Author: admin

ರಾಜ್ಯಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, 15 ರಾಜ್ಯಗಳಲ್ಲಿ ಖಾಲಿ ಇರುವ 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 15 ಕೊನೆಯ ದಿನ ಎಂದು ಚುನಾವಣಾ ಆಯೋಗವೂ ಘೋಷಿಸಿದೆ. ಉತ್ತರ ಪ್ರದೇಶ (10), ಮಹಾರಾಷ್ಟ್ರ (6), ಬಿಹಾರ (6), ಪಶ್ಚಿಮ ಬಂಗಾಳ (5), ಮಧ್ಯಪ್ರದೇಶ (5), ಗುಜರಾತ್ (4), ಕರ್ನಾಟಕ (4), ಆಂಧ್ರಪ್ರದೇಶ (3), ತೆಲಂಗಾಣ (3), ರಾಜಸ್ಥಾನ (3), ಒಡಿಶಾ (3), ಉತ್ತರಾಖಂಡ (1), ಛತ್ತೀಸ್‌ಗಢ (1), ಹರಿಯಾಣ (1), ಹಿಮಾಚಲ ಪ್ರದೇಶ (1) ಮತ್ತು 56 ರಾಜ್ಯಸಭಾ ಸ್ಥಾನಗಳು. 13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಏಪ್ರಿಲ್ 2 ರಂದು ಕೊನೆಗೊಳ್ಳಲಿದ್ದು, ಎರಡು ರಾಜ್ಯಗಳ ಉಳಿದ ಆರು ಸದಸ್ಯರು ಏಪ್ರಿಲ್ 3 ರಂದು ನಿವೃತ್ತರಾಗಲಿದ್ದಾರೆ. ರಾಜ್ಯಸಭಾ ಸದಸ್ಯರ ಅವಧಿ ಆರು ವರ್ಷಗಳು ಆಗಿದೆ. .

Read More

ಕೊಡಗು: ಕೆಎಸ್ ‌ಆರ್‌ ಟಿಸಿ ಬಸ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ, ಮಹಿಳೆಯೊಬ್ಬರು ದುರ್ಮರಣ ಹೊಂದಿದ್ದಾರೆ. ಸಿದ್ದಾಪುರ ಗ್ರಾಮದ ಲಲಿತಾ (53) ಮೃತಪಟ್ಟ ದುರ್ದೈವಿ. ಸ್ಕೂಟಿ ಓಡಿಸುತ್ತಿದ್ದ ಸಿಂಚನಾ ಎಂಬುವವರ ಸ್ಥಿತಿ ಗಂಭೀರವಾಗಿದೆ. ಕೊಡಗಿನ ರಾಷ್ಟ್ರೀಯ ಹೆದ್ದಾರಿ 275ರ ಗುಡ್ಡೆಹೊಸೂರು ಬಳಿ ಅಪಘಾತ ಸಂಭವಿಸಿದ್ದು, ಮಡಿಕೇರಿಯಿಂದ ಮೈಸೂರಿಗೆ ಕೆಎಸ್‌ ಆರ್‌ ಟಿಸಿ ಬಸ್ ತೆರಳುತ್ತಿತ್ತು. ಇತ್ತ ಮಹಿಳೆಯರಿಬ್ಬರು ಅತ್ತೂರು ಕಡೆಯಿಂದ ಗುಡ್ಡೆಹೊಸೂರು ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಬಸ್‌ ಹಾಗೂ ಸ್ಕೂಟರ್‌ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನಡಿ ಸಿಲುಕಿದ ಸ್ಕೂಟಿ ನಜ್ಜುಗುಜ್ಜಾಗಿತ್ತು. ಮೃತ ಮಹಿಳೆ ಪರ್ಪಲ್ ಪಾಮ್ ರೆಸಾರ್ಟ್ ಸಿಬ್ಬಂದಿ ಎಂಬ ಮಾಹಿತಿ ಇದೆ. ಸ್ಥಳಕ್ಕೆ ಕುಶಾಲನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Read More

ಭೋಪಾಲ್: ಪತಿಯೇ ಪತ್ನಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪತ್ನಿ ನಿಶಾ ನಾಪಿತ್ ಮೃತ ದರ್ದೈವಿಯಾಗಿದ್ದರೆ, ಪತಿ ಮನೀಶ್ ಶರ್ಮಾ ಕೊಲೆ ಆರೋಪಿಯಾಗಿದ್ದಾರೆ. ಸರ್ವೀಸ್ಬುಕ್, ಬ್ಯಾಂಕ್ ಖಾತೆ ಎಲ್ಲೂ ನಾಮಿನಿಯಲ್ಲಿ ತನ್ನ ಹೆಸರಿಲ್ಲ ಎಂದು ಅವರ ಪತಿ ಮನೀಶ್ ಶರ್ಮಾ ಅಸಮಾಧಾನಗೊಂಡಿದ್ದ. ದಿಂಬಿನಿಂದ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದ, ಮೂಗಿನಿಂದ ವಿಪರೀತ ರಕ್ತಸ್ರಾವ ಆಗಿತ್ತು, ಅದನ್ನು ಒರೆಸಿದ್ದ, ಬಳಿಕ ಸಾಕ್ಷ್ಯಗಳನ್ನು ನಾಶ ಮಾಡಲು ದಿಂಬಿನ ಕವರ್ ಹಾಗೂ ಹಾಸಿಗೆ ವಸ್ತ್ರಗಳನ್ನು ವಾಶಿಂಗ್ ಮೆಷಿನ್ ಗೆ ಹಾಕಿದ್ದ. ಬಳಿಕ ಪತಿ ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆದು ಸಹಜ ಸಾವು ಎಂದು ನಿರೂಪಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈ ವಾಷಿಂಗ್ ಮೆಷಿನ್ ಇಂದಲೇ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿಂಬಿನ ಕವರ್ ಹಾಗೂ ಬೆಡ್ಶೀಟ್ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ನಾಪಿತ್ ಸಹೋದರಿ ನೀಲಿಮಾ ಅವರು ಶರ್ಮಾ ಅವರೇ ತನ್ನ ಸಹೋದರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆತ ನಿತ್ಯ ಆಕೆಗೆ…

Read More

ಈ ಬಾರಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಇದುವೇ ನನ್ನ ಕೊನೆಯ ಚುನಾವಣೆ. ಮೋದಿ ಅಧಿಕಾರ ಮುಂದುವರಿದರೆ, ಚುನಾವಣಾ ರಾಜಕೀಯಿಂದ ದೂರ ಉಳಿಯುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿ ಕೂಟ ಒಡೆದು ಹೋಗಿರುವುದ ಜಗಜ್ಜಾಹೀರಾಗಿದೆ. ಆದರೆ ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಇದೀಗ ಮಾತಿನ ಮೂಲಕ ಯುದ್ಧ ಆರಂಭಿಸಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ಚುನಾವಣೆ ಇಲ್ಲವೇ ಇಲ್ಲ. ಮೋದಿ ಸರ್ವಾಧಿಕಾರ ಪ್ರಾಬಲ್ಯ ಹೆಚ್ಚಾಗಲಿದೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕಾರಣದಿಂದ ನಿವೃತ್ತಿಪಡೆಯುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಭಾವನಾತ್ಮಕವಾಗಿ ಹಾಗೂ ಮೋದಿಯಿಂದ ದೇಶವೇ ಸರ್ವನಾಶವಾಗಲಿದೆ ಅನ್ನೋ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಕೇಂದ್ರ ಬಿಜೆಪಿ ಸರ್ಕಾರ ಇಡಿ ಬಳಸಿ ಎಲ್ಲರಿಗೂ ನೋಟಿಸ್ ನೀಡುತ್ತಿದೆ. ಇಡಿಗೆ ಹೆದರಿ ಹಲವು ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಪಕ್ಷಗಳನ್ನೇ ಬೆದರಿಸುತ್ತಿದ್ದಾರೆ. ಇದರಿಂದ ಇಂಡಿಯಾ ಒಕ್ಕೂಟದಿಂದ ಕೆಲ ಪಕ್ಷಗಳು ಬಿಜೆಪಿ…

Read More

ಕಲ್ಬುರ್ಗಿ: ತಂಗಿಗೆ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಅಣ್ಣ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದ. ಬುದ್ದಿ ಹೇಳಿದ್ದಕ್ಕೆ ಮನನೊಂದ ತಂಗಿ ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಹಾರಿದ್ದು, ಆಕೆಯನ್ನು ರಕ್ಷಿಸಲು ಹೋದ ಸಹೋದರ ಕೂಡ ಮೃತಪಟ್ಟ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಅಣ್ಣ, ತಂಗಿ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ. ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮ ಸಂದೀಪ (21), ನಂದಿನಿ (18) ಮೃತ ದುರ್ದೈವಿಗಳು. ಬಾವಿಯ ದಡದಲ್ಲಿ ನಂದಿನಿ ತಲೆಗೆ ಮುಡಿದಿದ್ದ ಹೂವಿನ ಗೊಂಚಲು ಇದ್ದುದರಿಂದ ಅನುಮಾನಗೊಂಡ ಹೆತ್ತವರು ಹುಡುಕಾಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಚಿಂಚೋಳಿ ಪೊಲೀಸ್ ಸಬ್ ಇನ್ಸ್ ಪೆಕ್ಟ ರ್ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Read More

ತಮಿಳುನಾಡು: ವ್ಯಕ್ತಿಯೊಬ್ಬ ಚಲಿಸುತ್ತಿರುವ ಬಸ್ ನಿಂದ ತಳ್ಳಿದ ಪರಿಣಾಮ, ಗರ್ಭಿಣಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ದಿಂಡಿಗಲ್ ನಲ್ಲಿ ಘಟನೆ ನಡೆದಿದ್ದು, ಪತ್ನಿಯ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ವಳರಮತಿ ಮೃತ ದುರ್ದೈವಿ. ದಂಪತಿ ದಿಂಡಿಗಲ್ ನಿಂದ ಪೊನ್ನಮರಾವತಿಗೆ ಉಪನಗರದ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿ ಪಾಂಡಿಯನ್ ಐದು ತಿಂಗಳ ಗರ್ಭಿಣಿಯಾಗಿದ್ದ ವಳರಮತಿಯೊಂದಿಗೆ ಜಗಳವಾಡಿದ್ದು, ಜಗಳ ತಾರಕಕ್ಕೇರಿ, ಪಾಂಡಿಯನ್ ತನ್ನ ಹೆಂಡತಿಯನ್ನು ಚಲಿಸುವ ಬಸ್ ನಿಂದ ಹೊರ ಹಾಕಿದ್ದಾನೆ. ಅದು ಆಕೆಯ ಸಾವಿಗೆ ಕಾರಣವಾಯಿತು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಳರಮತಿ ಮೃತದೇಹವನ್ನು ಹೊರತೆಗೆದಿದ್ದಾರೆ. ನಂತರ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದಿಂಡುಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪಾಂಡಿಯನ್ನನ್ನು ಬಂಧಿಸಲಾಗಿದೆ.

Read More

ಭೂ ಹಗರಣ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ(ಆರ್‌ ಜೆಡಿ) ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಇಂದು ಜಾರಿ ನಿರ್ದೇಶನಾಲಯವು  ವಿಚಾರಣೆ ನಡೆಸಲಿದೆ. ಜನವರಿ 19 ರಂದು ಕೇಂದ್ರ ಸಂಸ್ಥೆ ತೇಜಸ್ವಿ ಅವರಿಗೆ ಪಾಟ್ನಾ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಕಳುಹಿಸಿತ್ತು. ಇದಕ್ಕೂ ಮುನ್ನ ಇಡಿ ತೇಜಸ್ವಿ ಯಾದವ್ ಅವರಿಗೆ ಡಿಸೆಂಬರ್ 22 ರಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ನಂತರ 5ಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ತೇಜಸ್ವಿ ಹಾಜರಿರಲಿಲ್ಲ. ನಂತರ 27ರಂದು ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆಗಲೂ ಕಾಣಿಸದ ಕಾರಣ ಇಂದು ಮತ್ತೆ ಕರೆ ಮಾಡಿದ್ದಾರೆ. ಆರ್‌ ಜೆಡಿ ಮುಖ್ಯಸ್ಥ ಹಾಗೂ ತೇಜಸ್ವಿ ಅವರ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಇಡಿ ನಿನ್ನೆ 10 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ದೆಹಲಿಯಿಂದ ಇಡಿ ಅಧಿಕಾರಿಗಳು ಲಾಲು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಲಾಲು ಅವರ ಪುತ್ರಿ ಮಿಸಾ ಭಾರ್ತಿ ಸಂಸದೆಯೊಂದಿಗೆ ಇಡಿ ಕಚೇರಿ ತಲುಪಿದರು. ಪಾಟ್ನಾದ…

Read More

ಕೊರಟಗೆರೆ: ಮನೆಯ ಮುಂದೆ ಆಟವಾಡುತ್ತಿದ್ದ 6 ವರ್ಷ ವಯಸ್ಸಿನ ಬಾಲಕಿಯನ್ನು ಎಳೆದೊಯ್ದು ದುಷ್ಕರ್ಮಿಯೋರ್ವ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ. ಐ.ಡಿ. ಹಳ್ಳಿ ಮೂಲದ ಪವನ್(23) ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯಾಗಿದ್ದಾನೆ. ಈತ ಕೊರಟಗೆರೆ ಪಟ್ಟಣದ ವಾರ್ಡ್ ಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಎನ್ನಲಾಗಿದೆ. ಮನೆಯ ಮುಂದೆ ಆಟ ಆಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ಪವನ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಾಲಕಿಯ ಕಿರುಚಾಟ ಕೇಲಿ ಅಕ್ಕಪಕ್ಕದ ಮನೆಯವರು ದೌಡಾಯಿಸಿದ್ದು, ಈ ವೇಳೆ ಆರೋಪಿ ಬಾಲಕಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಪವನ್ ಕೊರಟಗೆರೆ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನೂ ನೊಂದ ಬಾಲಕಿಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್ ಐ ಚೇತನ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ…

Read More

ಭದ್ರತೆ, ಸುರಕ್ಷತೆ ವಿಷಯದಲ್ಲಿ ಜೋಕ್‌ ಮಾಡಿದರೆ ಅದು ತಮಾಷೆಯಲ್ಲ ಬದಲಿಗೆ ಶಿಕ್ಷಾರ್ಹ ಅಪರಾಧ ಇಂತಹ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆತ ಬೆಂಗಳೂರು ವಿಮಾನ ನಿಲ್ದಾಣದಿಂದ ಕೊಚ್ಚಿನ್‌ ಗೆ ತೆರಳುತ್ತಿದ್ದ. ವಿಮಾನ ನಿಲ್ದಾಣದ ತಪಾಸಣೆ ಅಧಿಕಾರಿಗಳು ಆತನನ್ನು ಒಳಗೆ ಬಿಡುವ ಮುಂಚೆ ಚೆಕ್ಕಿಂಗ್ ನಡೆಸಲು ಮುಂದಾದರು. ಆಗ ಆತ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ತಮಾಷೆ ಮಾಡಿದ್ದ. ಮುಂದೆ ಅವನಿಗೆ ಎದುರಾದದ್ದು ಬಿಗಿಯಾದ ತಪಾಸಣೆ. ಆತ ತಾನು ತಮಾಷೆಗೆ ಹೇಳಿದ್ದು ಎಂದು ಹೇಳಿದರೂ ಕೇಳಿಸಿಕೊಳ್ಳಲು ಯಾರು ತಯಾರಿರಲಿಲ್ಲ. ಈ ರೀತಿ ಸಿಕ್ಕಾಕಿಕೊಂಡ ಪ್ರಯಾಣಿಕನ ಹೆಸರು ಸಜ್ಜು ಕುಮಾರ್‌. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆತ ತನ್ನ ಊರಾದ ಕೇರಳಕ್ಕೆ ಹೋಗುತ್ತಿದ್ದ. ವಿಮಾನ ನಿಲ್ದಾಣ ಪ್ರವೇಶಿಸುವಾಗ ಮಾಡುವ ತಪಾಸಣೆಯಿಂದ ಆತ ಕಿರಿಕಿರಿ ಅನುಭವಿಸಿದ್ದ. ಏನಿದೆ ಬ್ಯಾಗ್‌ನಲ್ಲಿ ಎಂದು ತಪಾಸಣೆ ಮಾಡುವ ಅಧಿಕಾರಿಗಳು ಕೇಳಿದ್ದರು. ಆಗ ಇವನು ತಮಾಷೆಗೆ ʻಬಾಂಬ್‌ ಇದೆʼ ಎಂದಿದ್ದ. ಬಾಂಬ್‌ ಎಂಬ ಶಬ್ದ ಕೇಳುತ್ತಿದ್ದಂತೆಯೇ ಅಲರ್ಟ್‌ ಆದ…

Read More

ಡೀನಾ ಪೆಮ್ಮಯ್ಯ (27) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ಗುರುತಿಸಲಾಗಿದೆ. ನೆಲಜಿ ಗ್ರಾಮದ ನಿವಾಸಿ ಮುಂಡಂಡ ಪ್ರಭು ಪೆಮ್ಮಯ್ಯ ಅವರ ಪತ್ನಿ ಇವರಾಗಿದ್ದು, ಶನಿವಾರ ತನ್ನ 9 ವರ್ಷದ ಹೆಣ್ಣು ಮಗುವನ್ನು ತವರು ಮನೆಯಲ್ಲಿ ಬಿಟ್ಟು ನೆಲಜಿ ಗ್ರಾಮದಲ್ಲಿರುವ ಗಂಡನ ಮನೆಯಲ್ಲಿ ಯಾರೂ ಇಲ್ಲದ ಸಮಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಪೋಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಡೆತ್‌ ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ಬರೆಯಲಾಗಿದೆ. ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಕ್ರೈಂ ಪಿಎಸ್ ಐ ಶ್ರೀಧರ, ಮಹಿಳಾ ಸಿಬ್ಬಂದಿ ಪೂರ್ಣಿಮ, ಚಾಲಕ ಷರೀಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಡೀನಾ ಪೆಮ್ಮಯ್ಯ ಅವರ ತಂದೆ ಪೂಣಚ್ಚ ಅವರು ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More