Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ತುಮಕೂರು: ಜಮೀನಿಗೆ ದಾರಿ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ತುಮಕೂರು ತಾಲೂಕಿನ ಕಟ್ಟೆಗೊಲ್ಲಹಳ್ಳಿಯಲ್ಲಿ ನಡೆದಿದೆ. ಮಚ್ಚು ಹಿಡಿದು ಎರಡು ಕುಟುಂಬಗಳ ನಡುವಿನ ಕಾದಾಟದಲ್ಲಿ ಮಹಿಳೆಯರು ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ. ಆಸ್ತಿ ವಿಚಾರದಲ್ಲಿ ದಾಯಾದಿಗಳ ನಡುವೆ ಗಲಾಟೆ ನಡೆದಿದೆ. ರವೀಶ್ ಕುಟುಂಬದ ಅವರ ಪತ್ನಿ ರುದ್ರಾಣಮ್ಮ ಮಗ ರೋಹಿತ್ ನಿಂದ ಹಲ್ಲೆ ಆರೋಪ ಮಾಡಲಾಗಿದೆ. ನಾಗರಾಜಯ್ಯ ಕುಟುಂಬದ ಮೇಲೆ ರವೀಶ್ ಕುಟುಂಬದವರಿಂದ ಹಲ್ಲೆ ಮಾಡಿದ್ದಾರೆ. 16 ಎಕರೆ ಆಸ್ತಿ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡುವೆಯೂ ಗಲಾಟೆ ನಡೆದಿದೆ. ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೈರ್ ಸೇಫ್ಟಿ ನವೀಕರಣ ವಿಚಾರದಲ್ಲಿ ಖಾಸಗಿ ಶಾಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ 10 ಸಾವಿರ ಶಾಲೆಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ಶಾಲೆ ಗಳ ಟ್ಯಾಕ್ಸ್ ನ್ನು 100% ರಷ್ಟು ಏರಿಕೆ ಮಾಡಿತು. ಕೋರ್ಟ್‌ನಲ್ಲಿ ತಿರ್ಮಾನ ಆಗಿ ಅದನ್ನ 25% ಗೆ ಇಳಿಸಲಾಯ್ತು. ಪಾಲಿಕೆಯಿಂದ ಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗಿದ್ದು, ಕೋಟ್ಯಾಂತರ ರೂ. ಅನ್ನು ಖಾಸಗಿ ಶಾಲೆಗಳಿಂದ ಲೂಟಿ ಮಾಡಲಾಗುತ್ತಿದೆ ಎಂದರು. ಖಾಸಗಿ ಶಾಲೆಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಿಎಂ ಹಾಗೂ ಡಿಸಿಎಂ ಅವಕಾಶ ನೀಡಬೇಕು ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮ್ಯಸೆಗಳಿಗೆ ಅಧಿಕಾರಿಗಳು, ಸರ್ಕಾರ ಧನಿಯಾಗಬೇಕು. ಫೈರ್ ಸೆಫ್ಟಿ, ಲ್ಯಾಂಡ್ ಕರ್ನವರ್ಶನ್, ಟ್ಯಾಕ್ಸ್, ಸೇರಿದಂತೆ ಹಲವು ವಿಚಾರದ ಸಮ್ಯಸೆ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಪಾಲಿಕೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದ್ದು, ಖಾಸಗಿ ಶಾಲೆಗಳ ಮೇಲೆ ಹೇರಲಾಗಿರುವ ಹಲವು ನಿಯಮಗಳು ಸರಿ ಪಡಿಸಬೇಕು ಎಂದು ತಿಳಿಸಿದರು.
ಕೊಡಗು: ಕೊಡಗಿನ ಸುಂಟಿಕೊಪ್ಪ ಸಮೀಪದ 7ನೇ ಮೈಲಿ ಬಳಿ ಎರಡು ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ, ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರಿನ ಹುಣಸೂರು ಮೂಲದ ಮಂಗಳೂರು ಮಾಳ ನಿವಾಸಿ ಸಂತೋಷ್ ಮೃತ ದುರ್ದೈವಿ. ಸಂತೋಷ್ ಹುಣಸೂರಿನಿಂದ ಮಡಿಕೇರಿಗೆ ಬರುತ್ತಿದ್ದರು. ಮತ್ತೊಬ್ಬ ಸವಾರ ಚೇತನ್ ಬೋಯಿಕೇರಿಯಿಂದ ಕುಶಾಲನಗರ ಕಡೆ ತೆರಳುತ್ತಿದ್ದರು. ಇಬ್ಬರು ವೇಗವಾಗಿ ಬರುತ್ತಿದ್ದಾಗ, ನಿಯಂತ್ರಣ ತಪ್ಪಿ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸಂತೋಷ್ ಸ್ಥಳದಲ್ಲೇ ಮೃತಪಟ್ಟರೆ, ಚೇತನ್ ಸ್ಥಿತಿ ಗಂಭಿರವಾಗಿದೆ. ಸ್ಥಳೀಯರು ಚೇತನ್‌ನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಪಘಾತದಲ್ಲಿ ಎರಡು ಬೈಕ್ ಗಳು ಸಂಪೂರ್ಣ ಜಖಂಗೊಂಡಿವೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹಾವುಗಳು ಮನೆಯೊಳಗೆ ಕಾಣಿಸಿಕೊಂಡು ಜನರನ್ನು ಭಯಹುಟ್ಟಿಸುವುದು ಇತ್ತೀಚಿನ ದಿನಗಳಲ್ಲಿ ಹೆಚಹಚಾಗಿ ಕಂಡು ಬರುತ್ತಿದ್ದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ನಾಗರ ಹಾವೊಂದು ಸುರಳಿ ಸುತ್ತಿ ಕುಳಿತುಕೊಂಡಿರುವುದು ಭಯವನ್ನು ಹುಟ್ಟಿಸುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆಟ್ಟು ಹೋದ ಹಳೆಯ ಸೀಲಿಂಗ್ ಫ್ಯಾನ್ ಮೇಲೆ ಹಾವು ಹೋಗಿ ಕೂತಿದೆ. ಹಾವು ಸೀಲಿಂಗ್ ಫ್ಯಾನ್ ಮೇಲೆ ಹೋಗುತ್ತಿದ್ದಂತೆ ಫ್ಯಾನ್ ತಿರುಗಲು ಪ್ರಾರಂಭಿಸಿದ್ದು, ಈ ವೇಳೆ ಎಡೆ ಎತ್ತಿದ ಈ ನಾಗರಹಾವು ಫ್ಯಾನಿನ ಮೇಲೆ ಸುರುಳಿ ಸುತ್ತಿಕೊಂಡು ಕುಳಿತುಕೊಂಡಿದೆ. ಈ ವಿಡಿಯೋವನ್ನು ಚಂದ್ರಶೇಖರನ್ 6102 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದ್ದಂತೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಈ ವಿಡಿಯೋ ನೋಡುತ್ತಿದ್ದಂತೆ ಭಯಭೀತರಾಗಿದ್ದಾರೆ. ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಸೆಕ್ಷನ್ ನಲ್ಲಿ ಕೆಲವರು ನಾಗಪ್ಪನಿಗೆ ಭಕ್ತಿಯಿಂದ ನಮಸ್ಕರಿಸಿದರೆ, ಇನ್ನು ಕೆಲವರು ಭಯ ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ.?: ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಯಕೃತ್ತು ಮತ್ತು ಮೂತ್ರಕೋಶದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಅತಿಸಾರವನ್ನು ನಿವಾರಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಹಸಿವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಒತ್ತಡವನ್ನು ನಿಯಂತ್ರಿಸಲು ಉಪಯುಕ್ತ ಆಹಾರಗಳಲ್ಲಿ ಒಂದಾಗಿದೆ. ತರಕಾರಿಗಳು, ಹಣ್ಣುಗಳ ಸಿಪ್ಪೆಯನ್ನು ಹೀಗೆ ಬಳಸಿ: ನಾವು ಅಡುಗೆ ಮಾಡುವಾಗ ಹೆಚ್ಚಿನ ತರಕಾರಿ & ಹಣ್ಣಿನ ಸಿಪ್ಪೆಗಳನ್ನು ಎಸೆಯುತ್ತೇವೆ. ಆದರೆ ಅವುಗಳನ್ನು ಎಸೆಯುವ ಬದಲು, ಕೆಲವು ರೀತಿಯಲ್ಲಿ ಬಳಸಬಹುದು. ಬೀಗ್ರೂಟ್ ಮತ್ತು ಇತರ ತರಕಾರಿಗಳನ್ನು ಸಿಪ್ಪೆ ಮಾಡುತ್ತೇವೆ. ನಾವು ಅವುಗಳನ್ನು ಉತ್ತಮವಾದ ಸೂಪ್ ಮಾಡಬಹುದು. ಅಡುಗೆ ಮನೆಯ ತ್ಯಾಜ್ಯವನ್ನು ಮಣ್ಣಿನಲ್ಲಿ ಹಾಕಿ ಗೊಬ್ಬರವನ್ನಾಗಿ ಮಾಡಿ ಗೊಬ್ಬರವಾಗಿ ಬಳಸಬಹುದು. ನಿಂಬೆಹಣ್ಣು & ಕಿತ್ತಳೆ ಸಿಪ್ಪೆಗಳಿಂದ ಪ್ಲೇಟ್ ಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಇದರಲ್ಲಿನ ಆಮ್ಲಯ ಗುಣಗಳು ಜಿಡ್ಡನ್ನು ತೆಗೆದುಹಾಕುತ್ತದೆ. ಶುಂಠಿಯ ಆರೋಗ್ಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ?: ಶುಂಠಿಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು…
ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಟಿಪ್ಪು ಬಡಾವಣೆಯ ಅಂಗಡಿ ಮುಂದೆ ನಡು ರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ. ಜಾಬೀರ್ ಪಾಷ ಅಲಿಯಾಸ್ ನೇಪಾಳ್(26) ಕೊಲೆಯಾದ ವ್ಯಕ್ತಿ. ಮುಕ್ತಿಯಾರ್ ಪಾಷಾ ಆರೋಪಿಯಾಗಿದ್ದಾನೆ. ಆರೋಪಿ ಮುಕ್ತಿಯಾರ್ ಪಾಷಾ ಮತ್ತು ಜಾಬೀರ್ ನಡುವೆ ಯಾವುದೋ ವೈಯಕ್ತಿಕ ದ್ವೇಷ ಇತ್ತು. ಪರಿಣಾಮ ಆತ ಮಧ್ಯರಾತ್ರಿ ನಡು ರಸ್ತೆಯಲ್ಲಿ ಜಾಬೀರ್ ನನ್ನು ದಾರುಣವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮಧ್ಯರಾತ್ರಿಯೇ ಪೊಲೀಸ್ ಠಾಣೆಗೆ ಹೋಗಿ ತಾನು ಕೊಲೆ ಮಾಡಿರುವುದಾಗಿ ಹೇಳಿ ಠಾಣೆಯಲ್ಲಿ ಶರಣಾಗಿದ್ದಾನೆ. ಘಟನೆ ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದಾಗ ಕಾಡಾನೆಯೊಂದು ದಾಳಿ ನಡೆಸಿ ರೈತರೊಬ್ಬರು ಬಲಿಯಾಗಿರುವ ಘಟನೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ನಡೆದಿದ್ದು, ಮೃತರನ್ನು ಚಲುವಯ್ಯ(65) ಎಂದು ಗುರುತಿಸಲಾಗಿದೆ. ಕಾಡಾನೆ ದಾಳಿಯಿಂದ ಸ್ಥಳದಲ್ಲೇ ರೈತ ಚಲುವಯ್ಯ ಮೃತಪಟ್ಟಿದ್ದಾರೆ. ನಿರಂತರ ಕಾಡು ಪ್ರಾಣಿ ಹಾವಳಿಯಿಂದ ರೈತರಲ್ಲಿ ಆತಂಕ ಹೆಚ್ಚಾಗುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಹಾಗೂ ರೈತರು ಒತ್ತಾಯ ಮಾಡಿದ್ದಾರೆ. ಕಾಡಾನೆಗಳ ಸಹಿತ ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮೆಲ್ಲರ ರಕ್ಷಣೆಗೆ ಬರಬೇಕು ಎಂದು ಮನವಿ ಮಾಡಿದ್ದಾರೆ. ಜೀವ ಹೋದ ಮೇಲೆ ಬಂದು ಏನು ಹೇಳಿದರೂ, ಪರಿಹಾರ ಕೊಟ್ಟರೂ ಹೋದ ಜೀವ ಮರಳಿ ಬಾರದು. ಹೀಗಾಗಿ ಪ್ರಾಣಿಗಳ ದಾಳಿಯಿಂದ ರಕ್ಷಣೆ ನೀಡಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಅವರು, ಗರ್ಭಕಂಠದ ಕ್ಯಾನ್ಸರ್ ಜಾಗೃತಿಗಾಗಿ ಸತ್ತಿರುವುದಾಗಿ ಹುಚ್ಚಾಟ ಮಾಡಿದ್ದಾರೆ. ಈ ಹುಚ್ಚಾಟದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಇದು ಜಾಗೃತಿಯಲ್ಲ, ಆಕೆ ಮಾಡಿರೋ ಹುಚ್ಚಾಟ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪೋಸ್ಟ್ ಹಾಕುತ್ತಿದ್ದಾರೆ. ಇಂದು ಬೆಳಗ್ಗೆ ಅದೇ ಇನ್ಸ್ಟಾ ಪೇಜ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಪೂನಂ, ಇದೊಂದು ಜಾಗೃತಿಗಾಗಿ ಮಾಡಿರುವ ಗಿಮಿಕ್ ಎಂದು ಒಪ್ಪಿಕೊಂಡಿದ್ದಾರೆ. ಗಿಮಿಕ್ ಮಾಡಿ ಐಯಾಮ್ ಸಾರಿ ಎಂದೂ ಕೇಳಿದ್ದಾರೆ. ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿ ಜನರ ಭಾವನೆ ಜೊತೆ ಚೆಲ್ಲಾಟ ಆಡಬಾರದು. ಇದು ಗಂಭೀರ ವಿಚಾರ. ಜೊತೆಗೆ ಪೂನಂ ಪಾಂಡೆ ಸಾವಿನ ಸುಳ್ಳಿನಿಂದ ಇತರೆ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಮಹಿಳೆಯರು ಕೂಡ ಶಾಕ್ ಗೆ ಒಳಗಾಗಿರುತ್ತಾರೆ. ಹೀಗಾಗಿ ಈ ರೀತಿ ಸುಳ್ಳು ಸುದ್ದಿ ಹರಡಿಸಿ ಗಿಮಿಕ್ ಮಾಡಿದ ಪೂನಂ ವಿರುದ್ಧ ಕ್ರಮ ತಗೆದುಕೊಳ್ಳಿ ಎಂದಿದ್ದಾರೆ ಅನೇಕರು. ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಅನೇಕ ಸೆಲಬ್ರೇಟಿಗಳು ಮೂಡಿಸ್ತಾರೆ. ಆದ್ರೇ…
ಬೆಂಗಳೂರು: ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್ ಎಸ್ ಧೋನಿ ಅವರ ಮ್ಯಾನೇಜರ್ ಅವರಿಗೆ ವಂಚಿಸಲಾಗಿದ್ದು, ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ತಾನು ಎಂದು ಹೇಳಿಕೊಂಡು ಇಂಡಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರ ಮ್ಯಾನೇಜರ್ ಗೆ ವಂಚಿಸಿದ ಘಟನೆ ಕಳೆದ ಅಕ್ಟೋಬರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದೇವರ ಸ್ಪೆಷಲ್ ದರ್ಶನ ಮಾಡಿಸಿಕೊಡುತ್ತೇನೆ ಎಂದು ಹೇಳಿ ವಂಚಕನೊಬ್ಬ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಂಎಸ್ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಎಂಬವರಿಗೆ ಬರೋಬ್ಬರಿ ಆರುವರೆ ಲಕ್ಷ ರೂಪಾಯಿಗಳಷ್ಟು ವಂಚಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ತಾನು ತಾನು ಐಎಎಸ್ ಅಧಿಕಾರಿಯಾಗಿದ್ದು, ತಿರುಪತಿಯಲ್ಲಿ ಹನ್ನೆರಡು ಮಂದಿಗೆ ದೇವರ ವಿಶೇಷ ದರ್ಶನ ಮಾಡಿಸುತ್ತೇವೆ; ರೂಮ್ ವ್ಯವಸ್ಥೆ…
ಕಲಬುರಗಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಶಶಿಕಲಾ(20) ಗೊಲ್ಲಾಳಪ್ಪ(24) ನೇಣಿಗೆ ಶರಣಾದ ಪ್ರೇಮಿಗಳಾಗಿದ್ದಾರೆ. ಸಂಬಂಧದಲ್ಲಿ ಅಣ್ಣ ತಂಗಿ ಆಗಿದ್ದ ಶಶಿಕಲಾ ಮತ್ತು ಗೊಲ್ಲಾಳಪ್ಪ ಅವರ ಪ್ರೀತಿಗೆ, ಎರಡೂ ಮನೆಯವರು ನಿರಾಕರಣೆ ವ್ಯಕ್ತ ಪಡಿಸಿದ್ದಾರೆ. ಶಶಿಕಲಾಗೆ ಬೇರೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು ಎನ್ನಲಾಗಿದೆ. ಅದರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ. ಪ್ರಿಯತಮೆಗೆ ಮದುವೆ ನಿಶ್ಚಯ ಆಗಿರುವ ವಿಷಯ ತಿಳಿದ ಗೊಲ್ಲಾಳಪ್ಪ, ಶಶಿಕಲಾಳನ್ನು ಮನೆಯಿಂದ ಕರೆದುಕೊಂಡು ಹೋಗಿ, ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಅದೇ ಗ್ರಾಮದ ಹೊರವಲಯದ ತೋಟದ ಜಮೀನಿನಲ್ಲಿ ಜೋಡಿಗಳಿಬ್ಬರು ತಾವು ಮದುವೆ ಮಾಡಿಕೊಂಡಿರುವುದರ ಬಗ್ಗೆ ಸೆಲ್ಫಿ ಫೋಟೋ ತೆಗೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.