Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಆಲ್ಕೋಹಾಲ್ ತ್ಯಜಿಸುವುದರಿಂದ ಇವೆ ಹಲವು ಆರೋಗ್ಯ ಪ್ರಯೋಜನಗಳು: ಆಲ್ಕೋಹಾಲ್ ಸೇವನೆ ಹೆಚ್ಚಾದಾಗ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುತ್ತದೆ. ಮದ್ಯಪಾನದಿಂದ ದೂರವಿರುವುದು ನಿದ್ರೆ, ಮೆದುಳಿನ ಕಾರ್ಯ ಮತ್ತು ರಕ್ತದೊತ್ತಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೀರ್ಘಕಾಲದ ಮದ್ಯಪಾನದಿಂದ ದೂರವಿರುವುದು ಅನೇಕ ವಿಧದ ಕ್ಯಾನ್ಸರ್, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮದ್ಯಪಾನವನ್ನು ಹಠಾತ್ ನಿಲ್ಲಿಸುವುದರಿಂದಲೂ ಅನೇಕ ವ್ಯತಿರಿಕ್ತ ಪರಿಣಾಮಗಳಿವೆ. ಹೀಗಾಗಿ, ತೀವ್ರ ವ್ಯಸನ ಹೊಂದಿರುವ ಜನರು ಇದ್ದಕ್ಕಿದ್ದಂತೆ ಮದ್ಯವನ್ನು ನಿಲ್ಲಿಸಬಾರದು. ನೆಲದ ಮೇಲೆ ಮಲಗಿದರೆ ಎಷ್ಟು ಲಾಭ ನೋಡಿ: ಹಾಸಿಗೆಯ ಮೇಲೆ ಮಲಗುವುದಕ್ಕಿಂತ ನೆಲದ ಮೇಲೆ ಮಲಗುವುದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಕಾರಣಕ್ಕಾಗಿಯೇ ತಜ್ಞರು ನೆಲದ ಮೇಲೆ ನಿದ್ರಿಸಲು ಸಲಹೆ ನೀಡುತ್ತಾರೆ. ನೆಲದಂತಹ ಗಟ್ಟಿಯಾದ ಮೇಲ್ಕೆಗಳು ನೈಸರ್ಗಿಕವಾಗಿ ದೇಹಕ್ಕೆ ವ್ಯಾಯಾಮ ನೀಡುತ್ತವೆ. ನೆಲದ ಮೇಲೆ ಮಲಗಿದಾಗ ಬೆನ್ನು ಮೂಳೆ ನೇರವಾಗಿರುತ್ತದೆ. ಮತ್ತು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ನೆಲದ ಮೇಲೆ ಮಲಗಿದರೆ ಉತ್ತಮ ರಕ್ತ…
ನಾಗಪುರ್: ಶೌಚಾಲಯದಲ್ಲಿ ಮಹಿಳೆಯರ ವೀಡಿಯೊ ಚಿತ್ರೀಕರಿಸುತ್ತಿದ್ದ ಶಿಕ್ಷಕನನ್ನು ಬಂಧಿಸಲಾಗಿದೆ. ಈ ಘಟನೆ ನಾಗ್ಪುರ ನಗರದ ಕೈಗಾರಿಕಾ ಎಕ್ಸ್ ಪೊ ಸಂದರ್ಭದಲ್ಲಿ ನಡೆದಿದೆ. ಬಂಧಿತನನ್ನು ನಾಗ್ಪುರದ ಕಸರ್ ಪುರದ ನಿವಾಸಿ 37 ವರ್ಷದ ಮಂಗೇಶ್ ವಿನಾಯಕ್ ರಾವ್ ಖರ್ಪೆ ಎಂದು ಗುರುತಿಸಲಾಗಿದೆ. ಶೌಚಾಲಯದ ಕಿಟಕಿ ಮೂಲಕ ಮಹಿಳೆಯರ ವಿಡಿಯೊ ಚಿತ್ರೀಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ನಗರದ ಪ್ರತಿಷ್ಠಿತ ಕಾಲೇಜಿನ ಕಲಾ ಶಿಕ್ಷಕನಾಗಿದ್ದು, ಫೆಸ್ಟಿವಲ್ ಗೇಟ್ ಅಲಂಕಾರಕ್ಕೆ ನಿಯೋಜಿಸಲಾಗಿತ್ತು. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಅಂಬಜಾರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿನಾಯಕ್ ಗೊಲ್ಹೆ ಮತ್ತು ಅವರ ತಂಡ ಆರೋಪಿಯನ್ನು ಪತ್ತೆ ಮಾಡಿದೆ. ಎಕ್ಸ್ ಪೋ ಸಿದ್ಧತೆಯಲ್ಲಿ 4 ದಿನಗಳಿಂದ ಈತ ತೊಡಗಿಸಿಕೊಂಡಿದ್ದ ಎಂದು ವರದಿ ತಿಳಿಸಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಹತ್ತಾರು ಮಹಿಳೆಯರ ವೀಡಿಯೊಗಳು ಪತ್ತೆಯಾಗಿದ್ದು, ಕೆಲವನ್ನು ಡಿಲೀಟ್ ಮಾಡಲಾಗಿದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ. ವ್ಯಕ್ತಿಯೊಬ್ಬ ವಿಡಿಯೊ ಚಿತ್ರೀಕರಿಸುತ್ತಿದ್ದ ಬಗ್ಗೆ ಮಹಿಳೆಯೊಬ್ಬರು ಸಂಘಟಕರಿಗೆ ದೂರು…
ಐಟಿ ಸಂಸ್ಥೆ ಇನ್ಫೋಸಿಸ್ ತೆರಿಗೆ ವಂಚನೆ ಆರೋಪದಲ್ಲಿ ಅಮೇರಿಕಾದಲ್ಲಿ ಸಿಕ್ಕಿ ಬಿದ್ದಿದ್ದು, ಉದ್ಯಮ ತೆರಿಗೆಯನ್ನು ನಿಗದಿತ ಮೊತ್ತಕ್ಕಿಂತ ಕಡಿಮೆ ಪಾವತಿ ಮಾಡಿರುವ ಆರೋಪ ಇನ್ಫೋಸಿಸ್ ವಿರುದ್ಧ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ತೆರಿಗೆ ಪ್ರಾಧಿಕಾರವು ಇನ್ಫೋಸಿಸ್ ಸಂಸ್ಥೆಗೆ 225 ಅಮೆರಿಕನ್ ಡಾಲರ್ ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ. ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಹೇಳೋದಾದರೆ ಇನ್ಫೋಸಿಸ್ ಸಂಸ್ಥೆಯು 18,702 ರೂಪಾಯಿ ದಂಡ ಪಾವತಿ ಮಾಡಬೇಕಿದೆ. ಇನ್ಫೋಸಿಸ್ ಸಂಸ್ಥೆಯ ಒಟ್ಟಾರೆ ವಹಿವಾಟಿನ ಗಾತ್ರಕ್ಕೆ ಹೋಲಿಸಿದರೆ ಈ ಮೊತ್ತ ಅತಿ ಸಣ್ಣದಾದರೂ ಕೂಡಾ ತೆರಿಗೆ ಪಾವತಿ ವಿಚಾರದಲ್ಲಿ ಅಕ್ರಮ ಎಸಗಿದ ಗುರುತರ ಆಪಾದನೆ ಬೆಂಗಳೂರು ಮೂಲದ ಈ ಪ್ರತಿಷ್ಠಿತ ಸಂಸ್ಥೆಯ ಹೆಗಲೇರಿದಂತಾಗಿದೆ. ಇನ್ಫೋಸಿಸ್ ಸಂಸ್ಥೆಯು ಅಮೆರಿಕದಲ್ಲಿ ತನ್ನ ವಹಿವಾಟು ನಡೆಸುವ ಹಿನ್ನೆಲೆಯಲ್ಲಿ ಉದ್ಯಮ ತೆರಿಗೆ ಪಾವತಿ ಮಾಡಬೇಕು. ಆದರೆ ತೆರಿಗೆ ಪಾವತಿ ಮಾಡುವ ವೇಳೆ ಇನ್ ವಾಯ್ಸ್ ನಲ್ಲಿ ನಮೂದಾಗಿದ್ದ ಮೊತ್ತಕ್ಕಿಂತ ಕಡಿಮೆ ಹಣವನ್ನು ಇನ್ಫೋಸಿಸ್ ಪಾವತಿ ಮಾಡಿದೆ ಎನ್ನಲಾಗಿದೆ. ಇದನ್ನು ಶಾರ್ಟ್…
ಬರೋಬ್ಬರಿ ಏಳು ವರ್ಷಗಳ ಬಳಿಕ ಚೆಲುವಿನ ಚಿತ್ತಾರ ಬೆಡಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.ಕೊನೆಯದಾಗಿ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ, ಮದುವೆಯಾದ ನಂತರ ಮತ್ತು ಅವಳಿ ಗಂಡು ಮಕ್ಕಳ ಆರೈಕೆಗಾಗಿ ಬ್ರೇಕ್ ತೆಗೆದುಕೊಂಡಿದ್ದರು. ಪ್ರಜ್ವಲ್ ದೇವರಾಜ್ ಮತ್ತು ಗುರುದತ್ತ ಗಾಣಿಗ ಅವರ ಬಹು ನಿರೀಕ್ಷಿತ ಸಿನಿಮಾ ಕರಾವಳಿ ಮೂಲಕ ಅಮೂಲ್ಯ ಪುನಾರಾಗಮನ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರತಿಭಾವಂತ ಕಲಾವಿದರ ಹುಡುಕಾಟದಲ್ಲಿದ್ದ ನಿರ್ದೇಶಕರು, ಆ ಪಾತ್ರಕ್ಕೆ ಅಮೂಲ್ಯ ಸೂಕ್ತ ಎಂದು ನಿರ್ಧರಿಸಿ, ಈ ಸಂಬಂಧ ನಟಿಯ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶ್ರಾವಣಿ ಸುಬ್ರಹ್ಮಣ್ಯ ನಟಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅತೀ ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಬಾಲ ಕಲಾವಿದೆಯಾಗಿ ಸಿನಿಮಾ ಪಯಣ ಆರಂಭಿಸಿದ ಅಮೂಲ್ಯ 13ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಅವರೊಂದಿಗೆ ಕರಾವಳಿಯಲ್ಲಿ ತೆರೆ ಹಂಚಿಕೊಳ್ಳಲಿದ್ದು, ಕರಾವಳಿಯು ಈಗಾಗಲೇ ಫಸ್ಟ್ ಲುಕ್…
ಒಂದೇ ದಿನ 8 ಮಂದಿಯಲ್ಲಿ ಮಂಗನ ಕಾಯಿಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಪತ್ತೆಯಾಗಿದೆ. ಮಂಗನಕಾಯಿಲೆ ಪತ್ತೆಯಾಗಿದ್ದು, ಈ ಮೂಲಕ ಕಳೆದ 10 ದಿನದಲ್ಲಿ ಕೆಎಫ್‍ಡಿ ಪ್ರಕರಣ 16ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. 10 ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ. KFDV ವೈರಾಣು ಇರುವ ಉಣ್ಣಿ ಅಥವಾ ಉಣುಗು (Ticks) ಕಚ್ಚಿದಾಗ ರೋಗಕಾರಕ ವೈರಸ್ ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ ಎನ್ನಲಾಗಿದೆ. ಸಿದ್ದಾಪುರದ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜಿಡ್ಡಿಯಲ್ಲಿ 7 ಪ್ರಕರಣಗಳು ಹಾಗೂ ಉಳಿದಂತೆ ಇತರೆ ಭಾಗದಲ್ಲಿ 9 ಒಟ್ಟು ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಹಲವು ಬಾರಿ ತಮ್ಮನ್ನೇ ತಾವು ವಿವಾಹವಾಗುವ ಅಥವಾ ನಂಬಿದ ದೇವರ ಹೆಸರಲ್ಲಿ ವಿವಾಹ ಪದ್ಧತಿ ನಡೆಸುವುದನ್ನು ಕೇಳಿರುತ್ತೇವೆ ಆದರೆ, ಉತ್ತರ ಪ್ರದೇಶದಲ್ಲಿ ‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’ಯಡಿ ನಡೆದ ವಿವಾಹದಲ್ಲಿ ಭಾರೀ ವಂಚನೆ ನಡೆದಿರುವುದು ವರದಿಯಾಗಿದೆ. ಸರ್ಕಾರದ ವೆಚ್ಚದಲ್ಲಿ ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯಲ್ಲಿ 568 ಜೋಡಿಗಳು ಜನವರಿ 25 ರಂದು ವಿವಾಹವಾಗಿದ್ದರು. ಆದರೆ, ಸರ್ಕಾರದಿಂದ ಸಿಗುವ ಸವಲತ್ತಿಗೆ ಬೇಕಾಗಿ ಕೆಲವರು ನಕಲಿ ವಧು ವರರಾಗಿ ಪಾಲ್ಗೊಂಡಿದ್ದರೆ, ಇನ್ನು ಕೆಲವು ವಧುಗಳಿಗೆ ವರಗಳೇ ಇರಲಿಲ್ಲ. ಅವರೆಲ್ಲರೂ ತಮಗೆ ತಾವೇ ಹಾರ ಹಾಕಿಕೊಂಡಿದ್ದರು ಎಂದು ವರದಿಯಾಗಿದೆ. ಅವರಲ್ಲಿ ಇನ್ನೂ ಕೆಲವರು ಈಗಾಗಲೇ ಮದುವೆ ಆದವರು ಎಂಬ ವಿಚಾರವೂ ಹೊರಬಂದಿದೆ. ಅಲ್ಲದೆ, ಗುಂಪಿನಲ್ಲಿ ಅನೇಕರು ಸಹೋದರ ಸಹೋದರಿಯರು ವಧು-ವರರಂತೆ ನಟಿಸಿದ್ದರೆ, ಮತ್ತೆ ಕೆಲವರು ಅಪ್ರಾಪ್ತ ವಯಸ್ಕರು ಇದ್ದರು ಎಂದು ವರದಿ ಆಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಎಡಿಒ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಯೋಜನೆ ಮೂಲಕ…
ಬೀದರ್: ಬೀದರ್ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಶ್ವಾನ ಪ್ರಿಯರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಬೀದರ್ ನ ನೆಹರೂ ಕ್ರೀಡಾಗಂಣದಲ್ಲಿ ಇಂದು ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ 70 ಕ್ಕೂ ಹೆಚ್ಚು 18 ಜಾತಿಯ ನಾಯಿಗಳು ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಶ್ವಾನ ಪ್ರಿಯರಿಗೆ ಶ್ವಾನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶ್ವಾನ ಪ್ರದರ್ಶನ ನಡೆಸಲಾಗಿದ್ದು, ವಿವಿಧ ಜಾತಿಯ ದೇಶಿ-ವಿದೇಶಿ ತಳಿಯ ಶ್ವಾನಗಳು ಭಾಗಿಯಾಗಿದ್ದವು. ಸ್ವಿಡ್ಜ್, ಫಗ್ಗ, ಪಮೋರಿ, ರ್ಯಾಟ್ ವೀಲರ್, ಪಗ್, ಡ್ಯಾಷ್ ಹೌಂಡ್ ತಳಿಯ ಶ್ವಾನಗಳು ಇದ್ದವು. ಮುಧೋಳ್ ಡಾಗ್, ಲ್ಯಾಬ್ರಡಾರ್, ರಿಟ್ರೈವರ್, ರಾರಯಟ್ ವೀಲರ್, ಪಗ್, ಡ್ಯಾಷ್ ಹೌಂಡ್, ಡಾಬರ್ಮನ್ ಹೀಗೆ ನಾನಾ ತಳಿಯ ಶ್ವಾನಗಳು ಹಾಗೂ ವಿದೇಶಿ ತಳಿಯ ಕೆನೆಕ್ವಾರ್ಸ್, ರಾಟ್ ವ್ಹೀಲರ್, ನಿಯೋ ಪಾಲಿಟನ್ ಮಾಸ್ಟ್ರಿಫ್, ಅಮೆರಿಕನ್ ಬುಲ್, ಡೋಗೊ ಅರ್ಜೆಂಟೀನಾ, ಬೊರ್ ವೆಲ್, ಟರ್ಕಿಸ್ ಕಂಗಾಲ್, ಫಿಲಾ ಬೇರ್ಜಿಲೋ, ಜರ್ಮನ್ ಶೆಫರ್ಡ್, ಗೋಲ್ಡನ್ ರೀಟ್ಟೀಮ್ ಹೀಗೆ 20 ಜಾತಿಯ…
ತುಮಕೂರಿನಲ್ಲಿ “ಟೈಮ್ಸ್ ಆಫ್ ಇಂಡಿಯಾ” ವರದಿಗಾರರಾಗಿದ್ದ, ಎಸ್. ಭುವನೇಶ್ವರಿ(47) ಅವರು ಇಂದು ಬೆಳಿಗ್ಗೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಸನದವರಾದ ಭುವನೇಶ್ವರಿ ಅವರು, ಹಿಂದೂ ಪತ್ರಿಕೆಯ ವರದಿಗಾರರಾಗಿದ್ದು, ಮಹಿಳಾ ಪತ್ರಕರ್ತೆಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು. ಅವರು ಪತಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೆ.ಯು.ಡಬ್ಲ್ಯು.ಜೆ. ಸಂತಾಪ: ಹಿರಿಯ ಪತ್ರಕರ್ತೆ ಭುವನೇಶ್ವರಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ನಿರ್ದೇಶಕರುಗಳ ವತಿಯಿಂದ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಭುವನೇಶ್ವರಿ ಅವರಿಗೆ ವಿದಾಯದ ನಮನಗಳು.
ಚಿತ್ರದುರ್ಗ: ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪ ಘಟನೆ ನಡೆದಿದೆ. ಚಿತ್ರಯ್ಯನಹಟ್ಟಿ ನಿವಾಸಿ ವೆಂಕಟೇಶ(55), ಸೂಜಿಮಲ್ಲೇಶ ನಗರದ ವೆಂಕಟೇಶ(55) ಮೃತರಾಗಿದ್ದಾರೆ. ಮತ್ತೊಬ್ಬರಿಗೆ ಗಾಯಗಳಾಗಿವೆ. ಗಾಯಾಳು ಕಿಶೋರ್ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಚಿಕಿತ್ಸೆ ಮುಂದುವರೆದಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರ: ರಾಜ್ಯ ವ್ಯಾಪ್ತಿಯ ರೈತ ನಾಯಕ ಜೆ. ಕಾರ್ತಿಕ್(40) ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಅಪಘಾತ ನಡೆದ ರೀತಿ ನಿಗೂಢವಾಗಿದ್ದು, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಬೂದಗುಂಪಾ ಕ್ರಾಸ್ ಬಳಿಯಲ್ಲಿ ಜೆ. ಕಾರ್ತಿಕ್ ಅವರು ಚಲಾಯಿಸುತ್ತಿದ್ದ ಬೈಕ್ ಹೆದ್ದಾರಿ ಬಳಿ ಬಿದ್ದಿದ್ದು, ಅದರ ಪಕ್ಕದಲ್ಲಿ ತೀವ್ರ ಗಾಯಗೊಂಡು ತಲೆಯಿಂದ ರಕ್ತ ಸೋರುತ್ತಿದ್ದ ಕಾರ್ತಿಕ್ ಕಂಡುಬಂದಿದ್ದರು. ಗಾಯಗೊಂಡಿದ್ದ ಕಾರ್ತಿಕ್ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4.30ರ ವೇಳೆ ಅವರು ಕೊನೆಯುಸಿರು ಎಳೆದಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿಯಾದ ಜೆ. ಕಾರ್ತಿಕ್ ಅವರು ಹೊಸಪೇಟೆಯಿಂದ ಕೊಪ್ಪಳದತ್ತ ಬೈಕ್ ಮೇಲೆ ತೆರಳುತ್ತಿದ್ದರು ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಅಪಘಾತದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲವಾದುದರಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ, ಹಿಟ್ ಆಯಂಡ್ ರನ್ ಆಗಿದೆಯೋ ತಿಳಿದು ಬಂದಿಲ್ಲ. ಹೊಸಪೇಟೆಯ ನಿವಾಸಿ ಕಾರ್ತಿಕ್ ನಾನಾ ರೈತರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಕೋಡಿಹಳ್ಳಿ ಚಂದ್ರಶೇಖರ…