Author: admin

ಸರ್ಕಾರ ಅಕ್ರಮ ಮರಳುಗಾರಿಕೆಯನ್ನು ತಡೆಯುವುದಕ್ಕೆ ಸಾಕಷ್ಟು ಕ್ರಮ ತೆಗೆದುಕೊಂಡಿದ್ದರೂ ಅಕ್ರಮ ಚಟುವಟಿಕೆಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಹಗಲೆಲ್ಲ ಸುಮ್ಮನಿರುವ ಅಕ್ರಮ ಮರಳು ಸಾಗಾಟದಾರರು ಕತ್ತಲಾಗುತ್ತಿದ್ದಂತೆ ಸದ್ದಿಲ್ಲದೆ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಬಳಿಯ ವೈಎಂಕೆ ಬಳಿ ಪ್ರತಿ ನಿತ್ಯ ತಡರಾತ್ರಿ 12 ಗಂಟೆಯಿಂದ ಬೆಳ್ಳಂ ಬೆಳಗ್ಗೆ 5 ಗಂಟೆವರೆಗೆ ಅಪರಿಚಿತರು ವಿದ್ಯುತ್ ಲೈನ್ ಅನ್ನು ಸ್ಥಗಿತಗೊಳಿಸುತ್ತಿದ್ದಾರೆ. ಈ ಬಗ್ಗೆ ಕೆಲವು ದಿನಗಳಿಂದ ಅನುಮಾನಗಳು ಹೆಚ್ಚುತ್ತಿದ್ದರೂ ಇದೀಗ ಸುತ್ತಮುತ್ತಲಿನ ಜನರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಿಸಿಟಿವಿಯಲ್ಲಿಯೂ ಗೋಚರಿಸದಂತೆ ಕಳ್ಳರು ತಮ್ಮ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅರಂತೋಡು ಭಾಗದಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇತ್ತೀಚಿನ ಕೆಲವು ಸಮಯದಿಂದ ಪ್ರತಿ ನಿತ್ಯ ವಿದ್ಯುತ್ ಲೈನ್ ಆಫ್ ಆಗುತ್ತಿರುವುದರಿಂದ ಅರಂತೋಡು , ಗೂನಡ್ಕ ಸೇರಿದಂತೆ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿದೆ. ಇದನ್ನು ಮೆಸ್ಕಾಂನವರು ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಕ್ರಮ ಮರಳು ಸಂಪಾಜೆ ಮೂಲಕವಾಗಿ ಕೊಡಗು ಭಾಗಕ್ಕೆ…

Read More

ಗದಗ: ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಸುಂಡಿ ಬಳಿ ಗದಗದಿಂದ ಹೊರಟಿದ್ದ ಬಸ್ ಅನ್ನು ತಡೆದ ನಾಲ್ವರು ಯುವಕರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಇದರಿಂದ ಬಸ್ ಚಾಲಕ ಸಂತೋಷ್ ಅಸೂಟಿ ಅವರಿಗೆ ಗಾಯವಾಗಿದ್ದು ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ ನ ಚಾಲಕ ಎದುರಿದ್ದ ಕಾರಿಗೆ ಸೈಡ್ ಕೊಡುವಂತೆ ಹಾರ್ನ್ ಮಾಡಿದ್ದಾನೆ. ಆದರೆ ಕಾರು ಸವಾರರು ಕಾರಿನ ಸೈಡ್ ಮಿರರ್ ಅನ್ನು ಕ್ಲೋ ಸ್ ಮಾಡಿದರು. ಇದನ್ನು ಗಮನಿಸಿದ ಬಸ್ ಚಾಲಕ ಐದಾರು ಬಾರಿ ಹಾರ್ನ್ ಮಾಡಿದ್ದರು. ಇದರಿಂದ ಕೆರಳಿದ ಯುವಕರ ಗುಂಪು ಬಸ್ ಅನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಲಕನೊಂದಿಗೆ ಜಗಳಕ್ಕೆ ಇಳಿದಿದ್ದು, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Read More

1976 ಫೆಬ್ರವರಿ 9ರಂದು ಜೀತ ಪದ್ಧತಿ ರದ್ದತಿ ಕಾನೂನು ಅಂಗೀಕಾರ ದಿನವಾಗಿದ್ದು ಇದನ್ನ ರಾಜ್ಯ ಸರ್ಕಾರ ಜೀತ ಪದ್ಧತಿ ನಿರ್ಮೂಲನಾ ದಿನವನ್ನಾಗಿ ಆಚರಿಸಲಾತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲೂಕು ಆಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಕೃಷ್ಣರಾಜ್ ಮಾತಾನಾಡಿ, ಜೀತ ಪದ್ದತಿ ನಮ್ಮ ದೇಶದ ಅಭಿವೃದ್ಧಿ ಮಾರಕವಾದದ್ದು ಇದನ್ನ ಸಂಪೂರ್ಣವಾಗಿ ತಡೆಗಟ್ಟಲು ನಾವು ಪ್ರಾಮಾಣಿಕ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಬಿಡುಗಡೆ ಮತ್ತು ಪುನರ್ವಸತಿ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು ಹಾಗೂ ಜೀತ ನಿರ್ಮಾಲನೆಯಲ್ಲಿ ಜೀವಿಕ ಸಂಘಟನೆಯ ಪಾತ್ರ ಅತ್ಯಂತ ಶ್ಲಾಘನೀಯ ಎಂದರು. ಜೀತ ಕಾನೂನು ಮತ್ತು ಜಾರಿ ಕುರಿತು ಮಾತಾಡಿದ ಜೀವಿಕ ರಾಜ್ಯ ಸಂ. ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ ಮಾತಾನಾಡಿ ಜೀತ ಪದ್ಧತಿ ಅತ್ಯಂತ ಘೋರ ವ್ಯವಸ್ಥೆಯಾಗಿದೆ ಮನುಷ್ಯ ಮನುಷ್ಯನನ್ನ ದುಡಿಸಿಕೊಳ್ಳುವ ಪ್ರಾಣಿಗಳಿಗಿಂತಲೂ ಹೀನಾಯವಾಗಿ ನೋಡಿಕೊಳ್ಳುವ ಅಮಾನವೀಯ ಪದ್ಧತಿಯನ್ನು 1976 ಜೀತ ಪದ್ಧತಿ ರದ್ದತಿ ಕಾನೂನಿನ ಮೂಲಕ ನಿರ್ಮಾಲನೆ…

Read More

ಬೆಂಗಳೂರು:  ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕನೊರ್ವ ನಾಪತ್ತೆಯಾಗಿದ್ದು, ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಸಿದ್ದರಾಮಪ್ಪ ಎಂಬ ಬಾಲಕ ತನ್ನ ಸ್ನೇಹಿತರೊಟ್ಟಿಗೆ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ತಾರಮ್ಮ ಹಾಗೂ ಭೀಮ್ಸಪ್ಪ ದಂಪತಿಯ ಪುತ್ರ ಸಿದ್ದರಾಮಪ್ಪ(10) ಕಾಣೆಯಾದ ಬಾಲಕನಾಗಿದ್ದಾನೆ. ರಾತ್ರಿ ಕಳೆದರೂ ಮನೆಗೆ ಬಾರದೇ ಇದ್ದಾಗ ಪೋಷಕರು ಹುಡುಕಾಡಿದ್ದಾರೆ. ಆದರೆ ಹುಡುಕಿ ಸುಸ್ತಾದರೆ ವಿನಃ, ಮಗನ ಸುಳಿವು ಮಾತ್ರ ಸಿಕ್ಕಿಲ್ಲ. ನಮ್ಮ ಮಗನನ್ನು ಹುಡುಕಿ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಕಳೆದ ಜನವರಿ 24ರ ಸಂಜೆ 6.30ಕ್ಕೆ ಮಕ್ಕಳ ಜತೆಗೆ ಆಟವಾಡುತ್ತಿದ್ದ ಸಿದ್ದರಾಮಪ್ಪ ಏಕಾಏಕಿ ಕಾಣೆಯಾಗಿದ್ದಾನೆ. ಎಲ್ಲಿ ಹೋಗಿದ್ದನೋ ಎಂದು ತಿಳಿಯದೇ ಪೋಷಕರು ಕಂಗಲಾಗಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ಕೂಡ ನೀಡಿದ್ದಾರೆ‌. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದು, ನಿರಂತರ ಹುಡುಕಾಟ ನಡೆಸುತ್ತಿದ್ದಾರೆ.

Read More

ನವದೆಹಲಿ: ಈ ಬಾರಿ ಮಂಡ್ಯದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುಲು ಸುಮಲತಾ ಅಂಬರೀಶ್ ಕನಸು ಕಾಣುತ್ತಿದ್ದು, ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಗುರುವಾರ ಅಷ್ಟೇ ಬಿಜೆಪಿ ವರಿಷ್ಠರಾದ ಜೆಪಿ ನಡ್ಡಾ ಹಾಗೂ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಟಿಕೆಟ್ಗಾಗಿ ಮನವಿ ಮಾಡಿದ್ದರು. ಈಗ ಮತ್ತೊಂದೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ ಎಂದು ಹೇಳಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಸಂತಸಗೊಂಡಿದ್ದು, ಈ ಬಾರಿ ಮಂಡ್ಯ ಲೋಕಸಭಾ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಮಲತಾ ಅಂಬರೀಶ್ ಗೆ ಹೇಳಿದ್ದಾರೆ. ಅಂದರೆ ಪರೋಕ್ಷವಾಗಿ ಮತ್ತೊಮ್ಮೆ ಗೆದ್ದು ಲೋಕಸಭೆಗೆ ಬನ್ನಿ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಹೀಗಾಗಿ ಸುಮಲತಾ ಅವರು ಈ ಬಾರಿ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.

Read More

ಬಿಗ್‍ಬಾಸ್ ಸ್ಪರ್ಧಿ ತನಿಷಾಗೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಮೇಲೆ ಅಟ್ರಾಸಿಟಿ ದೂರು ದಾಖಲಾಗಿತ್ತು. ಇದೀಗ ಅಟ್ರಾಸಿಟಿ ಕೇಸ್ ‍ನಲ್ಲಿ ತನಿಷಾಗೆ ಬಿಗ್ ರಿಲೀಫ್ ಸಿಕ್ಕಿದೆ. ತನಿಷಾ ಬಿಗ್ ಬಾಸ್ ಶೋನಲ್ಲಿ ಪ್ರತಾಪ್ ಜೊತೆ ಸಂಭಾಷಣೆ ಮಾಡುವಾಗ ಭೋವಿ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಹಿನ್ನಲೆ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಿಡಿಯೋ ಕೊಟ್ಟಿದ್ದರು. ತನಿಷಾ ಕುಪ್ಪಂಡ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಜಾತಿನಿಂದನೆ ಕೇಸ್ ಆಗಿದ್ದರಿಂದ ಡಿವೈಎಸ್ಪಿ ಪ್ರಕರಣ ತನಿಖೆ ಮಾಡಿದ್ದರು. ತನಿಷಾ ಬಿಗ್ ಬಾಸ್ ಶೋನಲ್ಲಿ ಬಳಕೆ ಮಾಡಿರೋ ಆಕ್ಷೇಪಾರ್ಹ ಪದ ಇರುವ ವಿಡಿಯೋ ಆಡಿಯೋ ಒಂದನ್ನ ಪೊಲೀಸರು ಎಫ್‍ಎಸ್‍ಎಲ್‍ಗೆ ಕಳಿಸಿಕೊಟ್ಟಿದ್ದರು. ಎರಡು ತಿಂಗಳ ಬಳಿಕ ಎಫ್‍ಎಸ್‍ಎಲ್‍ವರದಿ ತನಿಖಾಧಿಕಾರಿ ಕೈ ಸೇರಿದೆ. ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.…

Read More

ಬೆಂಗಳೂರು:  ಮದ್ಯದ ನಶೆಯಲ್ಲಿ ಕಾರು ಚಲಾಯಿಸಿ ಎಂಟು ಬೈಕ್‌ ಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಉಲ್ಲಾಳು ಬಳಿಯ ಕೆಎಲ್‌ ಇ ಲಾ ಕಾಲೇಜು ಬಳಿ ನಡೆದಿದೆ. ಭರತ್ ಎಂಬ ಯುವಕ ತನ್ನ ಕಾರಿನಲ್ಲಿ ನಾಲ್ವರು ಸ್ನೇಹಿತರನ್ನ ಕರೆದುಕೊಂಡು ಹೋಗಿ ಪಾರ್ಟಿ ಮಾಡಿದ್ದಾನೆ. ಸ್ನೇಹಿತ ಗುರುದೀಪ್‌ ಗೆ ಕಾರು ಚಲಾಯಿಸಲು ಕೊಟ್ಟು ಡ್ರೈವ್‌ ಹೋಗಿದ್ದಾರೆ. ಮದ್ಯದ ನಶೆಯಲ್ಲಿ ಕೆಎಲ್‌ ಇ ಲಾ ಕಾಲೇಜಿನ ಬಳಿ ವೇಗವಾಗಿ ಕಾರು ಚಲಾಯಿಸಿಕೊಂಡು ಗುರುದೀಪ್ ಬಂದಿದ್ದಾನೆ. ಬಳಿಕ ಕಾರು ನಿಯಂತ್ರಣ ತಪ್ಪಿ ಬೇಕರಿ ಬಳಿ ನಿಂತಿದ್ದ ಬೈಕ್ ಗಳ ಮೇಲೆ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಎಂಟು ಬೈಕುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

Read More

ಆನೇಕಲ್: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್ ಬಿ ಐ ಹೆಸರು ಹೇಳಿಕೊಂಡು ವಂಚನೆ ಎಸಗಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದು, ಬೆಂಗಳೂರು ಹೊರವಲಯದ ಅನೇಕಲ್ ನಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಹೊಸೂರು ಮೂಲದ ಪವಿತ್ರ ಎಂಬಾಕೆ ವಂಚಿಸಿದ ಆರೋಪಿಯಾಗಿದ್ದಾಳೆ. ನಿರ್ಮಲಾ ಸೀತಾರಾಮನ್ ಅವರ ನಕಲಿ ಸಹಿ ಇರುವ ಪತ್ರಗಳನ್ನು ಸೃಷ್ಟಿಸಿ ಸಬ್ಸಿಡಿ ಕೊಡುತ್ತೇನೆ, ಸಾಲ ಕೊಡುತ್ತೇನೆ ಎಂದು ಮೋಸ ಮಾಡಿದ್ದಾಳೆ. ಬ್ಲೂ ವಿಂಗ್ಸ್ ಎಂಬ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡು ಜನರಿಗೆ ಮೋಸ ಮಾಡಿದ್ದಾಳೆ. ಒಬ್ಬರಿಗೆ 10 ಲಕ್ಷ ಲೋನ್ ನೀಡಿದ್ರೆ 5 ಲಕ್ಷ ಸಬ್ಸಿಡಿ ಎಂದು ಹೇಳಿ, ಹಣ ಡೆಪಾಸಿಟಿ ಮಾಡುವಂತೆ ಮಾಡಿ ಆರೋಪಿ ಯುವತಿ ವಂಚಿಸಿದ್ದಾಳೆ. ಅತ್ತಿಬೆಲೆ, ಧರ್ಮಾಪುರ, ಹೊಸೂರು ಸೇರಿದಂತೆ ಹಲವು ಕಡೆ ಈಕೆ ವಂಚಿಸಿದ್ದಾಳೆ ಎಂದು ತಿಳಿದು ಬಂದಿದ್ದು, ವಂಚಕಿ ಪವಿತ್ರ ಹಾಗೂ ಆಕೆಯ ಜೊತೆಗಾರರಾದ ಪ್ರವೀಣ್, ಯಲ್ಲಪ್ಪ, ಮಮತಾ ಸೇರಿ 14 ಮಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಮಗಳೂರು ಲವ್ ಜಿಹಾದ್ ವಿಚಾರವಾಗಿ ಡ್ಯಾನ್ಸ್ ಮಾಸ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 7 ಜನ ಭಜರಂಗದಳ ಕಾರ್ಯಕರ್ತರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಯುವಕನಿಂದ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂದು ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು, ಯುವಕನನ್ನು ಕೂಡಿಹಾಕಿ ಮನಬಂದಂತೆ ಥಳಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ. ಅಪ್ರಾಪ್ತ ಹಿಂದೂ ಬಾಲಕಿಯ ಜತೆ ಆಲ್ದೂರು ಪಟ್ಟಣದ ಸಂತೆ ಮೈದಾನದ ನಿವಾಸಿ ರೂಮನ್ ಎಂಬಾತ ಸಲಿಗೆಯಿಂದ ಇದ್ದು, ರೂಮನ್‌ ಡಾನ್ಸ್ ಮಾಸ್ಟರ್ ಆಗಿದ್ದು, ಪ್ರೀತಿಯ ಹೆಸರಿನಲ್ಲಿ ಈತ ಲವ್ ಜಿಹಾದ್ ನಡೆಸುತ್ತಿದ್ದಾನೆ ಎಂಬುದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಆಲ್ದೂರು ಸಮೀಪದ ಗಾಳಿಗಂಡಿಯ ಯುವಕ ರೂಮನ್, ತನ್ನನ್ನು ಭಜರಂಗ ದಳದ ಕಾರ್ಯಕರ್ತರು ಆಲ್ದೂರಿಗೆ ಕರೆಸಿ ಬಳಿಕ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದ. ಚಿಕ್ಕಮಗಳೂರು ತಾಲೂಕಿನ ದೊಡ್ಡ ಮಾಗರವಳ್ಳಿ ಗ್ರಾಮದ ಹಿಂದೂ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿದ್ದಾನೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇದೀಗ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ…

Read More