Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಬಿಗ್ ಬಾಸ್ ಕನ್ನಡ ಸೀಸನ್ -10 ಇತ್ತೀಚೆಗೆ ಮುಕ್ತಾಯ ಕಂಡಿದೆ. ಡ್ರೋನ್ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಸದ್ಯ ಮೀಡಿಯಾಗಳಲ್ಲಿ ಸಂದರ್ಶನದಲ್ಲಿ ಬ್ಯುಸಿಯಾಗಿದ್ದರೂ ಕೆಲವೊಂದು ಕಡೆಯಿಂದ ಆಫರ್ ಗಳು ಕೂಡ ಇವರನ್ನರಸಿ ಬರುತ್ತಿವೆ. ಹೌದು, ಮಾಹಿತಿ ಪ್ರಕಾರ ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿ ಮಿಂಚಿದ ಡ್ರೋನ್ ಪ್ರತಾಪ್ ಅವರು ಮತ್ತೊಂದು ರಿಯಾಲಿಟೀ ಶೋ ಮೂಲಕ ಜನರೆದುರು ಬರೋದಕ್ಕೆ ರೆಡಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿಮ್ಗೆಲ್ಲಾ ʼಗಿಚ್ಚಿ ಗಿಲಿ ಗಿಲಿʼ ಕಾರ್ಯಕ್ರಮದ ಬಗ್ಗೆ ಗೊತ್ತಿದೆ. ಕಳೆದೆರೆಡು ಸೀಸನ್ ಬಳಿಕ ಇದೀಗ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಈ ಬಾರಿ ಹೊಸ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಈಗಷ್ಟೇ ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿರುವ ಸ್ಪರ್ಧಿಗಳು ಕೂಡ ಇರಲಿದ್ದಾರೆ ಎನ್ನುವ ಬಗೆಗಿನ ಸುದ್ದಿ ಹರಿದಾಡುತ್ತಿದೆ. ಸದ್ಯ ಬಂದಿರೋ ಮಾಹಿತಿ ಪ್ರಕಾರ ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರು ʼಗಿಚ್ಚಿ…
ಈಗಾಗಲೇ ಅನೇಕ ಜೋಡಿಗಳು ದೆಹಲಿಯ ಮೆಟ್ರೋದಲ್ಲಿ ಅಸಭ್ಯವಾಗಿ ವರ್ತಿಸುವ ವಿಡಿಯೋಗಳು ವೈರಲ್ ಆಗುತ್ತಿವೆ. ಮೆಟ್ರೋ ಆಡಳಿತ ಮಂಡಳಿ ಸಾರ್ವಜನಿಕರಿಗೆ ಈ ಬಗ್ಗೆ ಸೂಚನೆ ನೀಡಿದ್ದರೂ ಸಹ ಯಾರೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದೆಲ್ಲದರ ಮಧ್ಯೆ ದೆಹಲಿ ಮೆಟ್ರೋ ಸ್ಟೇಷನ್ ನಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಜನರ ಮುಂದೆಯೇ ಇಬ್ಬರು ಕಪಲ್ಸ್ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದಾರೆ. ಈ ಸಮಯದಲ್ಲಿ ದಂಪತಿಗೆ ಮೈಮರೆತು ಲಿಪ್ ಲಾಕ್ ಸೇರಿ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಜೋಡಿ ಮೈಮರೆತು ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯಂತೆ ಸಖತ್ ವೈರಲ್ ಆಗುತ್ತಿದ್ದು, ಕ್ಷಣದಿಂದ ಕ್ಷಣಕ್ಕೆ ಹೆಚ್ಚು ವೀಕ್ಷಣೆ ಪಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೆಟ್ರೋ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಒಟ್ಟು 8 ಇಂದಿರಾ ಕ್ಯಾಂಟೀನ್ ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಸರ್ಕಾರದಿಂದ 3.38 ಕೋಟಿ ರೂಪಾಯಿ ಬಿಲ್ ಬಾಕಿ ಇರುವುದರಿಂದ ನಿರ್ವಹಣೆ ಸಾಧ್ಯವಾಗದೆ ಬಳ್ಳಾರಿಯ ಕ್ಯಾಂಟೀನ್ ಗಳು ಮುಚ್ಚಿವೆ ಎನ್ನಲಾಗಿದೆ. ಬಾಕಿ ಇರುವ ಬಿಲ್ ಪಾವತಿ ಮಾಡದ ಕಾರಣ ಬಳ್ಳಾರಿ ಜಿಲ್ಲೆಯಾದ್ಯಂತ 8 ಇಂದಿರಾ ಕ್ಯಾಂಟೀನ್‌ಗಳು (Indira Canteen) ಬಂದ್ ಆಗಿವೆ ಎಂದು ವರದಿ ತಿಳಿಸಿದೆ. ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ, ವಿಮ್ಸ್, ಮೋತಿ ವೃತ್ತ, ಎಪಿಎಂಸಿ ಆವರಣದ ಕ್ಯಾಂಟೀನ್‌ಗಳು ಮುಚ್ಚಿವೆ. ಬಳ್ಳಾರಿ ನಗರವೊಂದರಲ್ಲೇ ಸರ್ಕಾರ 3.38 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. 2021 ರಿಂದಲೇ ಕೋಟಿ ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಖಾಸಗಿ ಏಜೆನ್ಸಿ ಮೂಲಕ ಇಂದಿರಾ ಕ್ಯಾಂಟೀನ್ಗಳನ್ನು ನಡೆಸಲಾಗುತ್ತಿದೆ. ಇದೀಗ, ಬಿಲ್ ಬಿಡುಗಡೆಯಾಗದ ಕಾರಣ ಕ್ಯಾಂಟೀನ್ ನಡೆಸುವುದು ಕಷ್ಟ ಎಂದು ಖಾಸಗಿ ಏಜೆನ್ಸಿಗಳು ಅವುಗಳನ್ನು ಮುಚ್ಚಿವೆ. ರೇಷನ್, ತರಕಾರಿ, ಗ್ಯಾಸ್, ಸಿಬ್ಬಂದಿ ಸಂಬಳಕ್ಕೂ ಹಣ ಇಲ್ಲದೆ ಕ್ಯಾಂಟೀನ್ಗಳನ್ನು ಬಂದ್ ಮಾಡಲಾಗಿದೆ ಎಂದು ಖಾಸಗಿ ಏಜೆನ್ಸಿಗಳು ತಿಳಿಸಿವೆ. ಇದೀಗ ಕ್ಯಾಂಟೀನ್…
ತುಮಕೂರು: ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯಬ್ಬ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಸೈಯದ್ ಎಂಬ ಆರೋಪಿಯೆ ಗುಬ್ಬಿ ಪೊಲೀಸ್ ಠಾಣೆಯಿಂದ ಎಸ್ಕೆಪ್ ಆದವನಗಿದ್ದಾನೆ. ಸಿಆರ್ ನಂ. 13/2024 ರ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ಗುಬ್ಬಿ ಠಾಣೆಗೆ ಕರೆತರಲಾಗಿತ್ತು. ಇಂದು ಬೆಳಗ್ಗೆ 4:30 ಕ್ಕೆ ಠಾಣೆಯಿಂದ ಪರಾರಿಯಾಗಿದ್ದಾನೆ. ಆರೋಪಿ ಎಡಗೈ ಮೇಲೆ ಸಿರಿಗನ್ನಡಂ ಬಲಗೈ ಮೇಲೆ ಎಲ್ಲಾ ಧರ್ಮದ ಅಚ್ಚೆ ಇರೋದಾಗಿ ಮಾಹಿತಿ ಇದೆ. ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ವಾಸಿ ಆಗಿರೋ ಸೈಯದ್ , ಡ್ಯಾನ್ಸ್ ಕೋರಿಯಾಗ್ರಾಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಯನ್ನು ಪುನಃ ವಶಕ್ಕೆ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ದೇಗುಲಗಳಿಗೆ ತುಂಡುಡುಗೆ ತೊಟ್ಟು ಬರುವುದನ್ನು ಹಲವರು ವಿರೋಧಿಸಿದ್ದ ಪರಿಣಾಮ ಮತ್ತು ಜಿಲ್ಲಾಧಿಕಾರಿಕೆ ದೂರುಗಳು ಹೋಗಿದ್ದ ಕಾರಣ ಇತ್ತೀಚೆಗೆ ಹಂಪಿಯಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿತ್ತು. ಆದರೆ ಇದೀಗ ದೇಗುಲಗಳಲ್ಲಿ ವಸ್ತ್ರಸಂಹಿತೆ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಬುಧವಾರ(ಜ.೩೧) ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಬಗ್ಗೆ ಹಿರಿಯ ಸಾಹಿತಿ ಮರುಳಸಿದ್ಧಪ್ಪ ಸಿಎಂ ಮುಂದೆಯೇ ಅಕ್ಷೇಪ ವ್ಯಕ್ತಪಡಿಸಿದ್ದರು. ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಬೇಕು ನಿಜ. ಹಾಗಂತ ಮಹಿಳೆಯರು ಸೀರೆ, ಪುರುಷರು ಪಂಚೆ ಉಡಬೇಕು ಅನ್ನೋದು ಯಾಕೆ? ಇದು ಪ್ರಜಾಪ್ರಭುತ್ವ ತತ್ವಕ್ಕೆ ಮಾರಕ ಅಂತಾ ಮರುಳ ಸಿದ್ಧಪ್ಪ ಆಕ್ಷೇಪ ಎತ್ತಿದರು ಎನ್ನಲಾಗಿದೆ. ಇದಾದ ಬಳಿಕ ವೇದಿಕೆಯಲ್ಲಿಯೇ ಸ್ಪಷ್ಟೀಕರಣ ನೀಡಿದ ಸಿಎಂ, ನಮ್ಮ ಮುಜರಾಯಿ ಇಲಾಖೆ ಈ ತೀರ್ಮಾನ ಮಾಡಿಲ್ಲ. ಇಂಥದ್ದೇ ಡ್ರೆಸ್ ಹಾಕಬೇಡಿ ಅಥವಾ ಹಾಕಿ ಅನ್ನೋದು ತಪ್ಪು. ಶರ್ಟ್, ಪ್ಯಾಂಟ್ ಧರಿಸಿಕೊಂಡು ಹೋಗಬೇಡಿ, ಸೀರೆ ಹಾಕ್ಕೊಂಡು ಹೋಗಿ ಅಂತಾ ಹೇಳೋದು ಸರಿಯಲ್ಲ ಎಂದರು. ಶುದ್ಧ ಮನಸ್ಸಿನಿಂದ…
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್‍ನ್ನು ಪ್ರಧಾನಿ ನರೇಂದ್ರ ಮೋದಿಯವರು ವಿನೂತನ ಬಜೆಟ್ ಎಂದು ಕರೆದಿದ್ದಾರೆ. ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ. ಬಜೆಟ್ ನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 1 ಲಕ್ಷ ಕೋಟಿ ರೂ. ನಿಧಿಯನ್ನು ಘೋಷಿಸಲಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ನೀಡುತ್ತದೆ. ಇದು ವಿಕಸಿತ ಭಾರತದ ಎಲ್ಲಾ 4 ಸ್ತಂಭಗಳಾದ ಯುವ, ಗರೀಬ್, ಮಹಿಳಾ ಮತ್ತು ಕಿಸಾನ್ ಅಂಶಗಳನ್ನು ಸಶಕ್ತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದಾಯ ತೆರಿಗೆ ವಿನಾಯಿತಿಯಿಂದ ಮಧ್ಯಮ ವರ್ಗದ ಸುಮಾರು 1 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದೆ. ಈ ಬಜೆಟ್ ನಲ್ಲಿ ರೈತರಿಗಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಸಬಲೀಕರಣ ಮತ್ತು ಅವರಿಗೆ ಅವಕಾಶಗಳನ್ನು ಸೃಷ್ಟಿಸಲು ಬಜೆಟ್ ಒತ್ತು ನೀಡುತ್ತದೆ. ಬಡವರಿಗೆ ಇನ್ನೂ 2…
ಅಮೆರಿಕ: ಜಸ್ಟಿನ್ ಮೊಹ್ನ್ ಎಂಬ ವ್ಯಕ್ತಿಯು ತನ್ನ ತಂದೆಯ ತಲೆ ಕಡಿಯುವ ಭೀಕರ ವಿಡಿಯೋವನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದಾದ ಕೆಲವು ಗಂಟೆಗಳ ನಂತರ ರಾಷ್ಟ್ರೀಯ ಗಾರ್ಡ್ ಬೇಸ್ ನಲ್ಲಿ ಅವನನ್ನು ಬಂಧಿಸಲಾಗಿದೆ. ಆರೋಪಿಯನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ದುರುಪಯೋಗಪಡಿಸಿಕೊಂಡ ಈ ವೀಡಿಯೊ ಯೂಟ್ಯೂಬ್ ನಲ್ಲಿ ಲೋಡ್ ಆಗುತ್ತಿದ್ದಂತೆ ಕೆಲವು ಗಂಟೆಗಳ ಕಾಲ ಪ್ರಸಾರವಾಯಿತು. 5,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನಿನ್ನೆ ಸಂಜೆ ಸಂಜೆ 7 ಗಂಟೆಗೆ ಮರಣೋತ್ತರ ವರದಿಯ ಬಂದ ನಂತರ ಮೃತದೇಹವನ್ನು ಮಿಡ್ಲ್ ಟೌನ್ ಟೌನ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಹಿಂಸಾತ್ಮಕ ವೀಡಿಯೊಗಳನ್ನು ಪೋಸ್ಟ್ ಮಾಡಿರುವುದು ಭಾರಿ ಟೀಕೆಗೆ ವ್ಯಕ್ತವಾಗುತ್ತಿದೆ.
ಚಕ್ಕುಲಿ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಚಿರ್ಯಾಲ್ ನ ಹಮಾಲಿವಾಡದಲ್ಲಿ ನಡೆದಿದೆ. ದಿನಗೂಲಿ ಕಾರ್ಮಿಕನಾಗಿದ್ದ ಎನ್. ರಂಗರಾವ್(65) ಸಂಜೆ ಚಹಾ ಕುಡಿಯುವ ವೇಳೆ ತಿಂಡಿಯಾಗಿ ಚಕ್ಕುಲಿ ತಿಂದಿದ್ದಾರೆ. ಎಲ್ಲರ ಜೊತೆಯಲ್ಲಿ ಖುಷಿಯಾಗಿ ಚಾ ಕುಡಿಯುತ್ತಿದ್ದ ವ್ಯಕ್ತಿ ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ರಂಗರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿಹೇಳಿದ್ದಾರೆ. ರಂಗರಾವ್ ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಜೆಯ ವೇಳೆ ಚಹಾದ ಜೊತೆಗೆ ಸೇವಿಸಿದ್ದ ಚಕ್ಕುಲಿ ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ರಂಗರಾವ್ ಮೃತಪಟ್ಟಿರುವುದು ತನಿಖೆಯ ವೇಳೆ ತಿಳಿದುಬಂದಿದ್ದು, ಮಂಚಿರ್ಯಾಲ ಸಬ್ ಇನ್ಸ್ ಪೆಕ್ಟರ್ ರಾಜೇಂದರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ: ಶಾಲೆಯಿಂದ ಮನೆಗೆ ತೆರಳುವಾಗ ಟ್ರ್ಯಾಕ್ಟರ್ ಡಬ್ಬಿಗೆ ಸಿಲುಕಿದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಗಿರೀಶ್ ಶಾಲೆ ಬಳಿ ನಡೆದಿದೆ. ನಿಖಿಲ್ ಕೊಳಿ (13) ಮೃತ ವಿದ್ಯಾರ್ಥಿಯಾಗಿದ್ದಾನೆ. ನಿಖಿಲ್ ಜಮಖಂಡಿ ನಗರದ ಜ್ಞಾನ ಗಂಗೋತ್ರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆ ಮುಗಿಸಿ ಸೈಕಲ್ ನಲ್ಲಿ ಹೋಗುತ್ತಿದ್ದ ನಿಖಿಲ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಜಮಖಂಡಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಕ್ಯಾಬ್ ಒಂದು ಸ್ಕಿಡ್ ಆಗಿ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಏಳು ಜನ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದರೆ, ಅಲ್ಲದೇ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾಶ್ಮೀರದ ಟ್ರಾಫಿಕ್ ರೂರಲ್ ಕಾಶ್ಮೀರದ ಹಿರಿಯ ಪೊಲೀಸ್ ಅಧೀಕ್ಷಕ ರವೀಂದರ್ ಪಾಲ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.