Author: admin

ಬೀದರ್: ಕೌಟುಂಬಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಶನೂರ ಪೊಲೀಸರು ಮಹಾರಾಷ್ಟ್ರದ ಲಾತೂರದಲ್ಲಿ ಬಂಧಿಸಿದ್ದಾರೆ. ಪಂಡಿತ್ ಲೋಹರ ಎಂಬವರ ಪುತ್ರ ಅರುಣ ಬಂಧಿತ ಆರೋಪಿಯಾಗಿದ್ದಾನೆ. ಕೌಟುಂಬಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತ ಮಹಾರಾಷ್ಟ್ರದ ಲಾತೂರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಎ.ಎಸ್.ಐ. ಅನಿಲ್, ಸಿಪಿಸಿ ಬಾಲಾಜಿ, ಸಿಪಿಸಿ ಸಂಜೀವ ಅವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2014ರಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್

Read More

ಮುಂಬೈ: ಅಯೋಧ್ಯೆಯಲ್ಲಿ  ನಿರ್ಮಾಣವಾಗಲಿರುವ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಿಂದ ಪವಿತ್ರ ಇಟ್ಟಿಗೆಯನ್ನು ತರಲಾಗಿದೆ. ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಮುಸ್ಲಿಮರಿಗೆ ಪರಿಹಾರವಾಗಿ ನೀಡಿದ ಅಯೋಧ್ಯೆಯ ಭೂಮಿಯಲ್ಲಿ ಹೊಸ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಲ್ಲಿ ಪವಿತ್ರಗೊಳಿಸಲ್ಪಟ್ಟಿರುವ ಇಟ್ಟಿಗೆಯನ್ನು ಬಳಸಲಾಗುತ್ತದೆ. ಈ ಪವಿತ್ರ ಇಟ್ಟಿಗೆಯನ್ನು ಕಪ್ಪು ಮಣ್ಣಿನಿಂದ ಮಾಡಿದ್ದು, ಅದನ್ನು ಚಿನ್ನದಲ್ಲಿ ಕೆತ್ತಿ ಪವಿತ್ರ ಕುರಾನ್‌ ನ ಕೆಲವು ಉಪದೇಶಗಳನ್ನು ಹೊಂದಿದೆ ಎಂದು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಶನ್ (ಐಐಸಿಎಫ್) ಪದಾಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಈ ಇಟ್ಟಿಗೆಯನ್ನು ಮಾರ್ಚ್ 12 ರಂದು ರಂಜಾನ್ ಈದ್ ನಂತರ ಅಯೋಧ್ಯೆಯ ಮಸೀದಿ ಸ್ಥಳವಿರುವ ಧನ್ನಿಪುರ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Read More

ಹೆಚ್.ಡಿ. ಕೋಟೆ: 7 ವರ್ಷದ ಬಾಲಕಿಗೆ  ಶಿಕ್ಷಕಿಯೊಬ್ಬರು ಮನಬಂದಂತೆ ಥಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದು, ಕಲಿಕೆಯಲ್ಲಿ ಹಿಂದುಳಿದಿದ್ದಾಳೆ ಎನ್ನುವ ಕಾರಣಕ್ಕೆ ಶಿಕ್ಷಕಿ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ. ಶಿಕ್ಷಕಿ ರತ್ನಾಕುಮಾರಿ, 2ನೇ ತರಗತಿಯಲ್ಲಿ ಕಲಿಯುತ್ತಿರುವ ನಿಕ್ಷಿತಾ ಎಂಬ ಬಾಲಕಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿಕ್ಷಕಿಯ ಹಲ್ಲೆಯ ಹಿನ್ನೆಲೆ ಬಾಲಕಿಯ ಪೋಷಕರು ಹೆಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಈ ಬಗ್ಗೆ ಶಿಕ್ಷಕಿಯನ್ನು ಪೋಷಕರು ಪ್ರಶ್ನಿಸಿದಾಗ ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆಯ ಮರುದಿನ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ನಮ್ಮ ಮೇಲಾಧಿಕಾರಿಗಳಿಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ  ಶಿಕ್ಷಕಿ ರತ್ನಾಕುಮಾರಿಯನ್ನು ಅಮಾನತು ಗೊಳಿಸುವಂತೆ ಪೋಷಕರು ಪಟ್ಟು ಹಿಡಿದಿದ್ದು,  ಶಿಕ್ಷಕಿ ಗ್ರಾಮದಲ್ಲಿ ಜಾತಿ ಭೇದ ಮಾಡುತ್ತಾರೆ, ಸರಿಯಾದ ಸಮಯಕ್ಕೂ ಶಿಕ್ಷಕಿ ಶಾಲೆಗೆ ಬರುತ್ತಿಲ್ಲ ಎಂದ ಪೋಷಕರು ದೂರಿದ್ದಾರೆ. ವರದಿ: ಮಲಾರ ಮಹದೇವಸ್ವಾಮಿ

Read More

ಸರಗೂರು: ಹಾಡಿಯ ಜನರು ಅನಕ್ಷರತೆ,ಅಪೌಷ್ಟಿಕತೆ ಇನ್ನಿತರ ಸಮಸ್ಯೆಗಳಿಂದ ತೀವ್ರ ಹಿಂದುಳಿದಿದ್ದಾರೆ. ಪ್ರತ್ಯೇಕ ತಾಲೂಕು ಮಾಡಿ ಆರು ವರ್ಷ ಕಳೆದರು ಸಹ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಇಲ್ಲಿನ ಬಡ ಜನತೆ ನೆರಳುವಂತಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ,ಪಂಗಡದ ಬಡಜನರೇ ಹೆಚ್ಚಾಗಿ ವಾಸಿಸುತ್ತಿದ್ದು, ಭೌಗೋಳಿಕವಾಗಿ ಬಂಡೀಪುರ ಅಭಯಾರಣ್ಯ , ನುಗು ಹಾಗೂ ಕಪಿಲಾ ನದಿಗಳು ಹರಿಯುವ ಪ್ರಾಕೃತಿಕವಾಗಿ ಸುಂದರವಾಗಿರುವ ಪ್ರದೇಶದ ಜನರ ಬದುಕು ದುಸ್ತರವಾಗಿದೆ ಎಂದು ಎಸ್ ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಟಿ.ಆರ್. ಸುನೀಲ್ ಹೇಳಿದರು. ತಾಲ್ಲೂಕಿನ ಪಟ್ಟಣದಲ್ಲಿ ಎಸ್ ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರದಂದು ಹಮ್ಮಿಕೊಂಡಿದ್ದ, ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ದೇಶ ವ್ಯಾಪಿ ಸಹಿ ಸಂಗ್ರಹ, ಬೆಂಗಳೂರು ಚಲೋ ಪ್ರಚಾರಾಂದೋಲದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಅರಣ್ಯ ಸಂಪತ್ತು ಹಾಗೂ ಭೂಮಿಯ ಒಡೆತನ ಎಂಬುದು ಆಗರ್ಭ ಶ್ರೀಮಂತರ ಪಾಲಾಗುತ್ತಿದೆ. ಈ ಭಾಗದ ಜನರ ಮುಗ್ದತೆಯನ್ನು ಬಳಸಿಕೊಂಡು ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಅಚ್ಚೆ ದಿನ್, ಭಾಗ್ಯಗಳು,…

Read More

ಊಟಿ: ನಿರ್ಮಾಣ ಹಂತದ ಮನೆ ಕುಸಿದು ಬಿದ್ದು ಆರು ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟ ಧಾರುಣ ಘಟನೆ ತಮಿಳುನಾಡಿನ ಊಟಿ ಸಮೀಪದ ಲವ್ ಡೇಲ್ ನಲ್ಲಿ  ನಡೆದಿದೆ. ಮೃತರನ್ನು ಸಕಿಲಾ (30), ಸಂಗೀತಾ (35), ಭಾಗ್ಯ (36), ಉಮಾ (35), ಮುತ್ತುಲಕ್ಷ್ಮಿ (36) ಮತ್ತು ರಾಧಾ (38) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರು ಕಾರ್ಮಿಕರನ್ನು ಊಟಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಕಾರ್ಮಿಕ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಸಲಾಗುತ್ತಿದೆ ಎಂದು ಊಟಿ ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣ ಕಾರ್ಯಪ್ರವೃತ್ತರಾಗಿ, ಸಿಲುಕಿದವರನ್ನು ಹೊರಕ್ಕೆ ತೆಗೆಯುವ ಪ್ರಕ್ರಿಯೆ ನಡೆಸಿದರು. ಗಾಯಾಳುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಬಲೂಚಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನ ಪಿಶಿನ್‌ ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಇಂದು  ಬಾಂಬ್​​ ಸ್ಫೋಟಗೊಂಡಿದ್ದು, ಹನ್ನೆರಡು ಜನ ಸಾವನ್ನಪ್ಪಿದ್ದರೆ, 30 ಜನ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಪಾಕಿಸ್ತಾನದ ಪಿಶಿನ್ ‌ನ ಖನೋಜೈ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಕಚೇರಿಯ ಹೊರಗೆ ಬಾಂಬ್​​​ ಸ್ಫೋಟ ಮಾಡಲಾಗಿದೆ. ಇನ್ನು ಸ್ಫೋಟದ ಸಂದರ್ಭದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರು ತಮ್ಮ ಕಚೇರಿಯಲ್ಲಿ ಇರಲಿಲ್ಲ. ಈ ಘಟನೆಯ ಕುರಿತು ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಾಂತೀಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ತಕ್ಷಣದ ವರದಿಗಳನ್ನು ಕೇಳಿದೆ. ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಮೋಟಾರ್‌ ಬೈಕ್‌ ನಲ್ಲಿ ಬಾಂಬ್ ಇಡಲಾಗಿತ್ತು ಎಂದು ಜಿಲ್ಲಾಧಿಕಾರಿ ಜುಮಾ ದಾದ್ ತಿಳಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೆರದುಕೊಂಡು ಹೋಗಲಾಗಿದೆ.…

Read More

ಮೈಸೂರು:  ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನವೀದಾ ಮೃತ ದುರ್ದೈವಿಯಾಗಿದ್ದು, ಅಕ್ಬರ್​ ಅಲಿ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಆರೋಪಿ ಪತಿ ಅಕ್ಬರ್ ಅಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಮೂಲದ ಅಕ್ಬರ್ ಅಲಿ ಆಟೋ ಚಾಲಕನಾಗಿದ್ದು, ನವೀದಾ-ಅಕ್ಬರ್ ಅಲಿ ಮದುವೆ ಆಗಿ 13 ವರ್ಷಗಳ ದಾಂಪತ್ಯದಲ್ಲಿ, ದಂಪತಿಗೆ ಮೂವರು ಮಕ್ಕಳಿದ್ದು, ಮೈಸೂರಿನ ರಾಜೀವ್ ನಗರದಲ್ಲಿ ನೆಲೆಸಿದ್ದರು. ಈ ಹಿಂದೆ ಪತಿಯಾದ ಅಕ್ಬರ್ ಅಲಿ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ, ಪತ್ನಿ ನವೀದಾ ತನ್ನ ತವರು ಮನೆಯವರ ನೆರವಿನಿಂದ ಪತಿಗೆ ಚಿಕಿತ್ಸೆ ಕೊಡಿಸಿದ್ದಳು. ಅಕ್ಬರ್​ ಅಲಿ ಗುಣಮುಖನಾಗಿ ಬಂದ ಮೇಲೆ, ಗೂಡ್ಸ್ ಆಟೋ, ಪ್ರಾವಿಷನ್ ಸ್ಟಾಲ್​​, ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಆರಂಭಿಸಿದನು. ಇದಕ್ಕಾಗಿ ಹಲವೆಡೆ ಸಾಲ ಮಾಡಿದ್ದನು. ಮತ್ತು ನವೀದಾ ತವರು ಮನೆಯವರು ಕೂಡ ಅಕ್ಬರ್​ ಅಲಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಪತ್ನಿ ನವೀದಾ ಸಣ್ಣ…

Read More

ಯಾದಗಿರಿ: ಗ್ಯಾಸ್ ಸಿಲಿಂಡರ್ ‌ಗಳು ಪೂರೈಸುವ ಲಾರಿಯೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿರುವ ಘಟನೆ ಯಾದಗಿರಿಯ ಹುಣಸಗಿ ತಾಲೂಕಿನ ಕೊಡೆಕಲ್‌ ಗ್ರಾಮದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ತಲೆಕೆಳಗಾಗಿ ನದಿಯಲ್ಲಿ ಬಿದ್ದಿದೆ. ಘಟನೆಯಲ್ಲಿ ಯಾವುದೆ ಹಾನಿ ಸಂಭವಿಸಿಲ್ಲ. ಚಾಲಕನೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಕೊಡೇಕಲ್‌ ಠಾಣೆಯ ಪೊಲೀಸರು ‌ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಧಾರವಾಡ: ಓದಿನ ಕಡೆ ಗಮನಹರಿಸು ತಂದೆ ಬುದ್ಧಿವಾದ ಹೇಳಿದಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ನಗರದ ಸಾದನಕೇರಿ ಬಡಾವಣೆಯಲ್ಲಿ ನಡೆದಿದೆ. ಧಾರವಾಡ ನಗರದ ಕೆಲಗೇರಿ ಕೆರೆಗೆ ಹಾರಿ ಫುಟ್​​ಬಾಲ್​​ ಆಟಗಾರ ಚೇತನ್​​ ಕೊಂಡಿಹಾಳ(23) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ತಂದೆ ಬುದ್ದಿವಾದ ಹೇಳಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶರಣಪ್ಪ ಕೊಂಡಿಹಾಳ ಎಂಬುವರ ಮೃತ ಪುತ್ರ ಚೇತನ್​​ ಮೃತಪಟ್ಟಿದ್ದಾನೆ. ಚೇತನ್​ ಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಮಗನ ಆಸಕ್ತಿಯಿಂದಾಗಿ ಓದಿಗೆ ಸಮಸ್ಯೆ ಆಗಬಾರದೆಂದುಕೊಂಡ ಶರಣಪ್ಪ ಕೊಂಡಿಹಾಳ ಅವರು ತಮ್ಮ ಮಗನಿಗೆ ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಚೇತನ್ ಮನೆಯಿಂದ ನಾಪತ್ತೆಯಾಗಿದ್ದ. ಈಗ ಎರಡು ದಿನಗಳ ನಂತರ ಕೆಲಗೇರಿ ಕೆರೆಯಲ್ಲಿ ಚೇತನ್ ಮೃತದೇಹ ಪತ್ತೆಯಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ಬಂದ ಮಹಿಳೆಯೊಬ್ಬಳು ವೈದ್ಯರೊಬ್ಬರಿಗೆ ಕೋಟಿ ಕೋಟಿ ರೂ. ವಂಚಿಸಿರುವ ಪ್ರಕರಣ ವಿಜಯನಗರದಲ್ಲಿ ನಡೆದಿದೆ. ಡಾ. ಗಿರೀಶ್‌ ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಐಶ್ವರ್ಯಾ ಗೌಡ ಎಂಬ ಮಹಿಳೆಯ ವಿರುದ್ದ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಾ. ಗಿರೀಶ್‌ ಬಳಿ ಸೌಂದರ್ಯವರ್ಧಕ ಚಿಕಿತ್ಸೆಗಾಗಿ ಬಂದಿದ್ದ ಐಶ್ವರ್ಯಾ ಗೌಡ ಕ್ರಮೇಣ ಅವರಿಗೆ ಆಪ್ತಳಾಗಿದ್ದಳು. ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದೆ ಎಂದು ಬೂಸಿ ಬಿಟ್ಟಿದ್ದ ಐಶ್ವರ್ಯಾ ತನ್ನ ಪ್ರಭಾವ ಬಳಸಿ ದುಬಾರಿ ಐಷಾರಾಮಿ ಕಾರ್‌ ನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ಆಮಿಷ ತೋರಿದ್ದಳು. ಹಂತಹಂತವಾಗಿ ಅವರಿಂದ 6 ಕೋಟಿ ರೂ. ವಸೂಲಿ ಮಾಡಿದ್ದಳು. ಐಶ್ವರ್ಯಾ ವಂಚನೆ ಅರಿವಾದ ಬಳಿಕ ಹಣ ಕೇಳಿದ್ದಕ್ಕೆ ಅವರ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರೆಂದು ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಳು. ಇತ್ತ ಕಾರೂ ಇಲ್ಲದೆ, ಕಾಸೂ ಇಲ್ಲದೆ ವೈದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಐಶ್ವರ್ಯ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ‍ಐಆರ್ ದಾಖಲಾಗಿದೆ.

Read More