರಾ ಗ್ಲಾಸ್ ನ ತೋಂಟದಾರ್ಯ ಉದ್ಘಾಟಿಸಿ, ಮಾತನಾಡಿದರು. ಕೃಷ್ಣಪ್ರಸಾದ್, ಶಿವಾಜಿ, ಸಂಗೀತ ರಮೇಶ್, ಉತ್ತಮ್ ಮತ್ತು ರಂಗನಾಥ್ ಸೇರಿದಂತೆ ಬಡಾವಣೆಯ ಮಹಿಳೆಯರು,ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: ಆನಂದ ತಿಪಟೂರು
ತುಮಕೂರು: ನಗರದ ನಜರಾಬಾದ್ ಬಡಾವಣೆ ವಾಸಿ ಆಝಮ್ ಪಾಷಾ (37) ಮೀಟರ್ ಬಡ್ಡಿ ದಂಧೆಕೋರರ ಕಾಟಲ್ಕೆ ಬೇಸತ್ತು ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತುಮಕೂರಿನ ಸದಾಶಿವನಗರದಲ್ಲಿ 2 ತಿಂಗಳ ಹಿಂದೆ ಒಂದೇ ಕುಟುಂಬದ ಐದು ಮಂದಿ ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು, ಮೀಟರ್ ಬಡ್ಡಿ ದಂಧೆಕೋರರ ದಬ್ಬಾಳಿಕೆಗೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇನ್ನು ನಗರದಲ್ಲಿ ನಿರಂತರವಾಗಿ ಒಂದಲ್ಲ ಒಂದು ಮೀಟರ್ ಬಡ್ಡಿ ದಂಧೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆತ್ಮಹತ್ಯೆಗೆ ಯತ್ನಿಸಿದ ನಜರಾಬಾದ್ ಬಡಾವಣೆಯ ನಿವಾಸಿ ಅಝಮ್ ಪಾಷಾ, ಖಾಸಗಿಯಾಗಿ ಕೈಸಾಲವನ್ನು ಪಡೆದಿದ್ದು ಮರು ಪಾವತಿಸಲಾರದೇ ಈ ನಿರ್ಧಾರ ತೆಗೆದು ಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಮೀಟರ್ ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ…
ಯುವಕನೊಬ್ಬ ತೃತೀಯಲಿಂಗಿಯೊಬ್ಬಳನ್ನು ಮದುವೆಯಾಗಿರುವ ಘಟನೆ ತೆಲಂಗಾಣ ಖಮ್ಮಂ ಜಿಲ್ಲೆಯ ಎಂಕೂರಿನಲ್ಲಿ ನಡೆದಿದೆ. ಎನ್ನೂರಿನ ತೃತೀಯಲಿಂಗಿ ನಕ್ಷತ್ರ ಮತ್ತು ಆಂಧ್ರದ ಎನ್ ಟಿಆರ್ ಜಿಲ್ಲೆಯ ವಿಸ್ಸನ್ನಪೇಟೆಯ ಯುವಕ ನಂದು ಇನ್ ಸ್ಟಾ ಪರಿಚಯವಾಗಿ, ಇದು ಪ್ರೀತಿಗೆ ತಿರುಗಿತ್ತು. ಈ ವಿಷಯವನ್ನು ತೃತೀಯಲಿಂಗಿ ಸಮುದಾಯದವರಿಗೆ ತಿಳಿಸಿದಾಗ, ಅವರು ಈ ಮದುವೆಗೆ ಸಹಮತವನ್ನು ನೀಡಿದ್ದು, ಏಣಕೂರು ಮಂಡಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಅದ್ಧೂರಿ ವಿವಾಹವಾಗಿದ್ದಾರೆ.
ಪುಂಗನೂರು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಚಿತ್ತೂರು ಜಿಲ್ಲೆಯ ಕೆಲವು ಭಾಗಗಳಿಗೆ ಸ್ಥಳೀಯವಾಗಿರುವ ಕುಬ್ಬ ತಳಿಯಾಗಿದೆ. ಅವುಗಳನ್ನು ವಿಶ್ವದ ಅತ್ಯಂತ ಕಡಿಮೆ ಗೂನು ಜಾನುವಾರು ಎಂದು ಪರಿಗಣಿಸಲಾಗಿದೆ. ಇವುಗಳು ನೋಡಲು ಚಿಕ್ಕಾದಾಗಿದ್ದು, ಸುಲಭವಾಗಿ ಮನೆಯಲ್ಲಿ ಸಾಕಬಹುದಾಗಿದೆ. ಪುಂಗನೂರು ಹಸುಗಳು ಬಿಳಿ, ಬೂದು, ತಿಳಿ ಕಂದು ಅಥವಾ ಗಾಢ ಕಂದು ಬಣ್ಣದ್ದಾಗಿರಬಹುದು. ಅವು 10-15 ಸೆಂ.ಮೀ. ಉದ್ದದ ಸಣ್ಣ, ಅರ್ಧಚಂದ್ರಾಕಾರದ ಕೊಂಬುಗಳನ್ನು ಹೊಂದಿರುತ್ತವೆ. ಹೆಣ್ಣು ಕೂಡ ಸ್ವಲ್ಪ ಉದ್ದವಾದ ಕೊಂಬುಗಳನ್ನು ಹೊಂದಿರುತ್ತದೆ.
ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಇದೇ 25 ರಂದು ಆರಂಭವಾಗಲಿದೆ. ಈ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಟ್ರೀತ್ ಬುಮ್ರಾ, ಅವೇಶ್ ಖಾನ್.
ಇಂದು 545 ಪಿಎಸ್ ಐ ನೇಮಕಾತಿ ಮರು ಪರೀಕ್ಷಾ ಕೇಂದ್ರಗಳ ಸುತ್ತಾ ಮುತ್ತಾ 200 ಮೀಟರ್ ವ್ಯಾಪ್ತಿಯಲ್ಲಿ(144 ಸೆಕ್ಷನ್) ನಿಷೇಧಾಜ್ಞೆ ಜಾರಿ ಮಾಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ರಿಂದ ಆದೇಶ ಹೊರಡಿಸಲಾಗಿದೆ. ಪರೀಕ್ಷೆ ವೇಳೆ ಯಾವುದೇ ಪರೀಕ್ಷಾ ಅಕ್ರಮ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿ ಕಮಿಷನರ್ ಆದೇಶಿಸಿದ್ದಾರೆ. ಇಂದು ಬೆಂಗಳೂರು ನಗರದ 117 ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನೂ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗುವುದು. ಪರೀಕ್ಷಾ ಕೇಂದ್ರಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ನೀಡಲಿದ್ದಾರೆ. ಅಭ್ಯರ್ಥಿಗಳು ವಸ್ತ್ರ ಸಂಹಿತೆಯಲ್ಲಿನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲೆಕ್ಟ್ರಾನಿಕ್ ಸಾಧನಗಳನ್ನು ತರುವುದನ್ನಾಗಲಿ, ಮೊಬೈಲ್ ಇಟ್ಟುಕೊಂಡು ಬರುವುದನ್ನಾಗಲಿ ನಿಷೇಧಿಸಲಾಗಿದೆ. ಪೊಲೀಸರು ಪರೀಕ್ಷಾ ಕೇಂದ್ರಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುವವರು, ಗಾಳಿಸುದ್ದಿ ಹಬ್ಬಿಸುವ ಕಿಡಿಗೇಡಿಗಳು ಮತ್ತು ಜೆರಾಕ್ಸ್ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.
ಅಮೆರಿಕದ ಚಿಕಾಗೋದಲ್ಲಿ ನಡೆದ ಮೂರು ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಿಂಸಾಚಾರಕ್ಕೆ ಕಾರಣ ಸ್ಪಷ್ಟವಾಗಿಲ್ಲ. ದಾಳಿಕೋರ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಂಟು ಜನರು ತಮ್ಮ ಮನೆಗಳಲ್ಲಿ ಕೊಲ್ಲಲ್ಪಟ್ಟರು. ಎರಡು ದಿನಗಳ ನಂತರ ಶವಗಳು ಪತ್ತೆಯಾಗಿವೆ. ಭಾನುವಾರ ಒಬ್ಬರ ಶವ ಅವರ ಮನೆಯಲ್ಲಿ ಪತ್ತೆಯಾಗಿದ್ದು, ಸೋಮವಾರ ಎರಡು ಮನೆಗಳಲ್ಲಿ ಏಳು ಮಂದಿಯ ಶವ ಪತ್ತೆಯಾಗಿದೆ. ಶಂಕಿತ ವ್ಯಕ್ತಿ ಶಸ್ತ್ರಸಜ್ಜಿತನಾಗಿದ್ದು, ಜಾಗರೂಕರಾಗಿರಬೇಕು ಎಂದು ಪ್ರದೇಶದ ನಿವಾಸಿಗಳಿಗೆ ಸೂಚಿಸಲಾಗಿದೆ. ಇವರು 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸ್ ಮುಖ್ಯಸ್ಥ ವಿಲಿಯಂ ಇವಾನ್ಸ್ ಅವರು “ಈ ಅವಧಿಯಲ್ಲಿ ನಾನು ಎದುರಿಸಿದ ಅತ್ಯಂತ ಘೋರ ಅಪರಾಧ” ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ವೇಳೆ ಹೃದಯಾಘಾತಕ್ಕೊಳಗಾದ ರಾಮ ಭಕ್ತನ ನೆರವಿಗೆ ಭಾರತೀಯ ವಾಯುಸೇನೆ ಮುಂದಾಗಿದೆ. ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಸಮಯೋಚಿತ ಮಧ್ಯಪ್ರವೇಶದಿಂದ ಭಕ್ತನ ಪ್ರಾಣ ಉಳಿಯಿತು. ರಾಮಕೃಷ್ಣ ಶ್ರೀವಾಸ್ತವ(65) ದೇವಸ್ಥಾನದ ಸಂಕೀರ್ಣದೊಳಗೆ ಕುಸಿದು ಬಿದ್ದಿದ್ದಾರೆ. ವಿಂಗ್ ಕಮಾಂಡರ್ ಮನೀಶ್ ಗುಪ್ತಾ ನೇತೃತ್ವದ ‘ಭೀಷ್‌ಎಂ’ ಕ್ಯೂಬ್ ತಂಡವು ಅವರನ್ನು ಅಲ್ಲಿಂದ ಸ್ಥಳಾಂತರಿಸಿತು ಮತ್ತು ನಿಮಿಷಗಳಲ್ಲಿ ಪ್ರಥಮ ಚಿಕಿತ್ಸೆ ನೀಡಿತು. ನಂತರ ಹೆಚ್ಚಿನ ವೀಕ್ಷಣೆ ಮತ್ತು ವಿಶೇಷ ಆರೈಕೆಗಾಗಿ ಅವರನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಿರ್ಣಾಯಕ ಸುವರ್ಣ ಯುಗದಲ್ಲಿ ತಕ್ಷಣದ ಚಿಕಿತ್ಸೆಯನ್ನು ಖಚಿತಪಡಿಸಿಕೊಂಡಿದ್ದರಿಂದ ಮಾತ್ರ ಜೀವಗಳನ್ನು ಉಳಿಸಲಾಗಿದೆ ಎಂದು ವೈದ್ಯರು ಹೇಳಿದರು. ಆರಂಭಿಕ ಮೌಲ್ಯಮಾಪನದಲ್ಲಿ, ಶ್ರೀವಾಸ್ತವ ಅವರ ರಕ್ತದೊತ್ತಡ ಅಪಾಯಕಾರಿಯಾಗಿ ಹೆಚ್ಚಿರುವುದು ಕಂಡುಬಂದಿದೆ. 65 ವರ್ಷದ ವ್ಯಕ್ತಿಯ ಸ್ಥಿತಿ ಸುಧಾರಿಸಿದೆ ಎಂದು ವಾಯುಪಡೆಯ ಹೇಳಿಕೆ ತಿಳಿಸಿದೆ.
ಸೂರ್ಯೋದಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಒಂದು ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಗುರಿಯನ್ನು ಹೊಂದಿರುವ ಯೋಜನೆಯನ್ನು ಘೋಷಿಸಲಾಗಿದೆ. ಅಯೋಧ್ಯೆಯಿಂದ ವಾಪಸಾದ ಬಳಿಕ ತಾವು ಕೈಗೊಳ್ಳಲಿರುವ ಮೊದಲ ನಿರ್ಧಾರ ಇದು ಎಂದು ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದ್ದಾರೆ. ಮನೆಯ ವಿದ್ಯುತ್ ಬಿಲ್ ಗಳನ್ನು ಕಡಿಮೆ ಮಾಡುವುದು ಮತ್ತು ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವುದು ಯೋಜನೆಯ ಗುರಿಯಾಗಿದೆ ಎಂದು ಪ್ರಧಾನಿ ವಿವರಿಸಿದರು. ಪ್ರಪಂಚದಾದ್ಯಂತದ ಭಕ್ತರು ಯಾವಾಗಲೂ ಸೂರ್ಯವಂಶಿಯಾದ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಇಂದು, ಅಯೋಧ್ಯೆಯಲ್ಲಿ ಅಭಿಷೇಕದ ಶುಭ ಸಂದರ್ಭದಲ್ಲಿ, ಸೂರ್ಯೋದಯ ಯೋಜನೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದು ನರೇಂದ್ರ ಮೋದಿ ಹೇಳಿದರು. ಅಯೋಧ್ಯೆಯ ಅಧಿದೇವತೆ ಈ ಯೋಜನೆಯ ಕುರಿತು ಸರ್ಕಾರದ ಚಿಂತನೆಗಳಿಗೆ ಹೆಚ್ಚಿನ ಬಲವನ್ನು ನೀಡಿದೆ ಎಂದು ಮೋದಿ ಹೇಳಿದರು.
ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕು ಯರೇಕುಪ್ಪಿ ಗ್ರಾಮದಲ್ಲಿ ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯವಾಗಿ ಯರೇಕುಪ್ಪಿ ಗ್ರಾಮದಲ್ಲಿ ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಕಾರ್ಯಕ್ರಮ ನೆರವೇರಿತ್ತು. ನಂತರ ಶ್ರೀ ಪ್ರಭು ಶ್ರೀರಾಮಚಂದ್ರನ ಭಾವಚಿತ್ರ ಮೆರವಣಿಗೆ ನಡೆಸಲಾಯಿತು . ಮೆರವಣಿಗೆಯಲ್ಲಿ ಶ್ರೀ ದುರ್ಗಾದೇವಿ ಹಲಗಿ ಮೇಳ, ಶ್ರೀ ವೀರಭದ್ರೇಶ್ವರ ಸಮಾಳ, ಶ್ರೀ ಮಾರುತಿ ಹವ್ಯಾಸಿ ಭಜನಾ ಸಂಘ, ಶ್ರೀ ಮಾರುತಿ ಸೌಂಡ್ಸ್ , ಮತ್ತು ಎಲ್ಲಾ ಶ್ರೀರಾಮ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಶ್ರೀ ಪ್ರಭು ಶ್ರೀರಾಮಚಂದ್ರನ ಪ್ರಸಾದ ನಡೆಯಿತು . ಸಾಯಂಕಾಲ ದೀಪೋತ್ಸವ ಹಾಗೂ ಶ್ರೀ ಕಡಕೇರಮ್ಮ ದೇವಿ ಕೋಲಾಟ ಮೇಳ ಹಾಗೂ ಶಾಲಾ ಮಕ್ಕಳ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯರೇಕುಪ್ಪಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಪಾಲ್ಗೊಂಡು ಜೈ ಶ್ರೀ ರಾಮ್ ಎಂದು ಘೋಷಣೆ ಮೊಳಗಿಸಿದ್ದರು. ವರದಿ: ಮಂಜು ಶ್ರವಣೂರು.