Author: admin

ಮೈಸೂರು: ಮೈಸೂರಿನಲ್ಲಿ ಹೆತ್ತ ತಾಯಿ, ಸಹೋದರಿಯನ್ನು ಕರೆಗೆ ತಳ್ಳಿ ಪಾಪಿ ಅಣ್ಣನೇ ಕೊಲೆ ಮಾಡಿರುವ ಘಟನೆ ನಡೆದಿದ್ದು, ಪ್ರೇಮಕತೆಯು ದುರಂತ ಅಂತ್ಯ ಕಂಡಿದೆ. ತನ್ನ ತಂಗಿ ಅನ್ಯಧರ್ಮೀಯ ಯುವಕನನ್ನು ಲವ್ ಮಾಡುತ್ತಿದ್ದಳೆಂಬ ಒಂದೇ ಕಾರಣಕ್ಕೆ ಅಣ್ಣನೊಬ್ಬ ಆಕೆಯೊಂದಿಗೆ ತನ್ನ ತಾಯಿಯನ್ನೂ ಕೆರೆಗೆ ತಳ್ಳಿ ಕೊಲೆಗೈದಿದ್ದಾನೆ. ಸಹೋದರಿ ಪ್ರೀತಿಗೆ ವಿರೋಧಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಮೃತ ತಾಯಿ ಅನಿತಾ(43) ಹಾಗೂ ಸಹೋದರಿ ಧನುಶ್ರೀ (19) ಯನ್ನು ಮರೂರಿನ ಕೆರೆಯಲ್ಲಿ ತಳ್ಳಿ ಪಾಪಿ ಅಣ್ಣ ನಿತಿನ್ ಹತ್ಯೆ ಮಾಡಿದ್ದಾನೆ. ಧನುಶ್ರೀ ಮತ್ತು ಅನಿತಾರನ್ನು ನೆಂಟರ ಮನೆಗೆ ಕರೆದೊಯ್ಯುವುದಾಗಿ ಹೇಳಿ ಕೆರೆದಡಕ್ಕೆ ಕರೆದುಕೊಂಡ ಬಂದ ನಿತಿನ್ ಇಬ್ಬರನ್ನೂ ಕೆರೆಗೆ ನೂಕಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಇಬ್ಬರ ಮೃತದೇಹವನ್ನು ಕೆರೆಯಿಂದ ಹೊರಗೆ ತರಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಳ್ಳಾರಿ: ವಿವಾಹಿತ ಪುರುಷನಿಗೆ ವಿವಾಹಿತ ಮಹಿಳೆ ಮೇಲೆ ಲವ್ ಶುರುವಾಗಿ, ಗಂಡನಿಂದ ದೂರ ಉಳಿದು ಪ್ರಿಯಕರನೊಂದಿಗೆ ನೆಲೆಸಿದ್ದಳು. ಪ್ರಿಯಕರನೊಂದಿಗೆ ಇದ್ದುಕೊಂಡು ಭರ್ಜರಿ ಹಣ ಖರ್ಚು ಮಾಡಿ ಕೊನೆಗೆ ಮಹಿಳೆ ಮರಳಿ ಪತಿಯೊಂದಿಗೆ ಹಿಂತಿರುಗಿ ಹೋಗಿದ್ದಾಳೆ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದವರು ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದರೂ, ರೊಟ್ಟಿ ತರಲೆಂದು ಹೋದಾಗ ರೊಟ್ಟಿ ಮಾಡುವ ಸುಜಾತಾಳ ಮೇಲೆ ಲವ್ ಶುರುವಾಗಿ ಹೋಯ್ತು. ಆಕೆಯೂ ವಿವಾಹಿತಳಾಗಿದ್ದು, ಆಕೆಗೆ ಒಂದು ಮಗುವಿದೆ. ಒಂದು ರೊಟ್ಟಿಯಿಂದ ಶುರುವಾದ ಪ್ರೀತಿ ಪ್ರೇಮದಿಂದಾಗಿ ಸಜಾತ ತನ್ನ ಗಂಡನನ್ನು ಬಿಟ್ಟು ಸೌದತ್ತಿ ಜೊತೆ ಓಡಿ ಹೋಗಿ ಕಳೆದ ಆರು ತಿಂಗಳಿನಿಂದ ಬಳ್ಳಾರಿಯಲ್ಲಿ ನೆಲೆಸಿದ್ದರು. ಇತ್ತ, ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಮಹೇಶ್ ಮಹಾರಾಷ್ಟ್ರ ಸಾಂಗ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಅದರಂತೆ ಮಹಿಳೆಯನ್ನು ಪ್ರಿಯಕರನ ಜೊತೆ ಪತ್ತೆ ಹಚ್ಚಿದ ಸಾಂಗ್ಲಿ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದಾರೆ. ಹೀಗೆ ಪ್ರಿಯಕರನ ಜೊತೆಗಿದ್ದ ಸುಜಾತ ಅಲ್ಲಿಗೆ ಇಲ್ಲಿಗೆ ಎಂದು ಸುತ್ತಾಡಿ, ಭರ್ಜರಿ ಹಣ…

Read More

ಮುಂಬೈ: ಪುಣೆಯ ಧವಲ್ಪುರಿ ಫಾಟಾ ಬಳಿ ರಾತ್ರಿ 2:30ಕ್ಕೆ ಅಹ್ಮದ್ನಗರ-ಕಲ್ಯಾಣ ಹೆದ್ದಾರಿಯಲ್ಲಿ ತಡರಾತ್ರಿ ಟ್ರಾಕ್ಟರ್, ಸರ್ಕಾರಿ ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ನಂತರ ಆರು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಐವರನ್ನು ಪಾರ್ನರ್ ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೆ, ಒಬ್ಬರನ್ನು ಅಹ್ಮದ್ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ವೇಳೆ ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡಿದ್ದಾರೆ. ಮೃತರ ಗುರುತು ಪತ್ತೆ ಮಾಡಲಾಗುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Read More

ತುಮಕೂರು: ತುಮಕೂರಿನ ಸಿದ್ದಗಂಗಾ ಮಠದ ತಪ್ಪಲಿನಲ್ಲಿರುವ ರಾಮದೇವರ ಬೆಟ್ಟದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಸುಮಾರು ಕಿಲೋಮೀಟರ್ಗಟ್ಟಲೆ ಬೆಂಕಿ ಆವರಿಸುತ್ತಿದ್ದು ಬೆಟ್ಟದ ಸಮೀಪ ಇರುವ ಜನರು ಭಯಭೀತಿಯಲ್ಲಿದ್ದಾರೆ. ಕಿಡಿಗೇಡಿಗಳಿಂದ ರಾಮದೇವರ ಬೆಟ್ಟಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ಭಾರಿ ಶಂಕೆ ವ್ಯಕ್ತವಾಗಿದೆ. ಸ್ಥಳೀಯರಿಂದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ದೊರೆತಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಯಿಸಿದ್ದಾರೆ. ಅಗ್ನಿಶಾಮಕ ಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ತುಮಕೂರು: ಬಂಡೆ ಬ್ಲಾಸ್ಟ್ ಮಾಡುವ ವೇಳೆ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಧಾರುಣವಾಗಿ ಸಾವಿಗೀಡಾಗಿರುವ ಘಟನೆ ತುಮಕೂರು ತಾಲ್ಲೂಕು ಕೌತಮಾರನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಬಿಹಾರ ಮೂಲದ ಮೊಹಮ್ಮದ್ ಅಬೂಲ್(29) ಹಾಗೂ ಛತ್ತೀಸ್ಗಡ ಮೂಲದ ಮೋನು (24) ಎಂದು ಗುರುತಿಸಲಾಗಿದೆ. ಕೌತಮಾರನಹಳ್ಳಿ ಸಮೀಪವಿರುವ ಕರ್ನಾಟಕ ಸ್ಟೋನ್ ಕ್ರಷರ್ನಲ್ಲಿ ಬಂಡೆ ಸ್ಫೋಟಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತರಾಗಿದ್ದು, ಮತ್ತೊಬ್ಬನಿಗೆ ತೀವ ಗಾಯಗಳಾಗಿದೆ. ತುಮಕೂರಿನ ಹನೀಫ್ ಎಂಬುವವರಿಗೆ ಸೇರಿದ ಕರ್ನಾಟಕ ಸ್ಟೋನ್ ಕ್ರಷರ್ನಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಬಡಪಾಯಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿ 30 ಕ್ಕೂ ಹೆಚ್ಚು ಕ್ರಷರ್ ಗಳಿದ್ದು ಬಹುತೇಕ ಹೊರರಾಜ್ಯದ ಕಾರ್ಮಿಕರೇ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ, ಆದರೆ ಬಹುತೇಕ ಕ್ರಷರ್ ಮಾಲೀಕರು ಸುರಕ್ಷತಾ ಸಾಧನ ನೀಡುವುದೇ ಇಲ್ಲ,ಅಲ್ಲದೆ ಕಾರ್ಮಿಕ ಇಲಾಖೆಯೂ ಸಹ ಈಬಗ್ಗೆ ಗಮನ ಹರಿಸುವುದಿಲ್ಲ,ಗಣಿ ಮತ್ತು ಭೂ ವಿಜ್ಙಾನ ಇಲಾಖೆ…

Read More

ಬೆಂಗಳೂರು: ಬೆಂಗಳೂರಿನ ವೈಟ್​ ಫೀಲ್ಡ್​ ನಲ್ಲಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್​ ನನ್ನು ಪೊಲೀಸರು ಹೈದರಾಬಾದ್‌ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ಮಗನನ್ನು ಪತ್ತೆ ಹಚ್ಚಿದ ನಂತರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಹಾಗೂ ಬಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದಾರೆ. ಟ್ಯೂಷನ್ ತರಗತಿ ಹೋಗಿದ್ದ ಬಾಲಕ ಪರಿಣವ್ ನಾಪತ್ತೆಯಾಗಿದ್ದ. ತಂದೆ ತಡವಾಗಿ ಟ್ಯೂಷನ್ ತರಗತಿ ನಡೆಯತ್ತಿದ್ದಲ್ಲಿಗೆ ಬಂದು ವಿಚಾರಿಸಿದಾಗ ಬಾಲಕ ಅಲ್ಲಿಂದ ಟ್ಯೂಷನ್ ಮುಗಿಸಿ ತೆರಳಿರುವುದು ಗೊತ್ತಾಗಿತ್ತು ಎನ್ನಲಾಗಿದೆ. ಅಂದಿನಿಂದ ಆತ ನಾಪತ್ತೆಯಾಗಿದ್ದ ಹಾಗೂ ಮಾರತ್ತಹಳ್ಳಿ, ಯಮಲೂರು ಮತ್ತು ಮೆಜೆಸ್ಟಿಕ್‌ ನಲ್ಲಿರುವ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಾಲಕನ ಚಲನವಲನಗಳು ಪತ್ತೆಯಾಗಿದ್ದವು. ಹುಡುಗನ ಬಳಿ ಹಣವಿರಲಿಲ್ಲ. ಹಣಕ್ಕಾಗಿ ಆತ ವ್ಯಕ್ತಿಯೊಬ್ಬನಿಗೆ ತನ್ನ ಮಾರ್ಕರ್ ಪೆನ್ ಮಾರಾಟ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಕಂಡುಬಂದಿದೆ ಎಂದು ಪರಿಣವ್ ತಂದೆ ಸುಕೇಶ್ ತಿಳಿಸಿದ್ದಾರೆ. ಪರಿಣವ್ ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ. ಆತ ಟ್ಯೂಷನ್ ಸೆಂಟರ್​ ನಿಂದ ಮಾರತ್ತಹಳ್ಳಿವರೆಗೆ ನಡೆದು ಬಂದಿದ್ದು, ನಂತರ…

Read More

ಬೀದರ್: ಜಿಲ್ಲೆಯ ಕೌಡಗಾಂವ ಗ್ರಾಮದ ಮೈನ್ ರೋಡ್ ನಲ್ಲಿ ಸುಮಾರು 42 ವರ್ಷಗಳಿಂದ ಇದ್ದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಹೈವೆ ರಸ್ತೆ ನಿರ್ಮಾಣಕ್ಕಾಗಿ 2 ವರ್ಷಗಳ ಹಿಂದೆ ತೆರವುಗೊಳಿಸಲಾಗಿತ್ತು. ತೆರವುಗೊಳಿಸುವ ವೇಳೆ ಮತ್ತೆ ಮೂರ್ತಿ ನಿರ್ಮಿಸುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೂ ಪ್ರತಿಮೆ ನಿರ್ಮಾಣ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಮೇಲ್ಜಾತಿಯವರ ಮುಲಾಜಿಗೊಳಪಟ್ಟು ಅಧಿಕಾರಿಗಳು ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಮೆ ತೆರವು ನಡೆಸುವ ವೇಳೆ ಔರಾದ್ ತಹಶೀಲ್ದಾರ್ ಮತ್ತೆ ಪ್ರತಿಮೆಯನ್ನ ಸ್ಥಾಪನೆ ಮಾಡೋದಾಗಿ ಹೇಳಿದ್ದರು. ಆದ್ರೆ ಇದೀಗ ಪ್ರತಿಮೆ ನಿರ್ಮಾಣ ಮಾಡದೇ ಇಲ್ಲಿನ ಜನತೆಯ ಭಾವನೆಗಳ ಜೊತೆಗೆ ಆಟವಾಡಿದ್ದಾರೆ. ಈ ಹಿನ್ನೆಲೆಯಲ್ಲಿ 20/01/2024 ಎಂದು ಸಮಾಜದ ಹಿರಿಯರು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಈ ಸ್ಥಳದಲ್ಲಿ ಸ್ಥಾಪಿಸಿದ್ದು, ಇದಕ್ಕೆ ಇಲ್ಲಿನ ಸವರ್ಣೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸ್ಥಳಕ್ಕೆ ಬೀದರ್ ಜಿಲ್ಲೆಯ A C, DSP ಔರಾದ…

Read More

ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಲಿ ಅಂಗಾಂಗ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ಹೊರ ವಲಯದ ಮತ್ತಾವರ ಬಳಿ ಹುಲಿ ತಲೆ, ನಾಲ್ಕು ಉಗುರು, ಎರಡು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ವಿಚಾರ ತಿಳಿದು DFO ರಮೇಶ್ ಬಾಬು ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ, ಹುಲಿ ಅಂಗಾಂಗ ಮಾರಾಟ ಮಾಡಲು ಮುಂದಾಗಿದ್ದ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಸತೀಶ್, ಚಂದ್ರೇಗೌಡ ಎಂಬವರನ್ನು ಬಂಧಿಸಿದ್ದಾರೆ.

Read More

ರಾಜ್ಯ ಸರ್ಕಾರ 6 ತಿಂಗಳಿನಲ್ಲಿ ಎರಡನೇ ಬಾರಿಗೆ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಲು ಸಜ್ಜಾಗಿದೆ. ಸರ್ಕಾರದ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ತೆರಿಗೆ ಹೆಚ್ಚಿಸಲಾಗುತ್ತಿದೆ ಎಂದು ಚರ್ಚೆಗಳಾಗುತ್ತಿವೆ. ಗ್ಯಾರಂಟಿ ಯೋಜನೆಗಳಿಗೆ ಕೋಟಿ, ಕೋಟಿ ಹಣದ ಅವಶ್ಯಕತೆಯಿದ್ದು, ಈ ಹಣವನ್ನು ಹೊಂದಾಣಿಕೆ ಮಾಡಲು ಸರ್ಕಾರ ತೆರಿಗೆ ಹೆಚ್ಚಳಕ್ಕೆ ಮುಂದಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

Read More

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಅಸ್ಸಾಂನಲ್ಲಿ ಪೊಲೀಸರು ಭದ್ರತೆ ನೀಡುತ್ತಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಯಾತ್ರೆ ವಿರುದ್ಧ ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರು ಹಿಂಸಾಚಾರವನ್ನು ಅನಾವರಣಗೊಳಿಸಿದ್ದಾರೆ. ಸೋನಿತ್‌ಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ. ಅಸ್ಸಾಂ ಪೊಲೀಸರು ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡಿದ್ದಾರೆ. ಯಾರನ್ನೂ ಬಂಧಿಸಲು ಸಿದ್ಧರಿಲ್ಲ. ಯಾತ್ರೆಯ ಮೇಲಿನ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಮತ್ತು ಡಿಜಿಪಿಗೆ ಕೇಂದ್ರ ನಿರ್ದೇಶನ ನೀಡಬೇಕು ಎಂದು ಖರ್ಗೆ ಹೇಳಿದರು.

Read More