Author: admin

ದೇವನಹಳ್ಳಿ: ದಲಿತ ಬಾಲಕಿಯೊಬ್ಬಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿತಿನ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ. ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ನಿತಿನ್ ಎಂಬಾತ ಚುಡಾಯಿಸಿದ್ದನು. ಬಾಲಕಿ ಇದನ್ನು ಪ್ರಶ್ನಿಸಿದ್ದಕ್ಕೆ ನಿತಿನ್ ಬಾಲಕಿ ಮೇಲೆ ಹಲ್ಲೆ ನಡೆಸಿದ್ದನು. ಬಾಲಕಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. ಅದರಂತೆ ಮಾಲೂರು ಠಾಣಾ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಎರಡು ಗ್ರಾಮದ ಹಿರಿಯರು ಸೇರಿ ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆಸಿದ್ದರು. ಇದಾದ ಮೂರು ದಿನಗಳ ಬಳಿಕ ಬಾಲಕಿ ನಾಪತ್ತೆಯಾಗಿದ್ದಳು. ನಿನ್ನೆ ಕುರಿ ಕಾಯಲು ಹೋಗಿದ್ದಾಗ ಬಾಲಕಿಯ ಮೃತದೇಹ ಕಂಡ ಕುರಿಹಾಗಿಗಳು ಪೋಷಕರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ವತ್ರೆಗೆ ರವಾನಿಸಿದ್ದಾರೆ.

Read More

ರಾಯಚೂರು:  ಅಪ್ರಾಪ್ತೆಯೊಬ್ಬಳ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಂಗೀತಾ(17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕಾರ್ ಡ್ರೈವರ್ ಕೃಷ್ಣ ಎಂಬಾತನ ಜೊತೆಗೆ ಪ್ರಣಯದಲ್ಲಿದ್ದ ಸಂಗೀತಾ, ಎರಡು ಬಾರಿ ಪ್ರಿಯಕರನಾದ ಕೃಷ್ಣನ ಜೊತೆಗೆ ಮನೆಬಿಟ್ಟು ಹೋಗಿದ್ದಳು. ಆಗ ಹೆತ್ತವರು ಬುದ್ದಿವಾದ ಹೇಳಿ ಮನೆಗೆ ಕರೆತಂದಿದ್ದರು. ಕೊನೆಗೆ ಮನನೊಂದು ಮನೆಯಲ್ಲಿಯೇ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿದ್ದ ಸೀರೆಯಿಂದ ನೇಣುಬಿಗಿದುಕೊಂಡು ಸಂಗೀತಾ ಸಾವಿಗೆ ಶರಣಾಗಿದ್ದಾಳೆ. ಈಕೆಯ ಮೃತದೇಹವನ್ನು ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪ್ರಾಪ್ತೆಯ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಆರೋಪಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹಣ ಪಡೆದು ಕಾರ್ಯಕ್ರಮವೊಂದರಲ್ಲಿ ಭಾಗಿ ಆಗದೇ ಇರುವ ಕಾರಣಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಅವರ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಲು ಸೋನಾಕ್ಷಿ ಹಣ ಪಡೆದಿದ್ದರು. ಹಣ ಪಡೆದುಕೊಂಡೂ ಅವರು ಈ ದೂರಿಗೆ ಸಂಬಂಧಿಸಿದಂತೆ ಮುರಾದಾಬಾದ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 2018ರಲ್ಲಿ ಸೋನಾಕ್ಷಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದರು. ಆಯೋಜಕ ಪ್ರಮೋದ್ ಶರ್ಮಾ ಬಳಿ ಹಣ ಪಡೆದಿದ್ದರು. ಕಾರ್ಯಕ್ರಮಕ್ಕೆ ಬಾರದೇ ಇರುವ ಕಾರಣಕ್ಕಾಗಿ 2019ರಂದು ಮುರಾದಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

Read More

ಧಾರವಾಡ: ವಿಶೇಷಚೇತನ ಮಗಳು ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳೆಂದು ಹೆತ್ತ ತಾಯಿಯೇ ಕೊಲೆ ಮಾಡಿರುವ ಘಟನೆ ಧಾರವಾಡದ ನಗರದ ಕಮಲಾಪುರ ಹೂಗಾರ ಓಣಿಯಲ್ಲಿ ಘಟನೆ ನಡೆದಿದೆ. ತಾಯಿ ಜ್ಯೋತಿ ಹಾಗೂ ಪ್ರಿಯಕರ ರಾಹುಲ್ ಸೇರಿಕೊಂಡು ಈ ಪಾಪಿ ಕೃತ್ಯ ಮಾಡಿದ್ದಾರೆ. ಹುಬ್ಬಳ್ಳಿಯ ನವನಗರ ಮೂಲದ ರಾಹುಲ್ ಜೊತೆ ಜ್ಯೋತಿ ಅನೈತಿಕ ಸಂಬಂಧ ಹೊಂದಿದ್ದಳು, ಇದಕ್ಕೆ ಮಗಳು ಅಡ್ಡಿಯಾಗಿದ್ದಾಳೆ ಎಂದು ಪ್ರಿಯಕರ ರಾಹುಲ್ ಜೊತೆ ಸೇರಿಕೊಂಡು ಮಗಳನ್ನೇ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಘಟನೆ ಸಂಬಂಧ ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Read More

ಪಾಪ್ ಕಾರ್ನ್ ಆರೋಗ್ಯಕ್ಕೆ ಒಳ್ಳೆಯದು..!: ಮೆಕ್ಕೆಜೋಳದಿಂದ ತಯಾರಿಸಿದ ಪಾಪ್ ಕಾರ್ನ್ ಅನೇಕ ಪೋಷಕಾಂಶಗಳಿಂದ ಕೂಡಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ಮಲಬದ್ಧತೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪಾಪ್‌ ಕಾರ್ನ್‌ನಲ್ಲಿರುವ ಫೀನಾಲಿಕ್‌ ಆಂಟಿಆಕ್ಸಿಡೆಂಟ್‌ ಗಳು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಅಲ್ಲದೆ ತ್ವಚೆಯ ಮೇಲಿನ ಸುಕ್ಕುಗಳನ್ನು ತಡೆಯಲು ಮತ್ತು ಯೌವನವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ. ಕಪ್ಪು ಕಲೆಗಳಿಗೆ ರಾಮಬಾಣ ಅರಿಶಿನ: ಮೂಗು ಅಥವಾ ಕೆನ್ನೆಯ ಮೇಲೆ ಕಪ್ಪು ಕಲೆಗಳು ಸಾಮಾನ್ಯ. ಇದು ಯುವಜನತೆ ಹಾಗೂ ವಯಸ್ಸಾದವರಲ್ಲೂ ಕಂಡು ಬರುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಮನೆಯಲ್ಲಿಯೆ ಮದ್ದು ಇದೆ. ಅರಿಶಿನವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರೋಗ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಮೂಗಿನ ಮೇಲಿನ ಕಪ್ಪು ಕಲೆಗಳನ್ನು ತೊಡೆದುಹಾಕಲು ಅರಿಶಿನದೊಂದಿಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ. 15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ವಾರಕ್ಕೆ…

Read More

ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫಿವ‌ರ್ ಮತ್ತು ಚಿಕನ್‌ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿನ ಗ್ರಾಮದ ಜನರು ಜ್ವರ, ಮೈ ಕೈ ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದಾರೆ. ನೆರೆಬೆಂಚಿ ಗ್ರಾಮ ಮಾತ್ರವಲ್ಲದೇ, ಅನೇಕ ಗ್ರಾಮಗಳಲ್ಲಿ ಚಿಕನ್ ಗುನ್ಯಾ ಆತಂಕ ಹೆಚ್ಚಾಗಿದೆ. ಹೀಗಾಗಿ ಕೊಪ್ಪಳ ಜಿಲ್ಲಾ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ. ಯಾವೆಲ್ಲಾ ಕ್ರಮ ಕೈಗೊಳ್ಳಬೇಕು. ಜನರು ಮಾಡಬೇಕಾಗಿರುವುದು ಏನು ಎಂಬುವುದರ ಬಗ್ಗೆ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಲು ಮುಂದಾಗಿದೆ.

Read More

ಬಿಎಂಟಿಸಿ, ಕೆಎಸ್ ‌ಆರ್‌ ಟಿಸಿ ಬಸ್ ‌ಗಳಲ್ಲಿ ಕಿಟಕಿ ಪಕ್ಕದ ಸೀಟ್‌ ಗಾಗಿ ಹೊಡೆದಾಡಿಕೊಂಡ ಘಟನೆಗಳು ಹಲವೆಡೆ ನಡೆದಿವೆ. ಹಾಗೆಯೇ ಇದೀಗ ಯುವತಿಯರಿಬ್ಬರು ಬಿಎಂಟಿಸಿ ಬಸ್‌ ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಚಪ್ಪಲಿ, ಶೂನಲ್ಲಿ ಬಡಿದಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಜೆಸ್ಟಿಕ್ ಟು ಪೀಣ್ಯಾ ಬಸ್‌ ನಲ್ಲಿ ಯುವತಿಯರಿಬ್ಬರು ಚಪ್ಪಲಿಯಲ್ಲಿ ಬಡಿದಾಡಿಕೊಂಡ ಘಟನೆ ವರದಿಯಾಗಿದೆ. ಮೆಜೆಸ್ಟಿಕ್ ‌​​​ನಿಂದ ಪೀಣ್ಯ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ ‌ನಲ್ಲಿ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಯುವತಿಯರು ಮಧ್ಯೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಚಪ್ಪಲಿ, ಶೂ ನಿಂದ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋವನ್ನು ಅಲ್ಲಿದ್ದ ಇನ್ನಿತರ ಪ್ರಯಾಣಿಕರು ತಮ್ಮ ಮೊಬೈಲ್‌​​ ನಲ್ಲಿ ಸೆರೆಹಿಡಿಯಲಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲಾತಣಗಳಲ್ಲಿ ವೈರಲ್ ಆಗುತ್ತಿದೆ.

Read More

ಉತ್ತರಾಖಂಡದ ಸರ್ಕಾರಿ ಜಮೀನಿನಲ್ಲಿದ್ದ ಮದರಸಾ ಧ್ವಂಸ ವಿಚಾರದಲ್ಲಿ ಘರ್ಷಣೆ. ಸಾವಿನ ಸಂಖ್ಯೆ 4 ಆಗಿದೆ. 250 ಜನರು ಗಾಯಗೊಂಡಿದ್ದಾರೆ. ಹಲ್ದ್ವಾನಿಯಲ್ಲಿ ಘರ್ಷಣೆ ಆರಂಭವಾಯಿತು. ಪ್ರತಿಭಟನಕಾರರು ಅಧಿಕಾರಿಗಳನ್ನು ತಡೆಯಲು ಯತ್ನಿಸಿದ ನಂತರ ಘರ್ಷಣೆ ಉಲ್ಬಣಗೊಂಡಿತು. ಬಂಭುಲ್ಪುರ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದೆ. ಹಲವು ವಾಹನಗಳು ಮತ್ತು ಟ್ರಾನ್ಸ್‌ಫಾರ್ಮರ್ ‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಮಧ್ಯೆ, ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಕರ್ಫ್ಯೂ ಘೋಷಿಸಿದರು. ದಾಳಿಕೋರರನ್ನು ಗುಂಡು ಹಾರಿಸುವಂತೆ ಆದೇಶಿಸಲಾಗಿದೆ. ರಾಜ್ಯದಲ್ಲಿ ಕೆಲ ದಿನಗಳಿಂದ ಪಾಲಿಕೆ ನೇತೃತ್ವದಲ್ಲಿ ಒತ್ತುವರಿ ಜಮೀನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಅತಿಕ್ರಮಣಗೊಂಡ ಮೂರು ಎಕರೆ ಜಾಗವನ್ನು ವಶಪಡಿಸಿಕೊಳ್ಳಲಾಗಿದ್ದು, ಮದರಸಾ ಕಟ್ಟಡಕ್ಕೆ ಬೀಗ ಹಾಕಿ ಸೀಲ್ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಪಂಕಜ್ ಉಪಾಧ್ಯಾಯ ತಿಳಿಸಿದ್ದಾರೆ. ಈ ತಿಂಗಳ 1ರ ಮೊದಲು ತೆರವಿಗೆ ಸೂಚನೆ ನೀಡಲಾಗಿತ್ತು. ಧ್ವಂಸಗೊಳಿಸುವುದನ್ನು ತಪ್ಪಿಸಬೇಕು ಎಂದು ಧಾರ್ಮಿಕ, ರಾಜಕೀಯ ಮುಖಂಡರು ಒತ್ತಾಯಿಸಿದರೂ ಅಧಿಕಾರಿಗಳು ಪಟ್ಟು ಹಿಡಿದಿಲ್ಲ. ಸ್ಥಳೀಯ ನಿವಾಸಿಗಳು ಪ್ರಾರ್ಥನೆಗೆ ಬಳಸುತ್ತಿದ್ದ ಕಟ್ಟಡವನ್ನು ನಿನ್ನೆ ಬುಲ್ಡೋಜರ್‌…

Read More

ಸಂಬಂಧದಿಂದ ಹಿಂದೆ ಸರಿದ ಪ್ರೇಯಸಿಯನ್ನು ಯುವಕ ಕೊಡಲಿಯಿಂದ ದಾಳಿ ನಡೆಸಿ ಕೊಂದಿದ್ದಾನೆ. ತಂದೆ-ತಾಯಿ ನಿಶ್ಚಯಿಸಿದ ಮದುವೆಗೆ ಯುವತಿ ಒಪ್ಪಿದ್ದಕ್ಕೆ ಯುವಕ ಕೋಪಗೊಂಡಿದ್ದಾನೆ. ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಗುರುವಾರ ಭೀಕರ ಹತ್ಯೆ ನಡೆದಿದೆ. ಮಧ್ಯಾಹ್ನ 1.30ರ ಸುಮಾರಿಗೆ ಟೈಲರಿಂಗ್ ಸಂಸ್ಥೆಯಿಂದ ಸಹೋದರಿಯೊಂದಿಗೆ ಬರುತ್ತಿದ್ದ ಅಲಖ್ಯ ಎಂಬ ಯುವತಿ ಮೇಲೆ ಆಕೆಯ ಪ್ರಿಯಕರ ಜುಕಂಟಿ ಶ್ರೀಕಾಂತ್ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಅಲೇಖಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮಹಿಳೆಯ ಸಹೋದರಿಯೂ ಗಾಯಗೊಂಡಿದ್ದಾರೆ. ಅಲಖ್ಯ ಮತ್ತು ಶ್ರೀಕಾಂತ್ ಪ್ರೀತಿಸುತ್ತಿದ್ದರು. ಆದರೆ ನಂತರ ಅಲಖ್ಯ ಬೇರೆ ಯುವಕನೊಂದಿಗೆ ಮನೆಯವರು ಏರ್ಪಡಿಸಿದ್ದ ಮದುವೆಗೆ ಸಿದ್ಧಳಾದಳು. ಇದರೊಂದಿಗೆ ಅಲಖ್ಯ ಶ್ರೀಕಾಂತ್ ಅವರನ್ನು ತಪ್ಪಿಸಿದರು. ಇದರಿಂದ ಕುಪಿತಗೊಂಡ ಶ್ರೀಕಾಂತ್ ಅಲೇಖಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಬಳಿಕ ಪರಾರಿಯಾಗಿದ್ದ ಶ್ರೀಕಾಂತ್ ತಲೆಮರೆಸಿಕೊಂಡಿದ್ದಾನೆ

Read More

ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗಿದ್ದು, ರಾಜ್ಯಕ್ಕೆ ನೀಡುವ ಅನುದಾನದ ಗಾತ್ರವೂ ಹೆಚ್ಚಾಗಬೇಕಾಗಿತ್ತು. ಇದು ರಾಜ್ಯಕ್ಕೆ ಆಗಿರುವ ಅನ್ಯಾಯ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸಂಸದರು ರಾಜ್ಯದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ. 2017-18 ರಿಂದ ಇಲ್ಲಿಯವರೆಗೆ ರಾಜ್ಯದ ಪಾಲಿಗೆ 1.87 ಲಕ್ಷ ಕೋಟಿ ತೆರಿಗೆ ಹಂಚಿಕೆ ಬರದೇ ಅನ್ಯಾಯವಾಗಿದೆ. ರಾಜ್ಯಕ್ಕೆ ಈ ಮಟ್ಟದ ನಷ್ಟವಾಗಿರುವುದನ್ನು ಸರಿಯೆಂದು ಬಿಜೆಪಿಯವರು ಹೇಳುತ್ತಾರೆಯೇ? ನಿನ್ನೆಯ ದಿನ ಪ್ರಧಾನಿ ಮೋದಿ ಅವರು ಅಧಿವೇಶನದಲ್ಲಿ ಮಾತನಾಡುತ್ತಾ, ರಾಜ್ಯ ತನ್ನ ಹಕ್ಕಿನ ಬಗ್ಗೆ ಪ್ರಶ್ನಿಸಿರುವುದನ್ನು ದೇಶ ವಿಭಜನೆ ಮಾಡುವ ವಿಷಯ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರತಿಭಟನೆ ಮಾಡಿದ ರಾಜ್ಯದ ನಡೆಯನ್ನು ಟೀಕಿಸಿದ ಮೋದಿಯವರು, ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತ್ ರಾಜ್ಯಕ್ಕೆ ಸಾಕಷ್ಟು ಅನುದಾನ ಹಂಚಿಕೆಯಾಗುತ್ತಿಲ್ಲವೆಂದೂ ಅಂದಿನ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಾ, ‘60 ಸಾವಿರ ಕೋಟಿ…

Read More