Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಬೆಂಗಳೂರು: ಪೋಸ್ಟ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ ಪಡಿಸಿಕೊಂಡಿದ್ದಾರೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ನಗರಕ್ಕೆ ಬಂದಿದೆ. ರಿತಿಕ್ ರಾಜ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪಿ. ಜಾರ್ಖಂಡ್ ನಿಂದ ನಗರಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದನು. ಪೋಸ್ಟ್ ಮೂಲಕ ನಗರದ ವಿವಿಧ ಭಾಗಗಳಿಗೆ ಡ್ರಗ್ಸ್ ಸರಬರಾಜು ಮಾಡಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ ಬರುತ್ತಿದ್ದ ಪೋಸ್ಟ್ ಅನ್ನು ಟ್ರ್ಯಾಪ್ ಮಾಡಿದ ಸಿಸಿಬಿ ಪೊಲೀಸರು, ಬಳಿಕ ಪೋಸ್ಟ್ ಡೆಲಿವರಿ ಆಗುವ ಜಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ. ನಗರಕ್ಕೆ ಚರಸ್ ಡ್ರಗ್ಸ್ ನ್ನು, ಗಿಫ್ಟ್ ಬಾಕ್ಸ್ ರೂಪದಲ್ಲಿ ಕಳುಹಿಸಲಾಗಿತ್ತು. ನಂತರ ಬಂದಿದ್ದ ಬಾಕ್ಸ್ ಗಳನ್ನು ಆರೋಪಿಯಿಂದಲೇ ಪೊಲೀಸರು ತೆಗೆಸಿದ್ದಾರೆ. ಬಾಕ್ಸ್ ತೆಗೆದು ನೋಡಿದ ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಇವುಗಳನ್ನು ಋಷಿಕೇಶದಿಂದ ಪೋಸ್ಟ್ ಮೂಲಕ ಕಳುಹಿಸಲಾಗಿದ್ದು, ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ಎಂಬವನು ಪಾರ್ಸೆಲ್ ಮಾಡಿದ್ದನು.…
ಸಾಮಾನ್ಯವಾಗಿ ಮಕ್ಕಳಿಗೆ 6 ವರ್ಷ ತುಂಬಿದ್ರೆ ಸಾಕು, ಎದುರುತ್ತರ ಕೊಡುತ್ತಾರೆ ಅನ್ನೋ ಮಾತುಗಳನ್ನು ಹೆಚ್ಚಿನ ಪೋಷಕರು ಹೇಳುತ್ತಾರೆ. ಕೆಲವು ಪೋಷಕರು ನಮ್ಮ ಮಕ್ಕಳು ನಮ್ಮ ಯಾವುದೇ ಮಾತನ್ನು ಕೇಳುವುದಿಲ್ಲ ಎನ್ನುವ ದೂರು ಹೇಳುವುದನ್ನು ನೀವು ಕೇಳಿರಬಹುದು. ಹೌದು, ಮಕ್ಕಳು ಬೆಳೆದಂತೆ ಅವರ ನಡವಳಿಕೆಯಲ್ಲಿ ಬದಲಾವಣೆಗಳು ಕಂಡು ಬರುವುದು ಸಹಜ. ಯಾಕೆಂದರೆ ಬೆಳೆಯುತ್ತಿರುವ ಮಕ್ಕಳಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಲವು ಬದಲಾವಣೆಗಳನ್ನು ಕಾಣಬಹುದು. ಅಂತಹ ಬದಲಾವಣೆಗಳಲ್ಲಿ ಮಕ್ಕಳು ಎದುರುತ್ತರ ಕೊಡುವ ಸ್ವಭಾವವೂ ಒಂದು. ಮೊದಲಿಗೆ ಮಕ್ಕಳ ಈ ಎದುರುತ್ತರ ಕೊಡುವ ಸ್ವಭಾವ ಸ್ವಾಭಾವಿಕ ಎಂದೆನಿಸಿದರೂ ಬರುಬರುತ್ತಾ ಇದು ಪೋಷಕರ ಕೋಪವನ್ನು ಹೆಚ್ಚಿಸಬಹುದು. ಮಕ್ಕಳ ಈ ಸ್ವಭಾವವನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದಬೇಕಾಗುತ್ತದೆ. ಅವರನ್ನು ಬೈಯುವ ಬದಲಿಗೆ ಅವರ ಸ್ವಭಾವವನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಲು ಪ್ರಯತ್ನ ಪಡಿ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ದಂಡಿಸುವಷ್ಟು ಸುಲಭವಾಗಿ ಅವರು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರಶಂಸಿಸುವುದಿಲ್ಲ. ಆದ್ದರಿಂದ…
ನಶೆಯಲ್ಲಿದ್ದ ಮೆಡಿಕಲ್ ವಿದ್ಯಾರ್ಥಿಯೊಬ್ಬ ಕಾರಿನಲ್ಲಿ ಐದಾರು ಕಡೆ ಅಪಘಾತ ಮಾಡಿದ್ದಾನೆ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರು ಮೆಡಿಕೆಲ್ ವಿದ್ಯಾರ್ಥಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಹೊಳೆಹೊನ್ನೂರು ರಸ್ತೆಯಲ್ಲಿ ಜಾವಳ್ಳಿಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುವಾಗ ನಾಲ್ಕೈದು ಕಡೆ ಅಪಘಾತ ಮಾಡಿದ್ದಾನೆ. ಗುರುಪುರದ ಶಾಂತಮ್ಮ ಲೇಔಟ್ ನಲ್ಲಿ ಭದ್ರಾವತಿಯ ಲೋಯರ್ ಹುತ್ತದ ನವೀನ್ ಕುಮಾರ್ ಮತ್ತು ಅವರ ಪತ್ನಿ ತೆರಳುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದಾರೆ. ಅಷ್ಟು ಹೊತ್ತಿಗೆ ಮೆಡಿಕಲ್ ವಿದ್ಯಾರ್ಥಿಯನ್ನು ಹಿಂಬಾಲಿಸಿ ಬಂದ ಸಾರ್ವಜನಿಕರು ಆತನನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಡಿಕಲ್ ವಿದ್ಯಾರ್ಥಿ ನಶೆಯಲ್ಲಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ಮದ್ಯ ಸೇವಿಸಿದ್ದನೊ, ಗಾಂಜಾ ಮತ್ತಿನಲ್ಲಿದ್ದನೊ ಅನ್ನುವ ಕುರಿತು ಮಾಹಿತಿ…
ಮಾನನಷ್ಟಕ್ಕೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ಕೈಬಿಡುವ ಪ್ರಸ್ತಾವನೆಯನ್ನು ಕಾನೂನು ಆಯೋಗ ತಿರಸ್ಕರಿಸಿದೆ. ಸಂವಿಧಾನದ 21ನೇ ಪರಿಚ್ಛೇದದ ಹಿತಾಸಕ್ತಿ ಕಾಪಾಡಲು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಗತ್ಯ ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ. ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆ ಎಂದು ಪರಿಷ್ಕರಿಸುವ ಸಂದರ್ಭದಲ್ಲಿ ಇಂತಹ ಪ್ರಸ್ತಾವನೆ ಕಾನೂನು ಆಯೋಗದ ಮುಂದೆ ಬಂದಿತ್ತು. ಭಾರತೀಯ ನ್ಯಾಯ ಸಂಹಿತೆಯು ಕ್ರಿಮಿನಲ್ ಮಾನನಷ್ಟವನ್ನು ಒಳಗೊಂಡಿದ್ದರೂ, ಅದರ ಶಿಕ್ಷೆಗಳು ಪಾವತಿಸದ ಸಮಾಜ ಸೇವೆಯನ್ನು ಒಳಗೊಂಡಿತ್ತು. ಒಬ್ಬ ವ್ಯಕ್ತಿ ತನ್ನ ಜೀವನದಿಂದ ಗಳಿಸಿದ ಘನತೆಯನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಕಾನೂನು ಆಯೋಗ ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ಮುಂದುವರಿಸುವುದು ತಪ್ಪು. ನಾಗರಿಕರ ಮಾನಹಾನಿ ಮಾಡುವವರು ಸಮಾಜಕ್ಕೂ ತಪ್ಪು ಮಾಡುತ್ತಾರೆ. ಮಾನಹಾನಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎರಡು, ವ್ಯಕ್ತಿಗಳ ಮಾನಹಾನಿ ಮಾಡುವ ಮೂಲಕ ಹಣ ಸಂಗ್ರಹಿಸುವುದು ಆನ್ ಲೈನ್ ಮಾಧ್ಯಮಗಳಿಗೆ ಗಂಭೀರ ಸವಾಲಾಗಿದೆ ಎಂದು ಕಾನೂನು ಆಯೋಗವು ಗಮನಸೆಳೆದಿದೆ. ನ್ಯಾಯಮೂರ್ತಿ ರಿತು…
ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 7 ರಂದು ಕರೆ ನೀಡಿರುವ ಬಂದ್ ಗೆ ಬೆಂಬಲಿಸದಿರಲು ವರ್ತಕರು, ಆಟೋ ಚಾಲಕರು ನಿರ್ಧಾರ ಮಾಡಿದ್ದಾರೆ. ಫೆಬ್ರವರಿ 7 ರಂದು ಸಮಾನ ಮನಸ್ಕರ ವೇದಿಕೆ ಮಂಡ್ಯ ಬಂದ್ ಗೆ ಕರೆ ನೀಡಿದರೆ, ಎರಡು ದಿನಗಳ ನಂತರ ಫೆಬ್ರವರಿ 9 ರಂದು ಬಜರಂಗದಳ ಕೂಡ ಬಂದ್ ಗೆ ಕರೆ ನೀಡಿವೆ. ಆದರೆ ಬಂದ್ ಬೆಂಬಲಿಸರದಿರಲು ಆಟೋ ಚಾಲಕರು ಹಾಗೂ ವರ್ತಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಹಲವು ದಿನಗಳ ಹಿಂದೆ ಕರಗೋಡಿನಲ್ಲಿ ಹನುಮಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಬಾವುಟ ಹಾರಾಟ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧಿಸಿ ಪ್ರತಿಭಟನೆ ಹಾಗೂ ಪಾದಯಾತ್ರೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಕೂಡ ನಡೆದಿತ್ತು.
ಇದೀಗ ಗ್ರಾಹಕರು ವಸ್ತುಗಳನ್ನು ಖರೀದಿಸಲು ಅಂಗಡಿಗೆ ಎಂಟ್ರಿಯಾದ್ರೆ ಸಾಕು. ಕಿಸೆ ಖಾಲಿಯಾಗುವಷ್ಟರ ಮಟ್ಟಿಗೆ ದಿನನಿತ್ಯ ಬಳಕೆಯ ವಸ್ತಗಳ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಅಂತೆಯೇ ಕೋಳಿ ಮಾಂಸ ಸೇರಿದಂತೆ ಕುರಿ,ಹಂದಿ ಮಾಂಸ ದರವೂ ಏರಿಕೆಯಾಗಿದೆ. ಹಂದಿ ಪೂರೈಕೆಯಲ್ಲಿ ಕುಸಿತ ಹಾಗೂ ಇನ್ನಿತರ ಕಾರಣಗಳಿಂದ ಹಂದಿ ಮಾಂಸ ಧಾರಣೆಯಲ್ಲಿ ದಿಢೀರ್ ಏರಿಕೆ ಕಂಡಿದೆ ಎನ್ನಲಾಗಿದೆ.ಇದರಿಂದಾಗಿ ಹಂದಿ ಸಾಕಣೆದಾರರಿಗೆ ಸಿಹಿ ನ್ಯೂಸ್ ಆದ್ರೆ, ಹಂದಿ ಮಾಂಸ ಪ್ರಿಯರಿಗೆ ಕಹಿ ನ್ಯೂಸ್ ಆಗಿದೆ.ಕರಾವಳಿ ಜಿಲ್ಲೆಯಲ್ಲಿ ಮೀನು,ಕೋಳಿ,ಕುರಿ-ಆಡಿನ ಮಾಂಸದಂತೆಯೇ ಹಂದಿ ಮಾಂಸಕ್ಕೂ ಸಾಕಷ್ಟು ಡಿಮ್ಯಾಂಡ್ ಇದ್ದು,ಗ್ರಾಮೀಣ ಭಾಗದಲ್ಲಂತೂ ಹಂದಿ ಮಾಂಸ ಪ್ರಿಯರು ಹೆಚ್ಚು ಇದ್ದಾರೆ. ತಿಂಗಳ ಹಿಂದೆ ಸರಾಸರಿ ಕೆ.ಜಿ.ಗೆ 240 ರೂ.ಇದ್ದು, ಇದೀಗ ಬೆಲೆ ಏಕಾಏಕಿ 440 ರೂ.ಗೆ ಏರಿಕೆ ಕಂಡಿದೆಯೆನ್ನುವ ಸುದ್ದಿಯಿದೆ. ಬಳಿಕ 300ಕ್ಕೆ ಇಳಿದಿತ್ತು. ಪ್ರಸ್ತುತ 280ರಿಂದ 330 ರೂ. ಆಸುಪಾಸಿನಲ್ಲಿದೆ. ಈಗ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಂದಿ ಮಾಂಸಕ್ಕೆ ಬೇಡಿಕೆ ಇದ್ದು ಗ್ರಾಹಕರಿಗೆ ಸಹಜವಾಗಿ ತಲೆ ನೋವಾಗಿ ಪರಿಣಮಿಸಿದೆ.…
ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಪಕ್ಷಗಳು I.N.D.I.A. ಹೆಸರಲ್ಲಿ ಕಾಂಗ್ರೆಸ್ (Congress), ಜೆಡಿಯು, ಆರ್ ಜೆಡಿ, ಎಎಪಿ, ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸೇರಿದಂತೆ ಹಲವು ಪಕ್ಷಗಳು ಒಂದು ಗೂಡಿದ್ದವು. ಆದರೆ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ I.N.D.I.A. ನಾಯಕರ ಮಧ್ಯೆ ಭಿನ್ನಮತ ಸ್ಫೋಟಗೊಂಡಿದೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಅಬ್ಕಿ ಬಾರ್, 400 ಪಾರ್ ಎಂಬ ಘೋಷಣೆ ಪ್ರಸ್ತಾಪಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ದಾಟಲಿದೆ ಎಂದು ಬಾಯ್ತಪ್ಪಿ ಹೇಳಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಹೀಗೆ ಹೇಳುತ್ತಿದ್ದಂತೆ ಇಡೀ ಸದನ ನಗೆಗಡಲಲ್ಲಿ ತೇಲಿದೆ. ಖುದ್ದು ಪ್ರಧಾನಿ ಮೋದಿಯವರೇ ಖರ್ಗೆ ಮಾತಿಗೆ ನಕ್ಕಿದ್ದಾರೆ. ಬಿಜೆಪಿ ಸದಸ್ಯರಂತೂ ಮೇಜು ಕುಟ್ಟುತ್ತಾ, ನಗುತ್ತಾ ಖರ್ಗೆ ಮಾತಿಗೆ ಬೆಂಬಲಿಸಿದ್ದಾರೆ. ಸದನದಲ್ಲಿ ನಗೆ, ಚಪ್ಪಾಳೆ ಜೋರಾಗುತ್ತಿದ್ದಂತೆ ತಮ್ಮ ಮಾತಿಗೆ ಸಮರ್ಥನೆ ನೀಡಲು ಖರ್ಗೆ ಮುಂದಾಗಿದ್ದಾರೆ. ಈ ಬಾರಿ…
ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಭಾಷೆಗೆ ಬಹಳಷ್ಟು ಮಹತ್ವವಿದೆ. ನಮ್ಮ ಎಲ್ಲಾ ಪ್ರಾಚೀನ ಗ್ರಂಥಗಳು ಮತ್ತು ಪುರಾಣಗಳು ಪ್ರಾಚೀನ ಕಾಲದಲ್ಲಿ ಪವಿತ್ರ ಭಾಷೆಯಾಗಿ ಪೂಜಿಸಲ್ಪಡುವ ಸಂಸ್ಕೃತ ಭಾಷೆಯಲ್ಲಿಯೇ ರಚನೆಯಾಗಿದೆ. 18 ನೇ ಶತಮಾನದಲ್ಲಿ ಭಾರತಕ್ಕೆ ಯುರೋಪಿಯನ್ ವಸಾಹತುಗಾರರ ಬಂದಾಗ, ಬುದ್ಧಿವಂತಿಕೆ ಮತ್ತು ತಿಳುವಳಿಕೆಯ ಭಾಷೆಯಾಗಿದ್ದ ಸಂಸ್ಕೃತಿ ಅವನತಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಇಂಗ್ಲಿಷ್ ಭಾಷೆಯನ್ನು ಬ್ರಿಟಿಷ್ ವಸಾಹತುಶಾಹಿಗಳು ತಂದ ಸ್ವಲ್ಪ ಸಮಯದ ನಂತರ, ಸಂಸ್ಕೃತ ಭಾಷೆಯು ಸರ್ಕಾರಿ, ಶೈಕ್ಷಣಿಕ ಮತ್ತು ವಿಜ್ಞಾನದ ಭಾಷೆಯಾಗಿ ಬದಲಾಯಿಸಲಾಯಿತು. ಆದರೆ ಭಾರತದಲ್ಲಿ ಈಗ ಈ ಭಾಷೆಯನ್ನು ಮಾತನಾಡುವವರೇ ಇಲ್ಲ ಅನ್ನೋ ಕಾಲ ಘಟ್ಟದಲ್ಲಿ ಸಂಸ್ಕೃತ ಮಾತ್ರ ಮಾತನಾಡುವ ಒಂದು ಹಳ್ಳಿಯಿದೆ ಅಂದ್ರೆ ನೀವು ನಂಬ್ತೀರಾ? ಭಾರತೀಯ ಪ್ರಾದೇಶಿಕ ಭಾಷೆಗಳು ಉಳಿಯಲು ಹೆಣಗಾಡುತ್ತಿರುವ ಈ ಯುಗದಲ್ಲಿಯೂ ಸಂಸ್ಕೃತ ಭಾಷೆಯನ್ನು ಮಾತನಾಡುತ್ತಾ ಆ ಭಾಷೆಯನ್ನು ಉಳಿಸುವ ಪ್ರಯತ್ನಗಳಾಗುತ್ತಿವೆ.ಹೌದು, ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಸ್ಕೃತವನ್ನು ಮಾತನಾಡಲು ಹೆಮ್ಮೆಪಡುವ ಜನಸಂಖ್ಯೆಯು ಇನ್ನೂ ಇದೆ ಅನ್ನೋದು ತುಂಬಾ ವಿಶೇಷವೆನಿಸಿದೆ. ಕರ್ನಾಟಕದ ತುಂಗಾ ನದಿಯ ದಂಡೆಯ…
ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಅಮೆರಿಕದ ಓಹಿಯೊದ ಸಿನ್ಸಿನಾಟಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶ್ರೇಯಸ್ ರೆಡ್ಡಿ ಎಂದು ಗುರುತಿಸಲಾಗಿದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ ಮತ್ತು ಇದು ಕಳೆದ ಒಂದು ವಾರದಲ್ಲಿ ಇಂಥ ಮೂರನೇ ಪ್ರಕರಣ ಎಂದು ವರದಿ ತಿಳಿಸಿದೆ. ಈತ ರೆಡ್ಡಿ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್ ವಿದ್ಯಾರ್ಥಿಯಾಗಿದ್ದು, ಸಾವಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎನ್ನಲಾಗಿದೆ. ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ನ್ಯೂಯಾರ್ಕ್ ನಲ್ಲಿರುವ ಭಾರತೀಯ ಕಾನ್ಸುಲೇಟ್, ಮೃತ ವಿದ್ಯಾರ್ಥಿಯ ಕುಟುಂಬದ ಜತೆ ಸಂಪರ್ಕದಲ್ಲಿದ್ದು, ಸಾಧ್ಯವಾದ ಎಲ್ಲ ನೆರವನ್ನೂ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದೆ. “ಓಹಿಯೊದಲ್ಲಿದ್ದ ಭಾರತ ಮೂಲದ ಶ್ರೇಯಸ್ ರೆಡ್ಡಿಯವರ ಅಕಾಲಿಕ ಸಾವಿನಿಂದ ನಮಗೆ ತೀವ್ರ ಬೇಸರವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ಸಂದೇಹ ಇಲ್ಲ. ಶ್ರೇಯಸ್ ಕುಟುಂಬದ ಜತೆ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯವಾದ ಎಲ್ಲ ನೆರವನ್ನು ನೀಡುತ್ತಿದ್ದೇವೆ” ಎಂದು ನ್ಯೂಯಾರ್ಕ್ ನಲ್ಲಿರುವ ಭಾರತ ಕಾನ್ಸುಲೇಟ್ ಪೋಸ್ಟ್ ಮಾಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ.…
ಕೋಲ್ಕತಾ: ಮುಂಬರುವ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ “40 ಸ್ಥಾನಗಳನ್ನು” ಪಡೆಯುವುದು ಅನುಮಾನ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಆರು ಜಿಲ್ಲೆಗಳಲ್ಲಿ ಸಂಚರಿಸಿದ ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಟೀಕಿಸಿದ ಬ್ಯಾನರ್ಜಿ, ರಾಜ್ಯಕ್ಕೆ ಬಂದಿರುವ “ವಲಸೆ ಹಕ್ಕಿಗಳಿಗೆ” ಕೇವಲ ಫೋಟೋಗೆ ಅವಕಾಶ” ನೀಡುತ್ತಿದೆ ಎಂದಿದ್ದಾರೆ. “ಕಾಂಗ್ರೆಸ್ ದೇಶಾದ್ಯಂತ 300 ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ನಾನು ಪ್ರಸ್ತಾಪಿಸಿದ್ದೇನೆ. ಆದರೆ ಅವರು ಆ ಬಗ್ಗೆ ಗಮನ ಹರಿಸುವ ಬದಲು ಈಗ ರಾಜ್ಯದಲ್ಲಿ ಮುಸ್ಲಿಂ ಮತದಾರರನ್ನು ಪ್ರಚೋದಿಸಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ 300 ಮಂದಿ ಸ್ಪರ್ಧಿಸಿದರೂ 40 ಸ್ಥಾನಗಳನ್ನು ಪಡೆಯುತ್ತಾರೆಯೇ ಎಂದು ನನಗೆ ಅನುಮಾನವಿದೆ ಎಂದು ವ್ಯಂಗ್ಯವಾಡಿದ ದೀದಿ, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ನಮ್ಮ ಪಕ್ಷವು ಸಿದ್ಧವಾಗಿದೆ. ಆದರೆ ನಮ್ಮ ಪ್ರಸ್ತಾಪವನ್ನು ಕಾಂಗ್ರೆಸ್ ನಿರಾಕರಿಸಿದೆ ಎಂದು ಆರೋಪಿಸಿದರು.