Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಇರಾಕ್ ನ ರಾಜಧಾನಿ ಬಾಗ್ದಾದ್ ನಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಅಬು ಬಕಿರ್ ಅಲ್-ಸಾದಿ ಮತ್ತು ಇಬ್ಬರು ಗಾರ್ಡ್‌ಗಳು ಕೊಲ್ಲಲ್ಪಟ್ಟರು. ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ಪ್ರದೇಶದಲ್ಲಿ ತನ್ನ ಪಡೆಗಳ ವಿರುದ್ಧ ದಾಳಿ ನಡೆಸಿದ ಹೆಜ್ಬೊಲ್ಲಾ ಕಮಾಂಡರ್ ಕೊಲ್ಲಲ್ಪಟ್ಟರು ಎಂದು ಯುಎಸ್ ಹೇಳಿದೆ. ಬುಧವಾರ ರಾತ್ರಿ ಬಾಗ್ದಾದ್ ನ ಜನನಿಬಿಡ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರೊಂದು ಡ್ರೋನ್ ನಿಂದ ಡಿಕ್ಕಿ ಹೊಡೆದಿದೆ. ದಾಳಿಯ ನಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅಮೆರಿಕ ದೆವ್ವ ಎಂದು ಜನರು ಪ್ರತಿಭಟಿಸಿದರು. ಅಲ್ಲದೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನವರಿ 28 ರಂದು ಯುಎಸ್ ಪಡೆಗಳ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಸಿರಿಯಾ ಮತ್ತು ಇರಾಕ್‌ನಲ್ಲಿ ಯುಎಸ್ ಇದುವರೆಗೆ 85 ಸ್ಟ್ರೈಕ್ ಗಳನ್ನು ನಡೆಸಿದೆ. ಅದೇ ಸಮಯದಲ್ಲಿ, ದಾಳಿಯ ನಂತರ ಹಿಜ್ಬುಲ್ಲಾ ಪ್ರತಿದಾಳಿ ನಡೆಸಲಿದೆ ಎಂದು ವರದಿಯಾಗಿದೆ.
ಕರ್ನಾಟಕವು ಹುಕ್ಕಾ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಹುಕ್ಕಾ ಉತ್ಪನ್ನಗಳು ಮತ್ತು ಶಿಶಾಗಳ ಮಾರಾಟ, ಖರೀದಿ, ಪ್ರಚಾರ, ಮಾರುಕಟ್ಟೆ ಮತ್ತು ಸೇವನೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿರ್ಧಾರವು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಆಧರಿಸಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧಿಗಳನ್ನು COTPA (ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯಿದೆ) 2003, ಮಕ್ಕಳ ಆರೈಕೆ ಮತ್ತು ಸಂರಕ್ಷಣಾ ಕಾಯಿದೆ 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮಗಳು 2015, ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸಂರಕ್ಷಣಾ ಕಾಯ್ದೆಯ ಇತರ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದೆ ಭಾರತೀಯ ದಂಡ ಸಂಹಿತೆ. ಕಳೆದ ವರ್ಷ ಬೆಂಗಳೂರಿನ ಹುಕ್ಕಾ ಬಾರ್ ನಲ್ಲಿ ಸಂಭವಿಸಿದ ಬೆಂಕಿಯನ್ನು ಗಮನದಲ್ಲಿಟ್ಟುಕೊಂಡು, ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಅಗ್ನಿ ಸುರಕ್ಷತಾ ನಿಯಮಗಳನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ. 45 ನಿಮಿಷಗಳ ಕಾಲ ಹುಕ್ಕಾ ಸೇದುವುದು 100…
ಪ್ರಕಾಶ್ ರಾಜ್. ಈ ಒಂದು ಹೆಸರು ಬಹಳಷ್ಟು ವಿವಾದಗಳಿಗೆ ಕಾರಣವಾಗಿದ್ದು ಇದೀಗ ಮತ್ತೊಮ್ಮೆ ಟ್ರೋಲ್ ಆಗುವ ಮೂಲಕ ಮುನ್ನೆಲೆಗೆ ಬಂದಿದೆ. ಉಡುಪಿಯ ಕಾಪು ಮಾರಿಗುಡಿ ದೇವಾಲಯಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು. ನಂತರ ಭರದಿಂದ ಸಾಗುತ್ತಿರುವ ಕಾಮಗಾರಿ ವೀಕ್ಷಿಸಿದ ನಟ ಪ್ರಕಾಶ್ ರೈ ಅವರು ಇಳಕಲ್ಲಿನ ಕಲಾತ್ಮಕ ಶೈಲಿಯ ಕೆತ್ತನೆಗಳ ಬಗ್ಗೆ ಮಾಹಿತಿ ಪಡೆದರು. ಈ ಬೆನ್ನಲ್ಲೇ ಪ್ರಕಾಶ್ ರಾಜ್ ಟೀಕೆಗೆ ಗುರಿಯಾಗುತ್ತಿದ್ದಾರೆ. ʻʻಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇಕೆ? ಆಡಳಿತ ಮಂಡಳಿ ದೇವಾಲಯದ ಒಳಗೆ ಬಿಟ್ಟಿದ್ದು ತಪ್ಪು. ಮೊದಲು ಗೋ ಮೂತ್ರ ಹಾಕಿ ಸಿಂಪಡಿಸಿʼʼ ಎಂದು ಕಮೆಂಟ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಫೋಟೊಗಳು ವೈರಲ್ ಆಗುತ್ತಿದ್ದಂತೆ ʻʻಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ…
ʼʼಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಲ್ಲಿ ಹೇಳುವುದಾದರೆ ಭಾರತ ಪ್ರಜಾಪ್ರಭುತ್ವದ ತಾಯಿ. ಯಾಕೆಂದರೆ ನಮ್ಮ ಈ ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಇತರ ರಾಷ್ಟ್ರಗಳಿಗೆ ಮಾದರಿʼʼ ಎಂದು ಗಡ್ಕರಿ ಹೇಳಿದ್ದಾರೆ. ʼʼರಾಜಕಾರಣಿಗಳು ಬಂದು ಹೋದರೂ ಅಂತಿಮವಾಗಿ ಅವರು ಕ್ಷೇತ್ರಗಳಲ್ಲಿ ಜನರಿಗೆ ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇದರಿಂದಲೇ ಅವರಿಗೆ ತಮ್ಮ ಕ್ಷೇತ್ರದಲ್ಲಿ ಗೌರವ ಸಿಗುತ್ತದೆ. ಪ್ರಚಾರ ಮತ್ತು ಜನಪ್ರಿಯತೆ ಬೇಕು. ಅವರು ಸಂಸತ್ತಿನಲ್ಲಿ ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ ಆಯಾ ಕ್ಷೇತ್ರದ ಜನರಿಗಾಗಿ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಮುಖ್ಯವಾಗುತ್ತದೆʼʼ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಪ್ರದರ್ಶನ ತೋರುವ ಸಂಸದರಿಗೆ ಕೊಡ ಮಾಡುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗಡ್ಕರಿ ಮಾತನಾಡಿದ ಅವರುʼʼ ನಾನು ಯಾವತ್ತೂ ತಮಾಷೆಗೆ ಹೇಳುತ್ತಿರುತ್ತೇನೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಎಂದಿಗೂ ಅರ್ಹವಾದ ಗೌರವ ಸಿಗುವುದಿಲ್ಲ ಮತ್ತು ಕೆಟ್ಟ ಕೆಲಸ ಮಾಡುವವರಿಗೆ ಎಂದಿಗೂ ಶಿಕ್ಷೆಯಾಗುವುದಿಲ್ಲ, ಚರ್ಚೆ, ವಾದ-ವಿವಾದಗಳಲ್ಲಿ ಮೂಡಿಬರುವ…
ಬ್ಯಾಂಕ್ ನೌಕರನ ಹೆಸರಿನಲ್ಲಿ ಬಂದ ಕರೆಗೆ ಸ್ಪಂದಿಸಿ ಮೊಬೈಲ್ ಗೆ ಬಂದ ಒಟಿಪಿಯನ್ನು ಕೊಟ್ಟ ಪುತ್ತೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ 1,73,000 ರೂ. ಅನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥರು ಇದೀಗ ಹಣವನ್ನೆಲ್ಲ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 24-2024 ಕಲಂ: IPC 1860 ಕಲಂ-417,419,420 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಕೂಡ ಇರುತ್ತಾರೆ. ಕೆಲವು ಸಲ ಬೇಲಿಯೇ ಎದ್ದು ಹೊಲ ಮೇದ ಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಚಂದ್ರಶೇಖರ ಭಟ್ (62 ವರ್ಷ) ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕೆವೈಸಿ ಅಪ್ಡೆಟ್ ಮಾಡುವ ಕುರಿತು ಸಂದೇಶ ಬಂದಿದೆ. ಸದ್ರಿ ಸಂದೇಶದಲ್ಲಿ ಬಂದಿರುವ ಒಟಿಪಿಯನ್ನು ಚಂದ್ರಶೇಖರ ಭಟ್ ಅಪರಿಚಿತನಿಗೆ ಫೋನ್ ಕರೆಯಲ್ಲಿ ನೀಡಿದ್ದಾರೆ. ಇದಾದ ತಕ್ಷಣ ಇವರ ಅಕೌಂಟ್ ನಿಂದ ಹಣ ಹೋಗುವುದಕ್ಕೆ ಶುರುವಾಗಿದೆ. ಹಂತ ಹಂತವಾಗಿ ಖಾತೆಯಿಂದ ಹಣ ಕಳೆದುಕೊಂಡ ಅವರು ಅಂತಿಮವಾಗಿ 1,73,000 ರೂ. ಅನ್ನು ಕಳೆದುಕೊಂಡಿದ್ದಾರೆ.
ದೇಶಾದ್ಯಂತ ಮಂಗನ ಕಾಯಿಲೆ ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎಂದು ವರದಿಯಾಗಿದೆ. ಸಹಜವಾಗಿ ಈ ಸುದ್ದಿಯಿಂದ ಜನ ಭಯಭೀತರಾಗಿದ್ದಾರೆ. ಮಂಗನ ಖಾಯಿಲೆ, ಅಥವಾ Kyasanur Forest Disease (KFD) ಅಂತ ಜ್ವರವನ್ನು ಕರೆಯಲಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಕೋತಿಯ ವೈರಸ್ ಗಳಿಂದ ಇದು ವೇಗವಾಗಿ ಹಬ್ಬುತ್ತದೆ. ಜ್ವರ, ತಲೆನೋವು, ಸ್ನಾಯು ನೋವು, ವಾಂತಿ ಮುಂತಾದ ರೋಗ ಲಕ್ಷಣಗಳನ್ನು ಹೊಂದಿದೆ. ಸದ್ಯ ೪೯ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಎರಡು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಆತಂಕ ಬೇಡ ಕಟ್ಟೆಚ್ಚರ ವಹಿಸಿ ಎಂದು ಜಿಲ್ಲಾ ವೈದ್ಯಾಧಿಕಾರಿ ಪಿ ದಿನೇಶ್ ಮಾದ್ಯಮಗಳಿಗೆ ತಿಳಿಸಿದ್ದಾರೆ. ಹೇಗೆ ಹರಡುತ್ತದೆ?: ಮಂಗನ ಖಾಯಿಲೆ ಅಥವಾ Kyasanur Forest Disease (KFD), ಇದೊಂದು Haemaphysalis ಕುಲಕ್ಕೆ ಸೇರಿದ ಉಣುಗುಗಾಗಿದ್ದು ರೋಗಗ್ರಸ್ತ ಕೋತಿಯ ದೇಹದಲ್ಲಿದ್ದ ಉಣುಗು(Tick) ಕೋತಿಯ ಮರಣಾನಂತರ ಉದುರಿ ಗಾಳಿಯ ಮೂಲಕ ಜಾನುವಾರುಗಳಿಗೆ ಹರಡುತ್ತದೆ. ಅಲ್ಲಿಂದ ನೇರವಾಗಿ ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತದೆ. ಈ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ…
ಈ ಸಮಾಜವನ್ನು ಅರ್ಥ ಮಾಡಿಕೊಳ್ಳೋದೆ ಕಷ್ಟ. ಜೀವನ ಚೆನ್ನಾಗಿರ್ಲಿ ಅಂತ ಬುದ್ಧಿವಾದ ಹೇಳಿದ್ರೂ ಕಷ್ಟ. ಬುದ್ದಿವಾದ ಹೇಳಿಲ್ಲಂದ್ರೆ ಮತ್ತೆ ಮತ್ತೆ ಎಡವಟ್ಟುಗಳನ್ನು ಮಾಡ್ತಾನೆ ಇರ್ತಾರೆ ಜನ. ಹೀಗೆ ಇಲ್ಲೊಬ್ಬ ಯುವಕನೋರ್ವ ವೇಗವಾಗಿ ಗಾಡಿ ಓಡಿಸುತ್ತಿದ್ದುದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಅನ್ಯಕೋಮಿನ ಯುವಕರ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ದೊಡ್ಡಪೇಟೆಯಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಕಂಪ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಶೀಲ್ (23) ಗಂಭೀರವಾಗಿ ಗಾಯಗೊಂಡ ಯುವಕ ಎಂದು ತಿಳಿದು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ “ಗಾಯಾಳು ಯುವಕನನ್ನು ಸುಶೀಲ್ ಎಂದು ಗುರುತಿಸಲಾಗಿದೆ. ಇವರು ಕುಮುದ್ವತಿ ಕಾಲೇಜ್ ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್ ನಲ್ಲಿ ವೀಲಿಂಗ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅನ್ಯಕೋಮಿನ ನಾಲ್ವರು ದುಷ್ಕರ್ಮಿಗಳ ತಂಡ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ…
ಕೊರಟಗೆರೆ: 250 ವರ್ಷಗಳ ಇತಿಹಾಸ ಇರುವ ಕೊರಟಗೆರೆಯ ಧರ್ಮಸಾಗರ ಕೆರೆಗೆ 426 ಎಕರೆ ಭೂ ವಿಸ್ತೀರ್ಣವಿದೆ. ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆಯೇ ಕೊರಟಗೆರೆಯಲ್ಲಿ ಇಲ್ಲ, ಸ್ಥಳೀಯ ಕ್ಯಾಮೇನಹಳ್ಳಿ ಗ್ರಾಪಂಗೆ ಕೆರೆಯ ರಕ್ಷಣೆ ಮತ್ತು ಅಭಿವೃದ್ದಿಯ ಕಾಳಜಿಯು ಇಲ್ಲದೇ ಭೂಗಳ್ಳರ ಹಾವಳಿಗೆ ಕೆರೆಯು ಬಲಿಯಾಗಿ ಅಂತರ್ಜಲ ಮಟ್ಟವು ಮತ್ತೇ ಪಾತಾಳಕ್ಕೆ ಕುಸಿದಿದೆ. ಜಯಮಂಗಲಿ ನದಿಪಾತ್ರದ ತೀತಾ ಜಲಾಶಯವು ಕಳೆದ ವರ್ಷ ಕೋಡಿಬಿದ್ದು ಧರ್ಮಸಾಗರ ಕೆರೆಯು ತುಂಬಿದ ವರ್ಷವೇ ಖಾಲಿಯಾಗಿದೆ. ಕೆರೆಯ ಹಿಂಭಾಗದ 95 ಗ್ರಾಮದ ಅಂತರ್ಜಲ ಮಟ್ಟ ಸುಧಾರಣೆಗೆ ಮತ್ತೆ ಪೆಟ್ಟುಬಿದ್ದಿದೆ. ತೀತಾ ಜಲಾಶಯದ ಬಲದಂಡೆ ನಾಲೆಯಿಂದ ವೆಂಕಟಾಪುರ, ಕಂಬದಹಳ್ಳಿ, ಕೋಡ್ಲಹಳ್ಳಿ ಮಾರ್ಗದ ಕಾಲುವೆಗೆ ಕಲ್ಲು-ಮಣ್ಣು ಹಾಕಿ ಮುಚ್ಚಿರುವ ಹಿನ್ನಲೆ ನೂರಾರು ರೈತರಿಗೆ ಸಂಕಷ್ಟ. ಮೀನುಗಾರಿಕೆ ಇಲಾಖೆಯು ಲಾಭಕ್ಕೆ ಮಾತ್ರ ಸೀಮಿತವಾಗಿದ್ದು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿಗೆ ಸರಕಾರ ಪ್ರಮುಖ ಆದ್ಯತೆ ನೀಡಬೇಕಿದೆ. 138 ಎಕರೆಯ ದಾಖಲೆಯೇ ಇಲ್ಲ: ಧರ್ಮಸಾಗರ ಕೆರೆಯು ಮಾಳೇನಹಳ್ಳಿ ಸರ್ವೆ.15ರಲ್ಲಿ 31 ಎಕರೆ,…
ತುರುವೇಕೆರೆ: ತಾಲೂಕಿನಾದ್ಯಂತ ಫೆಬ್ರವರಿ 13 ರಿಂದ 18 ರವರೆಗೆ ‘ಸಂವಿಧಾನ ಜಾಗೃತಿ ಜಾಥಾ’ ಬಗ್ಗೆ ಹಾಗೂ ಸಂವಿಧಾನದ ಮಹತ್ವ ಜೊತೆಗೆ ಮುಂದಾಗುವ ಪರಿಣಾಮಗಳ ಬಗ್ಗೆ ಜಾಗ್ರತೆ ಮೂಡಿಸುವ ಕಾರ್ಯಕ್ರಮದ ಹಿನ್ನೆಲೆ ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ದಂಡಾಧಿಕಾರಿ ವೈ.ಎಂ. ರೇಣುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಇದೆ ವೇಳೆ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ, ಇದೇ ತಿಂಗಳು 12ನೇ ತಾರೀಕು ಸಂಜೆ ಸಂವಿಧಾನ ಜಾಗೃತಿ ಜಾಥ ರಥ ನಮ್ಮ ತಾಲೂಕಿಗೆ ಆಗಮಿಸಲಿದ್ದು, ಪ್ರತಿ ಹಳ್ಳಿಗಳ ಜನರಲ್ಲಿ ಕಾನೂನಿನ ಸುವ್ಯವಸ್ಥೆ ಬಗ್ಗೆ ಹಾಗೂ ಸರ್ಕಾರದಿಂದ ಬಂದಂತಹ ಅನುದಾನದ ಉಪಯೋಗ ಬಗ್ಗೆ ಜನರಲ್ಲಿ ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸುವ ಜಾಥಾ ಇದಾಗಿದ್ದು, ಜನವರಿ 26 ರಂದು ಪ್ರಾರಂಭವಾದ ಈ ಸಂವಿಧಾನ ಜಾಗ್ರತಾ ಜಾಥಾ ಫೆ.26ರಂದು ಬೆಂಗಳೂರು ತಲುಪಲಿದೆ ಎಂದರು. ನಮ್ಮ ತಾಲೂಕಿಗೆ ಆಗಮಿಸಲಿರುವ ಸಂವಿಧಾನ ಜಾಗೃತಿ ಜಾಥಾ ರಥವನ್ನು ಬಹಳ ವಿಜೃಂಭಣೆಯಿಂದ ಸ್ವಾಗತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಇದೇ ವೇಳೆ ಅವರು…
ಬೀದರ್: ದ್ವಿಚಕ್ರ ವಾಹನ ಕಳ್ಳನೋರ್ವನನ್ನು ಬೀದರ ಜಿಲ್ಲೆಯ ನೂತನ ನಗರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೀದರ್ ಜಿಲ್ಲೆಯ ನೂತನ ನಗರ ಪೊಲೀಸ್ ಠಾಣೆಯ ಪಿ.ಐ.ವಿಜಯಕುಮಾರ ನೇತೃತ್ವದ ತಂಡ, ಪಿ.ಎಸ್.ಐ.ತಸ್ಲಿಂ ಸುಲ್ತಾನಾ ಹಾಗೂ ಠಾಣೆಯ ಅಪರಾಧ ಸಿಬ್ಬಂದಿಯಾದ ಶೇಕ ಮೊದಿನ, ಮಲ್ಲಿಕಾರ್ಜುನ, ಭರತ, ಪ್ರವೀಣಕುಮಾರ ಪೆಟ್ರೋಲಿಂಗ್ ನಡೆಸುತ್ತಿದ್ದರು. ಈ ವೇಳೆ ಪೊಲೀಸರನ್ನು ಕಂಡ ವ್ಯಕ್ತಿಯೋರ್ವ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಹಿಡಿದು ಪೊಲೀಸರು ವಿಚಾರಿಸಿದಾಗ, ಆತ ಸರಿಯಾಗಿ ಉತ್ತರ ನೀಡಿಲ್ಲ, ಬಳಿಕ ತಾನು ಒಂದು ವರ್ಷದ ಹಿಂದೆ ಹೊಟೇಲ್ ಮಯೂರಾ ಬಳಿ ಈ ವಾಹನವನ್ನು ಕದ್ದಿದ್ದು, ಅದನ್ನೇ ಬಳಸುತ್ತಿರುವುದಾಗಿ ಹೇಳಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯನ್ನ ಇನ್ನೂ ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಇನ್ನೂ 7 ಕದ್ದ ದ್ವಿಚಕ್ರ ವಾಹನಗಳನ್ನು ಪೊದೆಯಲ್ಲಿ ಬಚ್ಚಿಟ್ಟಿರುವ ಬಗ್ಗೆ ತಿಳಿಸಿದ್ದಾನೆ. ಹೀಗಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಸುಮಾರು 3.45 ಲಕ್ಷ ರೂಪಾಯಿ ಬೆಲೆ ಬಾಳುವ 7 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.…