Author: admin

ಚೆನ್ನೈ: ಚೆನ್ನೈನಲ್ಲಿರುವ ಡಿಎಂಕೆ ಶಾಸಕ ಐ ಕರುಣಾನಿಧಿ ಅವರ ಪುತ್ರನ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ದಲಿತ ಬಾಲಕಿಯನ್ನು ಶಾಸಕ ಐ ಕರುಣಾನಿಧಿ ಅವರ ಪುತ್ರನ ಮನೆಯವರು ಹಲವಾರು ತಿಂಗಳುಗಳಿಂದ ಸಂಬಳ ನೀಡದೆ  ದೈಹಿಕ ಹಿಂಸೆ ನೀಡಲಾಗುತಿದೆ ಎನ್ನಲಾಗಿದೆ. ತಿರುವನ್ಮಿಯೂರಿನ ಗ್ರೀನ್ ಮೆಡೋಸ್ ಅಪಾರ್ಟ್‌ಮೆಂಟ್‌ನ ಮನೆ ಮಾಲೀಕರಾದ (ಡಿಎಂಕೆ ಶಾಸಕ) ಆಂಡ್ರೊ ಮತಿವನನ್ ಪುತ್ರ ಮತ್ತು ಮರ್ಲಿನಾ (ಡಿಎಂಕೆ ಶಾಸಕರ ಸೊಸೆ) ಪದೇ ಪದೇ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ವೈದ್ಯಕೀಯ ಸಹಾಯವನ್ನು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. . ಸಂತ್ರಸ್ತೆ ತನ್ನ ಪಿ.ಯುತರಗತಿಯನ್ನು ಪೂರ್ಣಗೊಳಿಸಿದ ನಂತರ, ಮರ್ಲಿನಾ ಮತ್ತು ಆಂಟೊ ಮತಿವನನ್ ಅವರ ಮನೆಯಲ್ಲಿ ಏಜೆಂಟ್ ಮೂಲಕ ಮನೆಕೆಲಸಕ್ಕೆ ಸೇರಿಕೊಂಡಳು. ತನ್ನ ಕುಟುಂಬದೊಂದಿಗೆ  ಮಾತನಾಡುವುದನ್ನು ಕೂಡ ಕುಂಟುಂಬ ನೀರಾಕರಿಸಿತ್ತು. ಸಂತ್ರಸ್ತೆ ಪೊಂಗಲ್‌ಗೆಂದು  ತನ್ನ ಮನೆಗೆ ಬಂದ ನಂತರ ತನ್ನ ಸ್ವಂತ ಊರಾದ ಕಲ್ಲಕುರುಚಿ ಜಿಲ್ಲೆಯ ಉಲುಂದೂರುಪೇಟೆ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ…

Read More

ಮಧ್ಯಪ್ರದೇಶ: ವಿದ್ಯಾರ್ಥಿಯೊಬ್ಬ ಗುರುವಾರ ಬೆಳಗ್ಗೆ ಕೋಚಿಂಗ್ ಕ್ಲಾಸ್‌ನಲ್ಲಿ ಪಾಠ ಕೇಳುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ರಾಜಾ (18) ಮೃತ ವಿದ್ಯಾರ್ಥಿ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ನಿವಾಸಿಯಾಗಿದ್ದಾನೆ.ವಿದ್ಯಾರ್ಥಿ ಉನ್ನತ ವ್ಯಾಸಂಗಕ್ಕಾಗಿ ಇಂದೋರ್‌ನಲ್ಲಿ ನೆಲೆಸಿದ್ದಾನೆ.ರಾಜಾ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗಳಿಗೆ ಅದೇ ಜಿಲ್ಲೆಯ ಭಾವರ್ಕುವಾದಲ್ಲಿ ಕೋಚಿಂಗ್ ಇನ್ಸ್ಟಿಟ್ಯೂಟ್ ಸೇರಿದ್ದನು. ರಾಜಾ  ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಆದರೆ  ಏಕಾಏಕಿ ತರಗತಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಸಹ ವಿದ್ಯಾರ್ಥಿಗಳು ರಾಜಾ ಅವರನ್ನು ಎತ್ತಿ ಬೆಂಚಿನ ಮೇಲೆ ಕೂರಿಸಿದರು.ಆದರೆ ರಾಜ ಅದಾಗಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ರಾಜಾ ಆದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Read More

ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ವಾರದಿಂದ ವಾರಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ನಡುವೆ ಬಿಗ್ ಬಾಸ್ ನಿಂದ ಔಟ್ ಆಗಿದ್ದ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಅತಿಥಿಗಳಾಗಿ ಬಂದ ಬಳಿಕ ಮನೆಯೊಳಗೆ ಅಲ್ಲೋಲಕಲ್ಲೋಲ ಸೃಷ್ಠಿಯಾಗಿದೆ. ಬಿಗ್ ಬಾಸ್ ಸ್ಪರ್ಧಿ ನಮೃತಾ ಹಾಗೂ ಕಾರ್ತಿಕ್  ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಟ್ರೋಲ್ ಗಳು ಸಾಕಷ್ಟು ಹರಿದಾಡುತ್ತಿವೆ. ಕಾರ್ತಿಕ್ ನ  ಸ್ವಲ್ಪ ಅತಿಯಾಯ್ತು ಅನ್ನೋ ಮಟ್ಟದ ವರ್ತನೆ ನಮ್ರತಾಳಿಗೆ ನೆಗೆಟಿವ್ ಆಗಿ ಪರಿಣಮಿಸಿದೆ. ಈ ವಿಚಾರವನ್ನು ಮನೆಯೊಳಗೆ  ಎಂಟ್ರಿಕೊಟ್ಟಿದ್ದ ಸ್ನೇಹಿತ್ ಪರೋಕ್ಷವಾಗಿ ನಮೃತಾಗೆ ತಿಳಿಸಿದ್ದು, ಇದರಿಂದಾಗಿ ನಮೃತಾ ಕಣ್ಣೀರು ಹಾಕಿ, ಗಳಗಳನೇ ಅತ್ತಿದ್ದಾರೆ. ಇಶಾನಿ ಹಾಗೂ ಮೈಕಲ್ ಕೂಡ ಕಾರ್ತಿಕ್ ಜೊತೆಗೆ ಹೆಚ್ಚು ಸಮಯ ಕಳೆಯ ಬೇಡ, ಅದು ಹೊರಗಡೆ ನೆಗೆಟಿವ್ ಆಗಿ ಕಾಣಿಸ್ತಾ ಇದೆ ಅಂತ ನಮೃತಾಗೆ  ಹೇಳಿದ್ದಾರೆ. ನಮೃತಾ ಹಾಗೂ ಕಾರ್ತಿಕ್ ನ ಸಲುಗೆ ಸ್ನೇಹಿತ್ ಗೆ ತೀವ್ರ ಆಕ್ರೋಶ ಉಂಟು ಮಾಡಿದ್ದರೂ, ನಾನು ಈಗ ನಿಮಗೆ…

Read More

ಧಾರವಾಡ: ಯುವ ಕಲಾವಿದನೊಬ್ಬ ತನ್ನದೇ ಕಲ್ಪನೆಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಮಣ್ಣಿಯಲ್ಲಿ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದಾನೆ. ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯೂ ಆಗಲಿದೆ. ಈ ಸಂದರ್ಭದಲ್ಲಿ ಧಾರವಾಡದ ಯುವ ಕಲಾವಿದ ರೋಹಿತ್ ಹಿರೇಮಠ ತನ್ನದೇ ಕಲ್ಪನೆಯಲ್ಲಿ 15 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ನಿರ್ಮಿಸಿದ್ದಾರೆ. ಧಾರವಾಡ ನಗರದ ಕೆಲಗೇರಿ ಬಡಾವಣೆಯ ಯುವ ಕಲಾವಿದ ರೋಹಿತ್ ಹಿರೇಮಠ, ಸರಕಾರಿ ಕಲಾ ಗ್ಯಾಲರಿಯಲ್ಲಿ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ರೋಹಿತ್ ತಂದೆ ಮಂಜುನಾಥ ಹಿರೇಮಠ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕರು. ತಂದೆಯಂತೆಯೇ ಮಗನು ಕೂಡ ಕಲಾವಿದನೇ. ಈಗಾಗಲೇ ಅನೇಕ ಕಲಾಕೃತಿ ಮಾಡಿರೋ ರೋಹಿತ್ ಗೆ ರಾಮನೆಂದರೆ ತುಂಬಾನೇ ಭಕ್ತಿ. ಇದೇ ಕಾರಣಕ್ಕೆ ಐವತ್ತೊಂದು ಗಂಟೆಗಳ ಕಾಲ ಕೆಲಸ ಮಾಡಿ, 15 ಇಂಚಿನ ರಾಮಲಲ್ಲಾ ವಿಗ್ರಹವನ್ನು ತಯಾರಿಸಿ, ಎಲ್ಲರನ್ನೂ ಚಕಿತಗೊಳಿಸಿದ್ದಾನೆ.

Read More

ಹಿಟ್ ಆ್ಯಂಡ್ ರನ್ ಕಾಯ್ದೆ ವಾಪಸು ಆಗುವವರೆಗೂ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿಂತಲ್ಲೇ ಕೆಲ ಲಾರಿಗಳು ನಿಂತಿದೆ. ರಾಜ್ಯದಲ್ಲಿ ಚನ್ನಾರೆಡ್ಡಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಚನ್ನಾರೆಡ್ಡಿ ಕರ್ನಾಟಕ ರಾಜ್ಯದ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದು, ರಾಜ್ಯದಲ್ಲಿ ಲಾರಿ ಮಾಲೀಕರ ಹೋರಾಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆಯಿಂದ ಲಾರಿ ಸಂಚಾರ ಯಥಾಸ್ಥಿತಿ ಇದೆ. ಕೇಂದ್ರ ಸರ್ಕಾರದ ಹಿಟ್ ಆ್ಯಂಡ್ ರನ್ ಕಾಯ್ದೆ ಭಾರೀ ವಿರೋಧ ವ್ಯಕ್ತವಾಗಿದ್ದು, ನಿನ್ನೆ ಮಧ್ಯರಾತ್ರಿ ಯಿಂದ ಲಾರಿ ಸಂಚಾರ ಸ್ಥಗಿತಗೊಳಿಸಿ ಲಾರಿ ಮಾಲೀಕರು ಹೋರಾಟ ಮಾಡ್ತಿದ್ದಾರೆ. ಅಗತ್ಯ ಸೇವೆ ಹೊರತುಪಡಿಸಿ ವಾಣಿಜ್ಯ ಸೇವೆಯ ಲಾರಿಗಳ ಸಂಚಾರ ಸ್ಥಗಿತವಾಗಿದೆ. ಹಿಟ್ ಆ್ಯಂಡ್ ರನ್ ಕಾಯ್ದೆ ವಾಪಸು ಆಗುವವರೆಗೂ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

Read More

ಪಾಕಿಸ್ತಾನವು ಇರಾನ್ ಮೇಲೆ ದಾಳಿ ಮಾಡಿತು. ಇರಾನ್ ‌ನಲ್ಲಿರುವ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಪೋಸ್ಟ್ ‌ಗಳ ವಿರುದ್ಧ ಪಾಕಿಸ್ತಾನದ ಪ್ರತಿದಾಳಿಯಾಗಿದೆ. ಭಯೋತ್ಪಾದಕ ಸಂಘಟನೆ ಜೈಶ್ ಅಲ್-ಅಡ್ಲಿನ್ ಕೇಂದ್ರಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ ಪ್ರತೀಕಾರ ಮಾಡಲಾಗಿದೆ. ಇರಾನ್ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಮಂಗಳವಾರ, ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದ ಹಳ್ಳಿಯ ಮೇಲೆ ಇರಾನ್ ದಾಳಿ ನಡೆಸಿತು. ಇರಾನ್‌ ನ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಇರಾಕ್ ಮತ್ತು ಸಿರಿಯಾ ನಂತರ ಇರಾನ್ ದಾಳಿಗೆ ಒಳಗಾದ ಮೂರನೇ ದೇಶ ಪಾಕಿಸ್ತಾನ. ಇಸ್ರೇಲಿ ಬೇಹುಗಾರಿಕಾ ಸಂಸ್ಥೆಯಾದ ಮೊಸ್ಸಾದ್ ‌ನ ಇರಾಕಿನ ಪ್ರಧಾನ ಕಛೇರಿಯ ಮೇಲೆ ಕಳೆದ ದಿನ ಇರಾನ್ ದಾಳಿ ನಡೆಸಿತ್ತು. ಇರಾನ್ ಉತ್ತರ ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ನೆಲೆಗಳನ್ನೂ ಗುರಿಯಾಗಿಸಿಕೊಂಡಿದೆ. ಇದಾದ ಬಳಿಕ ಪಾಕಿಸ್ತಾನದ ಮೇಲೂ ದಾಳಿ ನಡೆದಿದೆ.

Read More

ತಮಿಳುನಾಡಿನ ಜಲ್ಲಿಕಟ್ಟು ವೇಳೆ ಗೂಳಿ ದಾಳಿಗೆ ಬಾಲಕ ಸೇರಿದಂತೆ ಇಬ್ಬರು ಬಲಿಯಾಗಿದ್ದಾರೆ. ಮಧುರೈ ಸಮೀಪದ ಸಿರವಯಲ್ ಎಂಬಲ್ಲಿ ಈ ದಾರುಣ ಘಟನೆ ನಡೆದಿದೆ. ಜೆಲ್ಲಿಕಟ್ಟು ಮತ್ತು ಮಂಚುವಿರಟ್ಟಲ್ ದೊಡ್ಡ ಮೈದಾನದಲ್ಲಿ ಗೂಳಿಗಳನ್ನು ಬಿಡಿಸಿ ಅವುಗಳಿಗೆ ಕಟ್ಟಿಹಾಕುವ ಅಪಾಯಕಾರಿ ಆಟಗಳಾಗಿವೆ. ಶಿವಗಂಗಾ ತಿರುಪ್ಪತ್ತೂರು ಚಿರವಾಯಲ್‌ ನಲ್ಲಿ ಅಪಘಾತ ಸಂಭವಿಸಿದ್ದು, ಓರ್ವ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳವಾರ ಮಧುರೈ ಮತ್ತು ಮಂಚುವಿರಟ್ಟಲ್‌ ನಲ್ಲಿ ಇದೇ ರೀತಿಯ ಅಪಘಾತ ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಅವ್ನಿಯಪ್ಪುರಂನಲ್ಲಿ ಜಲ್ಲಿಕಟ್ಟು ವೇಳೆ 45 ಮಂದಿ ಗಾಯಗೊಂಡಿದ್ದು, ಪಾಲಮೇಡೆಯಲ್ಲಿ 42 ಮಂದಿ ಗಾಯಗೊಂಡಿದ್ದಾರೆ. ಆದರೆ ದಾಳಿ ನಡೆದಿರುವುದು ಜಲ್ಲಿಕಟ್ಟು ವೇಳೆ ಅಲ್ಲ, ಓಟದ ನಂತರ ಪ್ರಾಣಿಗಳನ್ನು ಸಂಗ್ರಹಿಸಲು ಗೂಳಿ ಮಾಲೀಕರು ಜಮಾಯಿಸಿದಾಗ ದಾಳಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಸಮಯದಲ್ಲಿ ಗೂಳಿಗಳು ಧಾವಿಸಿ ಇಬ್ಬರ ಮೇಲೆ ದಾಳಿ ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. 186 ಗೂಳಿಗಳು ಈ ಜಲ್ಲಿಕಟ್ಟು ಭಾಗವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಗೂಳಿ ಪಳಗಿಸುವ ಕ್ರೀಡೆಗೆ ವಿಧಿಸಲಾಗಿದ್ದ…

Read More

ಉತ್ತರ ದೆಹಲಿ: 14 ವರ್ಷದ ಬಾಲಕಿಯ ಮೇಲೆ ಆಕೆಯ ತಾಯಿಯ ಲಿವ್-ಇನ್ ಸಂಗಾತಿ ಅತ್ಯಾಚಾರವೆಸಗಿರುವ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ಅಂಕಿತ್ ಯಾದವ್ (29) ಗಾಜಿಯಾಬಾದ್ ನ ಲೋನಿ ನಿವಾಸಿಯಾಗಿದ್ದು, ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಪೊಲೀಸರ ಪ್ರಕಾರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, ಮತ್ತು 506 ಕ್ರಿಮಿನಲ್ ಬೆದರಿಕೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬುರಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ, ಎಂಟು ವರ್ಷಗಳ ಹಿಂದೆ ತನ್ನ ಪತಿಯನ್ನು ತೊರೆದಿದ್ದ ಆಕೆ, ನಂತರ ಬಸ್ ಚಾಲಕ ಯಾದವ್ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದಳು ಎಂದು ಎಫ್ ಐಆರ್ ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ಜುಲೈ 23 ರಂದು ಮಹಿಳೆ ಆಸ್ಪತ್ರೆಯಲ್ಲಿದ್ದು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಿದ್ದಳು, ಅಂದು ಯಾದವ್ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಹಿಳೆ ಪೊಲೀಸರಿಗೆ ವಿಷಯ ತಿಳಿಸಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು…

Read More

ಬೆಂಗಳೂರು: ‘ಆನ್‌ ಲೈನ್ ಡೇಟಿಂಗ್’ ಆ್ಯಪ್ ಮೂಲಕ ಪರಿಚಯವಾದ ಯುವಕನಿಗೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಬಾಲಿವುಡ್‌ ನಿರ್ದೇಶಕಿ ದೀಪಿಕಾ ನಾರಾಯಣ ಭಾರದ್ವಾಜ್ ಅವರು ‘ಎಕ್ಸ್’ ಖಾತೆಯಲ್ಲಿ ಬರಹ ಪ್ರಕಟಿಸಿ, ಅದನ್ನು ನಗರ ಪೊಲೀಸ್ ಕಮಿಷನರ್‌ ಗೆ ಟ್ಯಾಗ್ ಮಾಡಿದ್ದಾರೆ. ಮಹಿಳೆ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದಕ್ಕೆ ನಗರ ಪೊಲೀಸರು ಪ್ರತಿಕ್ರಿಯಿಸಿ, ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡಿ. ಜತೆಗೆ ತಮ್ಮ ಮೊಬೈಲ್ ನಂಬ‌ರ್ ನೀಡುವಂತೆ ಸೂಚಿಸಿದ್ದಾರೆ.

Read More

ಬೆಂಗಳೂರು: ಆಧಾರ್ ಕಾರ್ಡ್ ಹಾಗೂ ಬೆರಳಚ್ಚು ಬಳಸಿ ಬ್ಯಾಂಕ್ ‌ನಲ್ಲಿದ್ದ ಸಾರ್ವಜನಿಕರ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಬಿಹಾರದ ನಾಲ್ವರು ಆರೋಪಿಗಳನ್ನು ವಿಶೇಷ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ರೆಹಮಾನ್, ಅಬುಜರ್, ಆರೀಫ್‌, ನಾಶೀ‌ರ್ ಅಹಮದ್ ಬಂಧಿತರು. ಈ ವಂಚನೆ ಸಂಬಂಧ 120ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ನಗರ ಪೊಲೀಸ್‌ ಕಮಿಷನರ್ ಬಿ. ದಯಾನಂದ್ ಅವರು ಎಸ್‌ ಐಟಿ ರಚಿಸಿ, ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು.

Read More