Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಹೆಚ್.ಡಿ.ಕೋಟೆ: ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಪರಿಶಿಷ್ಟ ವರ್ಗದ ಮೌಲ್ಯಮಾಪನ ಸಭೆಯಿಂದ ಆದಿವಾಸಿ ಮುಖಂಡರು ಹೊರ ನಡೆದ ಘಟನೆ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕು ಆಡಳಿತ ಸೌಧದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಇಲಾಖಾವಾರು ಅಭಿವೃದ್ಧಿ ಮತ್ತು ಮೌಲ್ಯಮಾಪನ ಪರಿಶೀಲನೆ ಸಲುವಾಗಿ ಸಭೆ ಕರೆದಿದ್ದರು. ಆದರೆ ಯಾವುದೇ ಅಧಿಕಾರಿಗಳು ಬಾರದೇ ಇದ್ದ ಕಾರಣ ಅಸಮಾಧಾನ ವ್ಯಕ್ತಪಡಿಸಿದ ಆದಿವಾಸಿ ಮುಖಂಡರು ಸಭೆಯಿಂದ ಹೊರ ನಡೆದರು. ಆದಿವಾಸಿ ಜನರ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂಗಳು ಹರಿದು ಬರುತ್ತಿದ್ದರೂ ಸಹ ಬುಡಕಟ್ಟು ಜನರ ಬವಣೆ ಮಾತ್ರ ತಪ್ಪಿಲ್ಲ ಎಂದು ಇದೇ ವೇಳೆ ಅಧಿಕಾರಿಗಳ ವಿರುದ್ಧ ಆದಿವಾಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಸಭೆಗೆ ಆಗಮಿಸಿದ ಮುಖಂಡರನ್ನು ಮನಹೊಲಿಸಲು ಪ್ರಯತ್ನಿಸಿದ ಟ್ರೈಬಲ್ ಆಫೀಸರ್ ಮಹೇಶ್ ರವರ ಮಾತಿಗೆ ಮುಖಂಡರು ಕ್ಯಾರೆ ಅನ್ನದೇ ಸಭೆಯಿಂದ ಹೊರ ನಡೆದರು. ವರದಿ: ಮಲಾರ ಮಹದೇವಸ್ವಾಮಿ
ಹುಬ್ಬಳ್ಳಿ: 28 ವರ್ಷದ ಯುವಕನನ್ನು ಕಾಂಗ್ರೆಸ್ ಕಚೇರಿ ಮುಂದೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ 28 ವರ್ಷದ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೃತದೇಹ ಅರೆಬರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾತ್ರಿ ಸ್ನೇಹಿತರೆಲ್ಲ ಪಾರ್ಟಿ ಮಾಡಿ ನಂತರ ಭೀಕರವಾಗಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾವಗಡ: “ಮೊಬೈಲ್ ದೂರ ಇಡಿ, ಪುಸ್ತಕದ ಕಡೆ ಹೆಚ್ಚಿನ ಗಮನ ನೀಡಿ” ಎಂದು ವಿದ್ಯಾರ್ಥಿಗಳಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಕಿವಿಮಾತು ತಿಳಿಸಿದರು. ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಮಾಧವ ವಿದ್ಯಾ ಸಂಸ್ಥೆಯ ಎಸ್.ಎಂ. ಆಂಗ್ಲ ಮಾಧ್ಯಮ ಶಾಲೆಯ 25ನೇ ಶಾಲಾ ವಾರ್ಷಿಕೋತ್ಸವ ಹಾಗೂ ಬೆಳ್ಳಿ ಉತ್ಸವ ಸಮಾರಂಭವನ್ನು ಕೆ.ಇ.ಬಿ. ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ವಿದ್ಯಾರ್ಥಿಗಳು ಕೇವಲ ಮೊಬೈಲ್, ಟಿವಿಗೆ ಅಂಟಿಕೊಂಡಿರುತ್ತಾರೆ. ಅದನ್ನು ಬಿಟ್ಟು ಓದಿನ ಕಡೆ ಗಮನಹರಿಸಬೇಕು. ಹೆಚ್ಚಿನ ಪುಸ್ತಕಗಳನ್ನು ಓದಲು ಸಮಯ ನೀಡಬೇಕು. ಶಿಕ್ಷಕರು ಬೋಧಿಸುವ ಪಾಠ ಗಮನವಿಟ್ಟು ಕೇಳಿಸಿಕೊಂಡು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು, ಆ ಮೂಲಕ ಉನ್ನತ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದರು. ಗಡಿಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ರೂಪಿಸಿ ಕಳೆದ 25 ವರ್ಷಗಳಿಂದ ಉತ್ತಮ ಗುಣಮಟ್ಟ ಶಿಕ್ಷಣವನ್ನುಮಾಧವ ವಿದ್ಯಾ ಸಂಸ್ಥೆಯ ನೀಡುತ್ತಾ ಬರುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಇದೇ ವೇಳೆ…
ಬೀದರ್: ಬಿಜೆಪಿ ರಾಜ್ಯಾಧ್ಯಕ್ಷರ ಎದುರೇ ಭಗವಂತ್ ಖೂಬಾ ಹಾಗೂ ಔರಾದ ಶಾಸಕರಾದ ಪ್ರಭು ಚವ್ಹಾಣ್ ಅವರ ನಡುವಿನ ಭಿನ್ನಮತ ಬಹಿರಂಗವಾಗಿದ್ದು. ಈ ಬಾರಿ ಖೂಬಾಗೆ ಟಿಕೆಟ್ ಕೊಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾಲಿಗೆ ಬಿದ್ದು ಪ್ರಭು ಚವ್ಹಾಣ್ ಹೈಡ್ರಾಮ ನಡೆಸಿದರು. ಬೀದರ್ ನಗರದ ಗಣೇಶ ಮೈದಾನದಲ್ಲಿ ಜರುಗಿದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ವೇದಿಕೆಯಲ್ಲಿ ವಿಜಯೇಂದ್ರ ಅವರ ಕಾಲಿಗೆ ಬಿದ್ದ ಪ್ರಭು ಚವ್ಹಾಣ್ ಖೂಬಾಗೆ ಟಿಕೆಟ್ ಕೊಡಬೇಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕುಡಚಿ ಶಾಸಕ ರಾಜೀವ್, ರಾಜ್ಯ ಕಾರ್ಯದರ್ಶಿಗಳು ಶರಣು ತಳ್ಳಿಕೇರಿ ಸೇರಿದಂತೆ ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್
ಬೆಂಗಳೂರು: ನಗರದ ಆರ್ ಪಿಸಿ ಲೇಔಟ್ ನಲ್ಲಿರುವ ಹೊಟೇಲ್ ನಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಯುವಕನು ಸ್ನೇಹಿತರೊಂದಿಗೆ ಬೆಟ್ ಕಟ್ಟಿ ಯುವತಿಯೊಬ್ಬಳನ್ನು ಅನುಚಿತವಾಗಿ ಸ್ಪರ್ಶಿಸಿ ಮುಜುಗರಕ್ಕೀಡು ಮಾಡಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಂದನ್ ವಿಕೃತ ಕಾಮಿ ಯುವಕನಾಗಿದ್ದು ಸಧ್ಯಕ್ಕೆ ಪೊಲೀಸರ ವಶದಲ್ಲಿದ್ದಾನೆ. ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಚಂದನ್ ತನ್ನ ಸ್ನೇಹಿತರೊಂದಿಗೆ ಸಿನಿಮಾಗೆ ತೆರಳಿದ್ದ. ಬಳಿಕ ಅಲ್ಲಿನ ಹೋಟೆಲ್ ಒಂದರಲ್ಲಿ ಊಟಕ್ಕೆ ತೆರಳಿದ್ದಾಗ ಕೌಂಟರ್ ನಲ್ಲಿ ನಿಂತಿದ್ದ ಯುವತಿಯೊಬ್ಬಳನು ಸ್ಪರ್ಷಿಸುವುದಾಗಿ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿದ್ದ. ಆದರೆ ಯುವತಿ ಈತನ ವಿಕೃತ ವರ್ತನೆಯಿಂದ ಕುಪಿತಳಾಗಿ ಪೊಲೀಸರಲ್ಲಿ ದೂರು ನೀಡಿದ್ದಳು. ಹೋಟೆಲ್ ನಲ್ಲಿದ್ದ ಸಿಸಿಟಿವಿ ಕೆಮೆರಾ ದೃಶ್ಯದಲ್ಲಿ ಚಂದನ್ ವಿಕೃತಿ ಬಯಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು, ಬುಧವಾರ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಚಂದನ್ ತನ್ನ ಸ್ನೇಹಿತರೊಬ್ಬರು ಮಹಿಳೆಯನ್ನು ಮುಟ್ಟುವಂತೆ ಸವಾಲು…
ಬೆಳಗಾವಿ: ಮದುವೆಯಾದ ಒಂದು ತಿಂಗಳಿಗೇ ಪ್ರಿಯಕರನೊಡನೆ ಓಡಿ ಹೋದ ಪತ್ನಿಯನ್ನು ಅವಳ ಸಂಗಾತಿಯೊಡನೇ ಪತಿ ಕೊಚ್ಚಿ ಕೊಲೆಗೈದಿರುವ ಘಟನೆ ಅಥಣಿಯ ಕೋಕಟನೂರ ಗ್ರಾಮದ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಯಾಸಿನ್ ಬಾಗೊಡೆ (21) ಮತ್ತು ಹೀನಾ ಕೌಸರ್ ಸುದಾರಾಣೆ (19) ಮೃತ ಜೋಡಿಗಳಾಗಿದ್ದು, ತೌಫಿಕ್ ಕ್ಯಾಡಿ ಕೊಲೆ ಆರೋಪಿಯಾಗಿದ್ದಾನೆ. ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದ ನವ ವಿವಾಹಿತ ಜೋಡಿಯಾದ ಹೀನಾ ಮೆಹಬೂಬ್ ಹಾಗೂ ತೌಫಿಕ್ ಶೌಕತ್ ಅವರು ವಿವಾಹದ ಬಳಿಕ ಇಬ್ಬರೂ ಬಾಡಿಗೆ ಕಾರಿನಲ್ಲಿ ದರ್ಗಾಕ್ಕೆ ಹೋಗಿದ್ದರು. ಈ ವೇಳೆ ಕಾರು ಚಾಲಕ ಯಾಸಿನ್ ಅದಮ್(21) ಮೇಲೆ ಹೀನಾಗೆ ಪ್ರೀತಿಯಾಗಿದೆ. ದರ್ಗಾಕ್ಕೆ ಹೋಗಿ ಬಂದ ಒಂದೇ ತಿಂಗಳಲ್ಲಿ ಪ್ರಿಯಕರ ಯಾಸಿನ್ ಜೊತೆ ಹೀನಾ ಗಂಡನನ್ನು ಬಿಟ್ಟು ಓಡಿ ಹೋಗಿದ್ದಳು. ಇದರಿಂದ ಕೋಪಗೊಂಡ ಪತಿ ತೌಫಿಕ್ ಶೌಕತ್ ಹತ್ಯೆಗೆ ಸಂಚು ಹೂಡಿದ್ದ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಯಾಸಿನ್, ಹೀನಾ ಜೋಡಿ…
ರಾಜಸ್ಥಾನ: ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸರಸ್ವತಿ ಮೂರ್ತಿಯನ್ನು ಕಡ್ಡಾಯವಾಗಿ ಪ್ರತಿಷ್ಠಾಪಿಸುವಂತೆ ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಶಾಲೆಯ ಮುಖ್ಯದ್ವಾರದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಸರಸ್ವತಿಯ ಭಾವಚಿತ್ರ ಅಥವಾ ಮೂರ್ತಿ ಇಲ್ಲದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗೆ ಶಾಲೆಗಳಲ್ಲಿ ವಸ್ತ್ರ ಸಂಹಿತೆಯನ್ನು ಕೂಡ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ವಯಸ್ಸು ಮತ್ತು ಲಿಂಗವನ್ನು ಆಧರಿಸಿ ವಸ್ತ್ರ ಸಂಹಿತೆ ನಿರ್ಧರಿಸಲಾಗುತ್ತದೆ. ಇನ್ನು ಶಾಲೆಗಳಲ್ಲಿ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಲೂ ಹಿಜಾಬ್ ವಿವಾದ ಭುಗಿಲೆತ್ತು, ರಾಜಸ್ಥಾನದಲ್ಲಿ ಬಿಜೆಪಿಯ ಭಜನ್ ಲಾಲ್ ಶರ್ಮಾ ಅಧಿಕಾರಕ್ಕೇರಿದ ಬಳಿಕ ಮುಸ್ಲಿಂ ವಿರೋಧಿ ನೀತಿಗಳನ್ನು ಜಾರಿಗೆ ಮುಂದಾಗಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲದೆ ಖಾಸಗಿ ಶಾಲೆಗಳು ಮತ್ತು ಮದರಸಾಗಳಲ್ಲಿಯೂ ಹಿಜಾಬ್ ನ್ನು ನಿಷೇಧಿಸಬೇಕು ಎಂದು ರಾಜಸ್ಥಾನದ ಹಿರಿಯ…
ಮಂಡ್ಯ ತಾಲ್ಲೂಕಿನ ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಹನುಮ ಧ್ವಜ ಹಾರಿಸಿದ್ದು ಒಂದು ಸಾರ್ವಜನಿಕ ಸ್ಥಳದಲ್ಲೇ ಹೊರತು ಬೇರೆ ಧರ್ಮದ ಪ್ರಾರ್ಥನಾ ಮಂದಿರದ ಮೇಲಲ್ಲ. ಹಾಗಾಗಿ, ಗ್ರಾಮದ ಜನರೊಂದಿಗೆ ಮಾತಾಡಿ ವಿಷಯವನ್ನು ಸುಲಭವಾಗಿ, ಶಾಂತಿಯುತವಾಗಿ ಬಗೆಹರಿಸಬಹುದಿತ್ತು. ಜನರನ್ನ ಸಮಾಧಾನ ಮಾಡಿದ್ದರೇ ಇಷ್ಟಲ್ಲಾ ಮಾಡುವ ಅವಶ್ಯಕತೆ ಇರಲಿಲ್ಲ. ಬಲವಂತವಾಗಿ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ರಾಮಮಂದಿರ ವಿಚಾರದಲ್ಲಿ ಅನೇಕ ಜನರು ಭಾವುಕರಾದ್ರು. ವಿರೋಧವನ್ನ ಕೇವಲ ಪಕ್ಷದ ಕಾರ್ಯಕರ್ತರು ಮಾಡಿಲ್ಲ. ಮಂಡ್ಯದ ಜನ ಕೂಡ ಧ್ವಜ ತೆರವನ್ನ ವಿರೋಧಿಸಿದ್ದಾರೆ. ತುಂಬಾ ತಪ್ಪಾಗಿದೆ. ಕಾರಣ ಯಾರು ಅಂತ ನಿಮಗೆ ಗೊತ್ತಿದೆ. ನಿಮ್ಮಿಂದ ಅನವಶ್ಯಕ ತಪ್ಪು ನಡೆದಿದೆ ನೀವೇ ಸರಿಪಡಿಸಿ ಎಂದರು. ಸರ್ಕಾರ ಕಟ್ಟುನಿಟ್ಟಾಗಿ ಕಾನೂನನ್ನು ಜಾರಿಗೊಳಿಸುತ್ತಿರುವ ಬಗ್ಗೆ ಹೇಳಿಕೊಳ್ಳುತ್ತಿರುವುದಾದರೆ, ಯಾರ ಭಾವನೆಗಗಳಿಗೂ ಧಕ್ಕೆ ಉಂಟು ಮಾಡದ ಹನುಮ ಧ್ವಜ ಮಾತ್ರ ಅದರ…
ಸಂಪಾಜೆ ಸುತ್ತಮುತ್ತಲಿನ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಜನ ನೆಮ್ಮದಿಯಿಂದ ನಿದ್ರೆ ಮಾಡಲಾಗದ ಪರಿಸ್ಥಿತಿಗೆ ಬಂದು ತಲುಪಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಂಪಾಜೆ ಗ್ರಾಮದ ಕಾಂಗ್ರೆಸ್ ನಿಯೋಗ ನೇರವಾಗಿ ಅರಣ್ಯ ಸಚಿವರನ್ನೇ ಭೇಟಿಯಾಗಿ ತಕ್ಷಣ ಸ್ಪಂದಿಸುವಂತೆ ಮನವಿ ಮಾಡಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವರು ಶೀಘ್ರದಲ್ಲೇ ಸಂಪಾಜೆಗೆ ಆಗಮಿಸಿ ಪರಿಶೀಲನೆ ನಡೆಸುವ ಭರವಸೆಯನ್ನು ನೀಡಿದ್ದಾರೆ. ಸಂಪಾಜೆ ಗ್ರಾಮದಲ್ಲಿ ಸೋಲಾರ್ ಬೇಲಿ ಅಳವಡಿಕೆ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ಹಲವು ಮಹತ್ವದ ವಿಚಾರವನ್ನು ಕೂಡ ಇದೇ ವೇಳೆ ಸಚಿವರ ಗಮನಕ್ಕೆ ತರಲಾಯಿತು. ಕೆಪಿಸಿಸಿ ವಕ್ತಾರ ಟಿ. ಎಂ. ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೋ, ಯುವ ಕಾಂಗ್ರೆಸ್ ಮುಖಂಡ ರಂಜಿತ್ ರೈ ಮೇನಾಲ, ಸಲೀಂ ಪೆರುಂಗೋಡಿ, ಉನೈಸ್ ಗೂನಡ್ಕ, ಸೌಕತ್ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.
ರಾಮಮಂದಿರದ ಲೋಕಾರ್ಪಣೆಯ ನಂತರ ಅಯೋಧ್ಯೆಯಲ್ಲಿ ಭಕ್ತರ ದಂಡು ಹರಿದು ಬರುತ್ತದೆ. ಸಂದರ್ಶಕರ ವಿಪರೀತವನ್ನು ಪರಿಗಣಿಸಿ, ಸ್ಪೈಸ್ ಜೆಟ್ ಅಯೋಧ್ಯೆಗೆ 8 ಹೊಸ ವಿಮಾನಗಳನ್ನು ಘೋಷಿಸಿದೆ. ವಿಮಾನ ಸೇವೆ ಫೆಬ್ರವರಿ 1 ರಿಂದ ಪ್ರಾರಂಭವಾಗಲಿದೆ. ದೆಹಲಿ, ಚೆನ್ನೈ, ಅಹಮದಾಬಾದ್, ಜೈಪುರ, ಪಾಟ್ನಾ, ದರ್ಬಂಗಾ, ಮುಂಬೈ ಮತ್ತು ಬೆಂಗಳೂರಿನಿಂದ ವಿಮಾನಗಳ ಸಂಚಾರ ಪ್ರಾರಂಭವಾಗಲಿದೆ. ಟ್ರಿಪ್ ಅಡ್ವೈಸರ್ ಸೇರಿದಂತೆ ಅಂತರಾಷ್ಟ್ರೀಯ ಪ್ರಯಾಣ ಸೇವಾ ಪೂರೈಕೆದಾರರು ಅಯೋಧ್ಯೆಗೆ ಭೇಟಿ ನೀಡಲು ವಿವಿಧ ಪ್ಯಾಕೇಜ್ ದಗಳನ್ನು ಘೋಷಿಸಿದ್ದಾರೆ. ಇದಾದ ನಂತರ, ದೇವಾಲಯದ ಟ್ರಸ್ಟ್ ದರ್ಶನದ ಸಮಯವನ್ನು ವಿಸ್ತರಿಸಿದೆ ಮತ್ತು ಆರತಿ ಮತ್ತು ದರ್ಶನದ ಸಮಯದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ವಾರದಲ್ಲಿಯೇ 19 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತವೆ. ಪ್ರಾಣ ಪ್ರತಿಷ್ಠೆಯ ದಿನದಂದು 5 ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡಿದರೆ, ನಂತರದ ದಿನಗಳಲ್ಲಿ ಸರಾಸರಿ 2 ಲಕ್ಷ ಯಾತ್ರಿಕರು ದೇವಾಲಯವನ್ನು ತಲುಪುತ್ತಿದ್ದಾರೆ.