Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಪ್ರಪಂಚದಲ್ಲಿ ಅತಿ ಹೆಚ್ಚು ಡೈನೋಸರ್ ಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶವೇ? ಭಾರತೀಯರನ್ನು ಬೆಚ್ಚಿಬೀಳಿಸುವ ಬಹಿರಂಗಪಡಿಸುತ್ತಿದೆ ಪ್ರಾಗ್ಜೀವಶಾಸ್ತ್ರಜ್ಞರ ಹೇಳಿಕೆ. ಪಳೆಯುಳಿಕೆಗಳನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ನಿರ್ಣಾಯಕ ಆವಿಷ್ಕಾರವನ್ನು ಮಾಡಿದ್ದಾರೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ 92 ಸ್ಥಳಗಳಿಂದ ಡೈನೋಸರ್ ಆವಾಸ ಸ್ಥಾನಗಳ ಪಳೆಯುಳಿಕೆಗಳು ಮತ್ತು 256 ಮೊಟ್ಟೆಗಳು ಕಂಡುಬಂದಿವೆ. ಮೊಟ್ಟೆಯ ಅವಶೇಷಗಳು ಪತ್ತೆಯಾದ ಸ್ಥಳಗಳಲ್ಲಿ ಒಂದರಿಂದ 20 ಮೊಟ್ಟೆಗಳು ಎಲ್ಲಾದರೂ ಇವೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಈ ಪಳೆಯುಳಿಕೆಗಳು 66 ಮಿಲಿಯನ್(6.6 ಕೋಟಿ) ವರ್ಷಗಳಷ್ಟು ಹಳೆಯವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರತಿ ಮೊಟ್ಟೆಯ ವ್ಯಾಸವು 15 ರಿಂದ 17 ಸೆಂ.ಮೀ. ಡೈನೋಸರ್ ಗಳು ಪ್ರತಿ ಪಂಜರದಲ್ಲಿ 20 ಮೊಟ್ಟೆಗಳನ್ನು ಇಡುತ್ತವೆ. ಕೆಲವು ಮೊಟ್ಟೆಗಳು ಮೊಟ್ಟೆಯೊಡೆದ ಅವಶೇಷಗಳನ್ನು ಹೊಂದಿದ್ದವು ಎಂದೂ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಜಗತ್ತಿನಲ್ಲಿ ಡೈನೋಸರ್ ಗಳು ಅಳಿವಿನಂಚಿನಲ್ಲಿದ್ದು, ಅವುಗಳ ವಿಕಾಸದ ಕೊನೆಯ ವಂಶಾವಳಿಗಳು ಭಾರತದಲ್ಲಿವೆ ಎಂದು ವೈಜ್ಞಾನಿಕ ಸಮುದಾಯ ತೀರ್ಮಾನಿಸಿದೆ.
ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಿದ್ದು ಜಂಟಿ ಸದನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಇದು ನನ್ನ ಮೊದಲ ಬಜೆಟ್ ಅಧಿವೇಶನ. ಆರ್ಥಿಕತೆಯಲ್ಲಿ ಭಾರತ ಇಂದು ಮುನ್ನುಗ್ಗುತ್ತಿದೆ ವಿಶ್ವದ ಆರ್ಥಿಕತೆಯಲ್ಲಿ ಉನ್ನತ ಸ್ಥಾನದತ್ತ ಮುನ್ನುಗ್ಗುತ್ತಿದೆ ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆ ಇಳಿಸಿ ಭಾರತ ಸಾಧನೆ ಮಾಡಿದೆ. ಯಾರೂ ನೌಕೆ ಇಳಿಸದ ಜಾಗದಲ್ಲಿ ಭಾರತ ಸಾಧನೆ ಮಾಡಿದೆ ಎಂದು ಇಸ್ರೋ ವಿಜ್ಞಾನಿಗಳ ಸಾಧನೆ ಕೊಂಡಾಡಿದರು. ಜಮ್ಮುಕಾಶ್ಮೀರದ 370ನೇ ವಿಧಿ ತೆಗೆದು ಹಾಕಲಾಗಿದೆ. ಪಕ್ಕದ ದೇಶದ ಪೀಡಿತ ಜನರಿಗೆ ಆಶ್ರಯ ನೀಡಲಾಗಿದೆ. ರಾಮಮಂದಿರ ನಿರ್ಮಾಣದ ಮೂಲಕ ಶತಮಾನದ ಬಯಕೆ ಈಡೇರಿದೆ. ಹೊಸ ಸಂಸತ್ ಭವನ ಏಕ ಭಾರತ ಉತ್ತಮ ಭಾರತದ ಸಂಕಲ್ಪ ಹೊಂದಿದೆ. ಈಗ ನಮ್ಮ ಆಧ್ಯತೆ ನ್ಯಾಯಕ್ಕೆ ನೀಡಲಾಗಿದೆ ಶಿಕ್ಷೆಗೆ ಅಲ್ಲ. ಬ್ರಿಟಿಷರ ಕಾಲದ ಕಾನೂನು ಬದಲಾಗಿದೆ. ಡಿಜಿಟಲ್ ಕ್ಷೇತ್ರದಲ್ಲೂ ಭಾರತ ಸಾಧನೆ ಮಾಡಿದೆ ಎಂದು ಹೇಳಿದರು.
ತಮಿಳುನಾಡು: ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ಲೋಪವಾಗುವಂತೆ ವರ್ತಿಸಿದರ ಬಗ್ಗೆ ಕೋರ್ಟ್ ಎಚ್ಚರಿಕೆ ನೀಡಿದ್ದು, ಮರುಕಳಿಸಿದರೆ ಕಠಿಣ ಕ್ರಮಕ್ಕೆ ಸೂಚಿಸಿದೆ. ಹಿಂದೂ ದೇವಾಲಯಗಳಿಗೆ ಹಿಂದೂಯೇತರು ಪ್ರವೇಶಿಸಿ ಶಿಷ್ಟಾಚಾರ ಉಲ್ಲಂಘಿಸಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ಕಿಡಿಕಾರಿದ್ದು, ಈ ಘಟನೆ ಚೆನ್ನೈನಲ್ಲಿ ನಡೆದಿದೆ ಮತ್ತು ಇದು ಪಿಕ್ನಿಕ್ ಸ್ಪಾಟ್ ಅಲ್ಲ ಎಂದು ಕೋರ್ಟ್ ಎಚ್ಚರಿಸಿದೆ ಎಂದು ವರದಿ ತಿಳಿಸಿದೆ. ದೇಗುಲಗಳಲ್ಲಿರುವ ‘ಕೋಡಿಮರಂ’ (ಧ್ವಜಸ್ತಂಭ) ಪ್ರದೇಶದಿಂದ ಆಚೆಗೆ ಹಿಂದೂಯೇತರರಿಗೆ ಅನುಮತಿ ಇಲ್ಲ ಎಂಬ ಬೋರ್ಡ್‌ಗಳನ್ನು ಎಲ್ಲಾ ಹಿಂದೂ ದೇವಾಲಯಗಳಲ್ಲಿ ಅಳವಡಿಸುವಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆಗೆ ನಿರ್ದೇಶನ ನೀಡಿದೆ. ಹಿಂದೂಗಳು ಕೂಡ ವೃತ್ತಿ ಮತ್ತು ಧಾರ್ಮಿಕ ಅಭ್ಯಾಸ ಮಾಡುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅರುಲ್ಮಿಗು ಪಳನಿ ದಂಡಾಯುತಪಾಣಿ ಸ್ವಾಮಿ ದೇವಸ್ಥಾನ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಗಳಿಗೆ ಮಾತ್ರ ಅನುಮತಿ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಡಿ ಸೆಂಥಿಲ್ ಕುಮಾರ್ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಹೈಕೋರ್ಟ್‌ನ ಮಧುರೈ…
ಮಣಿಪುರದಲ್ಲಿ ಮತ್ತೆ ಸಂಘರ್ಷ. ಶೂಟಿಂಗ್ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ. ಸರ್ಕಾರ ಈ ಪ್ರದೇಶದಲ್ಲಿ ಭದ್ರತಾ ನಿಯೋಜನೆಯನ್ನು ಬಲಪಡಿಸಿದೆ. ಇಂಫಾಲ್ ಪೂರ್ವದ ಹಳ್ಳಿಯೊಂದರಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಂಫಾಲ್ ಪೂರ್ವ ಮತ್ತು ಕ್ಯಾಮಂಗ್ ಅಲ್ಲಿ ಗುಂಡಿನ ದಾಳಿ ನಡೆದ ನಂತರ ಸಾವಿನ ಸುದ್ದಿ ಹೊರಬಿದ್ದಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದೆ. ಶಸ್ತ್ರಸಜ್ಜಿತ ದಾಳಿಕೋರರು ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಸಂತ್ರಸ್ತರ ವಿವರಗಳು ಲಭ್ಯವಾಗಿಲ್ಲ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸೂಚನೆಗಳಿವೆ.
ತುಮಕೂರು: ಬೆಳ್ಳಂ ಬೆಳಗ್ಗೆ ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಮಾಹಿತಿ ಹಿನ್ನೆಲೆ ತುಮಕೂರು ಜಿಲ್ಲೆಯ ಕೆ ಆರ್ ಐ ಡಿ ಎಲ್ ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರಾಗಿ ಕೆಲಸ ಮಾಡುತ್ತಿರುವ ಹನುಮಂತ ರಾಯಪ್ಪ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹನುಮಂತ ರಾಯಪ್ಪ ಅವರಿಗೆ ಸೇರಿದ ತುಮಕೂರು ನಗರದ ಶಿರಾ ಗೇಟ್ ಬಡಾವಣೆಯಲ್ಲಿರುವ ಅವರಿಗೆ ಸೇರಿದ ಮನೆ, ಮಿಡಿಗೇಶಿ ಬಳಿಯ ಫಾರಂ ಹೌಸ್ ಸೇರಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಕೊರಟಗೆರೆ ಕಚೇರಿ ಮೇಲೆಯೂ ತುಮಕೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಪಾಸಣಾ ಕಾರ್ಯ ಮುಂದುವರೆಸಿದ್ದಾರೆ.
ಅವರು ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡೆ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪಿಯುಸಿ ವ್ಯಾಸಂಗವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದೆ, ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪಿಯುಸಿ ವ್ಯಾಸಂಗವು ಮಾರ್ಗವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಮುಂಬರುವ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ, ತಂದೆ ತಾಯಿಗಳು ಹಾಗೂ ಗುರು ಹಿರಿಯರಿಗೆ ಕೀರ್ತಿ ತರುವ ಜೊತೆಗೆ ಉತ್ತಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಶಾಸಕ ಮಂಜು ಕರೆ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಂಡ್ಯ ಜಿಲ್ಲಾ ಉಪ ನಿರ್ದೇಶಕರಾದ ಚೆಲುವಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷ್ಣರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶಕ್ಕೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಪ್ರತಿಭಾವಂತರು ಹೆಚ್ಚಾಗಿದ್ದಾರೆ.…
ಹನುಮಧ್ವಜ ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು ಘಟನೆಯ ಬಳಿಕ ಬೆಂಗಳೂರಿನ ಶಿವಾಜಿನಗರದಲ್ಲೂ ಧ್ವಜದ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ಶಿವಾಜಿನಗರದ ಚಾಂದಿನಿ ಚೌಕ್ ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ ಯುವಕರು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು, ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ದು ವಿವಾದಕ್ಕೆ ತಿರುಗಿತು. ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ಬಂದು, ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ. ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ…
ವಿಮಾನದಲ್ಲಿ ಸೀಟಿನ ಮುಂಭಾಗ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥರಾದ ಕಾರಣ ಕರ್ನಾಟಕದ ರಣಜಿ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್ ಗೆ ವಿಮಾನದಲ್ಲಿ ಅಗರ್ವಾಲ್ ಪ್ರಯಾಣ ಬೆಳೆಸಿದ್ದರು. ವಿಮಾನದಲ್ಲಿ ಕುಳಿತಿದ್ದ ಮಯಾಂಕ್, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದಾರೆ. ನೀರು ಕುಡಿಯುತ್ತಿದ್ದಂತೆ ಮಯಾಂಕ್ ನಾಲಿಗೆ, ಬಾಯಿಗೆ ಸುಟ್ಟ ಅನುಭವವಾಗಿದೆ. ಪರಿಣಾಮ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅಗರ್ತಲಾದ ಐಎಲ್ ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ತ್ರಿಪುರ ವಿರುದ್ಧ ಸೋಮವಾರ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯಕ್ಕಾಗಿ ಸೂರತ್ ಗೆ ಪ್ರಯಾಣ ಬೆಳೆಸಲಾಗಿತ್ತು ಎಂದು ವರದಿ ತಿಳಿಸಿದೆ. ಈ ಘಟನೆಯ ಬಳಿಕ ಉಳಿದವರು ಸೂರತ್ ಗೆ ತೆರಳಿದ್ದಾರೆ.
ಈ ಬಾರಿ ಬಿಗ್ ಬಾಸ್ ಸೀಸನ್ ೧೦ ಟ್ರೋಫಿಯನ್ನು ಡ್ರೋಣ್ ಪ್ರತಾಪ್ ಮುಡಿಗೇರಿಸಿಕೊಳ್ತಾರೆ ಅನ್ನೋ ಚರ್ಚೆಗಳು ಆರಂಭದಲ್ಲಿ ನಡೆದಿದ್ದವು. ಬಳಿಕ ಇಲ್ಲ ವಿನಯ್ ಗೆಲ್ಲಬಹುದು ಎಂಬ ಲೆಕ್ಕಾಚಾರ ಶುರುವಾಯಿತು. ಇನ್ನೂ ಕೆಲ ದಿನಗಳು ಕಳೆದ ನಂತರ ಸಂಗೀತಾ ವಿನ್ ಆಗಬಹುದು ಎಂದು ಅಭಿಮಾನಿಗಳು ಹೇಳೋದಕ್ಕೆ ಶುರು ಮಾಡಿದ್ರೆ ಕೆಲವು ಮಂದಿ ಕಾರ್ತಿಕ್ ಗೆಲ್ಲಬಹುದು ಎಂದಿದ್ದರು. ಆದರೆ ಈ ಬಾರಿ ಲೆಕ್ಕಾಚಾರ ಉಲ್ಟಾ ಪಲ್ಟಾ ಹೊಡೆದಿದ್ದು, ನಿರೀಕ್ಷೆಗೂ ಮೀರಿ ಕಾರ್ತಿಕ್ ಅವರು ಭಾರಿ ವೋಟ್ ಪಡೆದು ಜಯ ಸಾಧಿಸಿದ್ದಾರೆ. ಇನ್ನು ಅವರವರ ಅಭಿಮಾನಿಗಳು ನಿರಾಸೆಯಾಗೋದು ಕೂಡ ಸಹಜವೇ. ಭಾರಿ ನಿರೀಕ್ಷೆ ಇಟ್ಟು ಕೊಂಡು ಬಿಗ್ ಬಾಸ್ ನೋಡಿದವರಿಗೆ ಅವರು ಇಷ್ಟ ಪಟ್ಟ ಸ್ಪರ್ಧಿ ಗೆಲ್ಲದೇ ಹೋದ್ರೆ ಬೇಜಾರಾಗುತ್ತೆ ನಿಜ. ಆದರೆ ಅದೇ ಬೇಜಾರಿನಲ್ಲಿ ಇಲ್ಲೊಬ್ಬ ಯುವಕ ಏನು ಮಾಡಿದ್ದಾನೆ ಗೊತ್ತಾ? ಬಿಗ್ ಬಾಸ್ ಸೀಸನ್ 10ರಲ್ಲಿ ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದು ಕಡಬದ ಯುವಕನೋರ್ವ ಇದೀಗ ವೈರಲ್ ಆಗಿದ್ದಾನೆ.…
ಆಗ್ರ: ಮಹಿಳೆಯೊಬ್ಬರು, ತನ್ನ ಅತ್ತೆ ಅನುಮತಿಯಿಲ್ಲದೆ ತನ್ನ ಮೇಕ್ ಅಪ್ ಬಳಸುತ್ತಿದ್ದಾರೆ ಎಂಬ ಕಾರಣದಿಂದ ಪತಿಯಿಂದ ವಿಚ್ಛೇದನ ಕೇಳಿರುವ ಘಟನೆ ಆಗ್ರದಲ್ಲಿ ನಡೆದಿದೆ. ಘಟನೆಯ ವಿವರ: ಮಲ್ಪುರ ನಿವಾಸಿಗಳಾದ ಮಹಿಳೆ ಮತ್ತು ಆಕೆಯ ಸಹೋದರಿ ಎಂಟು ತಿಂಗಳ ಹಿಂದೆ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಗಂಡನ ಮನೆಯಲ್ಲಿ ಅತ್ತೆ ಮಹಿಳೆಯ ಮೇಕ್ ಅಪ್ ನ್ನು ಆಕೆಯ ಅನುಮತಿ ಇಲ್ಲದೇ ಬಳಸುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಅತ್ತೆಯೊಂದಿಗೆ ಮಹಿಳೆ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ಪತಿ ತನ್ನನ್ನು ಮತ್ತು ತನ್ನ ಸಹೋದರಿಯನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯೊಬ್ಬರು ತನ್ನ ಅತ್ತೆ ಅನುಮತಿಯಿಲ್ಲದೆ ತನ್ನ ಮೇಕ್ ಅಪ್ ಬಳಸಿದ ಕಾರಣದಿಂದ ಪತಿಯಿಂದ ವಿಚ್ಛೇದನವನ್ನು ಕೋರಿದ್ದಾರೆ. ಇದೇ ವಿಷಯವನ್ನು ಅತ್ತೆ, ತನ್ನ ಗಂಡನಿಗೆ ತಿಳಿಸಿದ್ದಾಳೆ. ಇದರಿಂದ ಪತಿ ಕೂಡ ತನ್ನನ್ನು ನಿಂದಿಸಿದ್ದಲ್ಲದೆ, ನಂತರ ಪತಿ ಮತ್ತು ಅತ್ತೆ ಸೇರಿ ತನ್ನನ್ನು ಮತ್ತು ತನ್ನ ಸಹೋದರಿಯನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ತನ್ನ…