Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಕೊಡಗಿನ ಪ್ರವಾಸಿತಾಣಗಳ ವೀಕ್ಷಣೆಗೆ ಬಂದಿದ್ದ ಯುವಕನೊಬ್ಬ ಜಲಪಾತದ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಡಿಕೇರಿಯ ಚೆಯ್ಯಂಡಾಣೆ ಸಮೀಪದ ಚೇಲಾವರ ಫಾಲ್ಸ್ ನಲ್ಲಿ ಸಂಭವಿಸಿದೆ. ಮೃತನನ್ನು ಕೇರಳದ ಮಟ್ಟನ್ನೂರು ನಿವಾಸಿಯೆಂದು ತಿಳಿದು ಬಂದಿದೆ. ಮಹಮ್ಮದ್ ಅಶ್ರಫ್ ಅವರ ಪುತ್ರ ರಾಶೀದ್(25) ಮೃತ ದುರ್ದೈವಿ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಕೊಡಗಿನ ಪ್ರವಾಸಿತಾಣಗಳ ವೀಕ್ಷಣೆಗೆ ಬಂದಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಚೇಲಾವರ ಜಲಪಾತಕ್ಕೆಂದು ತೆರಳಿ ಸ್ನಾನಕ್ಕೆಂದು ಇಳಿದಾಗ ನೀರಿನಲ್ಲಿ ಮುಳುಗಿ ಸಾವಿಗೀಡಾದರು ಎಂದು ಹೇಳಲಾಗಿದೆ. ಜಲಪಾತದಿಂದ ಮೃತದೇಹವನ್ನು ಮೇಲೆತ್ತುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದು, ನಾಪೋಕ್ಲು ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿ ಕೂದಲುಗಳನ್ನು ನಿಯಂತ್ರಿಸುತ್ತೆ ಈರುಳ್ಳಿ ರಸ: ಈರುಳ್ಳಿ ರಸವು ತಲೆಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಇದು ಕೂದಲು ಬಿಳಿಯಾಗುವುದನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಸುಧಾರಿತ ರಕ್ತ ಪರಿಚಲನೆಯು ಕೂದಲುಗಳಿಗೆ ಪ್ರಮುಖ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ. ಕೂದಲಿನ ಬೆಳವಣಿಗೆ ಮತ್ತು ಒಟ್ಟಾರೆ ಕೂದಲಿನ ಆರೋಗ್ಯದಲ್ಲಿ ಈರುಳ್ಳಿ ರಸವು ತನ್ನದೆಯಾದ ಪ್ರಭಾವವನ್ನು ಬೀರುತ್ತದೆ. ಹೃದಯ ಕಾಯಿಲೆಗಳಿಗೆ ರಾಮಬಾಣ ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜಗಳು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ರಂಜಕದ ಮೂಲವಾಗಿದೆ. ಈ ಪೋಷಕಾಂಶಗಳು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಪ್ರತಿದಿನ ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಅನೇಕ ಹೃದಯ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ಈ ಬೀಜಗಳು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಗಳಲ್ಲಿ ಸಮೃದ್ಧವಾಗಿವೆ. ಮೊಸರಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?: ದೇಹಕ್ಕೆ ಬೇಕಾದ ಅನೇಕ…
ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ವಿರೋಧಿಸಿ ನಾಳೆ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಫೆಬ್ರವರಿ 7(ನಾಳೆ) ಪ್ರತಿಭಟನೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಸಂಬಂಧ ರಾಜ್ಯದ ಸಂಸದರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಎಲ್ಲರೂ ನಾಳಿನ ಪ್ರತಿಭಟನೆಯಲ್ಲಿ ಎಲ್ಲರೂ ಭಾಗಿಯಾಗುವಂತೆ ರಾಜ್ಯದ ಸಂಸದರಿಗೆ ಮನವಿ ಮಾಡಿದ್ದಾರೆ. ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ, ನಮ್ಮ ಸ್ವಾಭಿಮಾನಿ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಉತ್ತರದ ರಾಜ್ಯಗಳಿಗೆ ಅನುದಾನ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ. ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಕತ್ತು ಕುಯ್ಯಬಾರದು, ಹಾಲು ಕೊಡುವ ಕೆಚ್ಚಲನ್ನೇ ಕತ್ತರಿಸಬಾರದು ಎನ್ನುವುದು ನಮ್ಮ ಮನವಿ. ನಮ್ಮ ನಿರಂತರ ಬೇಡಿಕೆ, ಮನವಿಗಳಿಗೂ ಕೇಂದ್ರ ಬೆಲೆ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಮ. ವೈಯಕ್ತಿಕ ಕಾರ್ಯದರ್ಶಿ ಬಿಭವ್ ಕುಮಾರ್ ಅವರ ನಿವಾಸ ಮತ್ತು ಸಂಸ್ಥೆಗಳ ಮೇಲೆ ಇಡಿ ದಾಳಿ. ದೆಹಲಿ ಜಲ ಮಂಡಳಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ. ಕುಮಾರ್ ಅವರಲ್ಲದೆ, ಕೆಲವು ಎಎಪಿ ನಾಯಕರ ಮೇಲೂ ದಾಳಿ ನಡೆಸಲಾಗುತ್ತಿದೆ. ದೆಹಲಿಯ 12 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್, ರಾಜ್ಯಸಭಾ ಸದಸ್ಯ ಎನ್ ಡಿ ಗುಪ್ತಾ ಮತ್ತು ದೆಹಲಿ ಜಲ ಮಂಡಳಿಯ ಮಾಜಿ ಸದಸ್ಯ ಶಲಭ್ ಕುಮಾರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಸಂಸ್ಥೆ ತನಿಖೆ ನಡೆಸುತ್ತಿದೆ. ಸಿಬಿಐ ದಾಖಲಿಸಿರುವ ಎಫ್ ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯು ಕಳೆದ ತಿಂಗಳು ಪಿಎಂಎಲ್ ಎ ಕಾಯ್ದೆಯಡಿಯಲ್ಲಿ ಜಲ ಮಂಡಳಿಯ ಮಾಜಿ ಮುಖ್ಯ ಎಂಜಿನಿಯರ್ ಜಗದೀಶ್ ಕುಮಾರ್ ಅರೋರಾ ಅವರನ್ನು ಬಂಧಿಸಿತ್ತು. ಒಬ್ಬ ಉದ್ಯಮಿಯನ್ನೂ ಬಂಧಿಸಲಾಗಿದೆ.…
ಹಳೆಯ ಮತ್ತು ಬಳಸಲಾಗದ ರೈಲು ಕೋಚ್ ಗಳನ್ನು ರೆಸ್ಟೋರೆಂಟ್ ಗಳಾಗಿ ಪರಿವರ್ತಿಸಲಾಗಿದೆ. ಈ ಕ್ರಮವು ಆದಾಯವನ್ನು ಹೆಚ್ಚಿಸುವ ಭಾಗವಾಗಿದೆ. ಹಳೆಯ ಕೋಚ್ ಗಳನ್ನು ಐಷಾರಾಮಿ ಸಮಾನವಾದ ರೆಸ್ಟೋರೆಂಟ್ ಗಳಾಗಿ ಪರಿವರ್ತಿಸಲು ರೈಲ್ವೆ ಹೊಸ ಯೋಜನೆಯೊಂದಿಗೆ ಬರುತ್ತಿದೆ. ಇದರೊಂದಿಗೆ, ಹಳೆಯ ತರಬೇತುದಾರರು ಹೊಸ ರೂಪ ಮತ್ತು ಭಾವನೆಯನ್ನು ಪಡೆದುಕೊಳ್ಳುತ್ತಾರೆ. ರೈಲ್ವೆಯ ಹೊಸ ಉಪಕ್ರಮವು ಶೀಘ್ರದಲ್ಲೇ ಕೇರಳ ಸೇರಿದಂತೆ ರಾಜ್ಯಗಳನ್ನು ತಲುಪಬಹುದು ಎಂದು ಸೂಚಿಸಲಾಗಿದೆ. ಕೋಚ್ ಗಳಲ್ಲಿರುವ ರೆಸ್ಟೋರೆಂಟ್ ಗಳು ರೈಲು ನಿಲ್ದಾಣಗಳ ಬಳಿ ಕಾರ್ಯನಿರ್ವಹಿಸುತ್ತವೆ. ರೈಲಿನಲ್ಲಿ ಒಂದು ಬಾರಿಗೆ 48 ಮಂದಿ ಆಹಾರ ಸೇವಿಸಬಹುದು. ಉತ್ತರ ಮತ್ತು ದಕ್ಷಿಣ ಭಾರತದ ರುಚಿಕರವಾದ ಆಹಾರ ಲಭ್ಯವಿದೆ. ಇವುಗಳನ್ನು ಪ್ರಾಯೋಗಿಕವಾಗಿ ಅಂಧೇರಿ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಇವುಗಳನ್ನು ಪಶ್ಚಿಮ ರೈಲ್ವೆ ಪರಿಚಯಿಸಿತು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಂಡಿದೆ. ಶ್ರೀರಾಮ ವಿರಾಜಮಾನನಾಗಿ ಕೆಲವು ದಿನಗಳಷ್ಟೇ ಕಳೆದಿದೆ. ಇನ್ನು ಈ ಬಾಲಕ ರಾಮನ ಮೂರ್ತಿ ನಿರ್ಮಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಇಡೀ ವಿಶ್ವದಾದ್ಯಂತ ವೈರಲಾದರು. ಆ ಮುದ್ದು ಬಾಲಕ ರಾಮನ ಮೂರ್ತಿಯು ಎಲ್ಲರನ್ನು ಆಕರ್ಷಿಸಿತ್ತು ಮಾತ್ರವಲ್ಲ ಆ ಮೂರ್ತಿಯ ಕಣ್ಣುಗಳು ಹೊಳೆಯುವಂತಿದೆ. ಇದೀಗ ಅದೇ ಶ್ರೀರಾಮನನ್ನು ಹೋಲುವ ಪುರಾತನ ವಿಷ್ಣು ಮೂರ್ತಿಯೊಂದು ಪತ್ತೆಯಾಗಿದೆ..! ಅಂದ್ರೆ ನಿಮ್ಗೆ ಅಚ್ಚರಿಯಾಗದಿರದು. ಹೌದು, ಖಂಡಿತವಾಗಲೂ, ಕಾಕತಾಳಿಯವೋ ಏನೋ.. ರಾಯಚೂರು ಜಿಲ್ಲೆಯ ದೇವಸೂಗುರು ಬಳಿಯ ಕೃಷ್ಣಾ ನದಿಯಲ್ಲಿ ಪುರಾತನ ಮೂರ್ತಿಗಳು ಪತ್ತೆಯಾಗಿ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಸೇತುವೆ ಕಾಮಗಾರಿ ನಡೆಯುತ್ತಿದ್ದಾಗ ಈ ವಿಸ್ಮಯ ಕಂಡು ಜನ ಸಾಗರೋಪಾದಿಯಲ್ಲಿ ಬಂದು ಈ ದೃಶ್ಯ ನೋಡಿ ಪುಳಕಿತರಾಗುತ್ತಿದ್ದಾರೆ. ಇದೀಗ ಸದ್ಯ ಆ ವ್ಯಾಪ್ತಿಯಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾಗಲಾರಂಭಿಸಿವೆ. ವಿಷ್ಣುವಿನ ಮೂರ್ತಿ ಕಂಡು ಭಕ್ತರು ಪುಳಕಿತರಾದರೂ ಕೂಡ ಇದು ಇತ್ತೀಚಿಗೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮನ ಮೂರ್ತಿಯನ್ನು ಹೋಲುತ್ತದೆ ಅನ್ನೋದು ಭಕ್ತರ ನಂಬಿಕೆ. ಆದರೆ ಇದು ಪ್ರಾಚೀನ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಬರ್ಕಜೆ ಎಂಬ ಸ್ಥಳ ಈ ಅಪರೂಪದ ದೈವ ಕೋಲಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು. ಒಂದೇ ದಿನ, ಒಂದೇ ದೈವದ 18 ಅಬ್ಬರ ಕಂಡು ದೈವಾರಾಧಕರು ಭಕ್ತಿಯಲ್ಲಿ ತೇಲಾಡಿದರು. ಈ ದೃಶ್ಯ ಕಣ್ತುಂಬಿಕೊಳ್ಳಲೆಂದೇ ಹಲವಾರು ಮಂದಿ ನೆರೆದಿದ್ದರು. ಮಾತ್ರವಲ್ಲ ಈ ವಿಶೇಷ ಕ್ಷಣದ ಸುದ್ದಿ ಕೇಳಿ ಇನ್ನೂ ಹಲವಾರು ಭಕ್ತರು ಆಗಮಿಸಿ ದೈವಗಳ ಕೃಪೆಗೆ ಪಾತ್ರರಾದರು. ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಭತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು. ಆದ್ರೆ ಈ ಬಾರಿ ಸಂಪ್ರದಾಯದಂತೆ ಒಂಭತ್ತು ಹಾಗೂ ಹರಕೆಯ ರೂಪದಲ್ಲಿ ಒಂಭತ್ತು, ಹೀಗೆ ಒಟ್ಟು 18 ಗುಳಿಗ ದೈವದ ನರ್ತನ ಸೇವೆ ನಡೆದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 18 ಗುಳಿಗ ದೈವದ ವಿಶೇಷ ಗಗ್ಗರ ಸೇವೆಯನ್ನು ಕಣ್ತುಂಬಿಕೊಳ್ಳುದಕ್ಕೆ ಮುಂಬೈ, ಬೆಂಗಳೂರು ಸೇರಿದಂತೆ ಪರವೂರಿನಲ್ಲಿ ನೆಲೆಸಿರುವ ಕರಾವಳಿಯ ಸಾವಿರಾರು ದೈವಾರಾಧಕರು ಸೇರಿದ್ದರು.…
ತುಮಕೂರು: ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುಳ್ಳು ಹೇಳುವುದನ್ನೇ ಕರ್ತವ್ಯ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಒಂದು ಸಮುದಾಯದ ಮತ ಗಟ್ಟಿಮಾಡಿಕೊಳ್ಳಲು ನೀತಿ ರೂಪಿಸುತ್ತಿದ್ದಾರೆ ಎಂದು ಮಾಜಿ ಶಿಕ್ಷಣ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟೀಕಿಸಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ದುರಾದೃಷ್ಟಕ್ಕೆ ಮಧು ಬಂಗಾರಪ್ಪ ರಾಜ್ಯದ ಶಿಕ್ಷಣ ಸಚಿವರಾಗಿದ್ದು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದರು. ರಾಜ್ಯ ಸರ್ಕಾರ ಹೊರಡಿಸಿರುವ ಪರೀಕ್ಷಾ ವೇಳಾಪಟ್ಟಿಯಲ್ಲಿ ವಾರದ ಎಲ್ಲಾ ದಿನ ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾದರೆ ಶುಕ್ರವಾರ ಮಾತ್ರ ಮಧ್ಯಾಹ್ನ 2ಕ್ಕೆ ಆರಂಭವಾಗುತ್ತಿರುವುದು ಒಂದು ಸಮುದಾಯದ ఓట్టికగి మితేవాగిటి ఎందరు. ವಿದ್ಯಾರ್ಥಿಗಳಿಗೆ ನಮಾಜ್‌ಗೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ ತಾರತಮ್ಯ ಮಾಡುತ್ತಿದೆ. ಒಂದು ಸಮುದಾಯಕ್ಕೆ ಸೀಮಿತವಾಗಿರುವ ರಾಜ್ಯ ಸರ್ಕಾರ ಒಡೆದು ಆಳುವ ನೀತಿಯನ್ನು ಮುಂದುವರಿಸಿದೆ ಎಂದರು. ಈಗ ಒಂದು ಸಮುದಾಯದ ಸರ್ಕಾರವಾಗಿದ್ದು ಹಿಂದೂ ವಿರೋಧಿ ನಿರ್ಣಯ ತೆಗೆದುಕೊಳ್ಳುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.
ದಿನಬೆಳಗಾದರೆ ಚಿತ್ರ ವಿಚಿತ್ರ ಸುದ್ದಿಗಳನ್ನು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುತ್ತೇವೆ. ಅಂತಹುದ್ದೇ ಒಂದು ವಿಚಿತ್ರ ಘಟನೆಯೊಂದು ಸದ್ಯ ವೈರಲ್ ಆಗಿದೆ. ಕಾಡಿನ ಮಧ್ಯೆ ಹಾದುಹೋಗುವ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿಕೊಂಡು ಸೆಲ್ಫಿ ತೆಗೆಯುತ್ತಿದ್ದಾಗ ಕಾಡಾನೆಯೊಂದು ಅಟ್ಟಿಸಿಕೊಂಡು ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ಆನೆ ಜೊತೆ ಹುಚ್ಚಾಟ ಮಾಡುತ್ತಿದ್ದಾತನಿಗೆ ಆನೆ ಸರಿಯಾಗಿ ಬುದ್ಧಿ ಕಲಿಸಿದೆ. ಅದರಲ್ಲೂ ಕಾಡಾನೆಗಳನ್ನು ಕಂಡ್ರೆ ಭಯ ಪಡುವವರೇ ಹೆಚ್ಚು ಮಂದಿ. ಅದರ ಜೊತೆ ಸಾಹಸ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆನೆ ಅಟ್ಟಾಡಿಸಿಕೊಂಡು ಬರುತ್ತಿರುವಾಗಲೇ ಇಬ್ಬರು ಓಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ, ಒಬ್ಬ ತಪ್ಪಿಸಿಕೊಳ್ಳಲಾಗದೇ ಸ್ಥಳದಲ್ಲಿಯೆ ನೆಲಕ್ಕುರುಳಿದ್ದಾನೆ. ಇನ್ನೇನು ಆನೆ ಆತನ ಮೇಲೆ ದಾಳಿ ಮಾಡಬೇಕು ಅನ್ನುವಷ್ಟರಲ್ಲಿ, ರಸ್ತೆಯಲ್ಲಿ ಲಾರಿ ಬರುತ್ತಿರುವ ಸದ್ದಿಗೆ ಆನೆ ಆತನನ್ನು ಬಿಟ್ಟು ಅಲ್ಲಿಂದ ತೆರಳಿದೆ. ಸದ್ಯ ಬದುಕಿದೆವು ಎಂದು ಇಬ್ಬರೂ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ತುಮಕೂರು: ಶುಕ್ರವಾರ ನಮಾಜ್ ಬಳಿಕ ಎಸ್ ಎಸ್ ಎಲ್ ಸಿ ಪೂರ್ವ ತಯಾರಿ ಪರೀಕ್ಷೆಗೆ ಹಾಜರಾಗಲು ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂರು ಅಷ್ಟೇ ಅಲ್ಲಾ ಓಟ್ ಹಾಕಿರೋದು, ಹಿಂದೂಗಳು ಕೂಡ ಓಟ್ ಹಾಕಿದ್ದಾರೆ. ಅವರ ಅನುಕೂಲಕ್ಕೆ ಯಾವ ಕಾರ್ಯಕ್ರಮ ಬೇಕಾದರೂ ರೂಪಿಸ್ತಾರೆ ಎಂದು ಮಾಜಿ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಾಗಾದ್ರೇ ಕರ್ನಾಟಕ ರಾಜ್ಯದಲ್ಲಿ ಹಿಂದೂಗಳು ಇಲ್ಲಾ ಅನ್ನೋದು ಅವರ ಭಾವನೆ ಉಂಟಾಗಿದೆ. ಈ ಚುನಾವಣೆಯಲ್ಲಿ ಗೊತ್ತಾಗುತ್ತೆ ಹಿಂದೂಗಳು ಯಾವ ತೀರ್ಮಾನ ತೆಗೆದುಕೊಳ್ತಾರೆ ಅಂತ ಎಂದು ಹೇಳಿದರು. ಮುಸ್ಲಿಂನ್ನ ಓಲೈಸಿ,ಹಿಂದೂಗಳನ್ನ ಕಾಲಕಸಕ್ಕಿಂತ ಕೀಳಾಗಿ ನೋಡ್ತಿದ್ದಾರೆ. ಈ ಚುನಾವಣೆಯಲ್ಲಿ ಹಿಂದೂಗಳು ಕಾಂಗ್ರೆಸ್ ಗೆ ಬುದ್ದಿಯನ್ನ ಕಲಿಸ್ತಾರೆ ಎಂದರು. ಕಾಂಗ್ರೆಸ್ ಪ್ರಧಾನಿ ಇದ್ದಾಗ ರಾಜ್ಯಕ್ಕೆ ಏನು ಆನುದಾನ ಕೊಟ್ಟಿದ್ದಾರೆ. ಮೋದಿ ಅವರು ಪ್ರಧಾನಿಯಾದ ಬಳಿಕ ಯಾವ ರೀತಿ ನಡೆದುಕೊಂಡಿದ್ದಾರೆ ಎಲ್ಲಾ ದಾಖಲೆಗಳು ಇದೆ. ಇಡೀ ರಾಜ್ಯದಲ್ಲಿ ಬರಗಾಲ ಆದರೂ ರೈತರಿಗೆ ಸಹಾಯ ಮಾಡುವಂತಾ ಔದಾರ್ಯತೆ ಸಿಎಂ ತೋರುತ್ತಿಲ್ಲ ಎಂದು…