Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ನಿತೀಶ್ ಕುಮಾರ್ ಅವರು ಒಂಬತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿದ್ದಾರೆ. ಒಂಬತ್ತು ಸದಸ್ಯರ ಸಚಿವ ಸಂಪುಟ ಇಂದು ಪ್ರಮಾಣ ವಚನ ಸ್ವೀಕರಿಸಿದೆ. ಜೆಡಿಯು ಮತ್ತು ಬಿಜೆಪಿ ತಲಾ ಮೂವರು ಸಚಿವರನ್ನು ಹೊಂದಿವೆ. ಒಬ್ಬರು ಸ್ವತಂತ್ರರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕೃತ ನಿವಾಸದಲ್ಲಿ ಶಾಸಕರೊಂದಿಗಿನ ಸಭೆಯ ನಂತರ ನಿತೀಶ್ ಕುಮಾರ್ ಅವರು ನೆನ್ನೆ ಬೆಳಿಗ್ಗೆ 11 ಗಂಟೆಗೆ ರಾಜಭವನಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು. ಬಿಹಾರದ ಎಲ್ಲಾ ಬಿಜೆಪಿ ಶಾಸಕರು ನಿತೀಶ್ ಅವರನ್ನು ಬೆಂಬಲಿಸಿ ಪತ್ರ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ನಾಯಕರು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವ ಪಾಟ್ನಾ ತಲುಪಿದರು. ಮಹಾಮೈತ್ರಿಕೂಟವನ್ನು ಏಕೆ ತೊರೆದರು ಎಂಬ ಪ್ರಶ್ನೆಗೆ ನಿತೀಶ್ ಉತ್ತರಿಸಲಿಲ್ಲ. ಭಾರತ ಒಕ್ಕೂಟದ ಸಭೆ ನಡೆದಾಗ ಸಿಪಿಐಎಂ ಸಂಚಾಲಕ ಸ್ಥಾನಕ್ಕೆ ನಿತೀಶ್ ಅವರ ಹೆಸರನ್ನು ಸೂಚಿಸಿತ್ತು. ಆದರೆ ಮಮತಾ ಬ್ಯಾನರ್ಜಿ ವಿರೋಧ…
ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ರಾಮ ಜಾನಕಿ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ. ದೇವಸ್ಥಾನದ ಗೋಡೆಗಳ ಮೇಲೆ ಅಪರಿಚಿತರು ಬೆದರಿಕೆ ಪೋಸ್ಟರ್ ಗಳನ್ನು ಹಾಕಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಬೆಳಗ್ಗೆ ದೇವಸ್ಥಾನಕ್ಕೆ ಬಂದವರಿಗೆ ಬೆದರಿಕೆ ಸಂದೇಶಗಳಿರುವ ಪೋಸ್ಟರ್ ಗಳು ಕಂಡು ಬಂದವು. ಕೆಲವು ಪೋಸ್ಟರ್ ಗಳನ್ನು ದೇವಾಲಯದ ಗೋಡೆಗಳ ಮೇಲೆ ಅಂಟಿಸಲಾಗಿದೆ, ಉಳಿದವು ದೇವಾಲಯದ ಆವರಣದ ಸುತ್ತಲೂ ಅಂಟಿಸಿದ್ದಾರೆ. ‘ರಾಮ ಜಾನಕಿ’ ದೇವಸ್ಥಾನದ ಟ್ರಸ್ಟಿಯೂ ಆಗಿರುವ ಬಿಜೆಪಿ ನಾಯಕ ರೋಹಿತ್ ಸಾಹು ಅವರಿಗೂ ಬೆದರಿಕೆ ಪತ್ರ ಬಂದಿದೆ. ದೇವಸ್ಥಾನದ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪೋಸ್ಟರ್ ಗಳನ್ನು ತೆಗೆದಿದ್ದಾರೆ. ದೇವಸ್ಥಾನದ ಸುತ್ತ ಭದ್ರತೆ ಏರ್ಪಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಸಿಸಿಟಿವಿ ಆಧರಿಸಿ ತನಿಖೆ ನಡೆಯುತ್ತಿದೆ. ಆರೋಪಿಯನ್ನು ಪೊಲೀಸರು ಶೀಘ್ರ ಪತ್ತೆ ಹಚ್ಚಲಿದ್ದಾರೆ ಎಂದು ವರದಿಯಾಗಿದೆ.
ಫ್ರೆಂಚ್ ಬಿಲಿಯನೇರ್ ಬರ್ನಾರ್ಡ್ ಅರ್ನಾಲ್ಡ್(74) ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದನ್ನು ಬ್ಯುಸಿನೆಸ್ ನಿಯತಕಾಲಿಕೆ ಫೋರ್ಲ್ಸ್ ಬಹಿರಂಗಪಡಿಸಿದೆ. ಐಷಾರಾಮಿ ಸರಕುಗಳ ಉದ್ಯಮ LVMH ನ ಅಧ್ಯಕ್ಷ ಮತ್ತು ಸಿಇಒ ಆಗಿ ಮುಂದುವರಿದಿರುವ ಅರ್ನಾಲ್ಡ್ 17,20,616 ಕೋಟಿ ರೂ. ಆಸ್ತಿ ಮೌಲ್ಯದ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಟೆಸ್ಲಾ ಸಿಇಒ ಮಸ್ಕ್ (16 ಲಕ್ಷ ಕೋಟಿ ರೂ.) ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ ಷೇರು ವಿನಿಮಯ ಕೇಂದ್ರದಲ್ಲಿ ಮಸ್ಕ್ ಸುಮಾರು 6 ಲಕ್ಷ ಕೋಟಿ ರೂ. ಕಳೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ವಿರುದ್ಧ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇಷ್ಟು ದಿನ ಕರಾವಳಿಯನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಸಂಘ ಪರಿವಾರ ಈಗ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ. ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗಲ್ಲ. ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಹರಿಹಾಯ್ದಿದ್ದಾರೆ. ವಿಪಕ್ಷ ನಾಯಕನೆಂದರೆ ಘನತೆಯುಕ್ತ ಸ್ಥಾನ, ಆ ಸ್ಥಾನದ ಗೌರವವನ್ನು ಮಣ್ಣುಪಾಲು ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಹಾರಿಸುವ ಷಡ್ಯಂತ್ರ ರೂಪಿಸಿದ್ಯಾರು? ಅನುಮತಿ ಪತ್ರದ ಷರತ್ತುಗಳನ್ನ ಉಲ್ಲಂಘಿಸಲು ಪ್ರೇರೇಪಿಸಿದ್ದು ಯಾರು? ಬಿಜೆಪಿ ಅದೆಷ್ಟು ದಿನಗಳಿಂದ ಶಾಂತಿ ಕೆಡಿಸುವ ಸಂಚು ರೂಪಿಸಿತ್ತು? ಕಾನೂನು, ನೀತಿ ನಿಯಮ…
ಕೌಟುಂಬಿಕ ಜಗಳ ತಾರಕಕ್ಕೇರಿ ಕೋಪದಿಂದ ಪತಿಯೊಬ್ಬ ಪತ್ನಿಯನ್ನು 3ನೇ ಮಹಡಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಆರೋಪಿಯಾದ ಪತಿ ವಿಕಾಸ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಕಿಂಗ್ ಗುತ್ತಿಗೆದಾರರಾದ ಕುಮಾರ್ ಅವರು ಅತಿಯಾದ ಮದ್ಯಪಾನದ ಅಮಲಿನಲ್ಲಿ ಮನೆಗೆ ಬಂದಿದ್ದ ಮತ್ತು ಪತ್ನಿ ಜತೆಗೆ ತೀವ್ರವಾಗಿ ಜಗಳವಾಡಿದ್ದಾನೆ. ಈ ಜಗಳವು ತಾರಕಕ್ಕೇರಿ ಆಕೆಯನ್ನು ಮೂರನೇ ಮಹಡಿಯಿಂದ ಎಸೆದಿದ್ದಾನೆ. ಆ ಬಳಿಕ ಆತನೇ ಪತ್ನಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರು ಆಕೆ ಸತ್ತಿರುವ ವಿಷಯ ತಿಳಿಸಿದ್ದಾರೆ.
ನಾಗ್ಪುರ: ಪರಿಚಯಸ್ಥ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಜಾಮೀನು ಮೇಲೆ ಹೊರ ಬಂದಿದ್ದ ಕೊಲೆ ಆರೋಪಿಯು ಅತ್ಯಾಚಾರವೆಸಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ನಗರದ ಜಾರಿಪಟ್ಕ ಪ್ರದೇಶದ ನಿವಾಸಿ ಭರತ್ ಗೋಸ್ವಾಮಿ (33) ಕೊಲೆ ಪ್ರಕರಣದಲ್ಲಿ 2014ರಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಇತ್ತೀಚೆಗಷ್ಟೇ ಪೆರೋಲ್ ಮೇಲೆ ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗೋಸ್ವಾಮಿ ತನಗೆ ಪರಿಚಯವಿರುವ ಮಹಿಳೆಯ ಮನೆಗೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಮಹಿಳೆಯ 14 ವರ್ಷದ ಮಗಳ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದಲ್ಲದೆ ಈ ವಿಚಾರ ಬಹಿರಂಗಗೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್ ಐಆರ್ ದಾಖಲಾಗಿದೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಗೋಸ್ವಾಮಿಯನ್ನು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರಕ್ಕಾಗಿ ಬಂಧಿಸಿದ್ದಾರೆ.
ಬೀದರ್: 75 ನೇ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ವನ್ನು ಬೀದರ್ ಜಿಲ್ಲೆಯ ಕೌಠಾ ಬಿ ಗ್ರಾಮ ಪಂಚಾಯತ್ ನಲ್ಲಿ ಆಚರಿಸಲಾಯಿತು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವೀನಾ ಗೌತಮ್ ಮೇತ್ರೆ, ಸುರೇಖಾ ಆಹಾರ ಸರಬರಾಜು ಇಲಾಖೆ ಬೀದರ್,ವಿಶೇಷ ಉಪನ್ಯಾಸಕರಾದ ನಂದಾದೀಪ್ ಬೋರಾಳೆ, ಅನಿಲ್ ಕುಮಾರ್ ಸಮಾಜ ಕಲ್ಯಾಣ್ ಇಲಾಖೆ ಬಿರೇಂದ್ರ ಸಿಂಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಶೇರಾಣಾಪಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕಾ ಅಧಿಕಾರಿಗಳು, ಆಶಾ ಕಾರ್ಯಕಾರ್ತೆಯರು, ಅಂಗವಾಡಿ ಕಾರ್ಯಕರ್ತೆಯರು, ಶಾಲೆ ಶಿಕ್ಷಕರು, ಮಕ್ಕಳು, ಯುವಕರು, ಹಿರಿಯರು ಮಹಿಳೆಯರು, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್
ಹೆಚ್.ಡಿ. ಕೋಟೆಯಲ್ಲಿ ಅದ್ದೂರಿಯಾಗಿ ನಡೆದ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತ ಗಿರಿಜನ ಮುಖಂಡ ಸೋಮಣ್ಣ ಆಗಮಿಸಿದರು. ಹೆಚ್.ಡಿ. ಕೋಟೆ ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಮಹದೇಶ್ವರ ಕಲಾಬಳಗ ಮಲಾರ ಮಹದೇವಸ್ವಾಮಿ ತಂಡ ಕಾರ್ಯಕ್ರಮ ಆಯೋಜಿಸಿತ್ತು. ಹಿರಿಯ ಪತ್ರಕರ್ತ ಬಸವರಾಜು ಹಾಗೂ ವೇದಿಕೆಯ ಗಣ್ಯರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ವಿಶೇಷ ಉಪನ್ಯಾಸ ನೀಡಿದ ಪ್ರೌಢ ಶಾಲೆ ಶಿಕ್ಷಕ ರಂಗರಾಜೇಗೌಡ, ವಿದ್ಯಾರ್ಥಿಗಳು ವಿವೇಕಾನಂದರ ಜೀವನವನ್ನು ಹೆಚ್ಚು ಅಧ್ಯಯನವನ್ನು ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಅದರಿಂದ ವಿದ್ಯಾರ್ಥಿಗಳು ದುಷ್ಟ ಚಟಾಗಳಿನಿಂದ ದೂರ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮೊತ್ತ ಸೋಮಣ್ಣರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೈರೇಗೌಡ ಮಾತನಾಡಿದರು. ಕಾರ್ಯಕ್ರಮದ ಸಂಘಟಕ ಮಲಾರ ಮಹದೇವಸ್ವಾಮಿ ಕಾರ್ಯಕ್ರಮದ ಎಲ್ಲಾ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ…
ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಲು ಗಡುವು ಸಮೀಪಿಸುತ್ತಿದೆ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಇಲ್ಲದ ವಾಹನಗಳಿಗೆ ಫೆಬ್ರವರಿ 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಹೀಗಿದ್ದರೂ ವಾಹನ ಮಾಲೀಕರು ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಲು ಉದಾಸೀನತೆ ತೋರುತ್ತಿದ್ದು, ಇಂತಹ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಫೆಬ್ರವರಿ 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ತೀರ್ಮಾನಿಸಲಾಗಿದೆ. ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದರೂ ಇದುವರೆಗೂ ಕೇವಲ 10 ಲಕ್ಷ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಹಾಕಿಸಲಾಗಿದೆ. ಇನ್ನೂ ಭಾರಿ ಸಂಖ್ಯೆಯ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಹಾಕಿಸಿಲ್ಲ. ಗಡುವು ಮುಗಿದ ನಂತರ ವಾಹನಗಳ ಪರಿಶೀಲಿಸಿ ದಂಡ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ 390 ರೂ. ನಿಂದ 440 ರೂ., 4 ಚಕ್ರದ ವಾಹನಗಳಿಗೆ 680 ರೂ. ನಿಂದ 690…
ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ವಿದ್ಯಾರ್ಥಿಗಳು ಮೃಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಎಂಟಕ್ಕೂ ಅಧಿಕ ಮಕ್ಕಳಿಗೆ ಗಾಯಗಳಾಗಿವೆ. ಮೃತರನ್ನು ಸಾಗರ್ ಕಡಕೋಳ(17), ಶ್ವೇತಾ(13), ಗೋವಿಂದ(13), ಬಸವರಾಜ(17) ಎಂದು ಗುರುತಿಸಲಾಗಿದೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮೃತ ವಿದ್ಯಾರ್ಥಿಗಳು ಕವಟಗಿ ಗ್ರಾಮದ ಮೂಲದವರು ಎಂದು ತಿಳಿದು ಬಂದಿದೆ. ಮೃತರು ಆಲಗೂರು ಗ್ರಾಮದ ಬಳಿ ಇರುವ ಶ್ರೀ ವರ್ಧಮಾನ ಮಹಾವೀರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಕವಟಗಿ ಗ್ರಾಮದ ಕಡೆ ಶಾಲಾ ಬಸ್ ನಲ್ಲಿ ಹೊರಡುವಾಗ ದುರಂತ ಸಂಭವಿಸಿದೆ. ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸದ್ಯ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.