Author: admin

ಚಿತ್ತಾಪುರ: ಲಾರಿ ಡಿಕ್ಕಿಯಾಗಿ ಬೈಕ್​ ಸವಾರ ದುರ್ಮರಣ ಹೊಂದಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಜಲಕರ್ಟಿ-ಲಡ್ಪಾಪುರ ಮಧ್ಯೆ ನಡೆದಿದೆ. ವಾಡಿ ಪಟ್ಟಣದ ಜಾಂಬವೀರ ಕಾಲೋನಿ ನಿವಾಸಿ ಸೂರ್ಯಕಾಂತ ಮುಂಡರಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಯಾದಗಿರಿದಿಂದ ವಾಡಿಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿದೆ.

Read More

ಕೆ.ಆರ್.ಪೇಟೆ: ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರೊಂದು ಹಳ್ಳಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸೇತುವೆ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೆ.ಆರ್.ಪೇಟೆ ನಿವಾಸಿಗಳಾದ ಅನಿಕೇತನ್ (30), ಪವನ್ ಶೆಟ್ಟಿ (32) ಹಾಗೂ ಚಿರಂಜೀವಿ (32) ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ ಸಾಗರ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ.  ಕೆ.ಆರ್.ಪೇಟೆಯಿಂದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದ ಮಾಸ್ಕೋದಲ್ಲಿದ್ದ ಭಾರತದ ವಿದೇಶಾಂಗ ಇಲಾಖೆ ಉದ್ಯೋಗಿಯನ್ನು ಬಂಧಿಸಲಾಗಿದೆ. ಈ ಉದ್ಯೋಗಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ (ಎಟಿಎಸ್) ತಂಡ ಈ  ಭಾರತೀಯ ನೌಕರನನ್ನು ಮಾಸ್ಕೋದ ರಾಯಭಾರ ಕಚೇರಿಯಿಂದ ಬಂಧಿಸಿದೆ. ಶಹಮಹಿಯುದ್ದೀನ್‌ ಪುರ ಗ್ರಾಮದ ನಿವಾಸಿ ಸತೇಂದ್ರ ಸಿವಾಲ್ ಅವರನ್ನು ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಅದು ಹೇಳಿದೆ.

Read More

ತನ್ನ ಸಾವಿನ ವದಂತಿಯನ್ನು ತಾನೇ  ಹಬ್ಬಿಸಿಕೊಂಡಿರುವ  ಮಾಡೆಲ್, ನಟಿ  ಪೂನಂ ಪಾಂಡೆಗೆ ಇದೀಗ ಕಾನೂನಿನ ಸಂಕಷ್ಟ ಎದುರಾಗಿದ್ದು, ಮುಂಬೈನಲ್ಲಿ ಪತ್ರಕರ್ತರೊಬ್ಬರು ಪೂನಂ ಪಾಂಡೆ ವಿರುದ್ಧ ದೂರು ದಾಖಲಿಸಿದ್ದಾರೆ. ಪೂನಂ ಪಾಂಡೆ ಅವರ ಸಾವಿನ ಕುರಿತು ಸುಳ್ಳು ಸುದ್ದಿ ಹರಡಲು ಕಾರಣರಾದ ಎಲ್ಲರ ವಿರುದ್ಧವೂ ಎಫ್ ​ಐಆರ್​ ದಾಖಲಿಸಿ. ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗರ್ಭಕಂಠದ ಕ್ಯಾನ್ಸರ್​ನಿಂದ ಪೂನಂ ಪಾಂಡೆ ನಿಧನರಾದರು ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಿದಾಡಿತ್ತು.  ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಅನೇಕರು ಪೂನಂ ಪಾಂಡೆಗೆ ಶ್ರದ್ಧಾಂಜಲಿ ಅರ್ಪಿಸಿದ್ದರು. ಆದ್ರೆ ಕೇವಲ ಪ್ರಚಾರಕ್ಕಾಗಿ ನಟಿ  ತನ್ನ ಸಾವಿನ ಸುದ್ದಿಯನ್ನು ತಾನೇ ಹಬ್ಬಿಸಿರೋದಾಗಿ  ಆ ನಂತರ ತಿಳಿದು ಬಂದಿತ್ತು. ಪೂನಂ ಪಾಂಡೆ ಅವರು ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಮ್ಮದೇ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರು. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಕೂಡ ಮಾರ್ಗ ಸರಿಯಾಗಿಲ್ಲ ಎಂದು ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಶಾಲೆಗೆ ಇ ಮೇಲ್ ಮೂಲಕ ಮತ್ತೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಬೆಂಗಳೂರಿನ ಯಶವಂತಪುರದಲ್ಲಿರುವ ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಗೆ ಜನವರಿ 28ರಂದು ಬಾಂಬ್ ಬೆದರಿಕೆ ಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ. Sahukarisrinuvasarao65@gmail.com ಎಂಬ ಇ-ಮೇಲ್ ಮೂಲಕ  ಬೆದರಿಕೆ ಕರೆ ಬಂದಿದ್ದು,  ಪೊಲೀಸರು ಹಾಗೂ  ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಂಬ್ ಬೆದರಿಕೆ ಹಿನ್ನೆಲೆ ಶಾಲೆಗೆ ಬಂದ ಪೊಲೀಸ್ ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದಾಗ ಹುಸಿ ಬಾಂಬ್ ಕರೆ ಎನ್ನುವುದು ತಿಳಿದು ಬಂದಿದೆ.

Read More

ಬೆಂಗಳೂರು: ಪ್ರತ್ಯೇಕ ರಾಷ್ಟ್ರದ ಕುರಿತು ಹೇಳಿಕೆ ನೀಡಿರುವ ಸಂಸದ ಡಿಕೆ ಸುರೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ ಘಟನೆ ಭಾನುವಾರ ನಡೆಯಿತು. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಸುರೇಶ್ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ನುಗ್ಗಿದ್ದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮಾ ನಡೆಯಿತು. ಬಿಜೆಪಿ ಕಾರ್ಯಕರ್ತರು ಏಕಾಏಕಿ ಸುರೇಶ್ ಅವರ ನಿವಾಸಕ್ಕೆ ನುಗ್ಗಿತ್ತಿದ್ದಂತೆಯೇ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು.

Read More

ನನಗೆ ವಾಹನ ಖರೀದಿಸಿದ ಯಾವುದೇ ಅನುಭವವಿಲ್ಲ, ಸೈಕಲ್ ಕೂಡ ಖರೀದಿಸಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಆಯೋಜನೆಗೊಂಡಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ  ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಭಾರತದ ಆಟೋ ಮೊಬಿಲಿಟಿ, ಸಪ್ಲೈ ಚೈನ್ ಸೇರಿದಂತೆ ಸಂಪೂರ್ಣ ಸಂಪರ್ಕಿತ ವ್ಯವಸ್ಥೆಯನ್ನು ಒಂದು ಮಂಟಪದೊಳಗೆ ತಂದು ಎಕ್ಸ್‌ಪೋ ಆಯೋಜಿಸಲಾಗಿದೆ. ಭಾರತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಪ್ರಮುಖವಾಗಿ ಬ್ಯಾಟರಿ ಉತ್ಪಾದನೆ ಸರಿಯಾದ ಪ್ರಮಾಣದಲ್ಲಿ ನಾವು ಮಾಡಬೇಕಿದೆ. ಈ ಕುರಿತು ಇತ್ತೀಚೆಗೆ ಗ್ಲೋಬಲ್ ಸಮ್ಮಿಟ್‌ನಲ್ಲಿ ನಾನು ಪಾಲ್ಗೊಂಡಿದ್ದೆ. ಹಲವು ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಈ ವಿಚಾರಗಳನ್ನು ಮೂರನೇ ಅವಧಿ ಸರ್ಕಾರದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ. ಮೋದಿಯ 3ನೇ ಬಾರಿಗೆ ಸರ್ಕಾರ ರಚನೆ ಮಾತು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿದ್ದ ಉದ್ಯಮಿಗಳು, ತಜ್ಞರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದರು. ಹಲವು ವೇದಿಕೆಯಲ್ಲಿ ಹೇಳಿದಂತೆ ಇದು ಸರಿಯಾದ ಸಮಯ,…

Read More

ಶಿವಮೊಗ್ಗದ ಎಂಕೆಕೆ ರಸ್ತೆ, ಕೆ ಆರ್ ಪುರಂ, ಸಂಗೊಳ್ಳಿ ರಾಯಣ್ಣ ವೃತ್ತ, ಲಷ್ಕರ್ ಮೊಹಲ್ಲಾ, ಜಟ್ ಪಟ್ ನಗರ, ಬೆಂಕಿ ನಗರ, ರಾಗಿಗುಡ್ಡ, ಭದ್ರಾವತಿಯ ಜನ್ನಾಪುರ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿ ವೃತ್ತ, ಕೋಡಿಹಳ್ಳಿ, ಶಿಕಾರಿಪುರದ ತೇರು ಬೀದಿ, ಅಂಬೇಡ್ಕರ್ ಸರ್ಕಲ್, ಹಳಿಯೂರ್ ಸರ್ಕಲ್,  ಆನವಟ್ಟಿಯ ಆಜಾದ್ ನಗರ, ಶಾದಿಮಹಲ್, ಸೊರಬದ ಕೋರ್ಟ್ ವೃತ್ತ, ಸೊರಬ ಬಸ್ ನಿಲ್ದಾಣ, ಸಾಗರದ ವಿನೋಬನಗರ, ಆನಂದಪುರ ಬಸ್ ನಿಲ್ದಾಣ, ಕಾರ್ಗಲ್ ಬಜಾರ್ ಮತ್ತು ತೀರ್ಥಹಳ್ಳಿಯ ಬಾಳೆ ಬೈಲು, ಬಟ್ಟೆ ಮಲ್ಲಪ್ಪ, ನಗರದ ಕೋಟೆ ರಸ್ತೆ, ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಪೊಲೀಸರು ದಿಢೀರ್‌ ಕಾರ್ಯಾಚರಣೆ ನಡೆಸಲಾಯಿತು. ಡಿವೈಎಸ್‌ ಪಿಗಳು, ಇನ್ಸ್‌ ಪೆಕ್ಟರ್‌, ಸಬ್‌ ಇನ್ಸ್‌ ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಕಾಲ್ನಡಿಗೆ ವಿಶೇಷ ಗಸ್ತು, ಏರಿಯಾ ಡಾಮಿನೇಷನ್‌ ಗಸ್ತು ನಡೆಸಿದರು. ಸಾರ್ವಜನಿಕ ಸ್ಥಳದಲ್ಲಿ ಉಪಟಳ ಉಂಟು ಮಾಡುವ, ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ 33 ಪ್ರಕರಣಗಳು ದಾಖಲು ಮಾಡಲಾಗಿದೆ. ಇನ್ನು, ವೀಕೆಂಡ್‌ ಹಿನ್ನೆಲೆ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ…

Read More

ದಾವಣಗೆರೆ: ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಬಿಲ್ ಪಾಸು ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರು ನೀಡಿದರೆ ತನಿಖೆ ನಡೆಸಿ, ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಲ್ ಪಾಸು ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಇನ್ನೂ ಅಡ್ವಾಣಿಯವರಿಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವ ಬಗ್ಗೆ ನಮ್ಮ‌ ಅಭ್ಯಂತರವಿಲ್ಲ. ನಾನು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳಿಗೆ ಕೊಡಬೇಕು ಎಂದು ಪತ್ರ ಬರೆದಿದ್ದೆ. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಸಿಗಬೇಕು ಎಂಬುದು ನಮ್ಮ ಆಸೆಯಾಗಿತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Read More

ಕೆಲ ಸಮಯಗಳ ಹಿಂದೆ ತನ್ನ ಪತ್ನಿ ದಿನಕ್ಕೆ ಆರು ಬಾರಿ ಸ್ನಾನ ಮಾಡ್ತಾಳೆಂದು ಗಂಡ ಹೆಂಡತಿಗೆ ವಿಚ್ಛೇದನ ನೀಡಿರುವ ಘಟನೆ ಬಗ್ಗೆ ವರದಿಯಾಗಿತ್ತು.ಇದೀಗ ಗಂಡ ಸ್ನಾನವೇ ಮಾಡೋದಿಲ್ಲವೆಂದು ಹೇಳಿ ಹೆಂಡ್ತಿ ನನಗೆ ವಿಚ್ಛೇದನ ಬೇಕು ಎಂದು ಕೇಸ್‌ ದಾಖಲಿಸಿರುವ ಘಟನೆ ಬಗ್ಗೆ ವರದಿಯಾಗಿದೆ. ಬೇಸಿಗೆ ಕಾಲದಲ್ಲಿ ದಿನಕ್ಕೆ ಮೂರು ಮೂರು ಬಾರಿಯಾದರೂ ಸ್ನಾನ ಮಾಡಬೇಕು ಎಂದೆನಿಸೋದು ಸಹಜ. ಆದರೆ ಈ ಮಹಿಳೆಯ ಪತಿ ಮಾತ್ರ ಯಾವ ಶೆಕೆಯಾದ್ರೂ ಇರ್ಲಿ, ಬೆವರು ಇಳಿತಿರ್ಲಿ ಸ್ನಾನವನ್ನಂತು ಮಾಡೋದೇ ಇಲ್ವಂತೆ. ಇದಕ್ಕಾಗಿ ಹೆಂಡ್ತಿ ರೊಚ್ಚಿಗೆದ್ದು, ಗಂಡನ ವಿರುದ್ಧ ದೂರು ನೀಡಿದ್ದಾಳೆ. ಟರ್ಕಿಯ ಈ ಮಹಿಳೆ ದೂರಿಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಎಂಥೆಂಥ ಕೇಸ್‌ ಗಳನ್ನು ನೋಡಿದ್ದೇವೆ.ಆದರೆ ಇದೊಂದು ವಿಚಿತ್ರ ಕೇಸ್‌ ಎನ್ನುತ್ತಾ ಸದ್ಯ ಪೊಲೀಸರಿಗೆ ಇದು ತುಂಬಾ ತಲೆ ನೋವಾಗಿ ಪರಿಣಮಿಸಿದೆ.ಆಕೆ ನೀಡಿದ ದೂರಿನಲ್ಲಿ “ನನ್ನ ಗಂಡ ಸ್ನಾನ ಮಾಡದಿರೋದಕ್ಕೆ ಬೆವರು ವಾಸನೆ ಬರುತ್ತಿದೆ.ವಾರಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರೆ. 5 ದಿನ ಒಂದೇ ಬಟ್ಟೆ ಉಡುತ್ತಾರೆ.ಅಪರೂಪಕ್ಕೆ…

Read More