Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಕೇರಳ ಮೂಲದ ಯುವಕ ಮತ್ತು ಬೆಂಗಳೂರು ಮೂಲದ ಯುವತಿ ಪರಸ್ಪರ ಪರಿಚಿತರಾಗಿದ್ದರು. ಜತೆಯಾಗಿ ಪಣಂಬೂರು ಬೀಚ್ ನಲ್ಲಿ ತಿರುಗಾಡಲು ಬಂದಿದ್ದರು. ಆದರೆ, ಹೀಗೆ ಬಂದಿದ್ದ ಯುವಕ ಮುಸ್ಲಿಂ ಎಂಬ ಸಂಶಯ ಅಲ್ಲಿದ್ದ ಕೆಲವರಿಗೆ ಬಂದಿತ್ತು. ಹಾಗಾಗಿ ಅವರು ಸ್ಥಳೀಯ ಶ್ರೀರಾಮ ಸೇನೆಯ ಯುವಕರಿಗೆ ವಿಷಯ ತಿಳಿಸಿದ್ದರು. ಶ್ರೀ ರಾಮ ಸೇನೆಯ ಯುವಕರು ಬೀಚ್ ಗೆ ಆಗಮಿಸಿ ಯುವಕ-ಯುವತಿ ಜೋಡಿಯನ್ನು ಅಡ್ಡಗಟ್ಟಿದರು. ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದು ಏಕೆ ಒಟ್ಟಿಗೆ ಇದ್ದೀರಿ ಎಂದು ಪ್ರಶ್ನಿಸಿದರು. ನಿಮ್ಮ ಮನೆಗಳಿಗೆ ವಿಷಯ ತಿಳಿಸುವುದಾಗಿ ಬೆದರಿಸಿದರು. ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆಗ ಅವರು ಕೂಡಾ ನಮ್ಮನ್ನು ಪ್ರಶ್ನೆ ಮಾಡಲು ನೀವು ಯಾರು ಎಂದು ತಿರುಗಿ ಪ್ರಶ್ನಿಸಿದರು. ಒಂದು ಹಂತದಲ್ಲಿ ಗಲಾಟೆಯಾಗುವ ಸನ್ನಿವೇಶ ನಿರ್ಮಾಣವಾದಾಗ ಪಣಂಬೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಅವರ ವಿಚಾರಣೆ ನಡೆಸಿ ಬಂಧಿಸಲಾಗಿದೆ. ಇವರೆಲ್ಲರೂ ಶ್ರೀರಾಮ ಸೇನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಸರಗೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಮತದಾನದ ಹಕ್ಕಿನ ಮಹತ್ವ ಕುರಿತು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಪಟ್ಟಣ ಪಂಚಾಯಿತಿ ವತಿಯಿಂದ ಮಹಾವೀರ ಸರ್ಕಲ್ ಬಳಿ ಸೋಮವಾರ ಬೀದಿನಾಟಕ ಮೂಲಕ ಮತದಾರರ ಜಾಗೃತಿ ಅಭಿಯಾನ ನಡೆಯಿತು. ಚುನಾವಣಾ ಆಯೋಗದ ಸಂದೇಶ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅಗತ್ಯ ಎಂಬ ಹಾಡಿನ ಜೊತೆಗೆ ನಾಟಕ ಮಾಡುವ ಮೂಲಕ ಮೈಸೂರು ಕಲಾವೇದಿಕೆಯ ತಂಡದವರು ಮತದಾರರಲ್ಲಿ ಅರಿವು ಮೂಡಿಸಿದರು. ಮತದಾನ ಸಂವಿಧಾನಾತ್ಮಕ ಹಕ್ಕಾಗಿದ್ದು, ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡಿ, ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ- ಸದೃಢ ಪ್ರಜಾಪ್ರಭುತ್ವ, ಮತದಾನ ಮಾಡುವುದು ಪ್ರತಿ ಮತದಾರರ ಹಕ್ಕು ಮತ್ತು ಆದ್ಯ ಕರ್ತವ್ಯ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಳ್ಳಿ ಎಂಬ ಸಂದೇಶ ನೀಡಲಾಯಿತು. ಜನವರಿ…
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಬಸ್ ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದೆ. ಕೆಲವು ಕಡೆ ಸೀಟು ಸಿಗದೆ ಜನ ಪರದಾಡಿದ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು. ಇದೀಗ ಈ ಸಮಸ್ಯೆಯನ್ನು ಬಗೆ ಹರಿಸುವುದಕ್ಕಾಗಿ ಕೆಎಸ್ ಆರ್ ಟಿಸಿ ಹೊಸದಾಗಿ 800 ಬಸ್ ಸೇರ್ಪಡೆಗೊಳಿಸಿದೆ. ಸೋಮವಾರ ಮೊದಲ ಹಂತದಲ್ಲಿ ಹೊಸ ವಿನ್ಯಾಸದ 100 ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿದ್ದಾರೆ. ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭವಾದ ದಿನದಿಂದ ಸಾರಿಗೆ ಬಸ್ ಗಳು ತುಂಬಿ ತುಳುಕುತ್ತಿವೆ. ನಿತ್ಯ ಪ್ರಯಾಣಿಕರ ಗೋಳಾಟ, ನಿರ್ವಾಹಕರ ಪರದಾಟ, ಗೊಂದಲ-ಗಲಾಟೆಗಳು ಸಾರಿಗೆ ಸಂಸ್ಥೆಗೆ ತಲೆನೋವು ತರಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ʼಅಶ್ವಮೇಧ ಯಾಗʼ ಶುರುಮಾಡಿದ್ದು, ಇದರಿಂದ ಶಕ್ತಿ ಯೋಜನೆಯ ಒತ್ತಡಕ್ಕೆ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಶಕ್ತಿ ಯೋಜನೆಯಡಿ ಐರಾವತ ಕ್ಲಬ್ ಕ್ಲಾಸ್, ಅಂಬಾರಿಯಂತಹ ವಿಶೇಷ ಸ್ಲೀಪರ್ ಎಸಿ ಬಸ್ಗಳನ್ನು ಹೊರತುಪಡಿಸಿ ಇತರ…
ಸರಗೂರು: ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ವಿವೇಕಾನಂದ ಯೂತ್ ಮೊಮೆಂಟ್ ಶಿಕ್ಷಣ ಸಂಸ್ಥೆ ವತಿಯಿಂದ ಹಾದನೂರು ಗ್ರಾ.ಪಂ. ವ್ಯಾಪ್ತಿಯ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲ್ಯಾಪ್ ಟಾಪ್ ಹಾಗೂ ಪ್ರೊಜೆಕ್ಟರ್ ಸೋಮವಾರ ವಿತರಿಸಲಾಯಿತು. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ಮಾತನಾಡಿ, ಸಮಾಜ ಸೇವೆ ಮತ್ತು ವಿವೇಕಾನಂದ ಯೂತ್ ಮೊಮೆಂಟ್ ಸಂಸ್ಥೆ ಸಮಾಜ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ. ಇಂದು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ,ಶಾಲೆಯ ಫಲಿತಾಂಶ ಇನ್ನಷ್ಟು ಹೆಚ್ಚುಗೊಳ್ಳಲಿ ಎಂಬ ಉದ್ದೇಶದಿಂದ ಲ್ಯಾಪ್ಟಾಪ್ ಹಾಗೂ ಪ್ರೊಜೆಕ್ಟರ್ ವಿತರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ನ ಶಾಲಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ 15 ಲ್ಯಾಪ್ಟಾಪ್ ಗಳು ಮತ್ತು ಪ್ರೊಜೆಕ್ಟರ್ ಅನ್ನು ಪಡೆಯಲಾಯಿತು. ಶಾಲಾ ಶಿಕ್ಷಣ ಕಾರ್ಯಕ್ರಮವು ನಮ್ಮ ಶಾಲೆಯಲ್ಲಿ 2 ವರ್ಷಗಳಿಂದ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಮತ್ತು ಗಣಿತ ಮತ್ತು ವಿಜ್ಞಾನ ಪ್ರಯೋಗಗಳನ್ನು ಮಕ್ಕಳು ‘ ವಿಧಾನದ ಮೂಲಕ ಕಲಿಯುವುದರಿಂದ ಗುಣಮಟ್ಟದ…
ಬೀದರ್: ಬೈಕ್ ಸವಾರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಯುಟರ್ನ್ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಹನವೊಂದು ಬೈಕ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮನ್ನಳ್ಳಿ ಬಾರ್ಡರ್ ರಾಷ್ಟ್ರೀಯ ಹೆದ್ದಾರಿ—65ರಲ್ಲಿ ನಡೆದಿತ್ತು. ಈ ಘಟನೆಯ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದ್ದು, ಡಿವೈಡರ್ ಗಳ ಮೇಲಿನಿಂದ ಅಥವಾ ವಿರುದ್ಧ ದಿಕ್ಕಿನಿಂದ ವಾಹನ ಯೂಟರ್ನ್ ಮಾಡದಂತೆ, ಎಲ್ಲಿ ಯುಟರ್ನ್ ಗೆ ಅವಕಾಶ ನೀಡಲಾಗಿದೆಯೋ ಅಲ್ಲಿಂದ ಯೂಟರ್ನ್ ಮಾಡುವಂತೆ ಜಾಗೃತಿ ಮೂಡಿಸಿದರು. ಇನ್ನೂ ಅನಧಿಕೃತವಾಗಿ ಡಿವೈಡರ್ ಗಳಲ್ಲಿ ಒಡೆದಿರುವ ಸ್ಥಳಲ್ಲಿ ಕಾಂಕ್ರೀಟ್ ಬ್ಯಾರಿಕೇಡ್ ಗಳನ್ನು ಹಾಕಿಸಿ, ಯುಟರ್ನ್ ಇರುವ ಸ್ಥಳಗಳಲ್ಲಿ ನಿಧಾನವಾಗಿ ಚಲಿಸುವಂತೆ ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ರಸ್ತೆ ಸುರಕ್ಷತಾ ನಿಯಮಗಳನ್ನು ವಾಹನ ಸವಾರರು ಪಾಲಿಸಿ, ವೇಗದ ಮಿತಿಯಲ್ಲಿ ಪ್ರಯಾಣಿಸಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಎಂದು ಜಿಲ್ಲೆಯ ನಾಗರಿಕರಿಗೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ವರದಿ: ಅರವಿಂದ…
ಉಡುಪಿ: ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆಯ ಮಂಡಲೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ 48 ದಿನಗಳ ಕಾಲದ ಮಂಡಲ ಉತ್ಸವದ ನೇತೃತ್ವ ವಹಿಸಿದ್ದಾರೆ. ಪ್ರತಿದಿನ ಅಭಿಷೇಕ ಹೋಮ ಹವನ ನಡೆಯುತ್ತಿದೆ. ಫೆಬ್ರವರಿ 7ರ ನಂತರ ಬಾಲರಾಮನಿಗೆ ತೊಟ್ಟಿಲು ಸೇವೆ ನಡೆಯಲಿದೆ. ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮಂಡಲೋತ್ಸವ ನಡೆಯುತ್ತಿದೆ. ಪ್ರತಿದಿನ ಅಭಿಷೇಕ, ಹೋಮ ಹವನ, ಪಲ್ಲಕ್ಕಿ ಸೇವೆಗಳನ್ನು ಬಾಲರಾಮನಿಗೆ ಸಮರ್ಪಿಸಲಾಗುತ್ತಿದೆ. ಈ ನಡುವೆ ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಸಮರ್ಪಿಸಲಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಬೀಟೆ ಮರದಿಂದ ನಿರ್ಮಿಸಲಾದ ಕೆತ್ತನೆಗಳುಳ್ಳ ತೊಟ್ಟಿಲನ್ನು ಫೆಬ್ರವರಿ 7ರಂದು ಸಂಜೆ ನಡೆಯುವ ಉತ್ಸವದಲ್ಲಿ ಅರ್ಪಣೆ ಮಾಡುವುದಾಗಿ ರಘುಪತಿ ಭಟ್ ಮಾಹಿತಿ ನೀಡಿದ್ದಾರೆ. ನೂತನ ತೊಟ್ಟಿಲಿನಲ್ಲಿ ಬಾಲರಾಮ ದೇವರಿಗೆ ಪೇಜಾವರ ಸ್ವಾಮೀಜಿ ತೊಟ್ಟಿಲು ಸೇವೆ ನಡೆಸಲಿದ್ದಾರೆ.
ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ತೋರುತ್ತಿರುವ ಧೋರಣೆಯನ್ನು ಖಂಡಿಸಿ ಫೆಬ್ರವರಿ 7ರಂದು ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ವಿರುದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಕೆ.ಎಸ್. ಈಶ್ವರಪ್ಪ, ಸಿಎಂ ಮತ್ತು ಡಿಸಿಎಂ ಕರ್ನಾಟಕದ ಮಾನವನ್ನ ಹರಾಜು ಹಾಕುತ್ತಿದ್ದಾರೆ. ಯಾರಾದ್ರೂ ಸಿಎಂ, ಡಿಸಿಎಂ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಾರೆಯೇ. ಕಳೆದ ಯುಪಿಎ ಸರ್ಕಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಎಷ್ಟು ಅನುದಾನ ಬಂದಿತ್ತು, ಈಗ ನರೇಂದ್ರ ಮೋದಿ ನೇತೃತ್ವದಲ್ಲಿರುವ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು. ರಾಜ್ಯಕ್ಕೆ ಏನು ಬಂದಿದೆ ಎಂದು ಪ್ರತಿಭಟನೆ ಮಾಡುವುದಕ್ಕೂ ಮುನ್ನ ಶ್ವೇತಪತ್ರ ಹೊರಡಿಸಲಿ. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಶ್ವೇತಪತ್ರ ಹೊರಡಿಸುವುದಿಲ್ಲ. ಒಂದು ವೇಳೆ ಶ್ವೇತ ಪತ್ರ ಹೊರಡಿಸಿದರೆ ಕೇಂದ್ರದ ವಿತ್ತ ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್ ಅವರು…
ಹೊಸದಿಲ್ಲಿ: ಸ್ಟಾಲ್ ಗಳು ಮತ್ತು ಔತಣಗಳಲ್ಲಿ ಸಿಂಥೆಟಿಕ್ ಬಣ್ಣಗಳು ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಉಲ್ಲೇಖಿಸಿ ಗೋವಾದ ಮಪುಸಾ ಎಂಬ ಪಟ್ಟಣವು ಇತ್ತೀಚೆಗೆ ಜನಪ್ರಿಯ ಫ್ಯೂಷನ್ ಡಿಶ್ ಗೋಬಿ ಮಂಚೂರಿಯನ್ ಮೇಲೆ ನಿಷೇಧ ಹೇರಿದೆ. ಮಾಪುಸಾ ಮುನ್ಸಿಪಲ್ ಕೌನ್ಸಿಲ್ ನ ನಿರ್ಧಾರವು 2022 ರಲ್ಲಿ ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾ ಜಾತ್ರೆಯ ಸಮಯದಲ್ಲಿ ಇದೇ ರೀತಿಯ ಕ್ರಮವನ್ನು ಅನುಸರಿಸುತ್ತದೆ, ಅಲ್ಲಿ ಆಹಾರ ಮತ್ತು ಔಷಧಗಳ ಆಡಳಿತವು (ಎಫ್ ಡಿಎ) ಗೋಬಿ ಮಂಚೂರಿಯನ್ ಮಳಿಗೆಗಳನ್ನು ನಿರ್ಬಂಧಿಸಲು ಮೊರ್ಮುಗಾವೊ ಮುನ್ಸಿಪಲ್ ಕೌನ್ಸಿಲ್ ಗೆ ನಿರ್ದೇಶನ ನೀಡಿದೆ. ಕೆಲವು ಭಾರತೀಯ ಆಹಾರ ಪದಾರ್ಥಗಳನ್ನು ಜಾಗತಿಕವಾಗಿ ನಿಷೇಧಿಸಲಾಗಿದೆ: ಕೆಲವು ಭಾರತೀಯ ಆಹಾರ ಪದಾರ್ಥಗಳು ಅಂತಾರಾಷ್ಟ್ರೀಯ ನಿಷೇಧವನ್ನು ಎದುರಿಸುತ್ತಿವೆ. ಆರೋಗ್ಯದ ಅಪಾಯಗಳ ಬಗ್ಗೆ ಕಾಳಜಿ ವಹಿಸುವ ಕಾರಣ, ಅಡುಗೆಮನೆಯಲ್ಲಿ ಮುಖ್ಯವಾದ ತುಪ್ಪವನ್ನು US ನಲ್ಲಿ ನಿಷೇಧಿಸಲಾಗಿದೆ. ಸೊಮಾಲಿಯಾ 2011 ರಲ್ಲಿ ಸಮೋಸಾಗಳನ್ನು ನಿಷೇಧಿಸಿತು, ಫ್ರಾನ್ಸ್ ಕೆಚಪ್ ಅನ್ನು ನಿಷೇಧಿಸಿದೆ.
ತುಮಕೂರು: ಟಾಟಾ ಏಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಬೇಗೂರು ಬಳಿ ನಡೆದಿದೆ. ಕಾರಿನಲ್ಲಿದ್ದ ಚನ್ನರಾಯಪಟ್ಟಣ ಮೂಲದ ಅಣ್ಣೇಗೌಡ(38), ನಿರಂಜನ್(37) ಮೃತ ದುರ್ದೈವಿಗಳಾಗಿದ್ದಾರೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಟಾಟಾ ಏಸ್ ಚಾಲಕನನ್ನು ವಶಕ್ಕೆ ಪಡೆದಿರುವ ಕುಣಿಗಲ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಕೊಡಗು: ಯುವಕನೊಬ್ಬ ಎನರ್ಜಿ ಡ್ರಿಂಕ್ ರೆಡ್ ಬುಲ್ ಕುಡಿದು ಅಸ್ವಸ್ಥಗೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ. ವಿನೋದ್ (27)ಅಸ್ವಸ್ಥಗೊಂಡ ಯುವಕನಾಗಿದ್ದಾನೆ. ಅಸ್ವಸ್ಥಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿನೋದ್ ಎಂಬ ಯುವಕ ಮಡಿಕೇರಿಯ ಶಾಪ್ ಒಂದರಿಂದ ಎನರ್ಜಿ ಡ್ರಿಂಕ್ ಖರೀದಿಸಿ ಕುಡಿದಿದ್ದ ಎನ್ನಲಾಗಿದ್ದು, ರೆಡ್ ಬುಲ್ ಟಿನ್ ಒಳಗೆ ಲೋಳೆಯಂತ ವಸ್ತು ಪತ್ತೆಯಾಗಿದೆ. ಘಟನೆ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎನರ್ಜಿ ಡ್ರಿಂಕ್ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.