Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಒಂದಿಲ್ಲೊಂದು ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಜೆಡಿಎಸ್ (JDS) ನಿಂದ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚನೆ ಮಾಡಿರೊ ಆರೋಪ ಎದುರಿಸುತ್ತಿದ್ದು, ಆತನ ವಿರುದ್ಧ ದೂರು ನೀಡಲು ಜೆಡಿಎಸ್ ಮುಂದಾಗಿದೆ ಎಂದು ವರದಿ ತಿಳಿಸಿದೆ. 2 ಲಕ್ಷ ಹಣ ಪಡೆದು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಟಿಕೆಟ್ ಕೊಡಿಸೋದಾಗಿ ವಂಚನೆ ಮಾಡಿರೋ ಬಗ್ಗೆ ಚಂದನ್ ಎಂಬುವರಿಂದ ಕಮೀಷನರ್ ಗೆ ದೂರು (Complainant) ನೀಡಲಾಗಿತ್ತು. ದೂರಿನ ಜೊತೆಗೆ ಚಂದನ್ ಗೆ ಡ್ರೋನ್ ಪ್ರತಾಪ್ ಟಿಕೆಟ್ ಕೊಡಿಸುವ ಬಗ್ಗೆ ಮಾತನಾಡಿರೋ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ (H.D. Kumaraswamy) ಹಾಗೂ ಡಿಕೆಶಿ, ಅನ್ನದಾನಿಯ ಹೆಸರು ಪ್ರಸ್ತಾಪ ಮಾಡಿ ಡ್ರೋನ್ ಮಾತನಾಡಿದ್ದಾರೆ. ಹಾಗಾಗಿ ಹೆಚ್.ಡಿ.ಕೆ ಹೆಸರು ಹೇಳಿಕೊಂಡು ವಂಚನೆ ಮಾಡಿರೋ ಆರೋಪದ ಮೇಲೆ ಡ್ರೋನ್ ಪ್ರತಾಪ್ ವಿರುದ್ಧ ದೂರು ಕೊಡಲು ಜೆಡಿಎಸ್ ಮುಂದಾಗಿದೆ. ಈ ಹಿಂದೆಯು ಡ್ರೋನ್ ಪ್ರತಾಪ್ (Drone Pratap) ಬಿಗ್…
ಮೂರು ದಶಕಗಳ ಹಿಂದೆ ರಮನಾಂದ ಸಾಗರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮತ್ತು ದೇಶದೆಲ್ಲೆಡೆ ಸಂಚಲನ ಸೃಷ್ಠಿಸಿದ್ದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಫೆಬ್ರವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ. ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುದಿನ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡುವುದಾಗಿ ಹೇಳಿದೆ. ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ. ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ರಾಮಾಯಣ’ ಬರಲಿದೆ ಎಂದು ಡಿಡಿ ನ್ಯಾಷನಲ್ ಎಕ್ಸ್ ನಲ್ಲಿ ತಿಳಿಸಿದೆ. 80 ಮತ್ತು 90 ರ ದಶಕದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ, ಶ್ರೀರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ ಮತ್ತು ಸಹೋದರ ಲಕ್ಷ್ಮಣನಾಗಿ ಸುನಿಲ್ ಲಹ್ರಿ ಕಾಣಿಸಿಕೊಂಡಿದ್ದಾರೆ. ದೇಶದಾದ್ಯಂತ ಜನಮನ್ನಣೆಯನ್ನೂ ಈ ಧಾರಾವಾಹಿ ಗಳಿಸಿತ್ತು. ಕೊರೊನಾ ಲಾಕ್ ಡೌನ್ ವೇಳೆಯೂ ರಾಮಾಯಣ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆಗಲೂ ಲಕ್ಷಾಂತರ ಜನರು ವೀಕ್ಷಿಸಿ ಜನಪ್ರಿಯತೆ ಪಡೆದುಕೊಂಡಿತ್ತು.
ಫೆ.14 ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ಬೆಂಗಳೂರಿನಲ್ಲಿ ನಿಷೇಧಿಸಲಾಗಿದೆ. ಪ್ರೇಮಿಗಳ ದಿನಾಚರಣೆ ಕಾರಣಕ್ಕೆ ಅಲ್ಲ ಎನ್ನಲಾಗಿದ್ದು, ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ. ಫೆ.14 ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ. 14 ಸಂಜೆ 5 ಗಂಟೆಯಿಂದ ಫೆ.17 ಬೆಳಗ್ಗೆ 6 ಗಂಟೆಯವರಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರುದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿಕ್ಷಕರು ಮತ ಚಲಾಯಿಸಲಿದ್ದಾರೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಗಾಗಲೇ ಜ.16 ರಿಂದ ಫೆ.23ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಹೆಸರು ಗಳಿಸಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಕಾರು ಅಪಘಾತವಾಗಿ ಭಾನುವಾರ(ಫೆ.4) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಕಾರನ್ನು ತೆಗೆಯಲು ಹೋಗಿ ಪಿಲ್ಲರ್ ಗೆ ಕಾರು ಗುದ್ದಿದ್ದು, ಬ್ರೇಕ್ ತುಳಿಯಲು ಹೋಗಿ ಎಕ್ಸಿಲೇಟರ್ ತುಳಿದದ್ದು ಅಪಘಾತಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಸೋನು ಇತ್ತೀಚೆಗಷ್ಟೇ ಕಾರು ಕಲಿಯಲು ಆರಂಭಿಸಿದ್ದಾರೆ ಎನ್ನಲಾಗಿದ್ದು, ಹಾಗಾಗಿ ಎಕ್ಸಿಲೇಟರ್ ಮತ್ತು ಬ್ರೇಕ್ ನಡುವಿನ ಗೊಂದಲದಿಂದಾಗಿ ಅಪಾರ್ಟ್ ಮೆಂಟ್ ನ ಪಿಲ್ಲರ್ ಗೆ ಕಾರು ಗುದ್ದಿಸಿದ್ದಾರೆ. ಕೈ, ಕಾಲುಗಳಿಗೆ ಸಣ್ಣ ಪುಟ್ಟ ಏಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಗುದ್ದಿದ ರಭಸಕ್ಕೆ ಕಾರಿನ ಮುಂಬಾಗ ನುಜ್ಜುಗುಜ್ಜಾಗಿದೆ.
ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಿದ್ಧವಾಗಿದೆ. ಯುಸಿಸಿ ಕರಡು ಮಸೂದೆಯನ್ನು ಉತ್ತರಾಖಂಡ ಕ್ಯಾಬಿನೆಟ್ ಅಂಗೀಕರಿಸಿದೆ. ಮಂಗಳವಾರ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ವಿಧೇಯಕವನ್ನು ಸದನದಲ್ಲಿ ಚರ್ಚಿಸಿ ಬಹುಮತದೊಂದಿಗೆ ಅಂಗೀಕರಿಸಲು ಮುಂದಾಗಿದ್ದು, ಫೆ.2ರಂದು ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿ ಕರಡು ವರದಿಯನ್ನು ಸರಕಾರಕ್ಕೆ ರವಾನಿಸಿತ್ತು. ಈ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಸಂಪುಟ ಅಂಗೀಕರಿಸಿದೆ. ಉತ್ತರಾಖಂಡ ಯುಸಿಸಿಯ ಅನುಷ್ಠಾನವನ್ನು ಘೋಷಿಸಿದ ಮೊದಲ ರಾಜ್ಯವಾಗಿದೆ.
ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಿದ್ಧವಾಗಿದೆ. ಯುಸಿಸಿ ಕರಡು ಮಸೂದೆಯನ್ನು ಉತ್ತರಾಖಂಡ ಕ್ಯಾಬಿನೆಟ್ ಅಂಗೀಕರಿಸಿದೆ. ಮಂಗಳವಾರ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ವಿಧೇಯಕವನ್ನು ಸದನದಲ್ಲಿ ಚರ್ಚಿಸಿ ಬಹುಮತದೊಂದಿಗೆ ಅಂಗೀಕರಿಸಲು ಮುಂದಾಗಿದ್ದು, ಫೆ.2ರಂದು ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿ ಕರಡು ವರದಿಯನ್ನು ಸರಕಾರಕ್ಕೆ ರವಾನಿಸಿತ್ತು. ಈ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಸಂಪುಟ ಅಂಗೀಕರಿಸಿದೆ. ಉತ್ತರಾಖಂಡ ಯುಸಿಸಿಯ ಅನುಷ್ಠಾನವನ್ನು ಘೋಷಿಸಿದ ಮೊದಲ ರಾಜ್ಯವಾಗಿದೆ.
ಕಾಡಾನೆಯು ಬಂಡೀಪುರ ಅಭಯಾರಣ್ಯದ ರಾಂಪುರ ಆನೆ ಶಿಬಿರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. ಕೇರಳದ ಮಾನಂದವಾಡಿಯಿಂದ ಸೆರೆ ಹಿಡಿದು ತಂದ ‘ತನ್ನೀರು’ ಎಂಬ ಈ ಆನೆಯನ್ನು ತರಲಾಗಿತ್ತು. ಹಾಸನದ ಬೇಲೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಾವಳಿ ನೀಡುತ್ತಿದ್ದ ತನ್ನೀರು ಎಂಬ ಕಾಡಾನೆಯನ್ನು ಜನವರಿ 16ರಂದು ಸೆರೆ ಹಿಡಿದು ರೇಡೀಯೋ ಕಾಲರ್ ಅಳವಡಿಸಿ ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ ವಲಯಕ್ಕೆ ಬಿಡಲಾಗಿತ್ತು. ನಂತರ ಆನೆ ಕಬಿನಿ ನದಿ ದಾಟಿ ಕೇರಳದ ಮಾನಂದವಾಡಿ ಅರಣ್ಯ ಪ್ರದೇಶದ ಮಾರ್ಗವಾಗಿ ಫೆಬ್ರವರಿ 1ರಂದು ಜನವಸತಿ ಪ್ರದೇಶ ಮಾನಂದವಾಡಿ ನಗರದ ತಾಲೂಕು ಕಚೇರಿಯ ಕಾಂಪೌಂಡ್‌ನಲ್ಲಿ ಸೇರಿಕೊಂಡು, ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ ಕುರಿತು ಕೇರಳ ಅರಣ್ಯಾಧಿಕಾರಿಗಳು ಬಂಡೀಪುರ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ಕಾಡಾನೆಯನ್ನು ಪುನಃ ಕಾಡಿಗೆ ಹಿಮ್ಮೆಟ್ಟಿಸಲು ಯಾವುದೇ ಸಾಧ್ಯತೆ ಇಲ್ಲದೆ ಹಾಗೂ ಆನೆಯು ಮತ್ತೆ ಜನವಸತಿ ಪ್ರದೇಶಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಾಗಿತ್ತು. ಆದ್ದರಿಂದ ಕೇರಳ ಹಾಗೂ ಕರ್ನಾಟಕ ಎರಡು ರಾಜ್ಯಗಳ ಅಧಿಕಾರಿಗಳು ಚರ್ಚಿಸಿ ಕಾಡಾನೆಯನ್ನು ಸೆರೆ…
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ರಾಜ್ಯದಲ್ಲಿನ ಬರದ ಬಗ್ಗೆ ಕೇಂದ್ರದ ನಾಯಕರನ್ನು ಒಂದು ದಿನವೂ ಭೇಟಿ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋಹನ್ ಸಿಂಗ್ ಸರ್ಕಾರದಲ್ಲಿ ಆದ ತಾರತಮ್ಯದ ಬಗ್ಗೆ ಬಿಜೆಪಿ ದಾಖಲೆ ಬಿಡುಗಡೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮನಮೋಹನ್ ಸಿಂಗ್ ಸರ್ಕಾರ ಹೋಗಿ 10 ವರ್ಷ ಆಗಿದೆ. ಇದನ್ನೂ ಕೇಳುವವರಿಗೆ ಜ್ಞಾನ ಇರಬೇಕು. ಬುದ್ಧಿವಂತಿಕೆ ಇರಬೇಕು. ಈಗ ಅಧಿಕಾರ ನಿಮ್ಮ ಕೈಯಲ್ಲಿದೆ. ನೀವು ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಅಂತಿದ್ರಿ. ಡಬಲ್ ಎಂಜಿನ್ ಸರ್ಕಾರ ಮಾಡಿದ್ರಿ. ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಏನು ತಂದಿತ್ತು. ಅದು ಬಹಳ ಮುಖ್ಯ ಎಂದು ಹೇಳಿದರು. 27 ಸಂಸದರನ್ನು ಇಟ್ಟುಕೊಂಡು ಬರಗಾಲದ ಮೀಟಿಂಗ್ ಮಾಡಿಸಲು ಸಾಧ್ಯವಾಗಿಲ್ಲ. ಸಭೆ ನಡೆಸಿ ಹಣ ಬಿಡುಗಡೆ ಮಾಡಿಸಿಲ್ಲ. ರಾಜ್ಯ ಸರ್ಕಾರ ಏನು ಕೊಟ್ಟಿಲ್ಲ ಅಂತಾರೆ, ಮೊದಲ ಬಾರಿಗೆ ನಮ್ಮ ರಾಜ್ಯ ಸರ್ಕಾರ ರೈತರ ಖಾತೆಗೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ 2,000 ಹಣ ಜಮೆ…
ಸಕಲೇಶಪುರ: ಕೆಎಸ್ ಆರ್ ಟಿಸಿ ಬಸ್ಸೊಂದು ಶಾಲಾ ಕಾಂಪೌಂಡ್ ಹಾಗೂ ಮನೆಗೆ ಬಸ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಬಳಿ ನಡೆದಿದೆ. ಉದಯಪುರ ಗ್ರಾಮದ ಅಮೃತ್‌ರಾಜ್ (34) ಮೃತಪಟ್ಟವರಾಗಿದ್ದಾರೆ.. ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಬೆಂಗಳೂರಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಬಸ್ ಸಕಲೇಶಪುರದ ಬಾಗೆ ಗ್ರಾಮಕ್ಕೆ ತಲುಪುತ್ತಿದ್ದಂತೆ ಬ ಸ್‌ನ ಆಕ್ಸಲ್ ತುಂಡಾಗಿ ರಸ್ತೆ ಪಕ್ಕದ ಜಮೀನಿಗೆ ನುಗ್ಗಿ ಮನೆಗೆ ಡಿಕ್ಕಿಹೊಡೆದು, ಜೆಎಸ್ ಎಸ್ ಶಾಲೆಯ ಕಾಂಪೌಂಡ್ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಬಸ್ ಡಿಕ್ಕಿ ಹೊಡೆದ ತೀವ್ರತೆಗೆ ಶಾಲೆಯ ಗೋಡೆಯೇ ಕುಸಿದು ಬಿದ್ದಿದೆ. ಬಸ್ ನಲ್ಲಿದ್ದ ಪ್ರಯಾಣಿಕ ಅಮೃತ್‌ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಿಪಟೂರು: ಗ್ರಾಮೀಣ ಸಮುದಾಯದ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟತೆ ಹೊಂದಿರುವ ನಮ್ಮ ಆರೋಗ್ಯ ಕೇಂದ್ರ ಫೆಬ್ರುವರಿ 4 2024 ರಂದು ತನ್ನ ಪ್ರಥಮ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಕೆ.ಬಿ.ಕ್ರಾಸ್ ಮತ್ತು ಹಾಲ್ಕುರಿಕೆ ಗ್ರಾಮಗಳಲ್ಲಿ ಡಾ.ಹೇಮಾ ದಿವಾಕರ್ ಹಾಗೂ ನುರಿತ ವೈದ್ಯರುಗಳ ನೇತೃತ್ವದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆದ ಈ ಆರೋಗ್ಯ ಶಿಬಿರದಲ್ಲಿ ಹೆಚ್ಚಾಗಿ ಮಹಿಳೆಯರು ಅಗತ್ಯ ವೈದ್ಯಕೀಯ ಸೇವೆ ಮತ್ತು ಸಮಾಲೋಚನೆ ಪಡೆದರು. ನಮ್ಮ ಆರೋಗ್ಯ ಕೇಂದ್ರದ ವಾರ್ಷಿಕ ಸಂಭ್ರಮಾಚರಣೆ ಉದ್ದೇಶಿಸಿ ಮಾತನಾಡಿದ ನಮ್ಮ ಆರೋಗ್ಯ ಕೇಂದ್ರದ ಸಂಸ್ಥಾಪಕರು ಹಾಗೂ ಕಾಂಗ್ರೆಸ್ ಮುಖಂಡರಾಗಿರುವ C B ಶಶಿಧರ್ ರವರು ಗ್ರಾಮೀಣ ಸಮುದಾಯದ ಮೇಲೆ ಈ ಶಿಬಿರವು ಪರಿಣಾಮಕಾರಿಯಾಗಿ ಪ್ರಭಾವ ಬೀರಿದೆ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವುದು ನಮ್ಮ ಸಂಸ್ಥೆಯ ಸೇವಾಪರತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ, ನಮ್ಮ ಆರೋಗ್ಯ ಕೇಂದ್ರದ ಪ್ರಥಮ ವರ್ಷಾಚರಣೆಗೆ ನನಗೆ…