Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಕೋಯಿಕ್ಕೋಡ್: ಕೇರಳದ ಕೋಝಿಕೋಡ್ ನ ವೆಸ್ಟ್ ಹಿಲ್ ನಲ್ಲಿರುವ ಕೊನ್ನಾಡ್ ಕಡಲ ಕಿನಾರೆಗೆ ಫೆಬ್ರವರಿ 8ರಂದು ಬಿಜೆಪಿ ನೇತೃತ್ವದ 30 ಮಹಿಳೆಯರ ಗುಂಪೊಂದು ಪೊರಕೆ ಹಿಡಿದುಕೊಂಡು ಬಂದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ಓಡಿಸಿದ್ದಾರೆ. ಈ ರೀತಿ ಪೊರಕೆ ಹಿಡಿದು ಓಡಿಸುವುದನ್ನು ಬಿಜೆಪಿ ನಾಯಕಿ, ಡ್ರಗ್ಸ್ ಮತ್ತು ಅನೈತಿಕ ಚಟುವಟಿಕೆಗಳ ವಿರುದ್ಧ “ಜಾಗೃತಿ ಅಭಿಯಾನ” ಎಂದು ಹೇಳಿದ್ದಾರೆ. ಸಮವಸ್ತ್ರದಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳು ನಿಯಮಿತವಾಗಿ ಬೀಚ್ ಗೆ ಬರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಮಹಿಳಾ ಪ್ರತಿಭಟನಾಕಾರರು ಬೀಚ್ ನಲ್ಲಿ ಕುಳಿತಿದ್ದ ಪ್ರತಿಯೊಬ್ಬ ವ್ಯಕ್ತಿಯ ಬಳಿಗೆ ಬಂದು ಯಾವುದೇ ಕೆಟ್ಟ ನಡವಳಿಕೆಯನ್ನು ಕಂಡರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಅಂದಹಾಗೆ, ಆ ಸಮಯದಲ್ಲಿ ಕೆಲವೇ ಜನರಿದ್ದರು ”ಎಂದು ಪೊಲೀಸರು ಹೇಳಿದ್ದಾರೆ. ಇದರ ಮಧ್ಯೆ ತಮ್ಮ ಸಮಸ್ಯೆಗಳು ಬಗೆಹರಿಯುವವರೆಗೂ ನೈತಿಕ ಪೊಲೀಸ್ ಗಿರಿ ಮುಂದುವರಿಸುವುದಾಗಿ ಮಾಲಿನಿ ಎಚ್ಚರಿಸಿದ್ದಾರೆ.
ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ–ವಿಭಾಗ ಮೊಳೆಯೂರು ವಲಯದಲ್ಲಿ ಗುರುವಾರ ಮೊಳೆಯೂರು ಶಾಖೆಯ ನಡಾಡಿ ಗಸ್ತಿನಲ್ಲಿ 1–2 ವರ್ಷದ ಒಂದು ಹುಲಿಯೊಂದು ಮೃತಪಟ್ಟಿರುವುದು ಕಂಡು ಬಂದಿರುವುದಾಗಿ ವಲಯ ಅರಣ್ಯಾಧಿಕಾರಿ, ಮೊಳೆಯೂರು ವಲಯ ರವರು ತಿಳಿಸಿದರು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಹುಲಿಯೋಜನೆ ಇಬವರು ಸ್ಧಳಕ್ಕೆ ಭೇಟಿ ನೀಡಿ, ಸ್ಧಳ ಪರಿಶೀಲನೆ ನಡೆಸಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ಅನ್ವಯ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತ ಹುಲಿಯು ಸುಮಾರು 1ರಿಂದ 2 ವರ್ಷದಾಗಿದ್ದು, ಲಿಂಗ ಪತ್ತೆ ಆಗಿರುವುದಿಲ್ಲ, ಸದರಿ ಹುಲಿಯು ಮತ್ತೊಂದು ಹುಲಿಯ ಜೊತೆ ಕಾದಾಟ ನಡೆಸಿದ್ದು, ಕಾದಾಟದಲ್ಲಿ ಹುಲಿಯ ಕತ್ತು ಮುರಿದಿರುವುದರಿಂದ ಹುಲಿಯು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತ ದೇಹವನ್ನು ಕಾಡುನಾಯಿಗಳು ಮತ್ತು ಮಾಂಸದಕಳೇಬರಹವನ್ನು ತಿನ್ನುವ ಜೀವಿಗಳು ತಿಂದಿರುವುದಾಗಿ ದೃಢಪಡಿಸಿದ್ದಾರೆ. ಇನ್ನು ಮೃತ ಹುಲಿಯ ದೇಹಕ್ಕೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆನೆಯೋಜನೆ, ನಿಂಗರಾಜು , ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ…
ಚಿಕ್ಕಬಳ್ಳಾಪುರ: ಯುವಕನೊಬ್ಬ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದೆ. ಮೃತ ಯುವಕನನ್ನು ಬೆಂಗಳೂರಿನ ಬಾಬೂಸಾಪಾಳ್ಯದ ಅಭಿ(23) ಎಂದು ಗುರುತಿಸಲಾಗಿದೆ. ಪ್ರವಾಸಕ್ಕೆ ಬಂದಿದ್ದ ವೇಳೆ ಜಲಾಶಯದಲ್ಲಿ ಈಜಲು ತೆರಳಿದ್ದಾಗ ಯುವಕ ಮುಳುಗಿ ಸಾವನ್ನಪ್ಪಿದ್ದಾನೆ. ಯುವಕನ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದು ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ. ಇದೀಗ ಎನ್‍ಡಿಆರ್‍ಎಫ್ ತಂಡದಿಂದ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.
ಸರಗೂರು: ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ತಾಲ್ಲೂಕಿನ ಕೆಬ್ಬೆಪುರ ಹಾಡಿಯ ಸಮೀಪ ಇತ್ತೀಚೆಗೆ ನಡೆದಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರು ವಿಭಾಗದ ಕೆಬ್ಬೆಪುರ ಹಾಡಿಯ ನಿವಾಸಿ ಹಾಗೂ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿ.ರಾಜು (38) ಮೃತ ದುರ್ದೈವಿಯಾಗಿದ್ದಾರೆ. ರಾಜು ನಾಗರಹೊಳೆ ಅರಣ್ಯ ಪ್ರದೇಶದ ಉದ್ಬೂರು ಗೇಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಘಟನೆ ನಡೆದ ದಿನದಂದು ಬೆಳಂಬೆಳಿಗ್ಗೆಯೇ ಕೆಲಸಕ್ಕೆ ಸಿದ್ಧರಾಗಿ ಬಸ್ ಹತ್ತಲು ಕೆಬ್ಬೆಪುರ ಹಾಡಿಯಿಂದ ಮೊಳೆಯೂರಿಗೆ ನಡೆದುಕೊಂಡು ಬರುವ ವೇಳೆ, ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ್ದು, ರಾಜುರನ್ನು ಬಲಿ ಪಡೆದಿದೆ. ರಾಜುವಿನ ಮೃತದೇಹ ರಸ್ತೆ ಪಕ್ಕದ ಹಳ್ಳವೊಂದರಲ್ಲಿ ಬಿದ್ದಿದ್ದ ಪರಿಣಾಮ ಮಧ್ಯಾಹ್ನದವರೆಗೂ ಯಾರಿಗೂ ಮೃತದೇಹವಿರುವುದು ಗೊತ್ತಾಗಿರಲಿಲ್ಲ. ಆದರೆ ಮಧ್ಯಾಹ್ನ ರಾಜುವಿನ ಮಗಳು ಬಟ್ಟೆ ಒಗೆಯಲು ಹೋಗುವ ವೇಳೆ ತಂದೆಯ ಮೃತ ದೇಹವನ್ನು ಕಂಡು ಗಾಬರಿಗೊಂಡು ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ…
ಬೀದರ್: ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಔರಾದ(ಬಿ) ತಾಲೂಕಿನ ಸಾರ್ವಜನಿಕರ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಔರಾದ(ಬಿ) ಪಟ್ಟಣದಲ್ಲಿ ತಾಲೂಕಿನ ಸಾರ್ವಜನಿಕರ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಚಾಲನೆ ನೀಡಿದರು. ಸಚಿವರಾದ ಈಶ್ವರ ಖಂಡ್ರೆ ಅವರು ಸಾರ್ವಜನಿಕರ ಕುಂದು ಕೊರತೆಗಳು, ಅಹವಾಲುಗಳನ್ನು ಆಲಿಸಿ ಅವರ ನ್ಯಾಯಯುತವಾದ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಔರಾದ(ಬಿ) ಪಟ್ಟಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸುಮಾರು 167 ಅರ್ಜಿಗಳು ಬಂದಿದ್ದು, ಹಲವು ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲಿಯೇ ಪರಿಹಾರ ನೀಡಿದರು. ಇನ್ನುಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಪೊಲೀಸ್ ಅಧೀಕ್ಷಕರಾದ ಚನ್ನಬಸವಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ:…
ತುರುವೇಕೆರೆ: ತಾಲೂಕಿನ ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಸ್ವೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಲಿತ ಕಾರ್ಮಿಕ ಹೊನ್ನಪ್ಪ ಎಂಬ ವ್ಯಕ್ತಿಗೆ, ಕಾರ್ಖಾನೆಯ ವ್ಯವಸ್ಥಾಪಕ ಮಂಜುನಾಥ್ ಎಂಬುವರು, ಬರಿಗೈನಲ್ಲೇ ಮಲದ ಗುಂಡಿ ಸ್ವಚ್ಛಗೊಳಿಸುವಂತೆ ಕಾರ್ಮಿಕನಿಗೆ ತಾಕಿತು ಮಾಡಿ, ಮಲದ ಗುಂಡಿಯನ್ನು ಸ್ವಚ್ಛ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದರ ವಿಚಾರವಾಗಿ ಕಾರ್ಮಿಕ ಹೊನ್ನಪ್ಪ ಅವರು ಅಧಿಕಾರಿಗಳ ಬೆದರಿಕೆಗೆ ಭಯದಿಂದ ಈ ವಿಷಯ ಯಾರಿಗೂ ತಿಳಿಸಿರಲಿಲ್ಲ ಆದರೆ, ಇವರು ಬರಿಗೈನಲ್ಲಿ ಸ್ವಚ್ಛ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಒಂದನ್ನು ಅಲ್ಲೇ ಸ್ಥಳೀಯವಾಗಿ ಸಂಚರಿಸುತ್ತಿದ್ದ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣಕ್ಕೆ ಫೋಟೋ ಮತ್ತು ವಿಡಿಯೋವನ್ನು ಹರಿಬಿಟ್ಟಿದ್ದರು. ಈ ವಿಚಾರ ತಿಳಿದ ಕಾರ್ಖಾನೆಯ ವ್ಯವಸ್ಥಾಪಕ ಮಂಜುನಾಥ್, ನೀನೇ ವಿಡಿಯೋ ವೈರಲ್ ಮಾಡಿಸಿದ್ದೀಯಾ ಎಂದು ಆರೋಪಿಸಿ, ಕಾರ್ಮಿಕನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಕೆಲಸ ಸ್ಥಳದಲ್ಲಿ ಅಮಾನವೀಯವಾಗಿ ಮಲದ ಗುಂಡಿ ಸ್ವಚ್ಛಗೊಳಿಸಿದ್ದಲ್ಲದೇ, ಕೆಲಸದಿಂದಲೂ ತೆಗೆದು ಹಾಕಲಾಗಿದ್ದು ಇದರಿಂದ ನೊಂದ ಕಾರ್ಮಿಕ ದಂಡಿನ ಶಿವರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಇನ್ನೂ…
ತುರುವೇಕೆರೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನದ ರಚನಾ ಕರಡು ಸಮಿತಿಯ ಸಭೆಯ ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರೌಢಶಾಲಾ ವಿಭಾಗದ ಮಕ್ಕಳು ಭಾಗವಹಿಸಿದ್ದರು. 1949ನೇ ನವಂಬರ್ 25ರಂದು ಕರಡು ಸಮಿತಿಯ ಸಭೆ ನಡೆದು 1949 ನವಂಬರ್ 26ರಂದು ಅಂಗೀಕರಿಸಲಾದ ಸಂವಿಧಾನದ ಅಣುಕು ಪ್ರದರ್ಶನವನ್ನು ಮಕ್ಕಳಿಂದ ಯಥಾವತ್ತಾಗಿ ಪ್ರದರ್ಶಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ವೈ.ಎಂ.ರೇಣು ಕುಮಾರ್ ಮಾತನಾಡಿ, ಕರ್ನಾಟಕ ಸರ್ಕಾರ ಸಂವಿಧಾನ ಕರಡು ರಚನಾ ದಿನದ ನೆನಪಿಗಾಗಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಸಂವಿಧಾನ ರಥಯಾತ್ರೆಯನ್ನು ಎಲ್ಲರೂ ಕೂಡ ಆದರದಿಂದ ಸ್ವಾಗತಿಸೋಣ ಎಂದರು. ಕಾರ್ಯಕ್ರಮದಲ್ಲಿ ಇದೇ ಶಾಲೆಯ ವಿದ್ಯಾರ್ಥಿಗಳಿಂದ ಸಂವಿಧಾನ ಕರಡು ಸಮಿತಿಯ ಸದಸ್ಯರ ವಿವಿಧ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ರೆಸ್ಟೊರೆಂಟ್ ನ ಹೊರಗೆ ನಡೆದ ದಾಳಿಯಲ್ಲಿ 41 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ತನೇಜಾ ಅವರು ಡೈನಮೋ ಟೆಕ್ನಾಲಜೀಸ್ ನ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. ಪ್ರಾಥಮಿಕ ತನಿಖೆಯಲ್ಲಿ ತನೇಜಾ ಮತ್ತು ಅಪರಿಚಿತ ವ್ಯಕ್ತಿ ಜಗಳವಾಡಿದ್ದು ಅದು ಹಲ್ಲೆಗೆ ತಿರುಗಿದೆ ಎಂದು ಸಿಬಿಎಸ್ ನೊಂದಿಗೆ ಸಂಯೋಜಿತವಾಗಿರುವ ವಾಷಿಂಗ್ಟನ್, ಡಿಸಿಯಲ್ಲಿನ ದೂರದರ್ಶನ ಕೇಂದ್ರವಾದ WUSA ಹೇಳಿದೆ. ತನೇಜಾ ಕೆಳಗೆ ಬಿದ್ದಿದ್ದು ಆತನ ತಲೆ ಪಾದಚಾರಿ ಮಾರ್ಗಕ್ಕೆ ಬಡಿದು, ತೀವ್ರ ಗಾಯಗೊಂಡ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ತನೇಜಾ ಅವರ ಸಾವನ್ನು ಕೊಲೆ ಎಂದು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ.
ಮೈಸೂರು: ಮೈಸೂರು ಶ್ರೀರಾಂಪುರದ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಉಪೇಂದ್ರ ಕುಮಾರ್ ಎಂಬುವವರಿಂದ, ಸಹ ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ದೈಹಿಕ ಶಿಕ್ಷಕ ಉಪೇಂದ್ರ, ತನ್ನ ಜೊತೆ ಕೆಲಸ ಮಾಡುತ್ತಿದ್ದ ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಕಿಯರ ಪೋಷಕರು ಶಾಲೆ ಮುಂದೆ ಜಮಾಯಿಸಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಕ್ರೋಶ ಹೊರ ಹಾಕಿದ್ದರು. ಶಾಲೆ ಮುಂದೆ ಗಲಾಟೆ ನಡೆಯುತ್ತಿದ್ದ ಹಿನ್ನಲೆ ಶಾಲಾ ಆಡಳಿತ ಮಂಡಳಿ ಶಿಕ್ಷಕನನ್ನು ಟರ್ಮಿನೇಟ್ ಮಾಡಿದೆ. ಶಿಕ್ಷಕಿಯರ ಪೋಷಕರು ಶಾಲೆಯಿಂದ ವಾಪಸ್ಸು ತೆರಳಿದ್ದಾರೆ.
ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಹೆಸರಿನಲ್ಲಿ ಆಸ್ಟ್ರೇಲಿಯಾದ ಸೆನೇಟರ್ (ಸಂಸದ) ವರುಣ್ ಘೋಷ್(38) ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ. ಭಗವದ್ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಆಸೀಸ್ ಸಂಸದ ಎಂಬ ಬಿರುದು ಪಡೆದಿದ್ದು, ಹೆಚ್ಚಿನ ಭಾರತಿಯರು ಸಂಸದನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಮಾಜಿ ಸಂಸದ ಪ್ಯಾಟ್ರಿಕ್ ಡಾಡ್ಸನ್ ತನ್ನ ಸ್ಥಾನದಿಂದ ನಿವೃತ್ತರಾಗಿದ್ದರು. ಹೀಗಾಗಿ ತೆರವಾಗಿದ್ದ ಸೆನೇಟ್ ಸ್ಥಾನವನ್ನು ಲೇಬರ್ ಪಾರ್ಟಿಯ ಘೋಷ್ ತುಂಬಿದ್ದಾರೆ ಎನ್ನಲಾಗಿದೆ.