ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ‘ಹಕ್ಕಿ ಜ್ವರ’ ಕಾಣಿಸಿಕೊಂಡಿದೆ. ಕೆಲ ದಿನಗಳಿಂದ ವಟಗುಟ್ಲ, ಗುಮ್ಮಲ್ಲಡಿಬ್ಬ ಪ್ರದೇಶದಲ್ಲಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಪರೀಕ್ಷೆ ಬಳಿಕ ಜ್ವರದಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ.
ಏಕಾಏಕಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಳಿ ಸಾಗಾಟಕ್ಕೆ, ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.


