Author: admin

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ವ್ಯಾಲಂಕೇಣಿ ಬ್ರಿಡ್ಜ್ ಬಳಿ ವಾಟರ್ ಟ್ಯಾಂಕ್ ಲಾರಿ ಅತಿವೇಗವಾಗಿ ಬರುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ ಲಾರಿ ಚಾಲಕ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮಾಜಿ ಬಿಗ್ ಬಾಸ್  ಸ್ಪರ್ಧಿ ಆದಂ ಪಾಷಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಆದಂ ಪಾಷಾ ಕಳ್ಳಾಟ ಬಯಲಾಗಿದೆ. ಸುಳ್ಳು ಪ್ರಕರಣ ದಾಖಲಿಸಿದ ಆದಂ ಪಾಷಾ ವಿರುದ್ಧ ಇದೀಗ ಪೊಲೀಸರು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಎಫ್ ​ಐಆರ್ ದಾಖಲಿಸುವ ವೇಳೆ ಆದಂ ಪಾಷಾ ರಾಂಗ್ ನಂಬರ್ ಕೊಟ್ಟಿದ್ದು, ತನಿಖೆ ವೇಳೆ ಆದಂ ಪಾಷಾ ಸುಳ್ಳು ದೂರು ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆದಂ ಪಾಷಾ ಕಳ್ಳಾಟ ಬಯಲಾಗಿದೆ. ತನ್ನ ಬಟ್ಟೆಗಳನ್ನ ತಾನೇ ಹರಿದುಕೊಂಡು ಬಂದು ದೂರು ಕೊಟ್ಟಿರುವುದು ತಿಳಿದು ಬಂದಿದೆ. ಇದೀಗ ಸಿಸಿಟಿವಿಯ ಒರಜಿನಾಲಿಟಿ ರಿಪೋರ್ಟ್​ಗೆ ಪೊಲೀಸರು ಕಳಿಸಿದ್ದು, ಸುಳ್ಳು ದೂರು ಕೊಟ್ಟ…

Read More

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಲಾರಿ ಹಾಗೂ ಟಿಟಿ ವಾಹನ ನಡುವೆ ಭೀಕರ ಅಪಘಾತದಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡರಾತ್ರಿ ನಡೆದಿದೆ. ಮೃತರನ್ನು ಸೋಮಲಿಂಗಪ್ಪ (70), ಶಿವಲಿಂಗಪ್ಪ (66), ರಾಜೇಶ್ವರಿ ಎಂದು ಗುರುತಿಸಲಾಗಿದೆ. ಟಿಟಿಯಲ್ಲಿದ್ದವರು ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಟಿಟಿ ವಾಹನ ಹೋಗುತ್ತಿತ್ತು. ಕುಟುಂಬ ಸಮೇತ ವಾಪಸ್ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಟಿಟಿ ವಾಹನ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದೆ. ಇದರ ಪರಿಣಾಮ ಟಿಟಿ ವಾಹನ ಸಂಪೂರ್ಣ ಜಖಂಗೊಂಡಿದೆ. ಟಿಟಿ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ತುಮಕೂರು: ಕಳೆದ ಒಂದು ವರ್ಷದಿಂದ ಗೃಹ ಬಂಧನಕ್ಕೆ ಒಳಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸುತ್ತಿದ್ದ ವಯೋವೃದ್ಧೆಯನ್ನು ಪಾರು ಮಾಡಿರೋ ಘಟನೆ ನಡೆದಿದೆ. ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಮಹಿಳೆಯನ್ನು ಇರಿಸಲಾಗಿತ್ತು. 80 ವರ್ಷದ ವೃದ್ಧೆಯನ್ನು ಕಳೆದ ಒಂದು ವರ್ಷದಿಂದ ಮನೆಯಿಂದ ಹೊರಗೆ ಬಾರದಂತೆ ಮನೆಯ ಒಳಗೆ ಕೂಡಿಹಾಕಿ ಹಿಂಸೆ ನೀಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಸೊಸೆಯಿಂದ ಕಿರುಕುಳ ಉಂಟಾಗುತ್ತಿರುವ ಮತ್ತು ಮಗನೂ ಕುಡಿದು ಬಂದು ಗಲಾಟೆ ಮಾಡುತ್ತಿರುವ ಬಗ್ಗೆ ವೃದ್ಧೆ ಕೆಲವರ ಬಳಿ ಅಳಲು ತೋಡಿಕೊಂಡಿದ್ದರು. ಯಾರ ಬಳಿಯೂ ಸಹಕಾರ ದೊರೆತಿರಲಿಲ್ಲ. ನಗರ ಸಾಂತ್ವನ ಕೇಂದ್ರ, ಸಖಿ ಒನ್ ಸ್ಟಾಪ್ ಸೆಂಟರ್, ಹಿರಿಯ ನಾಗರಿಕರ ಸಹಾಯವಾಣಿಗೆ ಕಳೆದ ಐದು ದಿನಗಳ ಹಿಂದೆ ವಿಷಯ ತಲುಪಿದ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ವಿಳಾಸ ಪತ್ತೆ ಮಾಡಿ ಸ್ಥಳಕ್ಕೆ ತೆರಳಿದ್ದಾರೆ. ನಿವಾಸಕ್ಕೆ ಭೇಟಿ ನೀಡಿದ ತಂಡ ವೃದ್ಧೆಯನ್ನು ರಕ್ಷಿಸಿ ಕರೆತರಲು ಪ್ರಯತ್ನಿಸಿತು, ಆದರೆ ಕುಟುಂಬದಲ್ಲಿ ಸೊಸೆಯಿಂದ…

Read More

ಬೆಂಗಳೂರು: ಮಳಿಗೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಸದ 18 ಉದ್ದಿಮೆಗಳನ್ನು ತಾತ್ಕಾಲಿಕವಾಗಿ ಬಿಬಿಎಂಪಿ ವತಿಯಿಂದ ಮುಚ್ಚಿಸಲಾಗಿದೆ. ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ವಾಣಿಜ್ಯ ಮಳಿಗಳನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 170ಕ್ಕೂ ಹೆಚ್ಚು ಮಳಿಗೆಗಳಲ್ಲಿ ಈಗಾಗಲೇ ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಂಡಿರುತ್ತಾರೆ. ಇನ್ನು ಕನ್ನಡ ನಾಮಫಲಕ ಅಳವಡಿಸದೇ ಇರುವ ಮಳಿಗೆಗಳ ಮಾಲೀಕರಿಗೆ ಅಂತಿಮ ತಿಳುವಳಿಕೆ ಪತ್ರ ನೀಡಿ, ಕೂಡಲೇ ನಾಮಫಲಕ ಬದಲಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಬ್ರಿಗೇಡ್ ರಸ್ತೆ, ಎಂ.ಜಿ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ ಗಳಲ್ಲಿ ಕನ್ನಡ ನಾಮಫಲಕ ಬಳಸದ ಅಂಗಡಿಗಳಿಗೆ ಬಿಬಿಎಂಪಿ ಪೂರ್ವ ವಲಯದ ಸಿಬ್ಬಂದಿ ಎಚ್ಚರಿಕೆ ನೀಡಿದರು. ಈಗಿರುವ ನಾಮಫಲಕಗಳಲ್ಲಿ ಇಂಗ್ಲಿಷ್‌ ಅಕ್ಷರಗಳನ್ನು ಮುಚ್ಚಿ, ಕನ್ನಡವನ್ನು ಚಿಕ್ಕದಾಗಿ ಕಾಣುವಂತೆ ಕೆಲವು ಮಾಡಿದ್ದಾರೆ. ಇದು ಸರಿಯಲ್ಲ. ಶೇ 60ರಷ್ಟು ಕನ್ನಡ ಇರಲೇಬೇಕು ಎಂದು ಮಳಿಗೆಯವರಿಗೆ ತಾಕೀತು ಮಾಡಿದರು.

Read More

ಕರೆಂಟ್ ಶಾರ್ಟ್ ಸರ್ಕ್ಯೂಟ್‌ ನಿಂದಾಗಿ 7 ಕಾರುಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ರಾಹುಲ್ ಹ್ಯೂಂಡಾಯ್‌ ಕಾರ್ ಶೋ ರೂಂನಿಂದ ವರದಿಯಾಗಿದೆ. ಪರಿಣಾಮ ಲಕ್ಷಾಂತರ ರೂ. ಮೌಲ್ಯವ ಕಾರು ಮತ್ತು ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಒಟ್ಟು 7 ಕಾರುಗಳು ಬೆಂಕಿಗೆ ಆಹುತಿಯಾಗಿದೆ. ರಾತ್ರಿ 10 ಗಂಟೆಗೆ ಅಗ್ನಿ ಅವಘಡ ಸಂಭವಿಸಿದ್ದು, ಶೋ‌ ರೂಂ ನಲ್ಲಿದ್ದ ಹೊಸ ಕಾರುಗಳು ಹಾಗೂ ಸರ್ವಿಸ್ ಗೆ ಬಂದಿದ್ದ ಲಕ್ಷಾಂತರ ರೂ. ಮೌಲ್ಯದ ಕಾರುಗಳು ಪೂರ್ಣ ಬೆಂಕಿಗೆ ಆಹುತಿಯಾಗಿರುವುದಾಗಿ ತಿಳಿದು ಬಂದಿದೆ. ಶೋ ರೂಂನ ಮೇಲ್ಛಾವಣಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ, ಶೋ ರೂಂ ಸಿಬ್ಬಂದಿ, ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಬೆಂಕಿ ಜೋರಾಗಿದ್ದು, ಪಕ್ಕದ ಸೋನಾ ಹೊಂಡಾ ಶೋ‌ ರೂಂಗೂ ಬೆಂಕಿ ತಗುಲಿದ್ದು, ಕೂಡಲೇ ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ವಿಷಯ ತಿಳಿದು ದೊಡ್ಡ ಸಂಖ್ಯೆಯ ಜನರು ಶೋ ರೂಂ ಬಳಿ ಜಮಾಯಿಸಿದರು.…

Read More

ರಾಮನಗರ: ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ದ್ಯಾವಸಂದ್ರದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಕಾನ್ಸ್ಟೇಬಲ್ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡುತಿದ್ದ ಮಹಿಳಾ ಕಾನ್ ಸ್ಟೇಬಲ್ ಮಂಜುಶ್ರೀ(27) ಆತ್ಮಹತ್ಯೆ ಮಾಡಿಕೊಂಡವರು. ಮಂಜುಶ್ರೀ ಅವರು ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವಸಂದ್ರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಆಗಿದ್ದಾರೆ. ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ. ಮಾಡಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಮಂಜುಶ್ರೀ ಅವರದು ಬಡ ಕುಟುಂಬವಾಗಿದ್ದು, ಉತ್ತಮ ಬದುಕನ್ನು ಅರಸಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಮನೆಗೆ ಆಸರೆಯಾಗಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಊರಿನ ಮನೆಗೆ ಬಂದು ಪ್ರಾಣ ಕಳೆದುಕೊಂಡಿದ್ದಾರೆ. ಮೃದು ಸ್ವಭಾವದ ಈಕೆ ಯಾವುದೋ ಕಾರಣದಿಂದ ನೊಂದು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಹೇಳಲಾಗಿದೆ. ಕೆಲ ದಿನಗಳಿಂದ ಕೆಲಸಕ್ಕೆ ರಜೆ ಹಾಕಿದ್ದ ಮಂಜುಶ್ರೀ ನಿನ್ನೆ ರಾತ್ರಿ…

Read More

ಪ್ರೇಮ ವಿವಾಹಗಳಿಗೆ ಹೆಸರುವಾಸಿಯಾಗಿರುವ ಮಹಾರಾಷ್ಟ್ರದ ಗ್ರಾಮವೊಂದು ಈಗ ಎಲ್ಲರಿಗೂ ಅಚ್ಚರಿಯ ತಾಣವಾಗಿದೆ. ಚಂದ್ರಾಪುರದ ಕಾರಂಜಿ ಗ್ರಾಮ ಪ್ರೇಮ ವಿವಾಹಗಳಿಗೆ ಹೆಸರುವಾಸಿಯಾಗಿದೆ. ಕಾರಂಜಿ ಗ್ರಾಮದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ 200ಕ್ಕೂ ಹೆಚ್ಚು ಪ್ರೇಮ ವಿವಾಹಗಳು ನಡೆದಿವೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆತ್ತಿವಾರ್ ಕೂಡ ಇದೇ ಗ್ರಾಮದ ನಿವಾಸಿ. ಅವರದ್ದೂ ಕೂಡ ಪ್ರೇಮ ವಿವಾಹ ಎನ್ನುತ್ತಾರೆ ಗ್ರಾಮಸ್ಥರು. 11 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಸರ್​​ಪಂಚ್, ಉಪ ಸರ್​ ಪಂಚ್​​ ಸೇರಿದಂತೆ ಆರು ಮಂದಿ ಪ್ರೇಮ ವಿವಾಹವಾಗಿದ್ದಾರೆ. ನಾವು ಅದೆಷ್ಟೇ ಆಧುನಿಕತೆಗೆ ಒಗ್ಗಿಕೊಂಡರೂ ಕೂಡ ಹಲವೆಡೆ ಇಂದಿಗೂ ಪ್ರೇಮ ವಿವಾಹಗಳಿಗೆ ಸಾಮಾಜಿಕ ಮನ್ನಣೆ ಸಿಗುತ್ತಿಲ್ಲ. ಆದರೆ, ಚಂದ್ರಾಪುರ ಜಿಲ್ಲೆಯ ಗೊಂಡಪಿಂಪ್ರಿ ತಾಲೂಕಿನ ಕಾರಂಜಿ ಗ್ರಾಮವು ಇದಕ್ಕೆ ತದ್ವಿರುದ್ಧವಾಗಿದೆ. ಕಳೆದ 40 ವರ್ಷಗಳಲ್ಲಿ ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಪ್ರೇಮ ವಿವಾಹಗಳು ನಡೆದಿವೆ. ಮೊದಲು ಈ ಗ್ರಾಮ ಅಪರಾಧ ಪ್ರಕರಣಗಳಿಂದ ಕುಖ್ಯಾತಿ ಪಡೆದುಕೊಂಡಿತ್ತು. ಇದೀಗ ಪ್ರೀತಿಗೆ ಹೆಸರುವಾಸಿಯಾಗಿದೆ. ಪ್ರೇಮವಿವಾಹದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಆದರೆ,…

Read More

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ‘ಹಕ್ಕಿ ಜ್ವರ’ ಕಾಣಿಸಿಕೊಂಡಿದೆ. ಕೆಲ ದಿನಗಳಿಂದ ವಟಗುಟ್ಲ, ಗುಮ್ಮಲ್ಲಡಿಬ್ಬ ಪ್ರದೇಶದಲ್ಲಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಪರೀಕ್ಷೆ ಬಳಿಕ ಜ್ವರದಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ. ಏಕಾಏಕಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಳಿ ಸಾಗಾಟಕ್ಕೆ, ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

Read More

ಡ್ರಾಪ್ ಕೊಡುತ್ತೀವಿ ಎಂದು ಕರೆದುಕೊಂಡು ಹೋಗಿ ಚಿನ್ನಾಭರಣವನ್ನು ಕಿತ್ತುಕೊಂಡು ಮಹಿಳೆಯನ್ನು ಕೊಂದು ನೀರಿನ ಟ್ಯಾಂಕಿಗೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರ ತಾಲೂಕಿನ ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುಳ ಮೃತ ರ್ದುದೈವಿ. ಮಂಜುಳ ಎಂಬ ಮಹಿಳೆ, ಊರ ಹಬ್ಬ ಎಂದು ಫೆಬ್ರವರಿ 11ರಂದು ಮಗಳ ಮನೆಗೆ ಹೊರಟ್ಟಿದ್ದರು. ಮಂಜುಳಾರನ್ನು ಬಸ್‌ ನಿಲ್ದಾಣದವೆರಗೂ ಡ್ರಾಪ್ ಮಾಡ್ತೀನಿ ಎಂದು ಜೀವನ್ ಎಂಬಾತ ಕರೆದಿದ್ದ. ಪರಿಚಯಸ್ಥನೇ ಕರೆದ ಕಾರಣಕ್ಕೆ ಆತನನ್ನು ನಂಬಿ ಮಂಜುಳ ಹೋಗಿದ್ದರು.

Read More

ಖ್ಯಾತ ಬಾಣಸಿಗ ಇಮ್ತಿಯಾಜ್ ಖುರೇಷಿ ನಿಧನ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಖುರೇಶಾ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಐಟಿಸಿ ಹೋಟೆಲ್‌ ನಲ್ಲಿ ಮಾಸ್ಟರ್ ಚೆಫ್ ಆಗಿ ಪಾಕಶಾಲೆಯ ಕೌಶಲ್ಯಕ್ಕೆ ಹೆಸರುವಾಸಿಯಾದ ಶೆಫ್ ಖುರೇಷಿ ಪಾಕಶಾಲೆಯ ಬ್ರ್ಯಾಂಡ್ ಬುಖಾರಾವನ್ನು ದೇಶಾದ್ಯಂತ ಪ್ರಸಿದ್ಧಗೊಳಿಸಿದ್ದಾರೆ. 1928 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಬಾಣಸಿಗ ಖುರೇಷಿ ಏಳನೇ ವಯಸ್ಸಿನಲ್ಲಿ ತಮ್ಮ ಮನೆಯಲ್ಲಿ ಅಡುಗೆ ಮಾಡುವವರಿಗೆ ಸಹಾಯ ಮಾಡುವ ಮೂಲಕ ಅಡುಗೆ ಮಾಡುವ ಪ್ರೀತಿಯನ್ನು ಬೆಳೆಸಿಕೊಂಡರು. ಖುರೇಷಿಯವರ ದಮ್ ಬಿರಿಯಾನಿ ಮತ್ತು ಬುಖಾರಾ ಖಾದ್ಯಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ. ಖುರೇಷಿಯವರ ಕಬಾಬ್ ‌ಗಳು ತಮ್ಮ ರುಚಿಕರತೆಯಿಂದ ಅಂತರರಾಷ್ಟ್ರೀಯ ಗಮನವನ್ನು ಸಹ ಗಳಿಸಿವೆ. ಖುರೇಷಿಯವರ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಎಪಿಜೆ ಅಬ್ದುಲ್ ಕಲಾಂ ಅವರ ನೆಚ್ಚಿನ ಖಾದ್ಯವಾದ ಬೆಳ್ಳುಳ್ಳಿ ಸ್ಟ್ಯೂ ಕೂಡ ಖುರೇಷಿ ಅವರಿಂದ ಕಂಡುಹಿಡಿದಿದೆ.

Read More